ಕೊನೆಗೂ ಆಕ್ಸಿಜನ್ ಒಎಸ್ 5.1.8 ಅಪ್ ಡೇಟ್ ಸ್ವೀಕರಿಸುತ್ತಿರುವ ಒನ್ ಪ್ಲಸ್ 6..!

By Avinash
|

ಸ್ಮಾರ್ಟ್ ಪೋನ್ ಲೋಕದಲ್ಲಿ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಸ್ಮಾರ್ಟ್ ಪೋನ್ ಕಂಪನಿಗಳು ಸದಾ ಒಂದಿಲ್ಲೊಂದು ಅಪ್ ಡೇಟ್ ಮಾಡುತ್ತಿರುತ್ತವೆ. ಈಗ ಅಪ್ ಡೇಟ್ ಮಾಡುವ ಸರದಿ ಒನ್ ಪ್ಲಸ್ 6 ಸ್ಮಾರ್ಟ್ ಪೋನ್ ಗೆ ಬಂದಿದ್ದು, ಆಕ್ಸಿಜನ್ ಒಎಸ್ ಇತ್ತೀಚಿನ ಆವೃತ್ತಿಗೆ ಅಪ್ ಡೇಟ್ ಆಗುತ್ತಿದೆ.

<strong>ಈ ಪೋಟೋಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ..!</strong>ಈ ಪೋಟೋಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ..!

ಒನ್ ಪ್ಲಸ್ 6 ಸ್ಮಾರ್ಟ್ ಪೋನ್ ನ ಎಲ್ಲಾ ಫೀಚರ್ಸ್ ಗಳ ಅಪ್ ಡೇಟ್ ಗೆ ಕಳೆದ ವಾರ ಆಕ್ಸಿಜನ್ ಒಎಸ್ 5.1.7 ಬಿಡುಗಡೆಗೊಳಿಸಿದ್ದ ಒನ್ ಪ್ಲಸ್ 6 ಈಗ ಆಕ್ಸಿಜನ್ ಒಎಸ್ 5.1.8 ಎಂಬ ಹೊಸ ಸಾಫ್ಟ್ ವೇರ್ ಅಪ್ ಡೇಟ್ ಅನ್ನು ಸ್ವೀಕರಿಸುತ್ತಿದೆ. ಈ ಅಪ್ ಡೇಟ್ ಭಾರತೀಯ ಒನ್ ಪ್ಲಸ್ 6 ಬಳಕೆದಾರರಿಗೆ ಅನ್ವಯಿಸುತ್ತದೆ.

ಕೊನೆಗೂ ಆಕ್ಸಿಜನ್ ಒಎಸ್ 5.1.8 ಅಪ್ ಡೇಟ್ ಸ್ವೀಕರಿಸುತ್ತಿರುವ ಒನ್ ಪ್ಲಸ್ 6..!

ಬೂಟ್ ಲೋಡರ್ ವಲ್ನರಬಿಲಿಟಿ ಸಮಸ್ಯೆ ಫಿಕ್ಸ್

ಬೂಟ್ ಲೋಡರ್ ವಲ್ನರಬಿಲಿಟಿ ಸಮಸ್ಯೆ ಫಿಕ್ಸ್

ಹೊಸ ಅಪ್ ಡೇಟ್ ಭಾರತೀಯ ಒನ್ ಪ್ಲಸ್ 6 ಬಳಕೆದಾರರ ಬೂಟ್ ಲೋಡರ್ ವಲ್ನರಬಿಲಿಟಿ ಸಮಸ್ಯೆಯನ್ನು ಬಗೆಹರಿಸಿದ್ದು, ಕರೆ ಗುಣಮಟ್ಟವನ್ನು ಹೆಚ್ಚಿಸಿದೆ ಮತ್ತು ಸಿಸ್ಟಮ್ ಸ್ಟ್ಯಾಬಿಲಿಟಿ ಅಂಶಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಪರಿಹರಿಸಿದೆ.

ಹಿಂದಿನ ಆವೃತ್ತಿಯಲ್ಲಿನ ಸಮಸ್ಯೆಗಳಿಂದ ಹೊಸ ಅಪ್ ಡೇಟ್

ಹಿಂದಿನ ಆವೃತ್ತಿಯಲ್ಲಿನ ಸಮಸ್ಯೆಗಳಿಂದ ಹೊಸ ಅಪ್ ಡೇಟ್

ಹಿಂದಿನ ಆಕ್ಸಿಜನ್ ಒಎಸ್ 5.1.6 ಅಪ್ ಡೇಟ್ ನಲ್ಲಿ ಭಾರತೀಯ ಬಳಕೆದಾರರು ಸ್ಟ್ಯಾಬಿಲಿಟಿ ಅಂಶಗಳಲ್ಲಿ ಸಮಸ್ಯೆ ಕಾಣುತ್ತಿದ್ದಕ್ಕೆ ಒನ್ ಪ್ಲಸ್ ಆಕ್ಸಿಜನ್ ಒಎಸ್ 5.1.8 ಅಪ್ ಡೇಟ್ ಗೆ ಬದಲಾಯಿಸಿಕೊಂಡಿತು.

ಕರೆ ಗುಣಮಟ್ಟ ಹೆಚ್ಚಳ

ಕರೆ ಗುಣಮಟ್ಟ ಹೆಚ್ಚಳ

ಒನ್ ಪ್ಲಸ್ ಪೋರಂನಲ್ಲಿ ಬದಲಾವಣೆ ಕುರಿತು ಬಂದ ಪೋಸ್ಟ್ ಗಳ ಅನುಗುಣವಾಗಿ, ಆಕ್ಸಿಜನ್ ಒಎಸ್ 5.1.8 ಅಪ್ ಡೇಟ್ ನಿಂದ ಒನ್ ಪ್ಲಸ್ 6 ಸ್ಮಾರ್ಟ್ ಪೋನ್ ನಲ್ಲಿ ಕರೆ ಗುಣಮಟ್ಟವನ್ನು ಹೆಚ್ಚಿಸಿರುವುದು ಮತ್ತು ಸಿಸ್ಟಮ್ ಸ್ಟ್ಯಾಬಿಲಿಟಿ ಅಂಶಗಳ ಸಮಸ್ಯೆಗಳನ್ನು ಪರಿಹರಿಸಿರುವುದು ಕಂಡುಬಂದಿದೆ. ಅದರಂತೆ, ಹೊಸ ಅಪ್ ಡೇಟ್ ನೆಟ್ ವರ್ಕ್ ಸ್ಟ್ಯಾಬಿಲಿಟಿಯನ್ನು ಉತ್ತಮಗೊಳಿಸಿದ್ದು, ಸಾಮಾನ್ಯ ಬಗ್ ಗಳನ್ನು ಫಿಕ್ಸ್ ಮಾಡಿದೆ.

ಆಕ್ಸಿಜನ್ ಒಎಸ್ 5.1.7 ಇನ್ಸ್ಟಾಲ್ ಆಗಿದ್ದಿಲ್ಲ

ಆಕ್ಸಿಜನ್ ಒಎಸ್ 5.1.7 ಇನ್ಸ್ಟಾಲ್ ಆಗಿದ್ದಿಲ್ಲ

ಹೊಸ ಅಪ್ ಡೇಟ್ ವಿಶ್ವದಾದ್ಯಂತ ಒನ್ ಪ್ಲಸ್ 6 ಗ್ರಾಹಕರಿಗೆ ಲಭ್ಯವಿದ್ದು, ಆಕ್ಸಿಜನ್ ಒಎಸ್ 5.1.7 ಫೀಚರ್ಸ್ ಅನ್ನು ಒಳಗೊಂಡಿದೆ. ಆದರೆ, ಭಾರತೀಯ ಬಳಕೆದಾರರು ಆಕ್ಸಿಜನ್ 5.1.6 ಇನ್ ಸ್ಟಾಲ್ ಮಾಡಿದ ನಂತರ ಕೆಲವು ಸ್ಟ್ಯಾಬಿಲಿಟಿ ಅಂಶಗಳ ಸಮಸ್ಯೆಯಿಂದ ಹಿಂದಿನ 5.1.7 ಅಪ್ ಡೇಟ್ ಅನ್ನು ಸ್ವೀಕರಿಸಿದ್ದಿಲ್ಲ.

ಆಕ್ಸಿಜನ್ ಒಎಸ್ 5.1.7 ಮತ್ತಷ್ಟು ಅಭಿವೃದ್ಧಿ

ಆಕ್ಸಿಜನ್ ಒಎಸ್ 5.1.7 ಮತ್ತಷ್ಟು ಅಭಿವೃದ್ಧಿ

ಆದ್ದರಿಂದ, ಒನ್ ಪ್ಲಸ್ 6ನ ಭಾರತೀಯ ಬಳಕೆದಾರರು ಡು ನಾಟ್ ಡಿಸ್ಟರ್ಬ್ ಮೋಡ್ ಮತ್ತು ಬೂಟ್ ಲೋಡರ್ ಅಪಡೇಟ್ ಗೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿದ ಹೊಸ ಅಪ್ ಡೇಟ್ ಅನ್ನು ಪಡೆಯಲಿದ್ದಾರೆ. ಅದಲ್ಲದೇ ಸಾಮಾನ್ಯವಾದ ಬಗ್ ಫಿಕ್ಸ್ ಮತ್ತು ಕಳೆದ ವಾರದ ಆಕ್ಸಿಜನ್ ಒಎಸ್ 5.1.7 ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ.

ಮ್ಯಾನ್ಯುವಲ್ ಆಗಿ ಪರಿಶೀಲಿಸಿ

ಮ್ಯಾನ್ಯುವಲ್ ಆಗಿ ಪರಿಶೀಲಿಸಿ

ಕಳೆದ ಆವೃತ್ತಿಗಳಂತೆ ಇದೊಂದು ಮುಂದುವರೆದ ಅಪ್ ಡೇಟ್ ಆಗಿದ್ದು, ಆಕ್ಸಿಜನ್ ಒಎಸ್ 5.1.8 ಸಣ್ಣ ವರ್ಗದ ಬಳಕೆದಾರರನ್ನು ತಲುಪಿದೆಯಷ್ಟೇ, ಕೆಲವೇ ದಿನಗಳಲ್ಲಿ ಎಲ್ಲಾ ಕಡೆಗೂ ಅಪ್ ಡೇಟ್ ಬರಲಿದೆ. ಸೆಟ್ಟಿಂಗ್ಸ್ ನ ಸಿಸ್ಟಮ್ ಅಪ್ ಡೇಟ್ಸ್ ಗೆ ಹೋಗಿ ಮ್ಯಾನ್ಯುವಲ್ ಆಗಿ ಅಪ್ ಡೇಟ್ ಲಭ್ಯತೆ ಕುರಿತು ಪರಿಶೀಲಿಸಬಹುದು.

Best Mobiles in India

English summary
OnePlus 6 Starts Receiving OxygenOS 5.1.8 Update; Addresses System Stability Issues, Optimises Call Quality. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X