Home
ಮೊಬೈಲ್

ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ ವಿಶೇಷತೆ ಕುರಿತ ಮಾಹಿತಿ ಲೀಕ್: ಅಭಿಮಾನಿಗಳು ಫುಲ್ ಖುಷ್..!

By Srinidhi

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಮಾರುಕಟ್ಟೆಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಕುರಿತಂತೆ ರೂಮರ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶ ಪಡೆಯಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ವಿಶೇಷತೆಗಳ ಕುರಿತ ಫೋಟೋವೊಂದು ಸದ್ಯ ಲೀಕ್ ಆಗಿದೆ. ಈ ವಿಷಯ ತಿಳಿದ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ ವಿಶೇಷತೆ ಕುರಿತ ಮಾಹಿತಿ ಲೀಕ್

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ 'ಒನ್‌ಪ್ಲಸ್ A6000' ಎಂಬ ಮಾಡಲ್ ನಂಬರ್‌ನೊಂದಿಗೆ ಕಾಣಿಸಿಕೊಂಡಿದ್ದು, ಈ ಸ್ಮಾರ್ಟ್‌ಫೋನಿನಲ್ಲಿ 6.28 ಇಂಚಿನ FHD+ ಅಮೊಲೈಡ್ ಡಿಸ್‌ಪ್ಲೇಯನ್ನು ಅಳವಡಿಲಾಗಿದೆ. ಇದು FHD+ ಗುಣಮಟ್ಟ 19:9 ಅನುಪಾತದ ಡಿಸ್‌ಪ್ಲೇ ಆಗಿರಲಿದೆ ಎನ್ನುವ ವಿಚಾರವೂ ಲಭ್ಯವಾಗಿದೆ. ಒನ್‌ಪ್ಲಸ್ 5T ಮಾದರಿಯಲ್ಲಿ ಹಿಂಬದಿಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿಯೂ ಕಾಣಬಹುದಾಗಿದೆ.

ಇದಲ್ಲದೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಆಕ್ಟಾಕೋರ್ ಕ್ವಾಲ್ಕಮ್ ಸ್ಪಾಪ್‌ಡ್ರಾಗನ್ 845 ಪ್ರೋಸೆಸರ್ ಇರುವ ಸಾಧ್ಯತೆ ಇದ್ದು, 6GB RAM ಮತ್ತು 128GB ಇಂಟೆರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಇದರೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಒನ್‌ಪ್ಲಸ್ ನೀಡಲಿದೆ. ಇದು ಕ್ಯಾಮೆರಾಗಾಗಿ ಮತ್ತು ಪ್ರೋಸೆಸರ್‌ಗಾಗಿ ಸ್ಮಾರ್ಟ್‌ಫೋನಿನ್ಲಲಿ ಬಳಕೆಯಾಗಲಿದೆ.

ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ ವಿಶೇಷತೆ ಕುರಿತ ಮಾಹಿತಿ ಲೀಕ್

ಇದರೊಂದಿಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. 16MP + 20MP ಲೈನ್ಸ್ ಗಳನ್ನು ಅಳವಡಿಸಲಾಗಿದ್ದು, ಜೊತೆಗೆ ಡ್ಯುಯಲ್ LED ಫ್ಲಾಷ್ ಲೈಟ್ ಅನ್ನು ಸಹ ಕಾಣುವ ಸಾಧ್ಯತೆ ಇದೆ. 3450mAh ಬ್ಯಾಟರಿಯನ್ನು ನೀಡುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ ವೇಗದ ಚಾರ್ಜಿಂಗ್‌ಗಾಗಿ ಡ್ಯಾಷ್ ಚಾರ್ಜರ್ ಅನ್ನು ನೀಡಲಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಮೂಲಗಳ ಪ್ರಕಾರ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಒಪ್ಪೋ R 25 ಮಾದರಿಯಲ್ಲಿಯೇ ಇರಲಿದ್ದು, ಮುಂಭಾಗದಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯಲ್ಲಿ ಕಾಣಿಸಿಕೊಳ್ಳಲಿವೆ. ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ರೂ.40000 ದಿಂದ 42000ರ ಆಸುಪಾಸಿನಲ್ಲಿ ಮಾರಾಟವಾಗುವ ನೀರಿಕ್ಷೆ ಇದೆ.

Best Mobiles in India

English summary
OnePlus 6 specs sheet reveals SD845, 6GB RAM, 128GB storage and more. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+