Subscribe to Gizbot

'ಐಫೋನ್ X'ಗಿಂತಲೂ ಸ್ಪೀಡ್ ಆಗಿದೆ 'ಒನ್‌ಪ್ಲಸ್ 5T'' ಫೇಸ್‌ಲಾಕ್!!

Written By:

ಅತ್ಯಂತ ಕಡಿಮೆ ಬೆಲೆಯಲ್ಲಿ ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿ ಪ್ರಪಂಚದ ಮೊಬೈಲ್ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು ಎಲ್ಲರಿಗೂ ಗೊತ್ತಿದೆ.! ಅದರಲ್ಲಿಯೂ ಐಫೋನ್ ಎಕ್ಸ್‌ ಸ್ಮಾರ್ಟ್‌ಫೋನ್‌ಗಿಂತ ಹೆಚ್ಚು ವೇಗದ ಫೇಸ್‌ಲಾಕ್ ಫೀಚರ್ ಒಳಗೊಂಡಿರುವ ಈ ಫೋನ್ ಇದೀಗ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿಸಿದೆ.!!

ಹೌದು, ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಜೊತೆಗೆ ಫೇಸ್‌ಲಾಕ್ ಆಯ್ಕೆಯನ್ನು ನೀಡಲಾಗಿದ್ದು, ಮೊಬೈಲ್ ವಿಶ್ಲೇಷಕರು ಒನ್‌ಪ್ಲಸ್ 5ಟಿ ಫೇಸ್‌ಲಾಕ್ ಐಫೋನ್ ಎಕ್ಸ್‌ಗಿಂತಲೂ ವೇಗವನ್ನು ಹೊಂದಿರುವುದಾಗಿ ಹೇಳಿದ್ದಾರೆ.! ಹಾಗಾದರೆ, ಒನ್‌ಪ್ಲಸ್ 5ಟಿ ಫೇಸ್‌ಲಾಕ್ ಬಗ್ಗೆ ಮೊಬೈಲ್ ತಜ್ಞರು ಏನು ಹೇಳಿದ್ದಾರೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್‌ಪ್ಲಸ್ 5ಟಿ ಫೋನಿನಲ್ಲಿ ಫೇಸ್‌ಲಾಕ್!!

ಒನ್‌ಪ್ಲಸ್ 5ಟಿ ಫೋನಿನಲ್ಲಿ ಫೇಸ್‌ಲಾಕ್!!

ಅತ್ಯಂತ ಹೆಚ್ಚು ಫೀಚರ್‌ಗಳನ್ನು ಹೊತ್ತು ಬಿಡುಗಡೆಯಾಗಿರುವ ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಎಲ್ಲರನ್ನು ಸೆಳೆದಿರುವುದು ಫೇಸ್‌ಲಾಕ್ ಫೀಚರ್‌ನಿಂದ.!! ಐಫೋನ್ ಎಕ್ಸ್‌ ಫೇಸ್‌ಐಡಿಗೆ ಒನ್‌ಪ್ಲಸ್ 5ಟಿ ಫೋನ್ ಸಾಟಿಯಾಗದು ಎಂದುಕೊಳ್ಳುತ್ತದ್ದವರಿಗೆ ಒಮ್ಮೆಲೆ ಶಾಕ್ ನೀಡಿದ್ದು ಇದೊಂದೇ ಫೀಚರ್!!

ಐಫೋನ್ ಎಕ್ಸ್‌ಗಿಂತಲೂ ವೇಗ!!

ಐಫೋನ್ ಎಕ್ಸ್‌ಗಿಂತಲೂ ವೇಗ!!

ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಫೇಸ್‌ಲಾಕ್ ವೇಗ ಐಫೋನ್ ಎಕ್ಸ್‌ಗಿಂತಲೂ ಹೆಚ್ಚಿದೆ ಎಂದು ಮೊಬೈಲ್ ತಜ್ಞರು ಹೇಳಿದ್ದಾರೆ.! ಇನ್ನು ಬಹುತೇಕ ಎಲ್ಲಾ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ಐಫೋನ್ ಎಕ್ಸ್‌ಗಿಂತಲೂ ಒನ್‌ಪ್ಲಸ್ 5ಟಿ ಫೇಸ್‌ಲಾಕ್ ವೇಗವಾಗಿ ತೆರೆದುಕೊಳ್ಳುತ್ತದೆ ಎಂದು ತಿಳಿಸಿವೆ.!!

ಒನ್‌ಪ್ಲಸ್ 5ಟಿನಲ್ಲಿ ವಿಶಿಷ್ಟ ಸಾಧನವಿಲ್ಲ!!

ಒನ್‌ಪ್ಲಸ್ 5ಟಿನಲ್ಲಿ ವಿಶಿಷ್ಟ ಸಾಧನವಿಲ್ಲ!!

ಐಫೋನ್ ಎಕ್ಸ್‌ನಲ್ಲಿ AI ತಂತ್ರಜ್ಞಾನದ ಜೊತೆಯಲ್ಲಿ ವಿಶಿಷ್ಟ ಸೆನ್ಸಾರ್ ಕ್ಯಾಮೆರಾ ಒಂದು ಫೇಸ್‌ಲಾಕ್‌ಗಾಗಿಯೇ ಇದೆ. ಆದರೆ, ಐಫೋನ್ ಎಕ್ಸ್‌ನಲ್ಲಿರುವಂತೆ ಯಾವುದೇ ಹೆಚ್ಚಿನ ವಿಶಿಷ್ಟ ಸಾಧನವನ್ನು ಒನ್‌ಪ್ಲಸ್ 5ಟಿಯಲ್ಲಿ ಫೋನಿನಲ್ಲಿ ನೀಡಿಲ್ಲವೆಂದು ಮೊಬೈಲ್ ತಜ್ಞರು ಸ್ಪಷ್ಟಪಡಿಸಿದ್ದಾರೆ.!!

ಸೆಲ್ಫಿ ಕ್ಯಾಮೆರಾದಲ್ಲಿಯೇ ಫೇಸ್‌ಲಾಕ್!!

ಸೆಲ್ಫಿ ಕ್ಯಾಮೆರಾದಲ್ಲಿಯೇ ಫೇಸ್‌ಲಾಕ್!!

ಒನ್‌ಪ್ಲಸ್ 5ಟಿ ಫೋನ್ ಸೆಲ್ಫಿ ಕ್ಯಾಮೆರಾದಲ್ಲಿಯೇ ಫೇಸ್‌ಲಾಕ್ ಕಾರ್ಯನಿರ್ವಹಣೆ ನಡೆಯಲಿದ್ದು, ಕೇವಲ ಹೆಚ್ಚಿನ ತಂತ್ರಜ್ಞಾನಗಳ ಮೂಲಕ ಒನ್‌ಪ್ಲಸ್ 5ಟಿ ಫೇಸ್‌ಲಾಕ್ ಕಾರ್ಯನಿರ್ವಹಣೆ ನೀಡಲಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಫೇಸ್‌ಲಾಕ್ ವೇಗ ಎಷ್ಟೇ ಇದ್ದರೂ ಕೂಡ ಐಫೋನ್ ಎಕ್ಸ್‌ನಷ್ಟು ನಿಖರತೆ ಹೊಂದಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.!!

ಐಫೋನ್ ಎಕ್ಸ್‌ಗೆ ಸೆಡ್ಡು!!

ಐಫೋನ್ ಎಕ್ಸ್‌ಗೆ ಸೆಡ್ಡು!!

ನಾವು ಐಫೋನ್ ಎಕ್ಸ್‌ ಫೇಸ್‌ಐಡಿಗೆ ಸರಿಸಮನಾದ ಫೇಸ್‌ಲಾಕ್ ಕಾರ್ಯನಿರ್ವಹಣೆಯನ್ನು ನಾವು ಒನ್‌ಪ್ಲಸ್ 5ಟಿಯಲ್ಲಿ ನೋಡಲು ಸಾಧ್ಯವಿಲ್ಲದಿದ್ದರೂ ಸಹ ಐಫೋನ್ ಎಕ್ಸ್‌ಗೆ ಸೆಡ್ಡುಹೊಡೆಯಲು 'ಒನ್‌ಪ್ಲಸ್ 5ಟಿ'ಗೆ ಇದೋಂದೆ ಫೀಚರ್ ಸಾಕು ಎಂದು ಅಭಿಪ್ರಾಯ ಪಟ್ಟವರ ಸಂಖ್ಯೆ ಕಡಿಮೆ ಇಲ್ಲ ಎನ್ನುತ್ತಿದ್ದಾರೆ ತಜ್ಞರು.!!

ಓದಿರಿ:ಭವಿಷ್ಯದ ನಗರ ನಿರ್ಮಾಣಕ್ಕೆ ಮುಂದಾದ ವಿಶ್ವದ ನಂ.1 ಶ್ರೀಮಂತ ಬಿಲ್‌ಗೆಟ್ಸ್!!..ಹೇಗಿರಲಿದೆ ನಗರ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
fingerprint sensor is not the only authentication method that OnePlus 5T has. It also comes with "Face unlocking".to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot