'ಒನ್‌ಪ್ಲಸ್‌ 6' ಫ್ಲಾಶ್‌ಸೇಲ್ ಇಂದಿನಿಂದ ಆರಂಭ!...ಸ್ಮಾರ್ಟ್‌ಫೋನ್ ಖರೀದಿಸಲು ಕ್ಯೂ!!

|

ವಿಶ್ವ ಮೊಬೈಲ್ ಮಾರುಕಟ್ಟೆಯನ್ನು ತನ್ನತ್ತ ಸೆಳೆದಿರುವ 'ಒನ್‌ಪ್ಲಸ್‌ 6 'ಸ್ಮಾರ್ಟ್‌ಫೋನ್ ಮಾರಾಟ ಭಾರತದಲ್ಲಿ ಇಂದಿನಿಂದ ಶುರುವಾಗುತ್ತಿದೆ. ಹಾಗಾಗಿ, ಬೆಂಗಳೂರು ಸೇರಿದಂತೆ ಭಾರತದ ಎಲ್ಲಾ ಒನ್‌ಪ್ಲಸ್ 6 ಮಳಿಗೆಗಳ ಮುಂದೆ ಜನರು ಗ್ರಾಹಕರು ಸಾಲುಗಟ್ಟಿ ನಿಂತು ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಖರೀದಿಸಲು ಕಾತುರದಿಂದ ಕಾಯುತ್ತಿದ್ದಾರೆ.!

ಹೌದು, ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಅನ್ನು ಮೊದಲು ಖರೀದಿಸುವ ಹಂಬಲದಿಂದ ಬ್ರಿಗೇಡ್ ರಸ್ತೆಯ ಅಂಗಡಿ ಮಳಿಗೆ ಮುಂದೆ ಗ್ರಾಹಕರು ಜಮಾಯಿಸಿದ್ದಾರೆ. ಇಂದು 12 ಗಂಟೆಗೆ 'ಒನ್‌ಪ್ಲಸ್‌ 6 'ಸ್ಮಾರ್ಟ್‌ಫೋನಿನ ಮೊದಲ ಫ್ಲಾಶ್‌ಸೇಲ್ ಆರಂಭವಾಗಲಿರುವುದರಿಂದ, ಬೆಳಗ್ಗೆ 9 ಗಂಟೆಯಿಂದಲೇ ಮೊಬೈಲ್ ಖರೀದಿಗಾಗಿ ಕ್ಯೂ ನಿಂತಿದ್ದಾರೆ ಎಂದು ತಿಳಿದುಬಂದಿದೆ.

'ಒನ್‌ಪ್ಲಸ್‌ 6' ಫ್ಲಾಶ್‌ಸೇಲ್ ಇಂದಿನಿಂದ ಆರಂಭ!.ಸ್ಮಾರ್ಟ್‌ಫೋನ್ ಖರೀದಿಸಲು ಕ್ಯೂ!

6 ಜಿಬಿ RAM ಮತ್ತು 64 ಜಿ.ಬಿ ಸಾಮರ್ಥ್ಯದ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನಿಗೆ ₹ 34,999 ಹಾಗೂ 8 RAM ಜಿಬಿ 128 ಜಿ.ಬಿ ಸಾಮರ್ಥ್ಯದ ಫೋನ್‌ಗೆ ₹39,999 ಬೆಲೆ ಇದ್ದು, ಹಾಗಾದರೆ, 'ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಖರೀದಿಸಲು ಜನರು ಏಕಿಷ್ಟು ಆತುರ ಮಾಡುತ್ತಿದ್ದಾರೆ? 'ಒನ್‌ಪ್ಲಸ್‌ 6 'ಸ್ಮಾರ್ಟ್‌ಫೋನಿನ ಫೀಚರ್ಸ್ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

'ಒನ್‌ಪ್ಲಸ್ 6' ಮಾರಾಟ ಮತ್ತು ಬೆಲೆ!!

'ಒನ್‌ಪ್ಲಸ್ 6' ಮಾರಾಟ ಮತ್ತು ಬೆಲೆ!!

ಅಮೆಜಾನ್‌ ಡಾಟ್ ಇನ್, ಒನ್‌ಪ್ಲಸ್‌ ಡಾಟ್ ಇನ್ ಮತ್ತು ಒನ್‍ಪ್ಲಸ್ ಎಕ್ಸ್‌ಪೀರಿಯನ್ಸ್ ಮಳಿಗೆಗಳಲ್ಲಿ ಮೇ 21ರಂದು ಮಧ್ಯಾಹ್ನ 12 ಗಂಟೆಗೆ ಫ್ಲಾಶ್‌ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿರಲಿದೆ. ಮಿರರ್ ಬ್ಲ್ಯಾಕ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ 6ಜಿಬಿ RAM + 64 ಜಿಬಿ ಶೇಖರಣಾ ಮೆಮೊರಿ ಮತ್ತು 8ಜಿಬಿ RAM ಮತ್ತು 128 ಜಿಬಿಯ ಎರಡು ರೂಪಾಂತರಗಳು ಕ್ರಮವಾಗಿ Rs.34,999 ರೂ. ಮತ್ತು 39,999. ರೂಪಾಯಿಗಳಲ್ಲಿ ಭಾರತದಲ್ಲಿ ಲಭ್ಯವಿವೆ.

'ಒನ್‌ಪ್ಲಸ್ 6' ಖರೀದಿ ಆಫರ್ಸ್!!

'ಒನ್‌ಪ್ಲಸ್ 6' ಖರೀದಿ ಆಫರ್ಸ್!!

ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಬಿಡುಗಡೆಯಾದ ಮೊದಲ ವಾರದಲ್ಲಿ ಗ್ರಾಹಕರು ಎಸ್‌ಐ ಡೆಬಿಟ್ ಮತ್ತು ಕ್ರೆಡಿಟ್‌ಕಾರ್ಡ್ ಮೂಲಕ ಖರೀದಿಸಿದರೆ, ₹2,000 ಕ್ಯಾಷ್‍ಬ್ಯಾಕ್ ಸೌಲಭ್ಯವಿರಲಿದೆ. ಅಷ್ಟೇ ಅಲ್ಲದೇ, ಗ್ರಾಹಕರು ಎಲ್ಲ ಪ್ರಮುಖ ಬ್ಯಾಂಕುಗಳಿಂದ 3 ತಿಂಗಳವರೆಗಿನ ವೆಚ್ಚರಹಿತ ಇಎಂಐ ಸೌಲಭ್ಯವನ್ನು ಪಡೆಯಲೂ ಅರ್ಹರಾಗಿರುತ್ತಾರೆ ಎಂದು ಒನ್‌ಪ್ಲಸ್ ಕಂಪೆನಿ ತಿಳಿಸಿದೆ.

ಡಿಸ್‌ಪ್ಲೇ ಹೇಗಿದೆ!!

ಡಿಸ್‌ಪ್ಲೇ ಹೇಗಿದೆ!!

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಆಪಲ್ ಎಕ್ಸ್ ರೀತಿಯಲ್ಲಿ ಡಿಸ್‌ಪ್ಲೇ ನೋಚ್ ಇರುವ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದ ಒನ್‌ಪ್ಲಸ್ ಕಂಪೆನಿಯು ಡಿಸ್‌ಪ್ಲೇ ಗುಣಮಟ್ಟದಲ್ಲಿಯೂ ಯಾವುದೇ ರಾಜಿಯಾಗಿಲ್ಲ. 6.28 ಇಂಚಿನ ಎಫ್‌ಹೆಚ್‌ಡಿ ಪ್ಲಸ್ ಆಪ್ಟಿಕ್ ಡಿಸ್‌ಪ್ಲೇನ್ನು ಹೊಂದಿದೆ.2280 x 1080 ಪಿಕ್ಸೆಲ್ ರೆಸಲ್ಯೂಶನನ್ನು ಹೊಂದಿರುವ ಡಿಸ್‌ಪ್ಲೇಯು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ನಿಂದ ಪ್ರೊಟೆಕ್ಟ್ ಆಗಿದೆ. ಈ ಸಾಧನವು 3.5 ಮಿ.ಮೀ ಆಡಿಯೋ ಜ್ಯಾಕ್ ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್ ವಿನ್ಯಾಸ!!

ಸ್ಮಾರ್ಟ್‌ಫೋನ್ ವಿನ್ಯಾಸ!!

19:9 ಆಸ್ಪೆಕ್ಟ್ ಅನುಪಾದಲ್ಲಿ ಡಿಸ್‌ಪ್ಲೇ ನೋಚ್ ಸ್ಕ್ರೀನ್ ಹೊಂದಿರುವ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಹೊಂದಿದೆ. ಸಂಪೂರ್ಣ ವಾಟರ್‌ಪ್ರೂಫ್ ಬಾಡಿಯನ್ನು ನೀಡಿದರೂ ಸಹ ಪೂರ್ತಿ ಸ್ಕ್ರೀನ್ ಅನ್ನು ಹೊಂದಿರುವುದು ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ. ಇನ್ನು ಸ್ಮಾರ್ಟ್‌ಫೋನ್ ಬಳಸಿ ನೋಡಿರುವ ತಜ್ಞರು ಹೇಳೀದಂತೆ, " ಒಂದು ಹೈ ಎಂಡ್ ಸ್ಮಾರ್ಟ್‌ಫೋನ್ ಎನ್ನಲು ಒನ್‌ಪ್ಲಸ್ 6 ವಿನ್ಯಾಸ ಅರ್ಹವಾಗಿದೆ' ಎಂದು ಆಶ್ಚರ್ಯವ್ಯಕ್ತಪಡಿಸಿದ್ದಾರೆ.

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಒನ್‌ಪ್ಲಸ್ ಕಂಪೆನಿ ಸಿಇಒ ಪೀಟರ್ ಲೌ ಅವರು ಮೊದಲೇ ತಿಳಿಸಿದಂತೆ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 845 ಎಸ್‌ಒಸಿ ಪ್ರೊಸೆಸರ್ ಅನ್ನು ಹೊಂದಿದೆ. ಕಾರ್ಯನಿರ್ವಹಣೆಯಲ್ಲಿ 30% ಹೆಚ್ಚು ದಕ್ಷತೆ ಹಾಗೂ ವಿದ್ಯುತ್ ಉಳಿಕೆಯಲ್ಲಿ 10% ದಕ್ಷತೆಯನ್ನು ಈ ಪ್ರೊಸೆಸರ್ ನೀಡಲಿದೆ. ಈ ಪ್ರೊಸೆಸರ್ ಅನ್ನು ಅಡ್ರಿನೋ 630 ಜಿಪಿಯು ಜೊತೆ ಜೋಡಿಸಲಾಗಿದೆ. ಇನ್ನು UFS 2.1 ಶೇಖರಣಾ ಸಾಮರ್ಥ್ಯದ 6GB / 8GB RAM ಮತ್ತು 64GB / 128GB / 256GB ಮೆಮೊರಿ ವೆರಿಯಂಟ್‌ಗಳಲ್ಲಿ ಫೋನ್ ಬಿಡುಗಡೆಯಾಗಿದೆ.

'ಒನ್‌ಪ್ಲಸ್ 6' ಕ್ಯಾಮೆರಾ!!

'ಒನ್‌ಪ್ಲಸ್ 6' ಕ್ಯಾಮೆರಾ!!

'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಈಗ ಹೆಚ್ಚು ತಂತ್ರಜ್ಞಾನದ ಡ್ಯುಯಲ್ ಕ್ಯಾಮೆರಾ ತಂತ್ರಜ್ಞಾನದಿಂದ ಅಲಂಕೃತವಾಗಿದೆ. 1.22 ಮೈಕ್ರಾನ್ ಪಿಕ್ಸೆಲ್ ಗಾತ್ರದ ಎಫ್ / 1.7 ಅಪಾರ್ಚರ್ ಹೊಂದಿರುವ 20-ಮೆಗಾಪಿಕ್ಸೆಲ್ ಸೋನಿ IM376K ಕ್ಯಾಮೆರಾ ಹಾಗೂ 16-ಮೆಗಾಪಿಕ್ಸೆಲ್ ಸೋನಿ IMX519 ಕ್ಯಾಮೆರಾಗಳು ಹಿಂಬಾದಲ್ಲಿವೆ. ಜೊತೆಗೆ 1 ಮೆಕ್ರಾನ್ ಪಿಕ್ಸೆಲ್ ಗಾತ್ರದ f / 1.7 ಅಪಾರ್ಚರ್ ಹೊಂದಿರುವ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.

ಸಾಫ್ಟ್‌ವೇರ್ ಮತ್ತು ಫೀಚರ್ಸ್!!

ಸಾಫ್ಟ್‌ವೇರ್ ಮತ್ತು ಫೀಚರ್ಸ್!!

'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಓರಿಯೊ ಜೊತೆಗೆ ಆಕ್ಸಿಜನ್ 5.1 ಫೀಚರ್ ಹೊಂದಿದೆ. ಆಂಡ್ರಾಯ್ಡ್ 'ಪಿ' ಆರಂಭಿಕ ಅಳವಡಿಕೆ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಈ ಆಕ್ಸಿಜನ್ 5.1 ಒಎಸ್ ಐಒಎಸ್ ಹತ್ತಿರದ ಆಂಡ್ರಾಯ್ಡ್ ತರಹದ ಅನುಭವವನ್ನು ನೀಡುತ್ತದೆ. ಇನ್ನು ಎನ್ಎಫ್‌ಸಿ, ಬ್ಲೂಟೂತ್ 5.0, 4 ಜಿ ವೋಲ್ಸ್ ಮತ್ತು ಹೆಚ್ಚಿನವುಗಳಂತಹ ಇತರ ಅಂಶಗಳಿವೆ. ಗೇಮಿಂಗ್ ಮೋಡ್ ಗಮನಾರ್ಹವಾಗಿದೆ, ಗೇಮಿಂಗ್ ಮೋಡ್ ಹಿಂದಿನ ಮಾದರಿಗಳಿಗಿಂತ ಸುಧಾರಿತ ಕಾರ್ಯಕ್ಷಮತೆಯನ್ನು ನೀಡುತ್ತದೆ.

Best Mobiles in India

English summary
OnePlus 6 is available in Mirror Black and Midnight Black for now.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X