'ಒನ್‌ಪ್ಲಸ್ 6' ಆಗಮನಕ್ಕೆ ಜಾಗತಿಕ ಬ್ರ್ಯಾಂಡ್‌ಗಳು ಸ್ವಾಗತ ಕೋರಿದ್ದು ಹೀಗೆ!!

  |

  ಬಿಡುಗಡೆಗೂ ಮುನ್ನವೇ ವಿಶ್ವದಾಧ್ಯಂತ ಭಾರೀ ಸದ್ದು ಮಾಡಿದ್ದ 'ಒನ್‌ಪ್ಲಸ್ 6' ಸ್ಮಾರ್ಟ್‌ಪೋನ್ ಬಿಡುಗಡೆಯ ನಂತರವೂ ಟ್ರೆಂಡ್ ಸೃಷ್ಟಿಸುತ್ತಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಈ ವರೆಗೂ ಯಾವುದೇ ಆಂಡ್ರಾಯ್ಡ್ ಫ್ಲಾಗ್‌ಶಿಪ್ ಸ್ಮಾರ್ಟ್‌ಪೋನ್ ಸಹ ಪಡೆದುಕೊಳ್ಳದ ಬೇಡಿಕೆಯನ್ನು ಒನ್‌ಪ್ಲಸ್ ಕಂಪೆನಿಯ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಪಡೆದುಕೊಂಡು ಆಶ್ಚರ್ಯ ಮೂಡಿಸಿದೆ.

  ಈ ವರ್ಷದ ಅತ್ಯಂತ ನಿರೀಕ್ಷಿತ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಸಹ ಪಡೆದುಕೊಂಡಿರುವ 'ಒನ್‌ಪ್ಲಸ್ 6' ಮಾರಾಟ ನಾಳೆಯಿಂದ ಆರಂಭವಾಗಲಿದೆ. ಇದೇ ವೇಳೆಯಲ್ಲಿ ವಿಶ್ವದಾಧ್ಯಂತ ಒನ್‌ಪ್ಲಸ್ 6 ಆಗಮನಕ್ಕೆ ಜಾಗತಿಕ ಬ್ರ್ಯಾಂಡ್ ಕಂಪೆನಿಗಳು ಸೇರಿದಂತೆ ಒನ್‌ಪ್ಲಸ್ ಅಭಿಮಾನಿಗಳು ಮತ್ತು ಒನ್‌ಪ್ಲಸ್ ಕಮ್ಯುನಿಟಿ ಸದಸ್ಯರು ಸ್ವಾಗತ ಕೋರಿದ್ದಾರೆ.

  'ಒನ್‌ಪ್ಲಸ್ 6' ಆಗಮನಕ್ಕೆ ಜಾಗತಿಕ ಬ್ರ್ಯಾಂಡ್‌ಗಳು ಸ್ವಾಗತ ಕೋರಿದ್ದು ಹೀಗೆ!!

  ಸೊಶಿಯಲ್ ಮೀಡಿಯಾಗಳಲ್ಲಿ ಮಾರ್ವೆಲ್ ಅವೇಂಜರ್ಸ್, ಕ್ವಾಲ್ಕಮ್ ಕಂಪೆನಿಗಳು ಸೇರಿ ಹಲವು ಬ್ರ್ಯಾಂಡ್ ಕಂಪೆನಿಗಳು ಒನ್‌ಪ್ಲಸ್ 6 ಬಿಡುಗಡೆಗೆ ಶುಭಕೋರಿರುವುದು ಇದೀಗ ವೈರೆಲ್ ಆಗಿದೆ. ಹಾಗಾದರೆ, ಜಾಗತಿಕ ಬ್ರ್ಯಾಂಡ್ ಕಂಪೆನಿಗಳು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಿಡುಗಡೆಗೆ ಹೇಗೆ ಶುಭಕೋರಿವೆ ಮತ್ತು ಒನ್‌ಪ್ಲಸ್ 6 ಬಗೆಗಿನ ಸುದ್ದಿಗಳನ್ನು ಮುಂದೆ ನೋಡೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಮಾರ್ವೆಲ್ ಅವೇಂಜರ್ಸ್!

