ಒನ್‌ಪ್ಲಸ್ 6 ಪ್ರಿಯರಿಗೆ ಸಿಹಿ ಸುದ್ದಿ, ಅಮೇಜಾನ್‌ನಲ್ಲಿ 2 ಸಾವಿರ ರೂ. ರಿಯಾಯಿತಿ..!

By GizBot Bureau
|

ಬಹಳ ರಿಯಾಯಿತಿಯನ್ನು ನೀಡಲು ಆರಂಭಿಸಿದೆ. ಹೌದು ಒನ್ ಪ್ಲಸ್ 6 ನ ಎಲ್ಲಾ ವೇರಿಯಂಟ್ ಫೋನ್ ಗಳು ಅಂದರೆ ಇತ್ತೀಚೆಗೆ ಬಿಡುಗಡೆಯಾದ ಕೆಂಪು ವರ್ಣದ ಫೋನ್ ಸೇರಿದಂತೆ 8ಜಿಬಿ/256ಜಿಬಿ ಮಿಡ್ ನೈಟ್ ಬ್ಲಾಕ್ ಗೂ ಕೂಡ 2000 ರುಪಾಯಿಯ ರಿಯಾಯಿತಿ ಲಭ್ಯವಾಗುತ್ತಿದೆ.

ಒನ್‌ಪ್ಲಸ್ 6 ಪ್ರಿಯರಿಗೆ ಸಿಹಿ ಸುದ್ದಿ, ಅಮೇಜಾನ್‌ನಲ್ಲಿ 2 ಸಾವಿರ ರೂ. ರಿಯಾಯಿತಿ

ಈ ಆಫರ್ ಗಾಗಿ ಒನ್ ಪ್ಲಸ್ 6 ಹೆಚ್ ಡಿಎಫ್ ಸಿ ಬ್ಯಾಂಕ್ ಜೊತೆ ಕೈಜೋಡಿಸಿದೆ.ಅಂದರೆ ಈ ಆಫರ್ ಕೇವಲ ಹೆಚ್ ಡಿ ಎಫ್ ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಮಾತ್ರ ಲಭ್ಯವಾಗುತ್ತದೆ. ಜುಲೈ 16 ರಿಂದ ಒನ್ ಪ್ಲಸ್ 6 ನ ಎಡಿಷನ್ ನ ಅಧಿಕೃತ ಮಾರಾಟ ಆರಂಭವಾಗಲಿದ್ದು ಅದರ ಬೆಲೆ 39,999 ರುಪಾಯಿಗಳಾಗಿದೆ.

ಅಮೇಜಾನ್ ಪ್ರೈಮ್ ಡೇ ಸೇಲ್

ಅಮೇಜಾನ್ ಪ್ರೈಮ್ ಡೇ ಸೇಲ್

ಇದೇ ಸಂದರ್ಬದಲ್ಲಿ ಅಮೇಜಾನ್ ಪ್ರೈಮ್ ಡೇ ಸೇಲ್ ಕೂಡ ಆರಂಭವಾಗುತ್ತಿದ್ದು, ಒನ್ ಪ್ಲಸ್ 6 ರೆಡ್ ನ ಬಿಡುಗಡೆಯು ಅಮೇಜಾನ್ ನ ಈ ಕಾರ್ಯಕ್ರಮದ ಒಂದು ಭಾಗವಾಗಿರಲಿದೆ ಯಾಕೆಂದರೆ ಅಮೇಜಾನ್ ಪ್ರೈಮ್ ಡೇ ಸೇಲ್ ಕೂಡ ಜುಲೈ 16 ರಿಂದಲೇ ಪ್ರಾರಂಭವಾಗುತ್ತದೆ.

ಹೆಚ್‌ಡಿಎಫ್‌ಸಿಯಿಂದ ಆಫರ್

ಹೆಚ್‌ಡಿಎಫ್‌ಸಿಯಿಂದ ಆಫರ್

ಹೆಡ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಒನ್ ಪ್ಲಸ್ 6 ರೆಡ್ ಮತ್ತು ಇತರೆ ವೇರಿಯಂಟ್ ನ ಫೋನ್ ನಲ್ಲಿ 2000 ರುಪಾಯಿಯ ಆಫರ್ ಬೆಲೆ ನೀಡುವ ಬಗ್ಗೆ ಕಂಪೆನಿಯು ಅಧಿಕೃತವಾಗಿ ತಿಳಿಸಿದ್ದು, ಇಎಂಐ ವ್ಯವಹಾರ ನಡೆಸಲು ಕೂಡ ಅವಕಾಶವಿದೆ. ಅಮೇಜಾನ್ ಪ್ರೈಮ್ ಡೇ ನಲ್ಲಿ ಒನ್ ಪ್ಲಸ್ ಪ್ರೊಡಕ್ಟ್ ಗಳ ಮೇಲೆ ಸಾಕಷ್ಟು ಆಫರ್ ಗಳು ಲಭ್ಯವಿದೆ. ಅವುಗಳಲ್ಲಿ ಕೆಲವನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

