ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮೂಹುರ್ತ ಫಿಕ್ಸ್..! ಮಾರುಕಟ್ಟೆ ತಲ್ಲಣ..!

|

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬೇರೆ ಯಾವುದೇ ಸ್ಮಾರ್ಟ್‌ಫೋನ್ ಉಂಟು ಮಾಡದಂತಹ ಅಲೆಯನ್ನು ಹುಟ್ಟು ಹಾಕಿರುವ, ಒನ್‌ಪ್ಲಸ್ ಕಂಪನಿಯೂ ಬಿಡುಗಡೆ ಮಾಡಲು ಸಿದ್ಧವಾಗಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಶೀಘ್ರವೇ ಲಾಂಚ್ ಆಗಲಿದೆ. ಮೇ 17 ರಂದು ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ ಬಿಡುಗಡೆ ಮಾಡುತ್ತಿರುವ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಬಗ್ಗೆ ಹೆಚ್ಚಿನ ಮಾಹಿತಿಯೂ ಈ ಮುಂದಿನಂತೆ ಇದೆ.

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮೂಹುರ್ತ ಫಿಕ್ಸ್..! ಮಾರುಕಟ್ಟೆ ತಲ್ಲಣ

ಎಲ್ಲಾ ವಿಧದಲ್ಲಿಯೂ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬೆಸ್ಟ್ ಅನ್ನಿಸಿಕೊಂಡಿದೆ. ವಿನ್ಯಾಸ, ಡಿಸ್‌ಪ್ಲೇ ಮತ್ತು ಮೊಬೈಲ್ ಕ್ಯಾಮೆರಾ ವಿಭಾಗದಲ್ಲಿ ಈಗಾಗಲೇ ಬೆಸ್ಟ್ ಎನ್ನವ ಸರ್ಟಿಫಿಕೇಟ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ ಕುರಿತು ಹಲವು ಮಾಹಿತಿಗಳು ಲಭ್ಯವಾಗಿದ್ದು, ಶೀಘ್ರವೇ ನಮ್ಮ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಈ ಸ್ಮಾರ್ಟ್‌ಫೋನ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿನ್ಯಾಸ: ವಾಟರ್-ದಸ್ಟ್ ಪ್ರೂಫ್, ಮೆಟಲ್ ಬಾಡಿ

ವಿನ್ಯಾಸ: ವಾಟರ್-ದಸ್ಟ್ ಪ್ರೂಫ್, ಮೆಟಲ್ ಬಾಡಿ

ಒನ್‌ಪ್ಲಸ್ ಕಂಪನಿಯೂ ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮವಾದ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಬಳಕೆದಾರರಲ್ಲಿ ಒಂದು ನಂಬಿಕೆಯ ಭಾವನ್ನು ಮೂಡಿಸಿದೆ. ಈ ಹಿನ್ನಲೆಯಲ್ಲಿ ಇದನ್ನು ಹಾಗೆ ಉಳಿಸಿಕೊಳ್ಳಲು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅನ್ನು ಬೆಸ್ಟ್ ಕ್ಲಾಸ್ ನಲ್ಲಿಯೇ ನಿರ್ಮಿಸಿದೆ ಎನ್ನಲಾಗಿದೆ.

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಒನ್‌ಪ್ಲಸ್ ಇತಿಹಾಸದಲ್ಲಿ ಮೊದಲ ಬಾರಿಗೆ ವಾಟರ್-ದಸ್ಟ್ ಪ್ರೂಫ್ ಪಡೆದುಕೊಂಡಿದೆ. ಇದಲ್ಲದೇ ಮೆಟಲ್ ಬಾಡಿ ಹೊಂದಿದ್ದು, ಪ್ರಿಮಿಯಮ್ ವಿನ್ಯಾಸದಿಂದ ಕೂಡಿದೆ. ಭಿನ್ನ ಬಣ್ಣಗಳಲ್ಲಿ ಮತ್ತು ಡಿಸೈನ್‌ನಲ್ಲಿ ಲಭ್ಯವಿರಲಿದೆ.

ಕೃತಕ ಬುದ್ದಿಮತ್ತೆ ಇದೆ:

ಕೃತಕ ಬುದ್ದಿಮತ್ತೆ ಇದೆ:

ಇದಲ್ಲದೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಇಂಟಲಿಜೆಂಟ್ ಆಲಾರ್ಟ್ ಅನ್ನು ನೀಡಲಾಗಿದೆ. ಇದು ಕ್ಯಾಮೆರಾ ವಿಭಾಗದಲ್ಲಿ ಕೃತಕ ಬುದ್ದಿಮತ್ತೆ ಭಾರೀ ಸದ್ದು ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾಗಳಿಗೆ ಇದು ಸೆಡ್ಡು ಹೊಡೆಯಲಿದೆ ಎನ್ನುವ ಮಾತು ತಜ್ಞರಿಂದ ಕೇಳಿಬಂದಿದೆ.

FHD+ ಡಿಸ್‌ಪ್ಲೇ- ಎಡ್ಜ್-ಟು-ಎಡ್ಜ್ ವಿನ್ಯಾಸ:

FHD+ ಡಿಸ್‌ಪ್ಲೇ- ಎಡ್ಜ್-ಟು-ಎಡ್ಜ್ ವಿನ್ಯಾಸ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿಚಾರದಲ್ಲಿ ಬೆಸ್ಟ್ ಎನ್ನುಬಹುದಾಗಿದೆ. ಐಫೋನ್ X ಮಾದರಿಯಲ್ಲಿ ಡಿಸ್‌ಪ್ಲೇ ನೋಚ್ ಅನ್ನು ಒಳಗೊಂಡಿದೆ. ಅಲ್ಲದೇ ಎಡ್ಜ್-ಟು-ಎಡ್ಜ್ ವಿನ್ಯಾಸ ವಿನ್ಯಾಸದಿಂದ ಕೂಡಿದೆ. ಹೆಚ್ಚು ಡಿಸ್‌ಪ್ಲೇ ಕಾಣಿಸಿಕೊಂಡಿದ್ದು, ಅಂಚುಗಳು ತುಂಬ ಕಡಿಮೆ ಇದೆ.

ಇದಲ್ಲದೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ 6 ಇಂಚಿನ ಡಿಸ್‌ಪ್ಲೇ ಇದ್ದು, ಗೊರಿಲ್ಲಾ ಗ್ಲಾಸ್ ಪ್ರೋಟೆಕ್ಷನ್ ಸಹ ಇದೆ. ಈ ಕುರಿತು ಹಿಂದೆ ಒನ್‌ಪ್ಲಸ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಇದರೊಂದಿಗೆ ವಿಭಿನ್ನವಾದ ಗೆಸ್ಟ್ಷರ್ ಗಳನ್ನು ಹೊಂದಿದೆ.

ಕ್ಯಾಮೆರಾ: ಬೆಸ್ಟ್ ಡ್ಯುಯಲ್ ಕ್ಯಾಮೆರಾ:

ಕ್ಯಾಮೆರಾ: ಬೆಸ್ಟ್ ಡ್ಯುಯಲ್ ಕ್ಯಾಮೆರಾ:

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ವೋಗ್ ಮ್ಯಾಗ್‌ಜೀನ್ ಮೇ ತಿಂಗಳ ಆವೃತ್ತಿಯ ಕವರ್ ಫೋಟೋವನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಕ್ಲಿಕಿಸಿದ್ದು. ಈ ಹಿನ್ನಲೆಯಲ್ಲಿ ಡ್ಯುಯಲ್ ಕ್ಯಾಮೆರಾ ಬೆಸ್ಟ್ ಎನ್ನುವುದಕ್ಕೆ ಸಾಕ್ಷಿಯೂ ದೊರೆತಿದೆ.

ಲೈಟ್ ಕಡಿಮೆ ಇರುವ ಸಂದರ್ಭದಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ. ಹಿಂಭಾಗದಲ್ಲಿರುವ ಡ್ಯುಯಲ್ ಕ್ಯಾಮೆರಾ ಉತ್ತಮ ಇಮೇಜ್ ಕ್ವಾಲಿಟಿಯನ್ನು ಹೊಂದಿದ್ದು, ಬಳಕೆದಾರರಿಗೆ DSNL ಮಾದರಿಯ ಇಮೇಜ್ ಗಳನ್ನು ನೀಡಲಿದೆ.

ಉತ್ತಮ CPU, RAM ಮತ್ತು GPU:

ಉತ್ತಮ CPU, RAM ಮತ್ತು GPU:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನುವ ಚಿಪ್ ಸೆಟ್ ಅನ್ನು ಕಾಣಬಹುದಾಗಿದೆ. ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ನೊಂದಿಗೆ 8GB RAM ಮತ್ತು 256GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ಬೆಸ್ಟ್ ಕ್ಲಾಸ್ ಸ್ಮಾರ್ಟ್‌ಫೋನ್ ಎನ್ನಿಸಿಕೊಳ್ಳಲಿದೆ.

ಹೊಸ ಆಕ್ಸಿಜನ್ OS;

ಹೊಸ ಆಕ್ಸಿಜನ್ OS;

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಹೊಸ ಆಕ್ಸಿಜನ್ OS ಅನ್ನು ಕಾಣಬಹುದಾಗಿದೆ. ಇದು ಆಂಡ್ರಾಯ್ಡ್ ಬಳಕೆಯೊಂದಿಗೆ ಸೇರಿಕೊಳ್ಳಲಿದ್ದು, ಆಂಡ್ರಾಯ್ಡ್ P ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಇದು ಶಕ್ತವಾಗಿದೆ. ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲಿದೆ.

ಒನ್‌ಪ್ಲಸ್ 6 ಅವೆಂಜರ್ ಎಡಿಷನ್:

ಒನ್‌ಪ್ಲಸ್ 6 ಅವೆಂಜರ್ ಎಡಿಷನ್:

ಈಗಾಗಲೇ ಸಿನಿಮಾ ಮಂದಿರಗಳಲ್ಲಿ ಸದ್ದು ಮಾಡುತ್ತಿರುವ ಅವೆಂಜರ್ ಇನ್‌ಫಿನಿಟಿ ವಾರ್ ಸಿನಿಮಾ ಆವೃತ್ತಿಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ದೊರೆಯಲಿದೆ. ಇದು ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿ ಲಾಂಚ್ ಆಗಲಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ. ಮಾರ್ವಲ್ ಅಭಿಮಾನಿಗಳಿಗಾಗಿಯೇ ಅವೆಂಜರ್ ಇನ್‌ಫಿನಿಟಿ ವಾರ್ ಆವೃತ್ತಿಯೂ ಲಾಂಚ್ ಆಗಲಿದೆ.

ಲಭ್ಯತೆ;

ಲಭ್ಯತೆ;

ಮುಂಬೈನಲ್ಲಿ ಮೇ 17 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅವೆಂಜರ್ ಇನ್‌ಫಿನಿಟಿ ವಾರ್ ಸಿನಿಮಾ ಆವೃತ್ತಿಯ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ. ಇದಲ್ಲದೇ ದೇಶದ ಪ್ರಮುಖ 8 ನಗರಗಳಲ್ಲಿ ಅಭಿಮಾನಿಗಳಿಗಾಗಿ ಒನ್‌ಪ್ಲಸ್ ಇವೆಂಟ್ ಗಳನ್ನು ನಡೆಸಲಿದೆ ಎನ್ನಲಾಗಿದೆ. ಇದು ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದ್ರಾಬಾದ್, ಪುಣೆ, ಕೊಲ್ಕತ್ತಾ ಮತ್ತು ಅಹಮದಾಬಾದಿನಲ್ಲಿ ನಡೆಯಲಿದೆ.

ಬೆಲೆ:

ಬೆಲೆ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ರೂ.39,999ಕ್ಕೆ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಟಾಪ್ ಎಂಡ್ ಆವೃತ್ತಿಯೂ ರೂ. 40000ಕ್ಕೆ ಲಭ್ಯವಿರುವ ಸಾಧ್ಯತೆ ಬಗ್ಗೆ ಮೂಲಗಳು ಮಾಹಿತಿಯನ್ನು ನೀಡಿವೆ. ಮೇ.27ರಿಂದ ಅಮೆಜಾನ್ ಪ್ರೈಮ್ ಸದಸ್ಯರಿಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ದೊರೆಯಲಿದೆ.

Best Mobiles in India

English summary
OnePlus 6: Everything you need to know about the upcoming flagship smartphone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X