  ಒನ್‌ಪ್ಲಸ್ ಕಂಪೆನಿ ಮತ್ತು ಮಾರ್ವೆಲ್ ಅವೇಂಜರ್ಸ್ ಸೇರಿ ಲಿಮಿಟೆಡ್ ಆವೃತ್ತಿಯ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿರುವ ವಿಷಯ ನಿಮಗೆ ಈಗಾಗಲೇ ತಿಳಿದಿದೆ. ಹಾಗಾಗಿ, ಮಾರ್ವೆಲ್ ಅವೇಂಜರ್ಸ್ ತನ್ನ ಅಫಿಷಿಯಲ್ ಫೇಸ್‌ಬುಕ್ ಪೇಜ್‌ನಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಿಡುಗಡೆಗೆ ಶುಭ ಕೋರಿದೆ. 250GB ಮೆಮೊರಿ ಹಾಗೂ 8GB RAM ವೆರಿಯಂಟ್‌ನ ಗ್ಲಾಸ್ ಬ್ಯಾಕ್ ಹೊಂದಿರುವ ಮಾರ್ವೆಲ್ ಅವೇಂಜರ್ಸ್ ವೆರಿಯಂಟ್ ಸ್ಮಾರ್ಟ್‌ಪೋನ್ ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವುದಾಗಿ ತಿಳಿಸಿದೆ.

  ಕ್ವಾಲ್ಕಮ್ ಕಂಪೆನಿ!

  ಒನ್‌ಪ್ಲಸ್ ಕಂಪೆನಿಯು ಮಿರರ್ ಗ್ಲಾಸ್ ರೂಪಾಂತರದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಅದ್ಭುತ ಚಿತ್ರವನ್ನು ಪೋಸ್ಟ್ ಮಾಡಿರುವುದನ್ನು ಕ್ವಾಲ್ಕಾಮ್ ಕಂಪೆನಿ ಅಭಿನಂದಿಸಿದೆ. ಅತ್ಯಾಧುನಿಕ ಗ್ಲಾಸ್ ವಿನ್ಯಾಸ ಮತ್ತು ಪ್ರೀಮಿಯಂ ಫಿನೀಶ್ ಗಿ ಕಣ್ಣುಗುಡ್ಡೆಗಳನ್ನು ತಿರುಗುತ್ತದೆ ಎಂದು ಹೇಳಿದೆ. ಭಾರತದಲ್ಲಿ ಶಕ್ತಿಶಾಲಿ ಸ್ನ್ಯಾಪ್‌ಪ್ಡ್ರಾಗನ್ 845 ಎಸ್‌ಒಸಿ ಪ್ರೊಸೆಸರ್ ಅನ್ನು ಮೊದಲು ತರುತ್ತಿರುವ ಬಗ್ಗೆ ಕ್ವಾಲ್ಕಾಮ್ ಕಂಪೆನಿ ತನ್ನ ಪೋಸ್ಟ್‌ನಲ್ಲಿ ಹೇಳಿರುವುದು ವಿಶೇಷವಾಗಿದೆ.

  'ಒನ್‌ಪ್ಲಸ್ 6' ಖರೀದಿ ಆಫರ್ಸ್!!

  ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಬಿಡುಗಡೆಯಾದ ಮೊದಲ ವಾರದಲ್ಲಿ ಗ್ರಾಹಕರು ಎಸ್‌ಐ ಡೆಬಿಟ್ ಮತ್ತು ಕ್ರೆಡಿಟ್‌ಕಾರ್ಡ್ ಮೂಲಕ ಖರೀದಿಸಿದರೆ, ₹2,000 ಕ್ಯಾಷ್‍ಬ್ಯಾಕ್ ಸೌಲಭ್ಯವಿರಲಿದೆ. ಅಷ್ಟೇ ಅಲ್ಲದೇ, ಗ್ರಾಹಕರು ಎಲ್ಲ ಪ್ರಮುಖ ಬ್ಯಾಂಕುಗಳಿಂದ 3 ತಿಂಗಳವರೆಗಿನ ವೆಚ್ಚರಹಿತ ಇಎಂಐ ಸೌಲಭ್ಯವನ್ನು ಪಡೆಯಲೂ ಅರ್ಹರಾಗಿರುತ್ತಾರೆ ಎಂದು ಒನ್‌ಪ್ಲಸ್ ಕಂಪೆನಿ ತಿಳಿಸಿದೆ.

  'ಒನ್‌ಪ್ಲಸ್ 6' ಮಾರಾಟ ಮತ್ತು ಬೆಲೆ!!

  ಅಮೆಜಾನ್‌ ಡಾಟ್ ಇನ್, ಒನ್‌ಪ್ಲಸ್‌ ಡಾಟ್ ಇನ್ ಮತ್ತು ಒನ್‍ಪ್ಲಸ್ ಎಕ್ಸ್‌ಪೀರಿಯನ್ಸ್ ಮಳಿಗೆಗಳಲ್ಲಿ ಮೇ 21ರಂದು ಮಧ್ಯಾಹ್ನ 12 ಗಂಟೆಗೆ ಫ್ಲಾಶ್‌ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿರಲಿದೆ. ಮಿರರ್ ಬ್ಲ್ಯಾಕ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ 6ಜಿಬಿ RAM + 64 ಜಿಬಿ ಶೇಖರಣಾ ಮೆಮೊರಿ ಮತ್ತು 8ಜಿಬಿ RAM ಮತ್ತು 128 ಜಿಬಿಯ ಎರಡು ರೂಪಾಂತರಗಳು ಕ್ರಮವಾಗಿ Rs.34,999 ರೂ. ಮತ್ತು 39,999. ರೂಪಾಯಿಗಳಲ್ಲಿ ಭಾರತದಲ್ಲಿ ಲಭ್ಯವಿವೆ.

  ಡಿಸ್‌ಪ್ಲೇ ಹೇಗಿದೆ!!

  ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಆಪಲ್ ಎಕ್ಸ್ ರೀತಿಯಲ್ಲಿ ಡಿಸ್‌ಪ್ಲೇ ನೋಚ್ ಇರುವ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದ ಒನ್‌ಪ್ಲಸ್ ಕಂಪೆನಿಯು ಡಿಸ್‌ಪ್ಲೇ ಗುಣಮಟ್ಟದಲ್ಲಿಯೂ ಯಾವುದೇ ರಾಜಿಯಾಗಿಲ್ಲ. 6.28 ಇಂಚಿನ ಎಫ್‌ಹೆಚ್‌ಡಿ ಪ್ಲಸ್ ಆಪ್ಟಿಕ್ ಡಿಸ್‌ಪ್ಲೇನ್ನು ಹೊಂದಿದೆ.2280 x 1080 ಪಿಕ್ಸೆಲ್ ರೆಸಲ್ಯೂಶನನ್ನು ಹೊಂದಿರುವ ಡಿಸ್‌ಪ್ಲೇಯು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ನಿಂದ ಪ್ರೊಟೆಕ್ಟ್ ಆಗಿದೆ. ಈ ಸಾಧನವು 3.5 ಮಿ.ಮೀ ಆಡಿಯೋ ಜ್ಯಾಕ್ ಅನ್ನು ಹೊಂದಿದೆ.

  ಸ್ಮಾರ್ಟ್‌ಫೋನ್ ವಿನ್ಯಾಸ!!

  19:9 ಆಸ್ಪೆಕ್ಟ್ ಅನುಪಾದಲ್ಲಿ ಡಿಸ್‌ಪ್ಲೇ ನೋಚ್ ಸ್ಕ್ರೀನ್ ಹೊಂದಿರುವ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಹೊಂದಿದೆ. ಸಂಪೂರ್ಣ ವಾಟರ್‌ಪ್ರೂಫ್ ಬಾಡಿಯನ್ನು ನೀಡಿದರೂ ಸಹ ಪೂರ್ತಿ ಸ್ಕ್ರೀನ್ ಅನ್ನು ಹೊಂದಿರುವುದು ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ. ಇನ್ನು ಸ್ಮಾರ್ಟ್‌ಫೋನ್ ಬಳಸಿ ನೋಡಿರುವ ತಜ್ಞರು ಹೇಳೀದಂತೆ, " ಒಂದು ಹೈ ಎಂಡ್ ಸ್ಮಾರ್ಟ್‌ಫೋನ್ ಎನ್ನಲು ಒನ್‌ಪ್ಲಸ್ 6 ವಿನ್ಯಾಸ ಅರ್ಹವಾಗಿದೆ' ಎಂದು ಆಶ್ಚರ್ಯವ್ಯಕ್ತಪಡಿಸಿದ್ದಾರೆ.

  ಪ್ರೊಸೆಸರ್ ಮತ್ತು RAM!!

  ಒನ್‌ಪ್ಲಸ್ ಕಂಪೆನಿ ಸಿಇಒ ಪೀಟರ್ ಲೌ ಅವರು ಮೊದಲೇ ತಿಳಿಸಿದಂತೆ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 845 ಎಸ್‌ಒಸಿ ಪ್ರೊಸೆಸರ್ ಅನ್ನು ಹೊಂದಿದೆ. ಕಾರ್ಯನಿರ್ವಹಣೆಯಲ್ಲಿ 30% ಹೆಚ್ಚು ದಕ್ಷತೆ ಹಾಗೂ ವಿದ್ಯುತ್ ಉಳಿಕೆಯಲ್ಲಿ 10% ದಕ್ಷತೆಯನ್ನು ಈ ಪ್ರೊಸೆಸರ್ ನೀಡಲಿದೆ. ಈ ಪ್ರೊಸೆಸರ್ ಅನ್ನು ಅಡ್ರಿನೋ 630 ಜಿಪಿಯು ಜೊತೆ ಜೋಡಿಸಲಾಗಿದೆ. ಇನ್ನು UFS 2.1 ಶೇಖರಣಾ ಸಾಮರ್ಥ್ಯದ 6GB / 8GB RAM ಮತ್ತು 64GB / 128GB / 256GB ಮೆಮೊರಿ ವೆರಿಯಂಟ್‌ಗಳಲ್ಲಿ ಫೋನ್ ಬಿಡುಗಡೆಯಾಗಿದೆ.

  'ಒನ್‌ಪ್ಲಸ್ 6' ಕ್ಯಾಮೆರಾ!!

  'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಈಗ ಹೆಚ್ಚು ತಂತ್ರಜ್ಞಾನದ ಡ್ಯುಯಲ್ ಕ್ಯಾಮೆರಾ ತಂತ್ರಜ್ಞಾನದಿಂದ ಅಲಂಕೃತವಾಗಿದೆ. 1.22 ಮೈಕ್ರಾನ್ ಪಿಕ್ಸೆಲ್ ಗಾತ್ರದ ಎಫ್ / 1.7 ಅಪಾರ್ಚರ್ ಹೊಂದಿರುವ 20-ಮೆಗಾಪಿಕ್ಸೆಲ್ ಸೋನಿ IM376K ಕ್ಯಾಮೆರಾ ಹಾಗೂ 16-ಮೆಗಾಪಿಕ್ಸೆಲ್ ಸೋನಿ IMX519 ಕ್ಯಾಮೆರಾಗಳು ಹಿಂಬಾದಲ್ಲಿವೆ. ಜೊತೆಗೆ 1 ಮೆಕ್ರಾನ್ ಪಿಕ್ಸೆಲ್ ಗಾತ್ರದ f / 1.7 ಅಪಾರ್ಚರ್ ಹೊಂದಿರುವ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.

  ಸಾಫ್ಟ್‌ವೇರ್ ಮತ್ತು ಫೀಚರ್ಸ್!!

  'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಓರಿಯೊ ಜೊತೆಗೆ ಆಕ್ಸಿಜನ್ 5.1 ಫೀಚರ್ ಹೊಂದಿದೆ. ಆಂಡ್ರಾಯ್ಡ್ 'ಪಿ' ಆರಂಭಿಕ ಅಳವಡಿಕೆ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಈ ಆಕ್ಸಿಜನ್ 5.1 ಒಎಸ್ ಐಒಎಸ್ ಹತ್ತಿರದ ಆಂಡ್ರಾಯ್ಡ್ ತರಹದ ಅನುಭವವನ್ನು ನೀಡುತ್ತದೆ. ಇನ್ನು ಎನ್ಎಫ್‌ಸಿ, ಬ್ಲೂಟೂತ್ 5.0, 4 ಜಿ ವೋಲ್ಸ್ ಮತ್ತು ಹೆಚ್ಚಿನವುಗಳಂತಹ ಇತರ ಅಂಶಗಳಿವೆ. ಗೇಮಿಂಗ್ ಮೋಡ್ ಗಮನಾರ್ಹವಾಗಿದೆ, ಗೇಮಿಂಗ್ ಮೋಡ್ ಹಿಂದಿನ ಮಾದರಿಗಳಿಗಿಂತ ಸುಧಾರಿತ ಕಾರ್ಯಕ್ಷಮತೆಯನ್ನು ನೀಡುತ್ತದೆ.

  ಫೇಸ್‌ಲಾಕ್ ತಂತ್ರಜ್ಞಾನ!!

  'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನಲ್ಲಿ ನಿರೀಕ್ಷೆಯಂತಯೇ ಫೇಸ್ ಅನ್ಲಾಕ್ ಫೀಚರ್ ಅನ್ನು ತರಲಾಗಿದೆ. ಫೇಸ್‌ ಅನ್ಲಾಕ್ ಮಾಡಲು 0.4 ಸೆಕೆಂಡ್ ಸಮಯವನ್ನು ಫೇಸ್ ಅನ್ಲಾಕ್ ಫೀಚರ್ ತೆಗೆದುಕೊಳ್ಳುತ್ತಿದೆ. ಇದರ ಜೊತೆಗೆ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸಂವೇದಕವು ಕೇವಲ 0.2 ಸೆಕೆಂಡ್ಗಳನ್ನು ತೆಗೆದುಕೊಳ್ಳುತ್ತದೆ. ಒಟ್ಟಿನಲ್ಲಿ ಫಿಂಗರ್‌ಪ್ರಿಂಟ್ ಮತ್ತು ಫೇಸ್ ಅನ್ಲಾಕ್ ಎರಡೂ ಫೀಚರ್‌ಗಳಿಂದ ಸ್ಮಾರ್ಟ್‌ಫೋನ್ ಅಲಂಕೃತವಾಗಿದೆ. ಆದರೆ, ಫೇಸ್ ಅನ್ಲಾಕ್ ಆಪಲ್ ಎಕ್ಸ್‌ನಷ್ಟು ನಿಖರವಾಗಿಲ್ಲದೆ ಇರಬಹುದು ಎಂದು ತಜ್ಞರು ಹೇಳಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Marvel, Croma Retail and Cleartrip amongst others congratulated OnePlus on bringing its latest technology masterpiece to all of us. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more