ಹಬ್ಬದ ಸಂಭ್ರಮಕ್ಕೆ ಒನ್‌ಪ್ಲಸ್ ಬಿಗ್ ಆಫರ್..! ಈಗ ₹ 29,999ಕ್ಕೆ ಒನ್‌ಪ್ಲಸ್ 6..!
ಈ ಹಬ್ಬದ ಸೀಸನ್‌ನ್ನು ಸಂಭ್ರಮದಿಂದ ಆಚರಿಸಲು ಒನ್‌ಪ್ಲಸ್ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಹೌದು, ಪ್ರಿಮೀಯಂ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್‌ಪ್ಲಸ್ ಅಧಿಕೃತವಾಗಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿತಗೊಳಿಸುವುದರೊಂದಿಗೆ 2018ರ ಉತ್ತಮ ಡೀಲ್‌ನ್ನು ಗ್ರಾಹಕರಿಗೆ ನೀಡಿದೆ. ₹ 34,999ಗೆ ದೊರೆಯುತ್ತಿದ್ದ ಒನ್‌ಪ್ಲಸ್‌ನ್ನು ಇದೀಗ ನೀವು ₹ 29,999ಗೆ ಖರೀದಿಸಬಹುದು. ಒನ್‌ಪ್ಲಸ್ 6 ಮೇಲಿನ ಈ ಅದ್ಭುತ ರಿಯಾಯಿತಿ ಬೆಲೆ ಕೇವಲ 6 ದಿನಗಳು ಮಾತ್ರ ಇದ್ದು, ಅಕ್ಟೋಬರ್ 9ರಿಂದ ಪ್ರಾರಂಭವಾಗುವ Amazon.in ನಡೆಸುವ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಮಾತ್ರ ದೊರೆಯುತ್ತದೆ.

ಈ ಸಮಯದಲ್ಲಿ ನೀವು 2018ರ ಅತ್ಯುತ್ತಮ ಸ್ಮಾರ್ಟ್‌ಫೋನ್ ಮೇಲೆ ಹೂಡಿಕೆ ಮಾಡಬಹುದಾಗಿದೆ. ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮೊಬೈಲ್ ಕಾರ್ಯನಿರ್ವಹಣೆಯ ಎಲ್ಲಾ ಹಂತಗಳಲ್ಲಿ ಒಂದು ಸ್ಟ್ಯಾಂಡರ್ಡ್‌ನ್ನು ಸ್ಥಾಪಿಸಿ ಸ್ಮಾರ್ಟ್‌ಫೋನ್ ಪ್ರಿಯರ ಮನಗೆದ್ದಿದೆ. ₹ 30 ಸಾವಿರ ಬೆಲೆಯೊಳಗೆ ನೀವು ಟಾಪ್ ಆಪ್ ದಿ ಲೈನ್ ಡಿಸ್‌ಪ್ಲೇ, ಕ್ಯಾಮೆರಾ, ಫ್ಲಾಗ್‌ಶಿಪ್ ಚಿಪ್‌ಸೆಟ್ ಮತ್ತು ಅತ್ಯುತ್ತಮ ಪ್ರಿಮಿಯಂ ವಿನ್ಯಾಸ ಹೊಂದಿರುವ ಸ್ಮಾರ್ಟ್‌ಫೋನ್‌ನ ಮಾಲೀಕರಾಗುತ್ತೀರಿ. ಅದಲ್ಲದೇ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 9 ಪೈ ಒಎಸ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಬೆಲೆಯೊಳಗೆ ಬೆರೆ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವುದರಲ್ಲಿ ಅರ್ಥವಿಲ್ಲ.

ಹೆಚ್ಚುವರಿ ರಿಯಾಯಿತಿನೂ ಇದೆ
ಅಮೆಜಾನ್ ದೀಪಾವಳಿ ಸೇಲ್‌ನಲ್ಲಿ ಮೊದಲ ಬಾರಿಗೆ ಒನ್‌ಪ್ಲಸ್ ರಿಯಾಯಿತಿ ದರದಲ್ಲಿ ದೊರೆಯುತ್ತಿದೆ. ಮೌಲ್ಯಯುತ ದರದಲ್ಲಿ ಒನ್‌ಪ್ಲಸ್ 6 ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ ಕಳೆದುಕೊಳ್ಳುವುದಕ್ಕೆ ನೀವು ಇಷ್ಟ ಪಡುವುದಿಲ್ಲ. ಮತ್ತು ರಿಯಾಯಿತಿ ನಂತರ ಭಾರತೀಯ ಮಾರುಕಟ್ಟೆಯಲ್ಲಿಯೇ ಉತ್ತಮ ಆಫರ್‌ನ್ನು ನೀವು ಪಡೆಯುತ್ತೀರಿ. ಒನ್‌ಪ್ಲಸ್ ಘೋಷಿಸಿರುವ ರಿಯಾಯಿತಿ ಅಷ್ಟೇ ಅಲ್ಲದೇ ಹೆಚ್ಚುವರಿ ರಿಯಾಯಿತಿಯೂ ನಿಮಗೆ ಲಭ್ಯವಾಗುತ್ತದೆ. ₹ 34,999ಗೆ ದೊರೆಯುತ್ತಿದ್ದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನ್ನು ಇದೀಗ ನೀವು ₹ 29,999ಗೆ ಖರೀದಿಸುವ ಅವಕಾಶ ಮತ್ತು SBI ಡೆಬಿಟ್ ಮತ್ತು ಕ್ರೆಡಿಡ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಶೇ.10ರಷ್ಟು ತ್ವರಿತ ರಿಯಾಯಿತಿಯನ್ನು ಒನ್‌ಪ್ಲಸ್ ಘೋಷಿಸಿದೆ.

₹ 30 ಸಾವಿರದೊಳಗಿನ ಬೆಸ್ಟ್ ಪ್ರೀಮಿಯಂ ಸ್ಮಾರ್ಟ್‌ಫೋನ್
ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಬಹಳಷ್ಟು ಜನ ಮೆಚ್ಚಿದ್ದಾರೆ. ಒನ್‌ಪ್ಲಸ್ 6ನ್ನು ಸುಂದರವಾಗಿ ವಿನ್ಯಾಸಗೊಳಿಸಿದ್ದು, ಪ್ರತಿಯೊಂದು ಫೀಚರ್ ಬಳಕೆದಾರರನ್ನು ಆಕರ್ಷಿಸುತ್ತದೆ. ಹಿಂಭಾಗದಲ್ಲಿ ಗ್ಲಾಸ್ ಪ್ಯಾನೆಲ್ ಹೊಂದಿರುವ ಒನ್‌ಪ್ಲಸ್ 6 ಪ್ರೀಮಿಯಂ ಮತ್ತು ಅತ್ಯಾಧುನಿಕವಾಗಿ ಕಾಣುತ್ತದೆ. ಒಂದು ಕೈಯಲ್ಲಿ ಬಳಸಲು ಇದು ತುಂಬಾ ಆರಾಮದಾಯಕವಾಗಿದ್ದು, ಅಷ್ಟೇ ಸಮಯ ಬಾಳಿಕೆ ಬರುತ್ತದೆ. ಒನ್‌ಪ್ಲಸ್ ಕಂಪನಿ ಈ ಸ್ಮಾರ್ಟ್‌ಫೋನ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5ಅನ್ನು ಅಳವಡಿಸಿದ್ದು, ಕಠಿಣ ಬಳಕೆಗೆ ಸ್ಮಾರ್ಟ್‌ಫೋನ್‌ನ್ನು ಸಜ್ಜುಗೊಳಿಸಿದೆ. ಅದಲ್ಲದೇ 6.28 ಇಂಚಿನ AMOLED ಡಿಸ್‌ಪ್ಲೇ ಹೊಂದಿರುವ ಒನ್‌ಪ್ಲಸ್ 6 ಆಕರ್ಷಕ ವೀಕ್ಷಣೆಯ ಕೋನಗಳನ್ನು ಹೊಂದಿದೆ.

ಅಗ್ಗದ ದರದಲ್ಲಿ ಫ್ಲಾಗ್‌ಶಿಪ್ ಕಾರ್ಯನಿರ್ವಹಣೆ
ಇದೇ ವರ್ಷ ಅಂದರೆ ಮೇ, 2018ರಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನ 64GB ಆವೃತ್ತಿ ₹ 34,999ಗೆ ಲಾಂಚ್ ಆಗಿತ್ತು. ಈ ಸ್ಮಾರ್ಟ್‌ಫೋನ್ ನಿಮಗೆ ಇತ್ತೀಚಿನ ಮತ್ತು ಅತ್ಯಾಧುನಿಕ ಚಿಪ್‌ಸೆಟ್ ಸ್ನಾಪ್‌ಡ್ರಾಗನ್ 845ನ್ನು ಅಳವಡಿಸಿದ್ದು, ಅಗ್ಗದ ದರದಲ್ಲಿ ಗ್ರಾಹಕರಿಗೆ ನೀಡುತ್ತಿದೆ. ಯಾವುದೇ ಹ್ಯಾಂಗ್ ಸಮಸ್ಯೆಯಿಲ್ಲದೆ, ಬಹುಕಾರ್ಯಗಳನ್ನು ಮಾಡಲು 6GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಒನ್‌ಪ್ಲಸ್ 6 ಹೊಂದಿದೆ. ಸಾಫ್ಟ್‌ವೇರ್‌ಗೆ ಸಂಬಂಧಪಟ್ಟಂತೆ ನೀವು ಒನ್‌ಪ್ಲಸ್ 6ನಲ್ಲಿ ಉತ್ತಮ ದರ್ಜೆಯ ಸಾಫ್ಟ್‌ವೇರ್ ಬಳಕೆದಾರರ ಅನುಭವವನ್ನು ಅನುಭವಿಸುತ್ತೀರಿ.
ನಾವು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನ್ನು ಪರಿಶೀಲಿಸಿದ್ದು, ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿ ಬಳಸುವುದಕ್ಕೆ ಯಾವುದೇ ತೊಂದರೆಯಿಲ್ಲ. ಯಾವುದೇ ತೊಂದರೆ ಮತ್ತು ಬ್ಲೋಟ್‌ವೇರ್ ಇಲ್ಲದ ಬಳಕೆದಾರರ ಅನುಭವವನ್ನು ಈ ಸ್ಮಾರ್ಟ್‌ಫೋನ್ ಖಚಿತಪಡಿಸುತ್ತದೆ. ಇದಿಷ್ಟೇ ಅಲ್ಲದೇ, ಒನ್‌ಪ್ಲಸ್ ಸೂಕ್ಷ್ಮವಾದ ಫೀಚರ್‌ಗಳನ್ನು ನೀಡಿದ್ದು, ಇವುಗಳು ನಿಮಗೆ ಆಂಡ್ರಾಯ್ಡ್ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಅನುಮತಿಸುತ್ತವೆ.

ಅತ್ಯುತ್ತಮ ಕ್ಯಾಮೆರಾ
ಕ್ಯಾಮೆರಾ ಕಾರ್ಯನಿರ್ವಹಣೆಯಲ್ಲಿ ಒನ್‌ಪ್ಲಸ್ 6 ಹೊಸ ಮಾನದಂಡವನ್ನು ನಿರ್ಮಿಸಿದೆ. ಹಿಂಬದಿಯಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, 16 MP ಪ್ರೈಮರಿ + 20 MP ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದೆ. ಒನ್‌ಪ್ಲಸ್ 5Tಗೆ ಹೋಲಿಸಿದರೆ ಒನ್‌ಪ್ಲಸ್ 6ನಲ್ಲಿ ಕ್ಯಾಮೆರಾ ಕಾರ್ಯನಿರ್ವಹಣೆ ಬಹು ದೊಡ್ಡ ಸುಧಾರಣೆಯನ್ನು ಕಂಡಿದೆ. 16 MP ಪ್ರೈಮರಿ ಸೆನ್ಸಾರ್‌ನಲ್ಲಿ ಪಿಕ್ಸೆಲ್ ಗಾತ್ರವನ್ನು 1.22um ಗೆ ಹೆಚ್ಚಿಸಲಾಗಿದೆ,ಈ ಫೀಚರ್ ಹೆಚ್ಚು ಬೆಳಕನ್ನು ತರುವುದಲ್ಲದೇ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನ್ನು ಕತ್ತಲೆಯಲ್ಲೂ ಉತ್ತಮ ಫೋಟೋಗ್ರಾಫಿ ಮಾಡಲು ಸಿದ್ಧಗೊಳಿಸಿದೆ.
ದೊಡ್ಡ ಪಿಕ್ಸೆಲ್ ಗಾತ್ರವಷ್ಟೇ ಅಲ್ಲದೇ, ಒನ್‌ಪ್ಲಸ್ 6ನ ಪ್ರೈಮರಿ ಕ್ಯಾಮೆರಾ EIS ಮತ್ತು OISನ್ನು ಹೊಂದಿದೆ. ಇದು ವಿಡಿಯೋ ಸೆರೆಹಿಡಿಯುವಾಗ ದೊಡ್ಡ ಉತ್ತೇಜನ ನೀಡುತ್ತದೆ. ಅದಲ್ಲದೇ ಒನ್‌ಪ್ಲಸ್ 6 4K ಫಾರ್ಮ್ಯಾಟ್ ವಿಡಿಯೋವನ್ನು ಬೆಂಬಲಿಸುತ್ತಿದ್ದು, 60 FPS (Frame Per Second)ವಿಡಿಯೋ ಚಿತ್ರೀಕರಣ ಮಾಡಬಹುದು. ಇದು ಸಂಪೂರ್ಣ ಹೆಚ್‌ಡಿ ಹಾಗೂ ವೈಬ್ರಂಟ್ ಡಿಸ್‌ಪ್ಲೇನಲ್ಲಿ ಆಕರ್ಷಕವಾಗಿ ಕಾಣುತ್ತದೆ. ಕೊನೆಯದಾಗಿ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ 480 FPSನೊಂದಿಗೆ ವಿಡಿಯೋ ಚಿತ್ರೀಕರಣ ಮಾಡುವ ಅದ್ಭುತ ಸ್ಲೋ ಮೋಷನ್ ವಿಡಿಯೋಗಳಿಗೆ ಬೆಂಬಲ ನೀಡುತ್ತದೆ.

ಒನ್‌ಪ್ಲಸ್ 6 ಏಕೆ ಬೇಕು ಅಂತಿರಾ..?
ಒನ್‌ಪ್ಲಸ್ 6 ಸ್ಮಾರ್ಟ್‌ಫೋನೆ ಯಾಕೆ ಎಂದು ನಿಮ್ಮ ಮನಸ್ಸಲ್ಲಿ ಪ್ರಶ್ನೆ ಮೂಡಿದರೆ, ಅದನ್ನು ಪರಿಹರಿಸಲು ಒಂದಿಷ್ಟು ಅಂಕಿ, ಅಂಶಗಳನ್ನು ನಾವೂ ನಿಮಗೆ ನೀಡಲೇಬೇಕಾಗುತ್ತದೆ. ಅದರಂತೆ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ 2018ರ ಎರಡನೇ ತ್ರೈಮಾಸಿಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿದೆ. ಒನ್‌ಪ್ಲಸ್ 6 ಬಿಡುಗಡೆಯ ನಂತರ ಭಾರತೀಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇ.284ರಷ್ಟು ಪ್ರಗತಿಯನ್ನು ಒನ್‌ಪ್ಲಸ್ ಕಂಡಿದೆ. ಇಕಾಮರ್ಸ್ ಪೋರ್ಟಾಲ್‌ನ ಪ್ಲಾಶ್ ಸೇಲ್‌ಗಳಲ್ಲಿ ಒನ್‌ಪ್ಲಸ್ 6 ಕಲೆವೇ ಕ್ಷಣಗಳಲ್ಲಿ ಮಾರಾಟವಾಗಿ ಇತಿಹಾಸ ಸೃಷ್ಟಿಸಿದೆ.
ಇದೀಗ ಒನ್‌ಪ್ಲಸ್ ಕಂಪನಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನ ಯಶಸ್ಸನ್ನು ಮುಂದುವರೆಸಲು ನಿರ್ಧರಿಸಿದ್ದು, ನಿಮಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸಲು ಇದು ಕೊನೆಯ ಮತ್ತು ಉತ್ತಮ ಅವಕಾಶವಾಗಿದೆ. ಮೇಲೆ ಹೇಳಿದಂತೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ನ್ನು ಅಕ್ಟೋಬರ್ 10 ರಿಂದ ಅಕ್ಟೋಬರ್ 15ರವರೆಗೆ ನಡೆಯುವ ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಕೇವಲ ₹ 29,999 ಖರೀದಿಸಿ ಮತ್ತು ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿ.


Click it and Unblock the Notifications








