ಒನ್‌ಪ್ಲಸ್ 6 ದಾಖಲೆಗೆ ಬೆಚ್ಚಿ ಬಿದ್ದ ಮೊಬೈಲ್ ಲೋಕ: 10 ನಿಮಿಷದಲ್ಲಿ ರೂ.100 ಕೋಟಿ ಸೇಲ್..!

|

ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಅಲೆಯನ್ನು ಹುಟ್ಟಿಹಾಕಿದ್ದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಮಾರಾಟವಾಗಿದ್ದು, ಹೊಸ ದಾಖಲೆಯನ್ನು ನಿರ್ಮಿಸಿದೆ. ಸೇಲ್ ಆರಂಭವಾದ ಮೊದಲ 10 ನಿಮಿಷದಲ್ಲಿಯೇ 100 ಕೋಟಿ ಮೊತ್ತದ ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಮಾಡಿದೆ ಎನ್ನಲಾಗಿದೆ.

ಒನ್‌ಪ್ಲಸ್ 6 ದಾಖಲೆಗೆ ಬೆಚ್ಚಿ ಬಿದ್ದ ಮೊಬೈಲ್ ಲೋಕ: 10 ನಿಮಿಷದಲ್ಲಿ ರೂ.100 ಕೋಟಿ

ಮೇ. 21 ರಂದು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಅಮೆಜಾನ್ ಪ್ರೈಮ್ ಸದಸ್ಯರಿಗೆ ಮತ್ತು ಒನ್‌ಪ್ಲಸ್ ಕಮ್ಯೂನಿಟಿ ಸದಸ್ಯರಿಗೆ ಮಾತ್ರವೇ ಮಾರಾಟಕ್ಕೆ ಲಭ್ಯವಿತ್ತು ಎನ್ನಲಾಗಿದ್ದು, ಈ ಸೇಲ್‌ನಲ್ಲಿ ಒನ್‌ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ. ಮೇ.21ರಂದು 12 ಗಂಟೆಗೆ ನಡೆದ ಸೇಲ್‌ನಲ್ಲಿ ಈ ದಾಖಲೆಯನ್ನು ನಿರ್ಮಾಣ ಮಾಡಿದೆ.

ಭಾರೀ ಜನಪ್ರಿಯತೆ:

ಭಾರೀ ಜನಪ್ರಿಯತೆ:

ಒನ್‌ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ ಎನ್ನಲಾಗಿದೆ. ಸೇಲ್ ಆರಂಭವಾದ 10 ನಿಮಿಷದಲ್ಲಿ 100 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆದಿದೆ.

 ಸಾಮಾನ್ಯ ಸೇಲ್:

ಸಾಮಾನ್ಯ ಸೇಲ್:

ಇದಲ್ಲದೇ ಮೇ. 22 ರಂದು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ ಮತ್ತು ಒನ್‌ಪ್ಲಸ್ ಸ್ಟೋರ್‌ಗಳಲ್ಲಿ ಮಾರಾಟವಾಗುತ್ತಿದ್ದು, ಇದಲ್ಲದೇ ಒನ್‌ಪ್ಲಸ್ ಆನ್‌ಲೈನ್ ಸ್ಟೋರ್ ಮತ್ತು ಕ್ರೋಮದಲ್ಲಿಯೂ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಭರ್ಜರಿಯಾಗಿ ಸೇಲ್ ಆಗಿದೆ ಎನ್ನಲಾಗಿದೆ.

ಒನ್‌ಪ್ಲಸ್ 6 ಆವೃತ್ತಿಗಳು:

ಒನ್‌ಪ್ಲಸ್ 6 ಆವೃತ್ತಿಗಳು:

6 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಒಂದು ಆವೃತ್ತಿ ಹಾಗೂ 8 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದಲ್ಲದೇ ಮಾರ್ವಲ್ ಅವೆಂಜರ್ ಸಿಮೀತ ಆವೃತ್ತಿಯೂ ಲಭ್ಯವಿದ್ದು, 8 GB RAM ಮತ್ತು 256 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ಒನ್‌ಪ್ಲಸ್ 6  ಬೆಲೆ

ಒನ್‌ಪ್ಲಸ್ 6 ಬೆಲೆ

GB RAM ಮತ್ತು 64 GB ಇಂಟರ್ನಲ್ ಮೆಮೊರಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ರೂ.34,999 ಹಾಗೂ 8 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿಯ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ರೂ.39,999ಕ್ಕೆ ಮಾರಾಟವಾಗಲಿದೆ.

