Subscribe to Gizbot

ಸ್ಟೈಲಿಶ್ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್: ಸ್ಪೀಡ್ ಮಾತ್ರವಲ್ಲ, ನೋಡಲು ಸುಂದರವಾಗಿದೆ..!

Written By:

ಭಾರತ ಸೇರಿದಂತೆ ಜಾಗತಿಕವಾಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಒನ್‌ಪ್ಲಸ್ ಕಂಪನಿ, ಶೀಘ್ರವೇ ಬಿಡುಗಡೆ ಮಾಡಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಕುರಿತಂತೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ. ಈ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಲಾಂಚ್ ಆಗಲು ಇನ್ನು ಕೆಲವೇ ದಿನಗಳು ಮಾತ್ರವೇ ಇರುವ ಹಿನ್ನಲೆಯಲ್ಲಿ ಒಂದೊಂದೇ ಮಾಹಿತಿಗಳು ಲೀಕ್ ಆಗುತ್ತಿದೆ. ಈ ಮಾಹಿತಿಗಳು ಒನ್‌ಪ್ಲಸ್ 6 ಕುರಿತ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ.

ಆಂಡ್ರಾಯ್ಡ್ ಘಾಗ್ ಶಿಪ್ ಆಗಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್, ಸ್ನಾಪ್‌ಡ್ರಾಗನ್ 845 CPU ಹೊಂದಿದ್ದು, 8GB RAM ಮತ್ತು 256 GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ. ಒನ್‌ಪ್ಲಸ್ 6 ಕೇವಲ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ನಿಂದ ಸದ್ದು ಮಾಡುತ್ತಿಲ್ಲ. ಬದಲಾಗಿ ತನ್ನ ನ್ಯೂ ಲುಕ್ ಮತ್ತು ವಿನ್ಯಾಸದಿಂದಲೇ ಅತೀ ಹೆಚ್ಚು ಮಂದಿಯನ್ನು ಸೆಳೆಯುತ್ತಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲೇ ಭಿನ್ನವಾದ ವಿನ್ಯಾಸವನ್ನು ಒನ್‌ಪ್ಲಸ್ 6 ಹೊಂದಿರಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್‌ಪ್ಲಸ್ 6 ಹೊಸ ಮಾದರಿ:

ಒನ್‌ಪ್ಲಸ್ 6 ಹೊಸ ಮಾದರಿ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಂತೆ ವಿಭಿನ್ನವಾಗಿರಲಿದೆ. ಈ ಹಿಂದಿನ ಸ್ಮಾರ್ಟ್‌ಫೋನ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದವು ಇದೇ ಮಾದರಿಯಲ್ಲಿ ಒನ್‌ಪ್ಲಸ್ 6 ಹೊಸ ವಿನ್ಯಾಸದೊಂದಿಗೆ ಕಾಣಿಸಿಕೊಳ್ಳಲಿದೆ. ಬಳಕೆದಾರರಿಗೆ ಕೈನಲ್ಲಿ ಹಿಡಿದರೆ ಉತ್ತಮ ಅನುಭವನ್ನು ನೀಡಬೇಕು ಅಂತಹ ಸ್ಮಾರ್ಟ್‌ಫೋನ್ ಇದಾಗಿಲಿದೆ.

ಭಿನ್ನ ಡಿಸ್‌ಪ್ಲೇ:

ಭಿನ್ನ ಡಿಸ್‌ಪ್ಲೇ:

ಈ ಹಿಂದೆ ಟ್ರೈ ಮಾಡಿರದ ಮಾದರಿಯಲ್ಲಿ ಭಿನ್ನ ಡಿಸ್‌ಪ್ಲೇಯನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. 6 ಇಂಚಿನ ಎಡ್ಜ್ ಟು ಎಡ್ಜ್ ವಿನ್ಯಾಸದಲ್ಲಿ ಕಾಣಿಸಿಕೊಳ್ಳವ ಡಿಸ್‌ಪ್ಲೇಯಲ್ಲಿ ನೋಚ್ ಅನ್ನು ಕಾಣಬಹುದಾಗಿದೆ. ಇದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ವಿನ್ಯಾಸಕ್ಕೆ ಹೆಚ್ಚಿನ ಮೆರೆಗು ನೀಡುತ್ತಿದೆ. ಬ್ರಜಿಲ್ ಲೈಸ್ ವಿನ್ಯಾಸವು ಗೇಮ್ ಆಡಲು, ವಿಡಿಯೋ ನೋಡಲು ಸಹಾಯಕಾರಿಯಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ವರ್ಟಿಕಲ್ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಹಿಂಭಾಗಕ್ಕೆ ಶಿಫ್ಟ್ ಆಗಿದೆ. ಒನ್ ಹ್ಯಾಂಡ್ ನಲ್ಲಿ ಬಳಕೆ ಮಾಡಿಕೊಳ್ಳಲು ಸುಲಭವಾಗುವಂತೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಅನ್ನು ವಿನ್ಯಾಸ ಮಾಡಲಾಗಿದೆ ಎನ್ನಲಾಗಿದೆ. ಕೈನಿಂದ ಜಾರದಂತೆ ಮಾಡಲಾಗಿದೆ.

ಮಾಡ್ರನ್ ವಿನ್ಯಾಸ:

ಮಾಡ್ರನ್ ವಿನ್ಯಾಸ:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಮಾಡ್ರನ್ ವಿನ್ಯಾಸವನ್ನು ಕಾಣಬಹುದಾಗಿದ್ದು, 3.5mm ಇಯರ್ ಫೋನ್ ಜಾಕ್ ಅನ್ನು ನೀಡಲಾಗಿದೆ. ಅಲ್ಲದೇ ತೀರಾ ತೆಳ್ಳಗೆ ಇರುವ ಸ್ಮಾರ್ಟ್‌ಫೋನಿನ ಕೆಳಭಾಗದಲ್ಲಿ ಸ್ಪೀಕರ್ ಗಳನ್ನು ನೀಡಲಾಗಿದೆ. ಇದು ನೋಡಲು ಉತ್ತಮವಾಗಿ ಕಾಣಿಸುತ್ತಿದೆ.

How to view all photos, pages, comments and posts you liked on Facebook (KANNADA)
ಪ್ರೀಮಿಯಮ್ ಲುಕ್:

ಪ್ರೀಮಿಯಮ್ ಲುಕ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಅಗಿದ್ದು, ಈ ಹಿನ್ನಲೆಯಲ್ಲಿ ಪ್ರಿಮಿಯಮ್ ಲುಕ್ ