ಆಪಲ್, ಸ್ಯಾಮ್‌ಸಂಗ್ ಹೆದರಿಸಿರುವ ಒನ್‌ಪ್ಲಸ್ 5T ಫೋನ್ ನಾಳೆ ಬಿಡುಗಡೆ!..ಬೆಂಗಳೂರಿನಲ್ಲಿಯೂ!!

Written By:

ಆಪಲ್, ಸ್ಯಾಮ್‌ಸಂಗ್ ಸೇರಿದಂತೆ ವಿಶ್ವದ ಎಲ್ಲಾ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆದಿರುವ ಒನ್‌ಪ್ಲಸ್ ಕಂಪೆನಿಯ ನೂತನ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 5T ಬಿಡುಗಡೆ ಇದೀಗ ಜಾಗತಿಕ ಸುದ್ದಿಯಾಗಿ ಬದಲಾಗಿದೆ.!! ಹೌದು, ಸದ್ದಿಲ್ಲದಂತೆ ಬಿಡುಗಡೆಗೆ ಸಿದ್ದವಾಗಿದ್ದ ಒನ್‌ಪ್ಲಸ್ 5T ಫೋನ್ ಇದೀಗ ಜನರಿಂದಲೇ ಸುದ್ದಿಯಾಗುತ್ತಿದೆ.!!

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್ ಬಗೆಗಿನ ಮಾಹಿತಿಗಳು ಈಗಾಗಲೇ ಒನ್‌ಪ್ಲಸ್ ಕಂಪೆನಿಯಿಂದಲೇ ದೃಢವಾಗಿರುವುದರಿಂದ, ಒನ್‌ಪ್ಲಸ್ 5T ಫೋನ್ ಖರೀದಿಸಲು ವಿಶ್ವದೆಲ್ಲೆಡೆ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ.!! ಹೈ ಎಂಡ್ ಸ್ಮಾರ್ಟ್‌ಫೋನ್ ಒಂದು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿರುವುದು ಇದಕ್ಕೆ ಕಾರಣ ಎನ್ನಬಹುದು.!!

ಅತ್ಯಾಧುನಿಕ ವಿನ್ಯಾಸ ಮತ್ತು ಫೀಚರ್ಸ್ ಹೊಂದಿರುವ ಒನ್‌ಪ್ಲಸ್ 5T ಫೋನ್‌ನಲ್ಲಿ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಂತೆ 3.5MM ಆಡಿಯೋ ಜಾಕ್ ತೆರೆಯದಿರಲು ಒನ್‌ಪ್ಲಸ್ ಕಂಪೆನಿ ನಿರ್ಧರಿಸಿದೆ.! ಇನ್ನು ಕ್ಯಾಮೆರಾ, ಪ್ರೊಸೆಸರ್ ಎಲ್ಲದರಲ್ಲಿಯೂ ಒನ್‌ಪ್ಲಸ್ 5T ಮುಂದಿದ್ದು, ಹಾಗಾದರೆ, ಫೋನ್ ಬಿಡುಗಡೆ ಯಾವಾಗ? ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನವೆಂಬರ್ 16 ರಂದು ಬಿಡುಗಡೆಗೆ ಸಜ್ಜು!!

ನವೆಂಬರ್ 16 ರಂದು ಬಿಡುಗಡೆಗೆ ಸಜ್ಜು!!

ಇದೇ ಮೊದಲ ಸಾರಿ ಒನ್‌ಪ್ಲಸ್‌ ಕಂಪೆನಿ ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ ಕಾಲಿಡುತ್ತಿದ್ದು, ಅಮೆರಿಕಾದ ನ್ಯೂಯಾರ್ಕ್‌ ನಗರದ ಬ್ರೂಕ್ಲಿನ್‌ನಲ್ಲಿ ನವೆಂಬರ್ 16 ರಂದು ಅಂದರೆ ನಾಳೆ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಕಾರ್ಯಕ್ರಮಕ್ಕೆ ತೆರಳಲು ಒನ್‌ಪ್ಲಸ್ ಕಂಪೆನಿ 50 ಡಾಲರ್ ನಿಗಧಿಪಡಿಸಿದ್ದು, ಟಿಕೆಟ್‌ಗಳೆಲ್ಲವೂ ಸೋಲ್ಡ್‌ಔಟ್ ಆಗಿವೆ.!!

ಬೆಂಗಳೂರಿನಲ್ಲಿ ಲೈವ್ ನೋಡಿ!!

ಬೆಂಗಳೂರಿನಲ್ಲಿ ಲೈವ್ ನೋಡಿ!!

ಅಮೆರಿಕಾದ ನ್ಯೂಯಾರ್ಕ್‌ ನಗರದ ಬ್ರೂಕ್ಲಿನ್‌ನಲ್ಲಿ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ರಿಲೀಸ್ ಆಗುತ್ತಿದ್ದರೂ ಸಹ ಒನ್‌ಪ್ಲಸ್ ಕಂಪೆನಿ ಭಾರತವನ್ನು ಮರೆತಿಲ್ಲ.!! ಒನ್‌ಪ್ಲಸ್‌ ಕಂಪೆನಿಗೆ ಬಹುದೊಡ್ಡ ಮಾರುಕಟ್ಟೆಯಾಗಿರುವ ಭಾರತದ ಐದು ನಗರಗಳಲ್ಲಿ ಕೆಲವು ಆಯ್ದ PVR ಥಿಯೇಟರ್‌ಗಳಲ್ಲಿ ಒನ್‌ಪ್ಲಸ್ 5T ಬಿಡುಗಡೆಯ ಲೈವ್ ತೋರಿಸುತ್ತಿದೆ.! ಬೆಂಗಳೂರು, ದೆಹಲಿ , ಮುಂಬೈ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಈ ಆಯ್ಕೆ ಲಭ್ಯವಿದೆ.!!

6 ಇಂಚಿನ ಫುಲ್ ಸ್ಕ್ರಿನ್ ಡಿಸ್‌ಪ್ಲೇ!!

6 ಇಂಚಿನ ಫುಲ್ ಸ್ಕ್ರಿನ್ ಡಿಸ್‌ಪ್ಲೇ!!

ಐಫೋನ್ 10 ಮತ್ತು ಸ್ಯಾಮ್‌ಸಂಗ್ 8 ನೋಟ್‌ಗೆ ಸೆಡ್ಡುಹೊಡೆಯುತ್ತಿರುವ ಒನ್‌ಪ್ಲಸ್ 5T ಫೋನ್ 6 ಇಂಚಿನ 18:9 ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಹೊಂದಿರಲಿದೆ.!! 2160 x 1080 ಪಿಕ್ಸೆಲ್‌ ರೆಸಲ್ಯೂಶನ್ ಹೋಂದಿರುವ ಈ ಡಿಸ್‌ಪ್ಲೇಯನ್ನು ಸಂಪೂರ್ಣ ಬೆಜೆಲ್‌ ಲೆಸ್ ಎಂದು ಕರೆಯಬಹುದಾದರೂ ಕೂಡ ಅಂಚಿನಲ್ಲಿ ಸ್ವಲ್ಪ ಬೆಜೆಲ್ ಇರುವುದನ್ನು ನಾವು ನೋಡಬಹುದು.!

ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್!!

ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್!!

ತನ್ನ ಹಿಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಫೋನ್‌ ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಿದ್ದ ಒನ್‌ಪ್ಲಸ್ ಕಂಪೆನಿ ಈ ಬಾರಿ ಫುಲ್ ಸ್ಕ್ರಿನ್ ವಿನ್ಯಾಸವನ್ನು ಮಾಡುವ ಸಲುವಾಗಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಭಾಗಕ್ಕೆ ವರ್ಗಾವಣೆ ಮಾಡಿದೆ. ಹಿಂಬಾಗದಲ್ಲಿಯೂ ಅತ್ಯುತ್ತಮ ವಿನ್ಯಾಶ ಹೊಂದಿರುವ ಈ ಫೋನ್‌ನಲ್ಲಿ ಫಿಂಗರ್ ಪ್ರಿಂಟ್‌ನಿಂದ ಅಂದ ಮತ್ತಷ್ಟು ಹೆಚ್ಚಿದೆ ಎನ್ನಬಹುದು.!!

ಡ್ಯುಯಲ್ ಲೈನ್ಸ್ ಕ್ಯಾಮೆರಾ ತಂದಿದೆ.!!

ಡ್ಯುಯಲ್ ಲೈನ್ಸ್ ಕ್ಯಾಮೆರಾ ತಂದಿದೆ.!!

ವದಂತಿಗಳೇ ನಿಜವಾಗುವಂತಹ ಅತ್ಯುತ್ತಮ ಕ್ಯಾಮರಾಗಳನ್ನು ಒನ್‌ಪ್ಲಸ್ 5T ಫೋನ್‌ನಲ್ಲಿ ನೋಡಬಹುದು.! ಹಿಂಭಾಗದಲ್ಲಿ 16MP + 20MP ಡ್ಯುಯಲ್ ಲೈನ್ಸ್ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದ್ದು, ಅತ್ಯಂತ ಕಡಿಮೆ ಬೆಳಕಿನಲ್ಲಿಯೂ ಉನ್ನತ ಮಟ್ಟದ ಫೋಟೊ ಚಿತ್ರಿಸಲು ಸಹಾಯಕ ಕ್ಯಾಮೆರಾಗಳಾಗಿವೆ ಎಂದು ಒನ್‌ಪ್ಲಸ್ ಕಂಪೆನಿ ಹೇಳಿಕೊಂಡಿದೆ.!!

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

6 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಹಾಗೂ 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. ಆಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ 835 ಪ್ರೊಸೆಸರ್ ಮತ್ತು OnePlus 5 ಫೋನ್‌ನಲ್ಲಿ ಬಳಸಿದ 3300mAh ಬ್ಯಾಟರಿಗಿಂತ ದೊಡ್ಡದಾದ ಬ್ಯಾಟರಿಯು ಸ್ಮಾರ್ಟ್ಫೋನ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ.!!

ಓದಿರಿ:'ATM'ಗೆ ಗುಡ್‌ಬೈ!..ಭವಿಷ್ಯದ ಬ್ಯಾಂಕ್‌ 'ITM' ಮಷಿನ್ ಬರಲಿದೆ ಶೀಘ್ರದಲ್ಲಿ!!.ಎಲ್ಲರೂ ತಿಳಿಯಬೇಕು!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OnePlus smartphones have always been good bargain hunters packing in a great feature set.to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot