ಹೇಗಿದೆ OnePlus ಸಿಕ್ಸು..? ಇದು ಕನ್ನಡದಲ್ಲೇ ಫಸ್ಟು..!

|
Oneplus 6 First Impressions - Gizbot Kannada

ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ತನ್ನದೇ ಅಭಿಮಾನಿ ವೃಂದವನ್ನು ಹೊಂದಿದ್ದು, ಅತೀ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗವ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಪ್ರತಿಬಾರಿಯೂ ಬೊಂಬಾಟ್ ಸ್ಮಾರ್ಟ್‌ಫೋನ್‌ಗಳನ್ನು ಅತೀ ಕಡಿಮೆ ಬೆಲೆಗೆ ನೀಡುವ ಒನ್‌ಪ್ಲಸ್ ಈ ಬಾರಿ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಲಾಂಚ್ ಮಾಡಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಹೇಗಿದೆ ಎಂದು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ಇದಾಗಿದೆ.

ಹೇಗಿದೆ OnePlus ಸಿಕ್ಸು..? ಇದು ಕನ್ನಡದಲ್ಲೇ ಫಸ್ಟು..!

ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳಿಗೆ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಸೆಡ್ಡು ಹೊಡೆಯುವುದು ಗ್ಯಾರೆಂಟಿ ಎನ್ನುವ ಮಾತು ಉದ್ಯಮದಲ್ಲಿ ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಇಂದಿನಿಂದ ಮಾರಾಟಕ್ಕೆ ಲಭ್ಯವಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಹೇಗಿದೆ. ಇಲ್ಲದೇ ಸಂಪೂರ್ಣ ಮಾಹಿತಿ..!

ಹೇಗಿದೆ OnePlus ಸಿಕ್ಸು..? ವೀಡಿಯೊ ನೋಡಿ

ಹೇಗಿದೆ OnePlus ಸಿಕ್ಸು..? ವೀಡಿಯೊ ನೋಡಿ

ಇದು ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಪರಿಚಯದ ವೀಡಿಯೊವಾಗಿದ್ದು, ಫೋನ್ ಕುರಿತ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

ಐಫೋನ್ ಮಾದರಿಯ ಡಿಸ್‌ಪ್ಲೇ:

ಐಫೋನ್ ಮಾದರಿಯ ಡಿಸ್‌ಪ್ಲೇ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಆಪಲ್ ‍X ಮಾದರಿಯಲ್ಲಿ ಡಿಸ್‌ಪ್ಲೇ ನೋಚ್ ಕಾಣಬಹುದಾಗಿದ್ದು, 6.28 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇನ್ನು ಹೊಂದಿದೆ.2280 x 1080 ಪಿಕ್ಸೆಲ್ ರೆಸಲ್ಯೂಶನನ್ನು ಹೊಂದಿದೆ. ಈ ಫೋನಿನ ಡಿಸ್‌ಪ್ಲೇ ಮತ್ತು ಬ್ಯಾಕ್‌ ಪ್ಯಾನಲ್‌ಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಸುರಕ್ಷತೆ ಇದೆ. 19:9 ಅನುಪಾತದ ಡಿಸ್‌ಪ್ಲೇ ಇದಾಗಿದೆ.

ಬೆಸ್ಟ್ ಡ್ಯುಯಲ್ ಕ್ಯಾಮೆರಾ:

ಬೆಸ್ಟ್ ಡ್ಯುಯಲ್ ಕ್ಯಾಮೆರಾ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಈ ಹಿಂದೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಒನ್‌ಪ್ಲಸ್ 5T ಸ್ಮಾರ್ಟ್‌ಫೋನಿನಲ್ಲಿ ಕಾಣಿಸಿಕೊಂಡಿದ್ದ 20 MP + 16 MP ಡ್ಯುಯಲ್ ಕ್ಯಾಮೆರಾ ಸೆಪಟ್ ಅನ್ನು ಕಾಣಬಹುದಾಗಿದೆ. ಆದರೆ ಕ್ಯಾಮೆರಾ ಆಯ್ಕೆಗಳಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ. f/1.7 ಅಪಾರ್ಚರ್ ಹೊಂದಿರುವ 20 MP ಸೋನಿ IM376K ಲೈನ್ಸ್ ಹಾಗೂ 16 MP ಸೋನಿ IMX519 ಲೈನ್ಸ್ ಹಿಂಭಾಗದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ f / 1.7 ಅಪಾರ್ಚರ್ ಹೊಂದಿರುವ 16 MP ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ಅನ್ನು ಹೊಂದಿದೆ. ಉತ್ತಮ ಗ್ರಾಫಿಕ್ಸ್‌ಗಾಗಿ ಅಡ್ರಿನೋ 630 GPU ಸಹ ಈ ಸ್ಮಾರ್ಟ್‌ಫೋನಿನಲ್ಲಿದೆ. 6GB ಮತ್ತು 8GB RAM ಹಾಗೂ 64GB, 128GB ಮತ್ತು 256GB ಇಂಟರ್ನಲ್ ಮೆಮೊರಿ ಯೊಂದಿಗೆ ಈ ಸ್ಮಾರ್ಟ್‌ಫೋನ್‌ ದೊರೆಯಲಿದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಓರಿಯೊದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಆಕ್ಸಿಜನ್ 5.1 UI ಅನ್ನು ಹೊಂದಿದೆ. ಇದಲ್ಲದೇ NFC, ಬ್ಲೂಟೂತ್ 5.0, 4G VoLTE ಮತ್ತು ಹೆಚ್ಚಿನವುಗಳಂತಹ ಇತರ ಅಂಶಗಳಿವೆ. ಗೇಮಿಂಗ್‌ಗಾಗಿಯೇ ವಿಶೇಷ ಆಯ್ಕೆಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.

ಎರಡು ಆವೃತ್ತಿ:

ಎರಡು ಆವೃತ್ತಿ:

6 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಒಂದು ಆವೃತ್ತಿ ಹಾಗೂ 8 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದಲ್ಲದೇ ಮಾರ್ವಲ್ ಅವೆಂಜರ್ ಸಿಮೀತ ಆವೃತ್ತಿಯೂ ಲಭ್ಯವಿದ್ದು, 8 GB RAM ಮತ್ತು 256 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ಬೆಲೆಗಳು:

ಬೆಲೆಗಳು:

ಮೇ.22 ರಂದು ಅಮೆಜಾನ್, ಒನ್‌ಪ್ಲಸ್‌ ಡಾಟ್ ಇನ್ ಮತ್ತು ಒನ್‍ಪ್ಲಸ್ ಎಕ್ಸ್‌ಪೀರಿಯನ್ಸ್ ಸ್ಟೋರ್‌ಗಳಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ದೊರೆಯಲಿದೆ. 6 GB RAM ಮತ್ತು 64 GB ಇಂಟರ್ನಲ್ ಮೆಮೊರಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ರೂ.34,999 ಹಾಗೂ 8 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿಯ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ರೂ.39,999ಕ್ಕೆ ಮಾರಾಟವಾಗಲಿದೆ.

ಅವೆಂಜರ್ ಸಿಮೀತ ಆವೃತ್ತಿ

ಅವೆಂಜರ್ ಸಿಮೀತ ಆವೃತ್ತಿ

ಇದಲ್ಲದೇ ಮೇ. 29ರಂದು ಮಾರ್ವಲ್ ಅವೆಂಜರ್ ಸಿಮೀತ ಆವೃತ್ತಿಯ ಖರೀದಿಗೆ ಲಭ್ಯವಿರಲಿದ್ದು, 8 GB RAM ಮತ್ತು 256 GB ಇಂಟರ್ನಲ್ ಮೆಮೊರಿಯ ಫೋನ್ ರೂ.44,999ಕ್ಕೆ ದೊರೆಯಲಿದೆ.

ಆಫರ್‌ಗಳು:

ಆಫರ್‌ಗಳು:

ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಬಿಡುಗಡೆಯಾದ ಮೊದಲ ವಾರದಲ್ಲಿ ಗ್ರಾಹಕರು SBI ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್ ಮೂಲಕ ಖರೀದಿಸಿದರೆ, ರೂ.2,000 ಕ್ಯಾಷ್‍ಬ್ಯಾಕ್ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ, ಪ್ರಮುಖ ಬ್ಯಾಂಕುಗಳ ಕಾರ್ಡುದಾರರು 3 ತಿಂಗಳವರೆಗಿನ ನೋ ಕಾಸ್ಟ್ EMI ಸೌಲಭ್ಯವನ್ನು ಪಡೆಯಬಹುದಾಗಿದೆ.

Best Mobiles in India

English summary
Oneplus 6 First Impressions Gizbot Kannada. to know more visit kannada.gixbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X