'ಒನ್‌ಪ್ಲಸ್ 6' ಬಿಡುಗಡೆಗೆ ಇಂದು ಬೆಚ್ಚಿಬೀಳಲಿದೆಯಾ ಭಾರತ?..ನಮ್ಮಲ್ಲಿವೆ ವಿಶೇಷ ಮಾಹಿತಿಗಳು!!
ಭಾರತದಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಪ್ರಿಯರು ಭಾರೀ ನಿರೀಕ್ಷೆಯಿಂದ ಎದುರುನೊಡುತ್ತಿದ್ದ ಸಮಯ ಇದೀಗ ಬಂದಿದೆ. ಮೇ 17 ರಂದು ಅಂದರೆ ನಾಳೆ ಒನ್‌ಪ್ಲಸ್ ಕಂಪೆನಿಯ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ 'ಒನ್‌ಪ್ಲಸ್ 6'ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಮೊಬೈಲ್ ಪ್ರಿಯರಲ್ಲಿ ಹುಚ್ಚುಹಿಡಿಸಿರುವ ಸ್ಮಾರ್ಟ್‌ಪೋನ್ ಅನ್ನು ನಾಳೆಯಿಂದಲೇ ಪ್ರೀ ಬುಕ್ ಮಾಡಬಹುದಾಗಿದೆ.
ಮುಂಬೈನಲ್ಲಿ ಆಯೋಜನೆಯಾಗಿರುವ ಸಮಾರಂಭದಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಿಡುಗಡೆಗೆ ಎಲ್ಲಾ ರೀತಿಯಲ್ಲಿಯೂ ಸಜ್ಜಾಗಿದ್ದು, ವಿಶ್ವ ಮೊಬೈಲ್ ಮಾರುಕಟ್ಟೆ ಭಾರತದ ಸಮಾರಂಭವನ್ನು ಎದುರುನೋಡುತ್ತಿದೆ. ಒನ್‌ಪ್ಲಸ್ 6 ಬಿಡುಗಡೆ ಸಮಾರಂಭದ ವೀಕ್ಷಣೆಗಾಗಿ ಒನ್‌ಪ್ಲಸ್ ಕಂಪೆನಿ ಲೈವ್ ಸ್ಟ್ರೀಮ್ ಅನ್ನು ಸಮಾಜಿಕ ಜಾಲತಾಣಗಳಲ್ಲಿ ನಡೆಸಲಿದೆ.

ಇಲ್ಲಿಯವರೆಗೂ ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನ ಬಗೆಗೆ ಕೇಳಿ ಬಂದಿರುವ ಎಲ್ಲಾ ಮಾಹಿತಿಗಳ ಬಗ್ಗೆ ನಾಳೆ ಸ್ಪಷ್ಟ ಚಿತ್ರಣ ಸಿಗಲಿದೆ. ಆದರೆ, ಅದಕ್ಕೂ ಮುನ್ನವೇ ಒನ್‌ಪ್ಲಸ್ 6 ಬಿಡುಗಡೆ ಆಫರ್ಸ್ ಬಗ್ಗೆ ನಮಗೆ ವಿಶೇಷ ಮಾಹಿತಿಗಳು ದೊರೆತಿವೆ. ಹಾಗಾಗಿ, ನಾಳೆ ಬಿಡುಗಡೆಯಾಗಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನ ಕಂಪ್ಲೀಟ್ ಡೀಟೇಲ್ಸ್ ಅನ್ನು ಮುಂದೆ ತಿಳಿಯೋಣ.

ಒನ್‌ಪ್ಲಸ್ 6 ಲಾಂಚ್ ಆಫರ್ಸ್!
ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಅನ್ನು ಒನ್‌ಪ್ಲಸ್ ಕಂಪೆನಿ ಅಮೆಜಾನ್ ಇಂಡಿಯಾದಲ್ಲಿ ಮಾರಾಟಕ್ಕಿಟ್ಟಿರುವುದು ಈಗಾಗಲೇ ತಿಳಿದುಬಂದಿದೆ. ಡಿಸ್ಕೌಂಟ್ಸ್, ಜಿರೊ ಕಾಸ್ಟ್ ಇಎಮ್‌ಐ, ಕ್ಯಾಶ್‌ಬ್ಯಾಕ್ ಆಫರ್, ವಾರೆಂಟ್ ಕೊಡುಗೆಗಳೆಲ್ಲವನ್ನೂ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಖರೀದಿಗೆ ನೀಡಲಾಗಿದೆ. ಒನ್‌ಪ್ಲಸ್ 6 ಮಾರಾಟದ ಮೊದಲ ವಾರದಲ್ಲಿ ಎಸ್‌ಬಿಐ ಗ್ರಾಹಕರು 2000 ರೂಪಾಯಿಗಳ ಡಿಸ್ಕೌಂಟ್ಸ್ ಪಡೆಯಬಹುದಾಗಿದೆ ಮತ್ತು ಮೊದಲ ಮೂರು ತಿಂಗಳು ಇಎಮ್‌ಐಗಳಿಂದ ಗ್ರಾಹಕರು ದೂರವಿರಬಹುದಾಗಿದೆ.

ಇದೇ ಮೊದಲ 'ಫಾಸ್ಟ್ ಎಎಫ್ ಸೇ ಲ್!!
ಆನ್‌ಲೈನ್ ಮಾರುಕಟ್ಟೆಯ ಮೂಲಕವೇ ಗ್ರಾಹಕರನ್ನು ಹೆಚ್ಚು ತಲುಪಿರುವ ಒನ್‌ಪ್ಲಸ್ ಕಂಪೆನಿಯೂ ಇದೀಗ ಗ್ರಾಹಕರಿಗೆ ಮತ್ತೊಂದು ಉತ್ತಮ ಸೇವೆಯನ್ನು ನೀಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಫಾಸ್ಟ್ ಎಎಫ್ ಸೇಲ್ ಅನ್ನು ಒನ್‌ಪ್ಲಸ್ ಆಯೋಜನೆ ಮಾಡಿದೆ. ಫಾಸ್ಟ್ ಅಂಡ್ ಫಸ್ಟ್ ತಂತ್ರದ ಮೂಲಕ ಅಮೆಜಾನ್ ಸಹಯೋಗದಲ್ಲಿ ಗ್ರಾಹಕರಿಗೆ ಬಹುಬೇಗ ಸ್ಮಾರ್ಟ್‌ಪೋನ್ ಅನ್ನು ತಲುಪಿಸುವ ಯೋಜನೆಯನ್ನು ಒನ್‌ಪ್ಲಸ್ ಕಂಪೆನಿ ಹಾಕಿಕೊಂಡಿದೆ. ಮೇ 21 ಮತ್ತು 22 ನೆ ತಾರೀಖು 1000 ರು. ಅಮೆಜಾನ್ ಗಿಫ್ಟ್ ವೋಚರ್ ಸಹ ಲಭ್ಯವಿದೆ.

ಒನ್‌ಪ್ಲಸ್ 6 ಖರೀದಿಸಲು ಹೆಚ್ಚು ಸಂತೋಷ!!
ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಖರೀದಿದಾರರು ಕುತೂಹಲಕಾರಿಯಾಗಿ ಪ್ರಯೋಜನಗಳ ಪಡೆದುಕೊಳ್ಳುವ ಯೋಜನೆಗಳನ್ನು ಒನ್‌ಪ್ಲಸ್ ಕಂಪೆನಿ ನೀಡುತ್ತದೆ. ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಮೇಲೆ ಈ ಮೊದಲು 12 ತಿಂಗಳ ಆಕಸ್ಮಿಕ ಹಾನಿ ವಿಮೆಯನ್ನು ನೀಡುತ್ತಿದ್ದ ಒನ್‌ಪ್ಲಸ್ ಕಂಪೆನಿಯು ಇದೀಗ ವಿಮೆ ಸಮಯವನ್ನು 3 ತಿಂಗಳು ಹೆಚ್ಚಿಸಿದೆ. ಹಾಗಾಗಿ, ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಖರೀದಿದಾರರು 15 ತಿಂಗಳ ತಯಾರಕ ಖಾತರಿ ಹೊಂದಿರುತ್ತಾರೆ.

ಬಿಡುಗಡೆಗೆ ಮುನ್ನವೇ ಒನ್‌ಪ್ಲಸ್ ಕ್ಯಾಮೆರಾ ಚಿತ್ರಗಳು!!
ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಬಿಡುಗಡೆಗೆಒಂದು ದಿನ ಮೊದಲು ಒನ್‌ಪ್ಲಸ್ ಕಂಪೆನಿಯ ಸಿಇಒ ಪೀಟ್ ಲೌ ಅವರು ಒನ್‌ಪ್ಲಸ್ 6 6 ಕ್ಯಾಮೆರಾದಲ್ಲಿ ತೆಗೆದ ಕೆಲವು ಅಧಿಕೃತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒನ್‌ಪ್ಲಸ್ 6 ಕ್ಯಾಮರಾದಿಂದ ಚಿತ್ರಿಸಲಾದ ಫೋಟೋಗಳು ಗುಣಮಟ್ಟವನ್ನು ಮತ್ತು ಉತ್ತಮ ನೋಟವನ್ನು ತೋರುತ್ತವೆ. ಆಕರ್ಷಕವಾದ ಕ್ರಿಯಾತ್ಮಕ ವ್ಯಾಪ್ತಿ, ರೋಮಾಂಚಕ ಬಣ್ಣಗಳ ಜೊತೆಗೆ ಕಡಿಮೆ ಬೆಳಕಿನಲ್ಲಿಯೂ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಉತ್ತಮ ಚಿತ್ರಗಳನ್ನು ಚಿತ್ರಿಸುತ್ತದೆ ಎಂಬುದನ್ನು ಫೋಟೊಗಳು ತೋರಿಸಿವೆ.

ವೋಗ್ ಪತ್ರಿಕೆಯ ಕವರ್ ಚಿತ್ರ!!
ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನಿನಲ್ಲಿ ಚಿತ್ರಿಸಿರುವ ಚಿತ್ರವೊಂದನ್ನು ಪತ್ರಿಕೆಯ ಮುಖಪುಟದಲ್ಲಿ ತರಲಾಗಿದೆ. ವೊಗ್ ಪತ್ರಿಕೆಯ ಮುಖಪುಟವನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನಲ್ಲಿ ಚಿತ್ರಿಸಲಾಗಿದೆ. ವೋಗ್ ಇಂಡಿಯಾ ಮೇ ಸಂಚಿಕೆ ಮುಖಪುಟದಲ್ಲಿ ಜನಪ್ರಿಯ ಬಾಲಿವುಡ್ ನಟಿ ಅದಿತಿ ರಾವ್ ಹೈದರಿಯನ್ನು ಒಳಗೊಂಡ ಸಂಪೂರ್ಣ ಫೋಟೋ ಶೂಟ್ ಅನ್ನು. ಏಸ್ ಛಾಯಾಗ್ರಾಹಕ ಎರ್ರಿಕೊಸ್ ಆಂಡ್ರೂ ಅವರು ನಡೆಸಿದ್ದಾರೆ. ಹಾಗಾಗಿ, ನೈಸರ್ಗಿಕವಾಗಿ ಕಾಣುವ ಚಿತ್ರಗಳ ಗಣಮಟ್ಟದ ಬಗ್ಗೆ ಇದು ಸುಳಿವು ನೀಡಿದೆ.

ಡಿಸ್‌ಪ್ಲೇ ನೋಚ್!!
ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ದೊಡ್ಡದಾದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 6.28 ಇಂಚಿನ ಅಮೊಲೈಡ್ ಡಿಸ್‌ಪ್ಲೇ ಇದಾಗಿದೆ. 19:9 ಅನುಪಾತದಿಂದ ಕೂಡಿರಲಿದ್ದು, FHD+ ಗುಣಮಟ್ಟವನ್ನು ಹೊಂದಿರುವ ಸಾಧ್ಯತೆ ಇದೆ. ಗೇಮ್ ಆಡಲು ಮತ್ತು ಗುಣಮಟ್ಟದ ವಿಡಿಯೋವನ್ನು ನೋಡಲು ಹೇಳಿ ಮಾಡಿಸಿದಂತಿರಲಿದೆ. ಅಲ್ಲದೇ ಬೇರೆ ಸ್ಮಾರ್ಟ್‌ಫೋನಿಗಿಂತ ಭಿನ್ನವಾದ ನೋಚ್ ಅನ್ನು ಮುಂಭಾಗದ ಡಿಸ್‌ಪ್ಲೇಯಲ್ಲಿ ನೀಡಿದೆ.

ಫೇಷಿಯಲ್ ರೆಕಗ್ನಿಷನ್:
ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಫುಲ್ ಸ್ಕ್ರಿನ್ ಡಿಸ್‌ಪ್ಲೇಯಲ್ಲಿ ನೋಚ್ ಸಹ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ ಫೇಸ್ ರೆಕಗ್ನೇಷನ್ ಆಯ್ಕೆಯನ್ನು ನೀಡಲಾಗಿದೆ.

ಸ್ನ್ಯಾಪ್‌ಡ್ರಾಗನ್ 845 ಪ್ರೋಸೆಸರ್:
ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 845 ಚಿಪ್ ಸೆಟ್‌ನೊಂದಿಗೆ ಕಾಣಿಸಿಕೊಳ್ಳಲಿದ್ದು, 8GB RAM ಜೊತೆಗೆ ಲಭ್ಯವಿರಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ, ಮುಂಭಾಗದಲ್ಲಿ ಫೇಷಿಯಲ್ ರೆಕಗ್ನೇಷನ್ ನೊಂದಿಗೆ ಸೆಲ್ಫಿ ಕ್ಯಾಮೆರಾವನ್ನು ನೋಡಬಹುದಾಗಿದೆ.

ಡ್ಯಾಶ್ ಚಾರ್ಜಿಂಗ್ :
ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ ವೇಗದ ಇಂಟರ್ನೆಟ್ ಸೇವೆಗಾಗಿ X30 LTE ಮೊಡಮ್ ಅನ್ನು ಅಳವಡಿಸಲಾಗಿದ್ದು, ಇದು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸಹಾಯವನ್ನು ಮಾಡಲಿದೆ. ಅಲ್ಲದೇ 3400mAh ಬ್ಯಾಟರಿಯನ್ನು ಹೊಂದಿದ್ದು, ಆಕ್ಸಿಜನ್ OS ನೊಂದಿಗೆ ಡ್ಯಾಶ್ ಚಾರ್ಜಿಂಗ್ ನೊಂದಿಗೆ ಕಾಣಿಸಿಕೊಳ್ಳಲಿದೆ.

ಒನ್‌ಪ್ಲಸ್ 6 ಬೆಲೆ
ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, 63GB ಆವೃತ್ತಿಯೂ ರೂ.34,999ಕ್ಕೆ ದೊರೆಯಲಿದ್ದು, ಇದೇ ಮಾದರಿಯಲ್ಲಿ 128GB ಆವೃತ್ತಿ ರೂ.39,999ಕ್ಕೆ ಲಭ್ಯವಿರಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಒನ್‌ಪ್ಲಸ್ 5T ಗಿಂತ ಹೆಚ್ಚಿನ ಬೆಲೆ ಹೊಂದಿದೆ ಎನ್ನಲಾಗಿದೆ.


Click it and Unblock the Notifications








