ಒನ್‌ಪ್ಲಸ್ 5 ಕೊಳ್ಳುವ ಪ್ಲಾನ್ ಇದ್ಯಾ? ಇದೇ ಸರಿಯಾದ ಸಮಯ.!!

Written By:

ದೀಪಾವಳಿ ಸೇರಿದಂತೆ ಹಬ್ಬಗಳ ಸರಣಿಯೂ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಸ್ಮಾರ್ಟ್‌ ಫೋನ್‌ ಕಂಪನಿಗಳು ತನ್ನ ಮೊಬೈಲ್ ಫೋನ್‌ಗಳ ಮೇಲೆ ಭಾರೀ ಪ್ರಮಾಣದ ಕೊಡುಗೆಯನ್ನು ನೀಡುತ್ತಿವೆ. ಇದೇ ಮಾದರಿಯಲ್ಲಿ ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಒನ್ ಪ್ಲಸ್ ಸಹ ತನ್ನ ನೂತನ ಸ್ಮಾರ್ಟ್ ಫೋನ್ ಒನ್ ಪ್ಲಸ್ 5 ಮೇಲೆ ಕೊಡುಗೆಯನ್ನು ನೀಡಲಿದೆ.

ಒನ್‌ಪ್ಲಸ್ 5 ಕೊಳ್ಳುವ ಪ್ಲಾನ್ ಇದ್ಯಾ? ಇದೇ ಸರಿಯಾದ ಸಮಯ.!!

ಓದಿರಿ: ಒನ್‌ಪ್ಲಸ್ 5 ಬೆಳಕಿನ ಹಬ್ಬಕ್ಕೆ ಭರ್ಜರಿ ಗಿಫ್ಟ್

ಒನ್ ಪ್ಲಸ್ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಮನಗೆದ್ದಿದೆ. ಎಲ್ಲಾ ಮಾದರಿಯಲ್ಲಿಯೂ ಉತ್ತಮ ಡಿವೈಸ್ ಎನ್ನಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಫೋನ್ ಗಳಲ್ಲಿ ಇದೇ ನಂಬರ್ ಓನ್ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ದೀಪಾವಳಿಯ ಅಂಗವಾಗಿ ಗಿಫ್ಟ್ ಕೊಡಲು ನೀಡಲು ಒನ್ ಪ್ಲಸ್ 5 ಉತ್ತಮ ಆಯ್ಕೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತೀಯ ಗ್ರಾಹಕರಿಗೆ ಮಾತ್ರವೇ ಈ ಆಫರ್:

ಭಾರತೀಯ ಗ್ರಾಹಕರಿಗೆ ಮಾತ್ರವೇ ಈ ಆಫರ್:

ಒನ್ ಪ್ಲಸ್ 5 ಭಾರತೀಯ ಗ್ರಾಹಕರಿಗೆ ಹೊಸ ಹೊಸ ಡಿಸ್ಕೌಂಟ್ ಗಳನ್ನು ನೀಡಲು ಮುಂದಾಗಿದೆ. ಅಮೆಜಾನ್.ಇನ್ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ನಿಮ್ಮ ಹೇಳೆ ಸ್ಮಾರ್ಟ್‌ಫೋನ್‌ ಗಳನ್ನು ಒನ್ ಪ್ಲಸ್ 5 ನೊಂದಿಗೆ ಎಕ್ ಚೇಂಜ್ ಮಾಡಿದರೆ ರೂ. 3000 ದೊರೆಯಲಿದೆ. ಅಲ್ಲದೇ ನೋ ಕಾಸ್ಟ್ ಇಎಂಐ ಅನ್ನು 12 ತಿಂಗಳ ಅವಧಿಗೆ ನೀಡುತ್ತಿದೆ.

ಕ್ಯಾಷ್ ಬ್ಯಾಕ್ ಸಹ:

ಕ್ಯಾಷ್ ಬ್ಯಾಕ್ ಸಹ:

ಇದಲ್ಲದೇ ಒನ್‌ಪ್ಲಸ್ 5 ಖರೀದಿಯ ಮೇಲೆ ರೂ. 2000ದ ವರೆಗೂ ಕ್ಯಾಷ್ ಬ್ಯಾಕ್ ಸಹ ಇದೇ ಎನ್ನಲಾಗಿದೆ. ಅಲ್ಲದೇ ರೂ. 25,000 ವರೆಗೂ ವೋಚರ್ ಗಳನ್ನು ಗೆಲ್ಲುವ ಅವಕಾಶವನ್ನು ಪಡೆಯಬಹುದಾಗಿದೆ. ಅಲ್ಲದೇ ಫುಲ್ ಹಣ ಪಾವತಿ ಮಾಡಿ ಫೋನ್ ಖರೀಸಿದರೆ ಉಚಿತ ಹೆಡ್ ಸೆಟ್ ಪಡೆಯಬಹುದು.

ಡ್ಯುಯಲ್ ಕ್ಯಾಮೆರಾ ಸೆಟಪ್

ಡ್ಯುಯಲ್ ಕ್ಯಾಮೆರಾ ಸೆಟಪ್

ಈ ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. 16 MP + 16 MPಯ ಎರಡು ಕ್ಯಾಮೆರಾಗಳನ್ನು ನಿಡಲಾಗಿದ್ದು, ಇದರಲ್ಲಿ ಒಂದು ಟೆಲಿ ಮತ್ತು ವೈಡ್ ಆಂಗಲ್ ಲೈನ್ಸ್ ಇದೆ ಎನ್ನಲಾಗಿದೆ.

ಹೈ-ಎಂಡ್ ಆಂಡ್ರಾಯ್ಡ್ ಫೋನ್:

ಹೈ-ಎಂಡ್ ಆಂಡ್ರಾಯ್ಡ್ ಫೋನ್:

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಆಂಡ್ರಾಯ್ಡ್ ಫೋನ್ ಎನ್ನಲಾಗಿದ್ದು, ಹೈ-ಎಂಡ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅಳವಡಿಸಲಾಗಿದೆ. ಜೊತೆಗೆ 8GB RAM ಈ ಫೋನಿನಲ್ಲಿ ನೀಡಲಾಗಿದೆ. ಇದಲ್ಲದೇ ಈ ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 64GB ಮತ್ತು 128GB ಮಾದರಿಯಲ್ಲಿ ದೊರೆಯಲಿದೆ.

ಆಕರ್ಷಕ ಆಫರ್ ಗಳು:

ಆಕರ್ಷಕ ಆಫರ್ ಗಳು:

ಇದಲ್ಲದೇ ಒನ್ ಪ್ಲಸ್ ಸ್ಮಾರ್ಟ್ ಫೋನ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಒನ್ ಪ್ಲಸ್ 3T ಖರೀದಿಯ ಮೇಲೆ EMI ಪ್ಲಾನ್ ಸಹ ಇದೆ. ಒನ್ ಪ್ಲಸ್ 3T ಗೋಲ್ಡ್ ಆವೃತ್ತಿ ರೂ. 24,999ಕ್ಕೆ ಲಭ್ಯವಿದೆ. ಇದೇ ಮಾದರಿಯಲ್ಲಿ ಗನ್ ಮೆಟಲ್ ಅವೃತ್ತಿ ರೂ. 25,999ಕ್ಕೆ ದೊರೆಯುತ್ತಿದೆ. ಇವುಗಳ ಮೇಲೆಯೂ ಕ್ಯಾಷ್ ಬ್ಯಾಕ್ ಆಫರ್ ಲಭ್ಯವಿದೆ. ಇನ್ನು ಹೆಚ್ಚಿನ ಆಫರ್ ಗಾಗಿ oneplusstore.in ಗೇ ಭೇಟಿ ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OnePlus 5, the most feature packed affordable real flagship smartphone you can buy today. It is a perfect gift on this festive season to give you the kind of performance you actually deserve. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot