ಒನ್‌ಪ್ಲಸ್ 6ನ 8ಜಿಬಿ RAM, 256ಜಿಬಿ ಪೋನ್ ಲಾಂಚ್‌!!

By GizBot Bureau
|

ಹಲವು ದಿನಗಳ ಕಾತರಕ್ಕೆ ಇಂದು ತೆರೆ ಬಿದ್ದಿದೆ. ಒನ್ ಪ್ಲಸ್ 6 ವಿಶ್ವದಾದ್ಯಂತ ಮತ್ತು ಭಾರತದಾದ್ಯಂತ ಅಗಾಧ ಜನಪ್ರೀಯತೆ ಗಳಿಸಿದ ನಂತರ ಚೈನೀಸ್ ಸ್ಮಾರ್ಟ್ ಫೋನ್ ತಯಾರಕಾ ಕಂಪೆನಿ ಮೇಲ್ದರ್ಜೆಯ ಒನ್ ಪ್ಲಸ್ 6 ಸ್ಮಾರ್ಟ್ ಫೋನನ್ನು ಇಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 8 ಜಿಬಿ RAM ಮತ್ತು 256 ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದೆ ಮತ್ತು ಮಿಡ್ ನೈಟ್ ಬ್ಲಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗುತ್ತಿದೆ.

ಒನ್‌ಪ್ಲಸ್ 6ನ  8ಜಿಬಿ RAM, 256ಜಿಬಿ ಪೋನ್ ಲಾಂಚ್‌!!

ಈ ಲೇಖನ ಓದುತ್ತಿರುವ ಎಲ್ಲರೂ ಗಮನ ಹರಿಸಬೇಕಾದ ಪ್ರಮುಖ ವಿಚಾರ ಯಾವುದು ಗೊತ್ತಾ? ಇದುವರೆಗೂ 8 ಜಿಬಿ RAM ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಕೇವಲ ವಿಶೇಷ ಮಾರ್ವೆಲ್ ಆವೆಂಜರ್ಸ್ ಲಿಮಿಟೆಡ್ ಎಡಿಷನ್ ಹ್ಯಾಂಡ್ ಸೆಟ್ ನಲ್ಲಿ ಮಾತ್ರ ಲಭ್ಯವಿತ್ತು. ಇದನ್ನು ಮಾರ್ವೆಲ್ ಸ್ಟುಡಿಯೋಸ್ ಚಲನಚಿತ್ರ ಸ್ಟುಡಿಯೋದ 10 ನೇ ವಾರ್ಷಿಕೋತ್ಸವಕ್ಕಾಗ ಆವೆಂಜರ್ಸ್ ಇನ್ಫಿನಿಟಿ ವಾರ್ ನೊಂದಿಗಿನ ಸಹಯೋಗದೊಂದಿಗೆ ಬಿಡುಗಡೆಗೊಳಿಸಲಾಗಿತ್ತು.

ಈಗ ಒನ್ ಪ್ಲಸ್ 6 ಇಂತಹ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದ್ದು ಜನರ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲವಿದೆ. ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದವರಿಗೆ ಈ ಫೋನ್ ಸ್ವಲ್ಪ ದುಬಾರಿ ಎಂದೇ ಅನ್ನಿಸಬಹುದು.

ಒನ್‌ಪ್ಲಸ್ 6ನ  8ಜಿಬಿ RAM, 256ಜಿಬಿ ಪೋನ್ ಲಾಂಚ್‌!!

ಒನ್ ಪ್ಲಸ್ 6 8ಜಿಬಿ RAM+256ಜಿಬಿ ಬೆಲೆ ಮತ್ತು ಲಭ್ಯತೆ

ಇತರೆ ಒನ್ ಪ್ಲಸ್ 6 ನ ವೇರಿಯಂಟ್ ನಂತೆ ಈ ಹೊಸ ಸ್ಮಾರ್ಟ್ ಫೋನ್ ಕೂಡ ಅಮೇಜಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಲಭ್ಯವಿದೆ.ಆಸಕ್ತ ಗ್ರಾಹಕರು, “ನೋಟಿಫೈ ಮಿ” ಆಯ್ಕೆಗೆ ತೆರಳಬಹುದು ಮತ್ತು ಇದರ ಮಾರಾಟವು ಜುಲೈ 10 ರಂದು ಆರಂಭಗೊಳ್ಳುತ್ತದೆ. ಅಷ್ಟೇ ಅಲ್ಲ, ಗ್ರಾಹಕರು ಒನ್ ಪ್ಲಸ್ ನ ಅಧಿಕೃತ ವೆಬ್ ಸೈಟ್ Oneplus.in ಮತ್ತು ಆಫ್ ಲೈನ್ ಒನ್ ಪ್ಲಸ್ ಚಾನಲ್ ಗಳಲ್ಲೂ ಕೂಡ ಖರೀದಿ ಮಾಡಬಹುದು. ಮಾರ್ವಲ್ ಎಡಿಷನ್ ಗೆ ಹೋಲಿಸಿದರೆ 1000 ರುಪಾಯಿ ಕಡಿಮೆ ಬೆಲೆ ಇದ್ದು, ಇದರ ಬೆಲೆ 43,999 ರುಪಾಯಿಗಳಾಗಿದೆ.


ಒನ್ ಪ್ಲಸ್ 6 ನ ವೈಶಿಷ್ಟ್ಯತೆಗಳು

ಒನ್ ಪ್ಲಸ್ 6 ಸ್ಮಾರ್ಟ್ ಫೋನ್ 6.28-ಇಂಚಿನ ಫುಡ್HD+ ಆಪ್ಟಿಕ್ AMOLED ಸ್ಕ್ರೀನ್ ಹೊಂದಿದ್ದು 1080x2280 ಪಿಕ್ಸಲ್ ರೆಸಲ್ಯೂಷನ್ ಜೊತೆಗೆ 19:9 ಅನುಪಾತವನ್ನು ಡಿಸ್ಪ್ಲೇ ಹೊಂದಿದೆ ಜೊತೆಗೆ ನಾಚ್ ಕೂಡ ಇರಲಿದೆ.

ಇದು ಆಂಡ್ರಾಯ್ಡ್ 8.1ಓರಿಯೋ ಬೇಸ್ ನ ಆಕ್ಸಿಜನ್ OS ನಲ್ಲಿ ರನ್ ಆಗುತ್ತದೆ ಮತ್ತು 3300mAh ಬ್ಯಾಟರಿಯನ್ನು ಹೊಂದಿದೆ.ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಇದು ಹೊಂದಿದ್ದು ಎರಡು ರೀತಿಯ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಒಂದು 6ಜಿಬಿ RAM + 64ಜಿಬಿ ಮತ್ತೊಂದು 8ಜಿಬಿ RAM + 128ಜಿಬಿ ಸ್ಟೋರೇಜ್ ಅವಕಾಶ.

ಒನ್‌ಪ್ಲಸ್ 6ನ  8ಜಿಬಿ RAM, 256ಜಿಬಿ ಪೋನ್ ಲಾಂಚ್‌!!

ಕ್ಯಾಮರಾ ವಿಚಾರವನ್ನು ಪ್ರಸ್ತಾಪಿಸುವುದಾದರೆ ಒನ್ ಪ್ಲಸ್ 6 ಹಿಂಭಾಗದಲ್ಲಿ ಎರಡು ಕ್ಯಾಮರಾ ಸೆಟ್ ಅಪ್ ಹೊಂದಿದ್ದು, ಪ್ರೈಮರಿ ಕ್ಯಾಮರಾ 16ಎಂಪಿ ಸೆನ್ಸರ್(ಸೋನಿ IMX519 ಸೆನ್ಸರ್ ಜೊತೆಗೆ f/1.7 ದ್ಯುತಿರಂಧ್ರ) ಮತ್ತು ಸೆಂಕೆಂಡರಿ ಕ್ಯಾಮರಾವು 20ಎಂಪಿ (ಸೋನಿ IM376K ಸೆನ್ಸರ್ ಜೊತೆಗೆ f/1.7 ದ್ಯುತಿರಂಧ್ರ) ವನ್ನು ಹೊಂದಿದೆ.ಸೆಲ್ಫೀ ತೆಗೆದುಕೊಳ್ಳಲು ಮುಂಭಾಗದ ಕ್ಯಾಮರಾವು 16 ಎಂಪಿಯ ಸೋನಿ IMX371 ಸೆನ್ಸರ್ ಜೊತೆಗೆ f/2.0 ದ್ಯುತಿರಂಧ್ರ ಹೊಂದಿದೆ.

ಕನೆಕ್ಟಿವಿಟಿಯಲ್ಲಿ ಒನ್ ಪ್ಲಸ್ 6 4ಜಿ VoLTE, ಬ್ಲೂಟೂತ್ v5.0 ಜೊತೆಗೆ aptX ಮತ್ತು aptX HD ಬೆಂಬಲ, ವೈ-ಫೈ 802.11ac (ಡುಯಲ್-ಬ್ಯಾಂಡ್, 2.4GHz ಮತ್ತು 5GHz) ಜೊತೆಗೆ 2x2 MIMO, NFC, ಜಿಪಿಎಸ್/ A-ಜಿಪಿಎಸ್, USB ಟೈಪ್-ಸಿ (v2.0), ಮತ್ತು 3.5mm ಹೆಡ್ ಫೋನ್ ಜ್ಯಾಕ್ ನ್ನು ಹೊಂದಿದೆ.

Best Mobiles in India

English summary
OnePlus 6 8GB RAM, 256GB storage variant launched at Rs 43,999. To know more this kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X