Subscribe to Gizbot

ಒನ್‌ಪ್ಲಸ್ ಪ್ರಿಯರಿಗೆ ಹುಚ್ಚಿಡಿಸಿರುವ ಒನ್‌ಪ್ಲಸ್ 5ಟಿ 'ರೆಡ್ ಎಡಿಷನ್' ಮಾರಾಟ ಶುರು!!..ಬೆಲೆ ಎಷ್ಟು!?

Written By:

ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಪ್ರಿಯರಿಗೆ ಹುಚ್ಚಿಡಿಸಿರುವ ಒನ್‌ಪ್ಲಸ್ 5ಟಿ ಲಾವಾ ರೆಡ್ ಎಡಿಷನ್ ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ.!! ಭಾರತದಲ್ಲಿ 8GB RAM ವೆರಿಯಂಟ್ ಒನ್‌ಪ್ಲಸ್ 5ಟಿ ಲಾವಾ ರೆಡ್ ಎಡಿಷನ್ ಫೋನ್ ಬೆಲೆ 37,999 ರೂಪಾಯಿಗಳಾಗಿವೆ.!!

ನೂತನ ಒನ್‌ಪ್ಲಸ್ 5ಟಿ ಲಾವಾ ರೆಡ್ ಆವೃತ್ತಿ ಇದೇ ಜನವರಿ 11 ರಿಂದಲೇ ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ.!! ಒನ್‌ಪ್ಲಸ್‌ನ ಅಧಿಕೃತ ಸ್ಟೋರ್‌ನಲ್ಲಿ ಜನವರಿ 20 ನೇ ತಾರೀಖಿನಿಂದ ಲಾವಾ ರೆಡ್ ಫೋನ್ ಆವೃತ್ತಿ ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಮಾರಟಕ್ಕೆ ಬರಲಿದೆ.!!

ಒನ್‌ಪ್ಲಸ್ ಪ್ರಿಯರಿಗೆ ಹುಚ್ಚಿಡಿಸಿರು 5ಟಿ 'ರೆಡ್ ಎಡಿಷನ್' ಮಾರಾಟ ಶುರು!!..ಬೆಲೆ?

ಒನ್‌ಪ್ಲಸ್ ಕಂಪೆನಿ ಬಿಡುಗಡೆ ಮಾಡಿರುವ ಲಾವಾ ರೆಡ್ ಫೋನ್ ಆವೃತ್ತಿ ಸ್ಮಾರ್ಟ್‌ಫೋನ್ ಕೆಂಪು ಬಣ್ಣದಿಂದ ಕಂಗೊಳಿಸುತ್ತಿದ್ದು ಮೊಬೈಲ್ ಪ್ರಿಯರ ಕಣ್ಣುಕುಕ್ಕುತ್ತಿದೆ.! ಹಾಗಾದರೆ, ಲಾವಾ ರೆಡ್ ಒನ್‌ಪ್ಲಸ್ 5ಟಿ ಫೋನ್ ಮೊಬೈಲ್ ಫೀಚರ್ಸ್ ಏನು? ಖರೀದಿಸಲು ಏನೆಲ್ಲಾ ಕಾರಣಗಳಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
6 ಇಂಚಿನ ಫುಲ್ ಸ್ಕ್ರಿನ್ ಡಿಸ್‌ಪ್ಲೇ!!

6 ಇಂಚಿನ ಫುಲ್ ಸ್ಕ್ರಿನ್ ಡಿಸ್‌ಪ್ಲೇ!!

ಐಫೋನ್ 10 ಮತ್ತು ಸ್ಯಾಮ್‌ಸಂಗ್ 8 ನೋಟ್‌ಗೆ ಸೆಡ್ಡುಹೊಡೆಯುತ್ತಿರುವ ಒನ್‌ಪ್ಲಸ್ 5T ಫೋನ್ 6 ಇಂಚಿನ 18:9 ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಹೊಂದಿದೆ.!! 2160 x 1080 ಪಿಕ್ಸೆಲ್‌ ರೆಸಲ್ಯೂಶನ್ ಹೋಂದಿರುವ ಈ ಡಿಸ್‌ಪ್ಲೇಯನ್ನು ಸಂಪೂರ್ಣ ಬೆಜೆಲ್‌ ಲೆಸ್ ಎಂದು ಕರೆಯಬಹುದಾದರೂ ಕೂಡ ಅಂಚಿನಲ್ಲಿ ಸ್ವಲ್ಪ ಬೆಜೆಲ್ ಇರುವುದನ್ನು ನಾವು ನೋಡಬಹುದು.!

