ಲೀಕ್ ಆಯ್ತು 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನ ಮೊದಲ ಫೋಟೊ!..ಟ್ರೆಂಡ್ ಸೃಷ್ಟಿಸುತ್ತಿದೆ ಫೀಚರ್ಸ್!!
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಮತ್ತು ಶಿಯೋಮಿ ಮಿ ಮಿಕ್ಸ್ 2ಎಸ್ ಸ್ಮಾರ್ಟ್‌ಫೋನ್‌ಗಳ ನಂತರ ಇದೀಗ ಮೊಬೈಲ್ ಜಗ್ಗತ್ತಿನ ಕಣ್ಣು ''ಒನ್‌ಪ್ಲಸ್ 6'' ಸ್ಮಾರ್ಟ್‌ಫೋನಿನ ಮೇಲೆ ಬಿದ್ದಿದೆ.!
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಮತ್ತು ಶಿಯೋಮಿ ಮಿ ಮಿಕ್ಸ್ 2ಎಸ್ ಸ್ಮಾರ್ಟ್‌ಫೋನ್‌ಗಳ ನಂತರ ಇದೀಗ ಮೊಬೈಲ್ ಜಗ್ಗತ್ತಿನ ಕಣ್ಣು ''ಒನ್‌ಪ್ಲಸ್ 6'' ಸ್ಮಾರ್ಟ್‌ಫೋನಿನ ಮೇಲೆ ಬಿದ್ದಿದೆ.! ಈ ವರ್ಷದ ಮಧ್ಯಭಾಗದಲ್ಲಿ ಒನ್‌ಪ್ಲಸ್ 6 ಬಿಡುಗಡೆಯಾಗಲಿದೆ ಎನ್ನುವ ಸುದ್ದಿಯ ಜೊತೆಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಮೊದಲ ಪೋಟೊ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಆಗುತ್ತಿದೆ.!!
ಹೌದು, ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನಪಡೆದಿರುವ ಒನ್‌ಪ್ಲಸ್ ಕಂಪೆನಿಯ ಮತ್ತೊಂದು ಸ್ಮಾರ್ಟ್‌ಫೋನ್ ಒನ್‌ಪ್ಲಸ್ 6 ಈ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ. ಒನ್‌ಪ್ಲಸ್ 5ಟಿ ಯಶಸ್ಸಿನ ನಂತರ ''ಒನ್‌ಪ್ಲಸ್ 6'' ಸ್ಮಾರ್ಟ್‌ಫೋನ್ ಬಿಡುಗಡೆಯಾಗಲು ಕಂಪೆನಿ ಉತ್ಸುಕವಾಗಿದೆ ಎಂದು ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ತಿಳಿಸಿದ್ದಾರೆ.!!

ವಿಶ್ವದ ಒನ್‌ಪ್ಲಸ್ ಬಳಕೆದಾರರಿಗೆ ಒನ್‌ಪ್ಲಸ್ ಗುಣಮಟ್ಟದ ಸೇವೆಗಳನ್ನು ನೀಡಲು ಯಾವಾಗಲು ಮುಂದಾಗಿರುತ್ತದೆ. ಹಾಗಾಗಿಯೇ, ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅಳವಡಿಸದೆ ವಿಧಿಯಿಲ್ಲ ಎಂದು ಪೀಟ್ ಲೌ ಅವರು ಹೇಳಿದ್ದರು. ಹಾಗಾದರೆ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿರಲಿವೆ? ಗ್ರಾಹಕರು ಏನೆಲ್ಲಾ ಎದುರುನೋಡಬಹುದು ಎಂದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಒನ್‌ಪ್ಲಸ್ 6 ವಿನ್ಯಾಸ ಹೇಗಿದೆ?
ಇದೇ ಮೊದಲ ಬಾರಿಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಮೊದಲ ಪೋಟೊ ಲೀಕ್ ಆಗಿ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ವುಡನ್ ಬ್ಯಾಕ್ ಪ್ಯಾನಲ್ ವಿನ್ಯಾವನ್ನು ಹೊಂದಿರುವ ಒನ್‌ಪ್ಲಸ್ 6 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ ಎಂಬುದು ಸ್ಪಷ್ಟವಾಗುತ್ತಿದೆ. 3.5mm ಆಡಿಯೋ ಜಾಕ್ ಕೂಡ ಸ್ಮಾರ್ಟ್‌ಫೋನಿನಲ್ಲಿ ಇರಲಿದೆ.!!

ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್!!
ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ಹೇಳಿರುವಂತೆ ಒನ್‌ಪ್ಲಸ್ 6 ಫೋನಿನಲ್ಲಿ ಕ್ವಾಲ್ಕಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅಳವಡಿಸದೆ ವಿಧಿಯಿಲ್ಲ.! ಪ್ರಸ್ತುತ ಅತ್ಯುತ್ತಮ ಮೊಬೈಲ್ ಚಿಪ್‌ಸೆಟ್ ಎಂದು ಹೆಸರಾಗಿರುವ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅನ್ನು ಗ್ರಾಹಕರು ಕೂಡ ಎದುರು ನೋಡುತ್ತಿದ್ದಾರೆ.!!

ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್!!
ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಈಗಾಗಲೇ ಫೇಸ್‌ಐಡಿ ಫೀಚರ್ ಅನ್ನು ಹೊಂದಿದ್ದರೂ ಸಹ ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಉತ್ತಮದರ್ಜಿಗೇರಿಸಲು ಒನ್‌ಪ್ಲಸ್ ಮುಂದಾಗಿದೆ. ಹಾಗಾಗಿ, ಒನ್‌ಪ್ಲಸ್ 6 ಫೋನಿನಲ್ಲಿ ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ತರುವ ಸೂಚನೆಯನ್ನು ಒನ್‌ಪ್ಲಸ್ ಕಂಪೆನಿ ನೀಡಿದೆ.!!

ವಾಟರ್‌ಪ್ರೂಫ್ ಚಾಲೆಂಜ್!!
ಈ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅತ್ಯದ್ಬುತ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊಂದಿರಲಿದೆ.! ಪ್ರಸ್ತುತ ಇರುವ ವಾಟರ್‌ಪ್ರೂಫ್ ತಂತ್ರಜ್ಞಾನಕ್ಕಿಂತಲೂ ಅತ್ಯುತ್ತಮ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಾಗಿ ಒನ್‌ಪ್ಲಸ್ ಕಂಪೆನಿ ಹೆಳಿದೆ.!!

ಬೆಜೆಲ್‌ಲೆಸ್ ಡಿಸ್‌ಪ್ಲೇ?
ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಸ್ಕ್ರೀನ್‌ನಲ್ಲಿಯೇ ನೀಡುವುದರಿಂದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ 18:9 ಅನುಪಾತದ ಬೆಜೆಲ್‌ಲೆಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಆದರೆ, ಎಡ್ಜ್ ಟು ಎಡ್ಜ್ ಪೂರ್ತಿ ಪರದೆ ಅಳವಡಿಸಲು ಒನ್‌ಪ್ಲಸ್ ಕಂಪೆನಿ ಉತ್ಸುಕವಾಗಿಲ್ಲ ಎಂದು ಒನ್‌ಪ್ಲಸ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.!!


ವೈರ್‌ಲೆಸ್ ಚಾರ್ಜಿಂಗ್!!
ಒನ್‌ಪ್ಲಸ್ 5T ಇನ್ನಿತರ ಫೀಚರ್‌ಗಳ ಜೊತೆ ಹೊಸದಾಗಿ ಹಲವು ಫೀಚರ್‌ಗಳು ಸೇರಿ ಒನ್‌ಪ್ಲಸ್ 6 ಹೊರಬರುತ್ತಿದೆ.! ಅಂತಹ ಫೀಚರ್‌ಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕೂಡ ಒಂದಾಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಸೇವೆ ನೀಡುವ ತವಕದಲ್ಲಿ ಒನ್‌ಪ್ಲಸ್ ಕಂಪೆನಿ ಇದೆ.!!


Click it and Unblock the Notifications