ಕೆಂಪು ಬಣ್ಣದಿಂದ ಕಣ್ಣುಕುಕ್ಕುತ್ತಿದೆ 'ಒನ್‌ಪ್ಲಸ್ 5ಟಿ' ಸ್ಪೆಷಲ್ ಎಡಿಷನ್!!..ಮಾರಾಟ ಯಾವಾಗ?

ಒನ್‌ಪ್ಲಸ್ ಕಂಪೆನಿ ಬಿಡುಗಡೆ ಮಾಡಿರುವ ಲಾವಾ ರೆಡ್ ಫೋನ್ ಆವೃತ್ತಿ ಸ್ಮಾರ್ಟ್‌ಫೋನ್ ಕೆಂಪು ಬಣ್ಣದಿಂದ ಕಂಗೊಳಿಸುತ್ತಿದ್ದು, ಮೊಬೈಲ್ ಪ್ರಿಯರ ಕಣ್ಣುಕುಕ್ಕುತ್ತಿದೆ.!

|

ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಇದೀಗ ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದೆ.! ಇತ್ತೀಚಿಗಷ್ಟೆ ಸ್ಟಾರ್‌ವಾರ್ಸ್ ಎಡಿಷನ್ ರೂಪದಲ್ಲಿ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದ್ದ ಒನ್‌ಪ್ಲಸ್ 5ಟಿ ಇದೀಗ, ಲಾವಾ ರೆಡ್ ಒನ್‌ಪ್ಲಸ್ 5ಟಿ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.!!

ಒನ್‌ಪ್ಲಸ್ ಕಂಪೆನಿ ಬಿಡುಗಡೆ ಮಾಡಿರುವ ಲಾವಾ ರೆಡ್ ಫೋನ್ ಆವೃತ್ತಿ ಸ್ಮಾರ್ಟ್‌ಫೋನ್ ಕೆಂಪು ಬಣ್ಣದಿಂದ ಕಂಗೊಳಿಸುತ್ತಿದ್ದು, ಮೊಬೈಲ್ ಪ್ರಿಯರ ಕಣ್ಣುಕುಕ್ಕುತ್ತಿದೆ.! ಹಾಗಾದರೆ, ಲಾವಾ ರೆಡ್ ಒನ್‌ಪ್ಲಸ್ 5ಟಿ ಫೋನ್ ಮಾರಾಟ ಯಾವಾಗ? ಮತ್ತು ಮೊಬೈಲ್ ಫೀಚರ್ಸ್ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜನವರಿ 26 ರಿಂದ ಮಾರಾಟ.!!

ಜನವರಿ 26 ರಿಂದ ಮಾರಾಟ.!!

ನೂತನ ಒನ್‌ಪ್ಲಸ್ 5ಟಿ ಲಾವಾ ರೆಡ್ ಆವೃತ್ತಿ ಇದೇ ಜನವರಿ 26 ರಿಂದ ಭಾರತದಲ್ಲಿ ಅಮೆಜಾನ್‌ನಲ್ಲಿ ಮಾರಾಟಕ್ಕೆ ಬರಲಿದೆ ಎಂದು ಹೇಳಲಾಗಿದೆ.!! ಚೀನಾದ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಒನ್‌ಪ್ಲಸ್ 5ಟಿ ಲಾವಾ ರೆಡ್ ಆವೃತ್ತಿಯನ್ನು ಖರೀದಿಸಲು ಭಾರತೀಯರು ಸ್ವಲ್ಪ ಕಾಯಬೇಕಿದೆ.!!

6 ಇಂಚಿನ ಫುಲ್ ಸ್ಕ್ರಿನ್ ಡಿಸ್‌ಪ್ಲೇ!!

6 ಇಂಚಿನ ಫುಲ್ ಸ್ಕ್ರಿನ್ ಡಿಸ್‌ಪ್ಲೇ!!

ಐಫೋನ್ 10 ಮತ್ತು ಸ್ಯಾಮ್‌ಸಂಗ್ 8 ನೋಟ್‌ಗೆ ಸೆಡ್ಡುಹೊಡೆಯುತ್ತಿರುವ ಒನ್‌ಪ್ಲಸ್ 5T ಫೋನ್ 6 ಇಂಚಿನ 18:9 ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಹೊಂದಿದೆ.!! 2160 x 1080 ಪಿಕ್ಸೆಲ್‌ ರೆಸಲ್ಯೂಶನ್ ಹೋಂದಿರುವ ಈ ಡಿಸ್‌ಪ್ಲೇಯನ್ನು ಸಂಪೂರ್ಣ ಬೆಜೆಲ್‌ ಲೆಸ್ ಎಂದು ಕರೆಯಬಹುದಾದರೂ ಕೂಡ ಅಂಚಿನಲ್ಲಿ ಸ್ವಲ್ಪ ಬೆಜೆಲ್ ಇರುವುದನ್ನು ನಾವು ನೋಡಬಹುದು.!

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಕ್ವಾಲ್ಕಂ ಕಂಪೆನಿಯ ಅತ್ಯುತ್ತಮ ಆಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ 835 ಪ್ರೊಸೆಸರ್ ಅನ್ನು ಒನ್‌ಪ್ಲಸ್ 5ಟಿ ಫೋನ್‌ ಫೋನ್ ಹೊಂದಿದದ್ದು, 6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹಾಗೂ 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ.!!

ಫಿಂಗರ್ ಪ್ರಿಂಟ್ ಸ್ಕ್ಯಾನರ್!!

ಫಿಂಗರ್ ಪ್ರಿಂಟ್ ಸ್ಕ್ಯಾನರ್!!

ತನ್ನ ಹಿಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಫೋನ್‌ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಿದ್ದ ಒನ್‌ಪ್ಲಸ್ ಕಂಪೆನಿ ಈ ಬಾರಿ ಫುಲ್ ಸ್ಕ್ರಿನ್ ವಿನ್ಯಾಸವನ್ನು ಮಾಡುವ ಸಲುವಾಗಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗಕ್ಕೆ ವರ್ಗಾವಣೆ ಮಾಡಿದೆ. ಹಿಂಬಾಗದಲ್ಲಿಯೂ ಅತ್ಯುತ್ತಮ ವಿನ್ಯಾಸ ಹೊಂದಿರುವ ಈ ಫೋನ್‌ನಲ್ಲಿ ಫಿಂಗರ್ ಪ್ರಿಂಟ್‌ನಿಂದ ಅಂದ ಮತ್ತಷ್ಟು ಹೆಚ್ಚಿದೆ.!

ಡ್ಯುಯಲ್ ಲೈನ್ಸ್ ಕ್ಯಾಮೆರಾ .!!

ಡ್ಯುಯಲ್ ಲೈನ್ಸ್ ಕ್ಯಾಮೆರಾ .!!

ಹಿಂಭಾಗದಲ್ಲಿ 16MP + 20MP ಡ್ಯುಯಲ್ ಲೈನ್ಸ್ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾವನ್ನು ಒನ್‌ಪ್ಲಸ್ 5ಟಿ ಫೋನ್‌ನಲ್ಲಿ ಕಾಣಬಹುದಾಗಿದ್ದು, ಅತ್ಯಂತ ಕಡಿಮೆ ಬೆಳಕಿನಲ್ಲಿಯೂ ಉನ್ನತ ಮಟ್ಟದ ಫೋಟೊ ಚಿತ್ರಿಸಲು ಸಹಾಯಕ ಕ್ಯಾಮೆರಾಗಳಾಗಿವೆ ಎಂದು ಒನ್‌ಪ್ಲಸ್ ಕಂಪೆನಿ ಹೇಳಿದೆ.!!

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
 ಬ್ಯಾಟರಿ ಹೇಗಿದೆ?

ಬ್ಯಾಟರಿ ಹೇಗಿದೆ?

ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್‌ನಲ್ಲಿ 3300mAh ತೆರೆಯಲಾರದ ಬ್ಯಾಟರಿ ಅಳವಡಿಸಲಾಗಿದ್ದು, 20 ನಿಮಿಷದಲ್ಲಿ ಶೇ 60ರಷ್ಟು ಚಾರ್ಜ್‌ ಆಗಲಿರುವ ಬ್ಯಾಟರಿ ತಂತ್ರಜ್ಞಾನ ಹೊಂದಿರುವ ಒನ್‌ಪ್ಲಸ್ 5ಟಿ ಎಲ್ಲರನ್ನು ಸೆಳೆದಿದೆ.!! ಬೆಂಗಳೂರಿನ ಹಲವರು ಬ್ಯಾಟರಿ ತಂತ್ರಜ್ಞಾನ ನೋಡಿಯೇ ಖರೀದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.!!

</a></strong><a href=ಓಲಾ, ಊಬರ್ ದರಗಳನ್ನು ಫಿಕ್ಸ್ ಮಾಡಲು ಹೊರಟಿದೆ ಕರ್ನಾಟಕ ಸರ್ಕಾರ!!..ಉತ್ತಮ ನಿರ್ಧಾರವೇ?" title="ಓಲಾ, ಊಬರ್ ದರಗಳನ್ನು ಫಿಕ್ಸ್ ಮಾಡಲು ಹೊರಟಿದೆ ಕರ್ನಾಟಕ ಸರ್ಕಾರ!!..ಉತ್ತಮ ನಿರ್ಧಾರವೇ?" loading="lazy" width="100" height="56" />ಓಲಾ, ಊಬರ್ ದರಗಳನ್ನು ಫಿಕ್ಸ್ ಮಾಡಲು ಹೊರಟಿದೆ ಕರ್ನಾಟಕ ಸರ್ಕಾರ!!..ಉತ್ತಮ ನಿರ್ಧಾರವೇ?

Best Mobiles in India

English summary
After announcing the Star Wars Limited Edition of the OnePlus 5T in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X