ನವೆಂಬರ್ 16ರಂದು ಬಿಡುಗಡೆಗೆ ಸಜ್ಜಾದ 'ಒನ್‌ಪ್ಲಸ್ 5T!!...ಆಪಲ್‌ಗೂ ಭಯ!!

ನವೆಂಬರ್ 16ರಂದು ನ್ಯೂಯಾರ್ಕ್‌ನಲ್ಲಿ ಒನ್‌ಪ್ಲಸ್ 5T ಮಾರುಕಟ್ಟೆಗೆ ಕಾಲಿಡಲಿದೆ.!!

|

ಆಪಲ್ ಐಫೋನ್ 10 ನಂತರ ಬಹು ನಿರೀಕ್ಷೆ ಮೂಡಿಸಿರುವ ಒನ್‌ಪ್ಲಸ್ ಕಂಪೆನಿಯ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಖಚಿತವಾಗಿದೆ.! ಹೌದು, ಈ ಬಗ್ಗೆ ಒನ್‌ಪ್ಲಸ್ ಕಂಪೆನಿ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು, ನವೆಂಬರ್ 16ರಂದು ನ್ಯೂಯಾರ್ಕ್‌ನಲ್ಲಿ ಒನ್‌ಪ್ಲಸ್ 5T ಮಾರುಕಟ್ಟೆಗೆ ಕಾಲಿಡಲಿದೆ.!!

ಚೀನಾದ ನಂಬರ್ ಒನ್ ಡಿಸ್ಟ್ರಿಬ್ಯೂಟರ್ ಒಪ್ಪೋಮಾರ್ಟ್ ಸೈಟ್‌ನಲ್ಲಿ 'ಒನ್‌ಪ್ಲಸ್ 5T' ಸ್ಮಾರ್ಟ್‌ಫೋನ್ ಈಗಾಗಲೇ ಮಾರಾಟಕ್ಕಿದ್ದು, ಫೋನ್ ಬೆಲೆ ಮತ್ತು ಫೀಚರ್ಸ್ ಲೀಕ್ ಆಗಿರುವುದು ವೈರೆಲ್ ಆಗಿದೆ.! ಭಾರಿ ಪಿಚರ್ಸ್ ಹೊಂದಿರುವ ಈ ಫೋನ್ ಬಿಡುಗಡೆಯಾದ ತಕ್ಷಣವೇ ಹವಾ ಕ್ರಿಯೇಟ್ ಮಾಡಲಿದೆ ಎನ್ನಲಾಗಿದ್ದು, ಇದರಿಂದ ಆಪಲ್‌ ಕಂಪೆನಿ ಕೂಡ ತಳಮಳಗೊಂಡಿದೆ.!!

ಈಗಾಗಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಸಿರುವ ಒನ್‌ಪ್ಲಸ್ ಕಂಪೆನಿ ಇದೀಗ ಬೆಜೆಲ್‌ಲೆಸ್ ಡಿಸ್‌ಪ್ಲೇ ಹೊಂದಿರುವ ಒನ್‌ಪ್ಲಸ್ 5T ಬಿಡುಗಡೆ ಮಾಡುತ್ತಿರುವುದರಿಂದ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ಹೆದರಿವೆ !! ಹಾಗಾದರೆ, ಈ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಬೆಲೆ ಎಷ್ಟಿರಬಹುದು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬೆಜೆಲ್‌ ಲೆಸ್ ಡಿಸೈನ್!!

ಬೆಜೆಲ್‌ ಲೆಸ್ ಡಿಸೈನ್!!

ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟಿ ಹಾಕಿರುವ ಫುಲ್‌ ಸ್ಕ್ರಿನ್ ಡಿಸೈನ್ ಅನ್ನು ಈ ಫೋನ್ ಹೊಂದಿರಲಿದೆ . 18:9 ಅನುಪಾತದ ಡಿಸ್‌ಪ್ಲೇ ಇದಾಗಿದ್ದು, ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳ ವಿನ್ಯಾಸಕ್ಕೆ ದಕ್ಕೆ ತರದಹಾಗಿರಲಿದೆ ಎನ್ನುತ್ತಿವೆ ವರದಿಗಳು.!!

6 ಇಂಚಿನ ಡಿಸ್‌ಪ್ಲೇ!!

6 ಇಂಚಿನ ಡಿಸ್‌ಪ್ಲೇ!!

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ನಲ್ಲಿ 6 ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಗೇಮ್ ಆಡಲು ಮತ್ತು ಮಲ್ಟಿಮೀಡಿಯಾಗೆ ಉತ್ತಮ ಅನುಭವನ್ನು ನೀಡಲಿದೆ ಎಂದು ಒನ್‌ಪ್ಲಸ್ ಕಂಪೆನಿ ಈಗಾಗಲೇ ಹೇಳಿದೆ.

 ಹೋಮ್ ಬಟನ್ ಇಲ್ಲ!!

ಹೋಮ್ ಬಟನ್ ಇಲ್ಲ!!

ಹೈ ಎಂಡ್ ಸ್ಮಾರ್ಟ್‌ಫೋನ್‌ ಬಳಕೆದಾರರ ದೃಷ್ಟಿ ಇಟ್ಟುಕೊಂಡಿರುವ ಒನ್‌ಪ್ಲಸ್ 5T ಫೋನ್ ಹೋಮ್ ಬಟನ್ ಇಲ್ಲದೆ ಹೊರಬರುತ್ತಿದೆ. ಬೆಜೆಲ್ ಲೆಸ್ ಡಿಸ್‌ಪ್ಲೇ ಇರುವುದರಿಂದ ಹೋಮ್‌ ಬಟನ್ ಅಳವಡಿಸಿಲ್ಲ ಎಂದು ತಿಳಿಯಬಹುದು.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ!!

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿ!!

ಇಷ್ಟು ದಿನ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಮುಂಭಾಗದಲ್ಲಿ ಅಳವಡಿಸುತ್ತಿದ್ದ ಒನ್‌ಪ್ಲಸ್, ಈ ಬಾರಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಿದೆ.! ಹೋಮ್ ಬಟನ್ ಮೂಲಕವೇ ಮೊದಲು ಫಿಂಗರ್ ಪ್ರಿಂಟ್ ಫೀಚರ್ ಲಭ್ಯವಿತ್ತು.!!

ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ 20MP + 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಫೋಟೋಗ್ರಫಿಗಾಗಿ ಹೇಳಿ ಮಾಡಿಸಿದಂತೆ ಇರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೇ ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದ್ದು, ಕ್ಯಾಮೆರಾ ಗುಣಮಟ್ಟ ಅದ್ಬುತವಾಗಿರುವ ಸಾಧ್ಯತೆ ಇದೆ.!!

ಸ್ನ್ಯಾಪ್‌ಡ್ರಾಗನ್ 835 ಪ್ರೋಸೆಸರ್!!

ಸ್ನ್ಯಾಪ್‌ಡ್ರಾಗನ್ 835 ಪ್ರೋಸೆಸರ್!!

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ನಲ್ಲಿ ಸ್ನ್ಯಾಪ್‌ಡ್ರಾಗನ್ 835 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದಂತಿದೆ. ಕ್ವಾಲ್ಕಮ್ ಕಂಪೆನಿಯ ನೂತನ ಈ ಚಿಪ್‌ಸೆಟ್ ಅನ್ನು ಪ್ರಸ್ತುತ ನಂಬರ್ ಒನ್ ಚಿಪ್‌ಸೆಟ್ ಎನ್ನಬಹುದು.!!

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!
ಒನ್‌ಪ್ಲಸ್ 5T ಬೆಲೆ ಎಷ್ಟು?

ಒನ್‌ಪ್ಲಸ್ 5T ಬೆಲೆ ಎಷ್ಟು?

ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳಿಗೆ ಸೆಡ್ಡುಹೊಡೆಯುವಂತೆ ಬಿಡುಗಡೆಯಾಗುತ್ತಿರುವ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್‌ ಬೆಲೆ ಕೂಡ ವೈರೆಲ್ ಆಗಿದ್ದು, 64GB ವೆರೆಯಂಟ್ ಒನ್‌ಪ್ಲಸ್ 5T ಬೆಲೆ ಕೇವಲ 35, 677 ರೂ.ಗಳಾಗಿದ್ದರೆ, 128GB ವೆರೆಯಂಟ್ ಒನ್‌ಪ್ಲಸ್ 5T 42,175 ರೂಪಾಯಿಗಳಾಗಿವೆ.!!

Best Mobiles in India

English summary
OnePlus confirmed that it will launch the OnePlus 5T smartphone in New York City.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X