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಕ್ವಾಲ್ಕಂ ಕಂಪೆನಿಯ ಅತ್ಯುತ್ತಮ ಆಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ 835 ಪ್ರೊಸೆಸರ್ ಅನ್ನು ಒನ್‌ಪ್ಲಸ್ 5ಟಿ ಫೋನ್‌ ಫೋನ್ ಹೊಂದಿದದ್ದು, 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ವೆರಿಯಂಟ್‌ಗಳಲ್ಲಿ ಲಾವಾ ರೆಡ್ ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.!!

ಫಿಂಗರ್ ಪ್ರಿಂಟ್ ಸ್ಕ್ಯಾನರ್!!

ಫಿಂಗರ್ ಪ್ರಿಂಟ್ ಸ್ಕ್ಯಾನರ್!!

ತನ್ನ ಹಿಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಫೋನ್‌ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಿದ್ದ ಒನ್‌ಪ್ಲಸ್ ಕಂಪೆನಿ ಈ ಬಾರಿ ಫುಲ್ ಸ್ಕ್ರಿನ್ ವಿನ್ಯಾಸವನ್ನು ಮಾಡುವ ಸಲುವಾಗಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗಕ್ಕೆ ವರ್ಗಾವಣೆ ಮಾಡಿದೆ. ಹಿಂಬಾಗದಲ್ಲಿಯೂ ಅತ್ಯುತ್ತಮ ವಿನ್ಯಾಸ ಹೊಂದಿರುವ ಈ ಫೋನ್‌ನಲ್ಲಿ ಫಿಂಗರ್ ಪ್ರಿಂಟ್‌ನಿಂದ ಅಂದ ಮತ್ತಷ್ಟು ಹೆಚ್ಚಿದೆ.!

ಡ್ಯುಯಲ್ ಲೈನ್ಸ್ ಕ್ಯಾಮೆರಾ .!!

ಡ್ಯುಯಲ್ ಲೈನ್ಸ್ ಕ್ಯಾಮೆರಾ .!!

ಹಿಂಭಾಗದಲ್ಲಿ 16MP + 20MP ಡ್ಯುಯಲ್ ಲೈನ್ಸ್ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾವನ್ನು ಒನ್‌ಪ್ಲಸ್ 5ಟಿ ಫೋನ್‌ನಲ್ಲಿ ಕಾಣಬಹುದಾಗಿದ್ದು, ಅತ್ಯಂತ ಕಡಿಮೆ ಬೆಳಕಿನಲ್ಲಿಯೂ ಉನ್ನತ ಮಟ್ಟದ ಫೋಟೊ ಚಿತ್ರಿಸಲು ಸಹಾಯಕ ಕ್ಯಾಮೆರಾಗಳಾಗಿವೆ.!!

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!
ಬ್ಯಾಟರಿ ಹೇಗಿದೆ?

ಬ್ಯಾಟರಿ ಹೇಗಿದೆ?

ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್‌ನಲ್ಲಿ 3300mAh ತೆರೆಯಲಾರದ ಬ್ಯಾಟರಿ ಅಳವಡಿಸಲಾಗಿದ್ದು, 20 ನಿಮಿಷದಲ್ಲಿ ಶೇ 60ರಷ್ಟು ಚಾರ್ಜ್‌ ಆಗಲಿರುವ ಬ್ಯಾಟರಿ ತಂತ್ರಜ್ಞಾನ ಹೊಂದಿರುವ ಒನ್‌ಪ್ಲಸ್ 5ಟಿ ಎಲ್ಲರನ್ನು ಸೆಳೆದಿದೆ.!! ಬೆಂಗಳೂರಿನ ಹಲವರು ಬ್ಯಾಟರಿ ತಂತ್ರಜ್ಞಾನ ನೋಡಿಯೇ ಖರೀದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.!!

ಓದಿರಿ:ಬ್ರಾಡ್‌ಬ್ಯಾಂಡ್ ಸೇವೆಗಳಲ್ಲಿಯೂ ಜಿಯೋಗೆ ಸೆಡ್ಡು!..ಏರ್‌ಟೆಲ್ ಗ್ರಾಹಕರಿಗೆ ಹಬ್ಬ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OnePlus on Thursday announced the launch of the OnePlus 5T Lava Red in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot