Subscribe to Gizbot

ಒನ್‌ಪ್ಲಸ್‌ 6 ವಿನ್ಯಾಸ ಕುರಿತು ಮಾಹಿತಿ ಬಿಚ್ಚಿಟ್ಟ ಒನ್‌ಪ್ಲಸ್‌ ಸಹ ಸಂಸ್ಥಾಪಕ..!

Written By:

ಮಾರುಕಟ್ಟೆಯಲ್ಲಿ ಸದ್ಯ ಆಂಡ್ರಾಯ್ಡ್ ಟಾಪ್ ಎಂಡ್ ಫೋನ್‌ಗಳ ಸದ್ದು ಜೋರಾಗಿದೆ. ಒಂದರ ಹಿಂದೆ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿವೆ. ಇದೇ ಮಾದರಿಯಲ್ಲಿ ಚೀನಾ ಮೂಲಕದ ಒನ್‌ಪ್ಲಸ್ ಸಹ ತನ್ನ ನೂತನ ಫಾಗ್‌ಶಿಪ್ ಸ್ಮಾರ್ಟ್‌ಫೋನ್‌ ಅನ್ನು ಅನಾವರಣಗೊಳಿಸಲು ತುದಿಗಾಲಿನಲ್ಲಿ ನಿಂತಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಒನ್‌ ಪ್ಲಸ್ ಮುಂದಿನ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 6 ಬಗ್ಗೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿದೆ.

ಒನ್‌ಪ್ಲಸ್‌ 6 ವಿನ್ಯಾಸ ಕುರಿತು ಮಾಹಿತಿ ಬಿಚ್ಚಿಟ್ಟ ಒನ್‌ಪ್ಲಸ್‌ ಸಹ ಸಂಸ್ಥಾಪಕ..!

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬುದರ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಇದೇ ಮಾದರಿಯಲ್ಲಿ ಒನ್‌ಪ್ಲಸ್ ಸಹ ಸಂಸ್ಥಾಪಕ ಒನ್‌ಪ್ಲಸ್ 6 ಹೇಗಿರಲಿದೆ ಎಂಬುದರ ಫೋಟೋವೊಂದನ್ನು ಲೀಕ್ ಮಾಡಿದ್ದಾರೆ. ಈ ಫೋಟೋವನ್ನು ನೋಡಿದ ಮೇಲೆ ಅಭಿಮಾನಿಗಳು ಒನ್‌ಪ್ಲಸ್ 6 ಬರುವಿಕೆಯ ಬಗ್ಗೆ ಮಾಹಿತಿಯ ನಿರೀಕ್ಷೆಯಲ್ಲಿದ್ದಾರೆ.

ಐಫೋನ್ X ಮಾದರಿಯಲ್ಲಿ ಮುಂಭಾಗದ ಡಿಸ್‌ಪ್ಲೇಯನ್ನು ಹೊಂದಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಬಳಕೆದಾರರ ಐಫೋನ್ X ಆಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಒನ್‌ಪ್ಲಸ್ 6 ಮುಂಭಾಗದಲ್ಲಿ ನೋಚ್ ಹೊಂದಿದ್ದು, ಅದರಲ್ಲಿ ಮುಂಭಾಗದ ಕ್ಯಾಮೆರಾ ಮತ್ತು ಫೆಷಿಯಲ್ ರೆಕಗ್ನೇಷನ್ ಸೆನ್ಸಾರ್‌ಗಳನ್ನು ಒನ್‌ಪ್ಲಸ್ ಅಳವಡಿಸಿದೆ ಎನ್ನುವ ಮಾಹಿತಿಯೂ ದೊರೆತಿದೆ.

ಒನ್‌ಪ್ಲಸ್‌ 6 ವಿನ್ಯಾಸ ಕುರಿತು ಮಾಹಿತಿ ಬಿಚ್ಚಿಟ್ಟ ಒನ್‌ಪ್ಲಸ್‌ ಸಹ ಸಂಸ್ಥಾಪಕ..!

ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಫೇಸ್‌ ಆನ್‌ಲಾಕ್ ಆಯ್ಕೆಯನ್ನು ಕಾಣುವುದು ಖಚಿತವಾಗಿದೆ. ಇದೇ ಮಾದರಿಯಲ್ಲಿ ಒನ್‌ಪ್ಲಸ್ 6 ನಲ್ಲಿ ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಟ್ಟಿನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿರುವ ಒನ್‌ಪ್ಲಸ್ 6 ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯುವ ಸಾಧ್ಯತೆ ಇದೆ.

ಎಡ್ಜ್ ಟು ಎಡ್ಜ್ ಡಿಸ್‌ಪ್ಲೇಯನ್ನು ಹೊಂದಿದರುವ ಈ ಸ್ಮಾರ್ಟ್‌ಫೋನಿನಲ್ಲಿ ಕೃತಕ ಬುದ್ದಿಮತ್ತೆಯನ್ನು ಕಾಣುವ ಸಾಧ್ಯತೆ ಇದ್ದು, ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ.

English summary
OnePlus 6 Notch Design Explained by CEO Pete Lau. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot