ಭಾರತದಲ್ಲಿ ನಂಬರ್ ಒನ್ ಮಧ್ಯಮ ಬಜೆಟ್ ಫೋನ್ ಆಗಿರುವ ಒನ್‌ಪ್ಲಸ್ 5T ಫೋನ್ ಇದೀಗ "ವ್ಯಾಲೆಂಟೈನ್ಸ್ ಡೇ" ಆಫರ್ ಪಡೆದುಕೊಂಡಿದೆ.! ಹಾಗಾಗಿ, ನಿಮ್ಮ ಪ್ರೀತಿಪಾತ್ರ ಸಂಗಾತಿಗೆ ವ್ಯಾಲೆಂಟೈನ್ಸ್ ದಿನದ ಅತ್ಯತ್ತಮ ಗಿಫ್ಟ್ ನೀಡುವ ಯೋಚನೆ ನಿಮಗಿದ್ದರೆ ನೀವು ಖಂಡಿತವಾಗಿ ''ಒನ್‌ಪ್ಲಸ್ 5T'' ಸ್ಮಾರ್ಟ್‌ಫೋನ್ ಖರೀದಿಸಬಹುದು.!!
ಹೌದು, ಭಾರತೀಯರ ಜೊತೆ ಸೇರಿ ವ್ಯಾಲೆಂಟೈನ್ಸ್ ಡೇ ಸಂಭ್ರಮಾಚಣೆ ನಡೆಸಲು ಒನ್‌ಪ್ಲಸ್ ಕಂಪೆನಿ ಮುಂದಾಗಿದ್ದು, ಬಿಡುಗಡೆಯಾದ ದಿನದಿಂದಲೂ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ "ಒನ್‌ಪ್ಲಸ್ 5T" ಸ್ಮಾರ್ಟ್‌ಪೋನ್ ಬೆಲೆಯನ್ನು ಇದೀಗ ಇಳಿಕೆ ಮಾಡಿದೆ.! ಬೆಲೆ ಇಳಿಕೆ ಮಾತ್ರವಲ್ಲದೇ ಇನ್ನಿತರ ಭಾರೀ ಕೊಡುಗೆಗಳನ್ನು ನೀಡಿ ಪ್ರೇಮಿಗಳನ್ನು ಸೆಳೆಯುತ್ತಿದೆ.!!

ಒನ್‌ಪ್ಲಸ್ ಕಂಪೆನಿ ತನ್ನ ಲಾವಾ ರೆಡ್ ಫೋನ್ ಆವೃತ್ತಿ ಸ್ಮಾರ್ಟ್‌ಫೋನ್ ಮೇಲೂ ಹಲವು ಆಫರ್‌ಗಳನ್ನು ನೀಡಿದ್ದು, ಒನ್‌ಪ್ಲಸ್ ಅಧಿಕೃತ ಸ್ಟೋರ್ ಅಥವಾ ಅಮೆಜಾನ್ ಮೂಲಕ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ. ಹಾಗಾದರೆ, ಈ ವ್ಯಾಲೆಂಟೈನ್ಸ್ ಸಂಭ್ರಮಕ್ಕಾಗಿ ಒನ್‌ಪ್ಲಸ್ 5ಟಿ ಖರೀದಿಸಲು ವಿಶೇಷತೆಗಳೇನು ಎಂಬುದನ್ನು ತಿಳಿಯಿರಿ.!!
ಒನ್‌ಪ್ಲಸ್ 5ಟಿ ಹಾರ್ಡ್‌ವೇರ್‌ಗೆ ಸಾಟಿಯಿಲ್ಲ!!
ಮೊದಲೇ ಹೇಳಿದಂತೆ ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಕ್ವಾಲ್ಕಂ ಕಂಪೆನಿಯ ಆಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ 835 ಪ್ರೊಸೆಸರ್ ಅನ್ನು ಹೊಂದಿದೆ.! 8ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಒನ್‌ಪ್ಲಸ್ 5ಟಿಕಾರ್ಯನಿರ್ವಹಣೆಗೆ ಸಾಟಿಯಾದ ಮತ್ತೊಂದು ಸ್ಮಾರ್ಟ್‌ಫೋನ್ ಇಲ್ಲ ಎಂದು ಹೇಳಬಹುದು.!!
20 ನಿಮಿಷದಲ್ಲಿ ಶೇ 60ರಷ್ಟು ಚಾರ್ಜ್!!
ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್‌ನಲ್ಲಿ 3300mAh ತೆರೆಯಲಾರದ ಬ್ಯಾಟರಿ ಅಳವಡಿಸಲಾಗಿದ್ದು, 20 ನಿಮಿಷದಲ್ಲಿ ಶೇ 60ರಷ್ಟು ಚಾರ್ಜ್ ಆಗಲಿರುವ ಬ್ಯಾಟರಿ ತಂತ್ರಜ್ಞಾನ ಹೊಂದಿರುವ ಒನ್‌ಪ್ಲಸ್ 5ಟಿ ಎಲ್ಲರನ್ನು ಸೆಳೆದಿದೆ.! ಒನ್‌ಪ್ಲಸ್ 5ಟಿ ಸ್ಮಾರ್ಟ್‌ಫೋನ್ ಬ್ಯಾಟರಿ ತಂತ್ರಜ್ಞಾನ ಇತರ ಎಲ್ಲಾ ಫೋನ್‌ಗಳನ್ನು ಮೀರಿಸಿದೆ.!!
ಹೇಳಿ ಮಾಡಿಸಿರುವ ವಿನ್ಯಾಸ!!
2160 x 1080 ಪಿಕ್ಸೆಲ್ ರೆಸಲ್ಯೂಶನ್ ಇರುವ 6 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒನ್‌ಪ್ಲಸ್ 5T ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. 18:9 ಅನುಪಾತದ AMOLED ಫುಲ್ ಸ್ಕ್ರಿನ್ ಡಿಸ್‌ಪ್ಲೇ ಹೊಂದಿರುವ ಈ ಫೋನ್ ಹಿಂಬಾಗದಲ್ಲಿ ಪ್ರಿಂಟ್ ಸ್ಕ್ಯಾನರ್ ಮತ್ತು ಡ್ಯುಯಲ್ ಕ್ಯಾಮೆರಾಗಳಿರುವಂತೆ ವಿನ್ಯಾಸವಾಗಿದೆ.!!
ಡ್ಯುಯಲ್ ಲೈನ್ಸ್ ಕ್ಯಾಮೆರಾ .!!
ಹಿಂಭಾಗದಲ್ಲಿ 16MP + 20MP ಡ್ಯುಯಲ್ ಲೈನ್ಸ್ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾವನ್ನು ಒನ್‌ಪ್ಲಸ್ 5ಟಿ ಫೋನ್‌ನಲ್ಲಿ ನೀಡಲಾಗಿದೆ. ಕಡಿಮೆ ಬೆಳಕಿನ ಪರಿಸ್ಥಿತಿಯಲ್ಲಿಯೂ ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯುವ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾಗಳಲ್ಲಿ ಬೊಕೆ ಪರಿಣಾಮದ ಛಾಯಾಗ್ರಹಣ ಅನುಭವ ಸಿಗಲಿದೆ.!!
ವ್ಯಾಲೆಂಟೈನ್ಸ್ ಸಂಭ್ರಮಕ್ಕೆ ರಿಯಾಯಿತಿ!!
ಲಾವಾ ರೆಡ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿರುವ ಎರಡೂ ರೂಪಾಂತರ ಸ್ಮಾರ್ಟ್‌ಪೋನ್‌ಗಳಿಗೂ ವಿಶೇಷ ವ್ಯಾಲೆಂಟೈನ್ಸ್ ಡೇ ಕೊಡುಗೆಗಳನ್ನು ನೀಡಲಾಗಿದೆ.! ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೇಲೆ 1,500 ಡಿಸ್ಕೌಂಟ್ಸ್, ಒನ್‌ಪ್ಲಸ್ ಸ್ಟೋರ್‌ನಿಂದ ಫೋನ್ ಖರೀದಿಸುವವರಿಗೆ 1500 ಕ್ಯಾಶ್‌ಬ್ಯಾಕ್ ಹಾಗೂ ಹಳೆಯ ಸ್ಮಾರ್ಟ್‌ಪೋನ್‌ಗಳ ಮೇಲೆ 15 ಸಾವಿರದವರೆಗೂ ಎಕ್ಸ್‌ಚೇಂಜ್ ಆಫರ್ ಅನ್ನು ನೀಡಿದೆ.!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.