Oneplus 6 First Impressions - Gizbot Kannada
ಒನ್‌ಪ್ಲಸ್ 6 ವೇಗ:

ಒನ್‌ಪ್ಲಸ್ 6 ವೇಗ:

ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ಅನ್ನು ಹೊಂದಿದೆ. ಉತ್ತಮ ಗ್ರಾಫಿಕ್ಸ್‌ಗಾಗಿ ಅಡ್ರಿನೋ 630 GPU ಸಹ ಈ ಸ್ಮಾರ್ಟ್‌ಫೋನಿನಲ್ಲಿದೆ. 6GB ಮತ್ತು 8GB RAM ಹಾಗೂ 64GB, 128GB ಮತ್ತು 256GB ಇಂಟರ್ನಲ್ ಮೆಮೊರಿ ಯೊಂದಿಗೆ ಈ ಸ್ಮಾರ್ಟ್‌ಫೋನ್‌ ದೊರೆಯಲಿದೆ.

ಒನ್‌ಪ್ಲಸ್ 6 OS:

ಒನ್‌ಪ್ಲಸ್ 6 OS:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಒರಿಯೊದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಆಕ್ಸಿಜನ್ 5.1 UI ಅನ್ನು ಹೊಂದಿದೆ. ಇದಲ್ಲದೇ NFC, ಬ್ಲೂಟೂತ್ 5.0, 4G VoLTE ಮತ್ತು ಹೆಚ್ಚಿನವುಗಳಂತಹ ಇತರ ಅಂಶಗಳಿವೆ. ಗೇಮಿಂಗ್‌ಗಾಗಿಯೇ ವಿಶೇಷ ಆಯ್ಕೆಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.

ಒನ್‌ಪ್ಲಸ್ 6 ಡ್ಯುಯಲ್ ಕ್ಯಾಮೆರಾ:

ಒನ್‌ಪ್ಲಸ್ 6 ಡ್ಯುಯಲ್ ಕ್ಯಾಮೆರಾ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ 20 MP + 16 MP ಡ್ಯುಯಲ್ ಕ್ಯಾಮೆರಾ ಸೆಪಟ್ ಅನ್ನು ಕಾಣಬಹುದಾಗಿದೆ. ಆದರೆ ಕ್ಯಾಮೆರಾ ಆಯ್ಕೆಗಳಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ. f/1.7 ಅಪಾರ್ಚರ್ ಹೊಂದಿರುವ 20 MP ಸೋನಿ IM376K ಲೈನ್ಸ್ ಹಾಗೂ 16 MP ಸೋನಿ IMX519 ಲೈನ್ಸ್ ಹಿಂಭಾಗದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ f / 1.7 ಅಪಾರ್ಚರ್ ಹೊಂದಿರುವ 16 MP ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.

ಒನ್‌ಪ್ಲಸ್ 6 ಡಿಸ್‌ಪ್ಲೇ:

ಒನ್‌ಪ್ಲಸ್ 6 ಡಿಸ್‌ಪ್ಲೇ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಡಿಸ್‌ಪ್ಲೇ ನೋಚ್ ಕಾಣಬಹುದಾಗಿದ್ದು, 6.28 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇನ್ನು ಹೊಂದಿದೆ.2280 x 1080 ಪಿಕ್ಸೆಲ್ ರೆಸಲ್ಯೂಶನನ್ನು ಹೊಂದಿದೆ. ಈ ಫೋನಿನ ಡಿಸ್‌ಪ್ಲೇ ಮತ್ತು ಬ್ಯಾಕ್‌ ಪ್ಯಾನಲ್‌ಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಸುರಕ್ಷತೆ ಇದೆ. 19:9 ಅನುಪಾತದ ಡಿಸ್‌ಪ್ಲೇ ಇದಾಗಿದೆ.

Best Mobiles in India

English summary
OnePlus 6 First Sale in India Saw Rs. 100 Crores Worth of Sales in 10 Minutes. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X