-- ಒನ್ ಪ್ಲಸ್ 6 ನ ಗ್ರಾಹಕರು ಅಮೇಜಾನ್.ಇನ್ ನಲ್ಲಿ 2000 ರುಪಾಯಿಯ ಇನ್ಸ್ ಟೆಂಟ್ ಡಿಸ್ಕೌಂಟ್ ಪಡೆಯಲಿದ್ದು ಹೆಚ್ ಡಿಎಫ್ ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಇಎಂಐ ವ್ಯವಹಾರ ನಡೆಸಬಹುದು.

--ಒನ್ ಪ್ಲಸ್ 6 ಖರೀದಿಸುವ ಗ್ರಾಹಕರು ಒಂದು ವೇಳೆ ಆಫ್ ಲೈನ್ ನಲ್ಲಿ ಒನ್ ಪ್ಲಸ್ 6.ಇನ್ ಮತ್ತು ಒನ್ ಪ್ಲಸ್ 6 ಎಕ್ಸ್ ಕ್ಲೂಸಿವ್ ಆಫ್ ಲೈನ್ ಚಾನಲ್ ಗಳಲ್ಲಿ ಖರೀದಿಸಿದರೂ ಕಡ ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಇಎಂಐ ವ್ಯವಹಾರದ ಈ ಕ್ಯಾಷ್ ಬ್ಯಾಕ್ ಆಫರ್ ನ್ನು ಪಡೆಯಲಿದ್ದಾರೆ.

-- ಒನ್ ಪ್ಲಸ್ 6 ನ ಗ್ರಾಹಕರು ಅಮೇಜಾನ್. ಇನ್ ನ ಎಲ್ಲಾ ಜನಪ್ರಿಯ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಲ್ಲಿಯೂ ಕೂಡ ಇದಿನಿಂದ ಪ್ರಾರಂಭವಾಗುವ ಅಂದರೆ ಜುಲೈ 10 ರಿಂದ ಪ್ರಾರಂಭವಾಗುವ ಇಎಂಐ ಗೆ ಪಾತ್ರರಾಗಬಹುದು.

ಒನ್‌ಪ್ಲಸ್ 6 ರೆಡ್ ಸೇಲ್

ಒನ್‌ಪ್ಲಸ್ 6 ರೆಡ್ ಸೇಲ್

ಫ್ರೈಮ್ ಡೇ ಸೇಲ್ ನಲ್ಲಿ ಒನ್ ಪ್ಲಸ್ 6 ಬಿಡುಗಡೆಗೊಳ್ಳುತ್ತಿರುವ ಬಗ್ಗೆ ಕಂಪೆನಿಯ ಡೈರೆಕ್ಟರ್ ಮತ್ತು ಅಮೇಜಾನ್ ಪ್ರೈಮ್ ಇಂಡಿಯಾದ ಮುಖ್ಯಸ್ಥರಾಗಿರುವ ಅಕ್ಷಯ್ ಸಾಹಿ " ನಾವು ಒನ್ ಪ್ಲಸ್ ಜೊತೆಗೆ ಕೈಜೋಡಿಸಿರುವುದಕ್ಕೆ ಭಾರೀ ಕುತೂಹಲದಿಂದ ಇದ್ದು, ಪ್ರೈಮ್ ಡೇ ದಿನದ ಎಕ್ಸ್ ಕ್ಲೂಸಿವ್ ಮಾರಾಟಕ್ಕೆ ಕಾತರರಾಗಿದ್ದೇವೆ. ಪ್ರೈಮ್ ಸದಸ್ಯರು ಒನ್ ಪ್ಲಸ್ 6 ನ ಕೆಂಪು ಆವೃತ್ತಿಯನ್ನು ಜುಲೈ 16 ರ ಮಧ್ಯಾಹ್ನ 12 ಗಂಟೆಗೆ ಆರ್ಡರ್ ಮಾಡಲು ಅವಕಾಶವಿರುತ್ತದೆ " ಎಂದು ತಿಳಿಸಿದ್ದಾರೆ.

8GB RAM + 128GB

8GB RAM + 128GB

ಒನ್ ಪ್ಲಸ್ 6 ನ ಕೆಂಪು ಆವೃತ್ತಿಯು 8ಜಿಬಿ ಮೆಮೊರಿ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದೆ. ಆಪ್ಟಿಕಲ್ ಕೋಟಿಂಗ್ ಹೊಂದಿದ್ದು, ಅತ್ಯುತ್ತಮವಾದ ಕೆಂಪು ವರ್ಣವನ್ನು ಪಡೆಯುವ ನಿಟ್ಟಿನಲ್ಲಿ 6 ಪೆನಲ್ ಗ್ಲಾಸ್ ನ್ನು ಅಳವಡಿಸಲಾಗಿದೆ ಜೊತೆಗೆ ಇವ್ಯಾಪುರೇಟಿವ್ ಫಿಲ್ಮ್ ಕೂಡ ಇದೆ. ಫೋನಿನಲ್ಲಿ ವಿರೋಧಿ-ಪ್ರತಿಫಲಿತ-ಪದರವಿದ್ದು , ಇದು ಕೆಳಗಿನ ಪದರವು ಬೆಳಕನ್ನು ಪಡೆಯಲು ಸಮರ್ಥವಾಗಿರುವಂತೆ ಡಿಸೈನ್ ಮಾಡಲಾಗಿದೆ. ಆ ಮೂಲಕ ಗಾಜಿನಲ್ಲಿ ಕೆಂಪು ವರ್ಣವು ಪ್ರತಿಫಲಿತಗೊಂಡು ಫೋನ್ ಅಧ್ಬುತವಾಗಿ ಕಾಣಿಸಲು ಸಹಕಾರಿಯಾಗಿದೆ.

64GB RAM + 256GB

64GB RAM + 256GB

ಒನ್ ಪ್ಲಸ್ 6 ನ ಮಾರ್ವೆಲ್ ಆವೆಂಜರ್ಸ್ ಲಿಮಿಟೆಡ್ ಎಡಿಷನ್ ನ ಯಶಸ್ಸಿನ ನಂತರ, 256 ಜಿಬಿ ಸ್ಟೋರೇಜ್ ಆಯ್ಕೆ ಇರುವ ಫೋನ್ ಬಿಡುಗಡೆಗೆ ಒನ್ ಪ್ಲಸ್ 6 ಗೆ ಸಾಕಷ್ಟು ಒತ್ತಾಯ ಮಾಡಲಾಗಿತ್ತು. ಮತ್ತು ಅದಕ್ಕಾಗಿಯೇ ಒನ್ ಪ್ಲಸ್ 6 68ಜಿಬಿ+256ಜಿಬಿ ಸ್ಟೋರೇಜ್ ಆಯ್ಕೆ ಇರುವ ಮಿಡ್ ನೈಟ್ ಬ್ಲಾಕ್ ಕಲರ್ ಫೋನ್ ನ್ನು ಬಿಡುಗಡೆಗೊಳಿಸಿತ್ತು ಮತ್ತು ಅದರ ಮಾರಾಟವು ಜುಲೈ 10 ಅಂದರೆ ಇಂದು ಮಧ್ಯರಾತ್ರಿಯಿಂದ ಆರಂಭವಾಗಿದೆ ಮತ್ತು ಇದರ ಬೆಲೆ 43,999 ರುಪಾಯಿಗಳು. ಕೇವಲ 22 ದಿನದಲ್ಲಿ ಮಿಲಿಯನ್ ಒನ್ ಪ್ಲಸ್ 6 ಫೋನನ್ನು ಮಾರಾಟ ಮಾಡುವುದಕ್ಕೆ ಕಂಪೆನಿ ಸಮರ್ಥವಾಗಿದೆ ಎಂದು ಹೇಳಿಕೊಂಡಿದೆ.ಅಂದರೆ ಕಂಪೆನಿಯ ಇತಿಹಾಸದಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಮಾರಾಟಗೊಂಡ ಫೋನ್ ಒನ್ ಪ್ಲಸ್ 6 ಆಗಿದೆ. ಅದರಲ್ಲಿ ಒನ್ ಪ್ಲಸ್ 6 ಕೆಂಪು ಆವೃತ್ತಿ ಗ್ರಾಹಕರಿಗೆ ಮತ್ತೊಂದು ಅವಕಾಶವಾಗಿದೆ.

Best Mobiles in India

English summary
OnePlus 6 gets Rs 2,000 instant discount starting today, available on Amazon India. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X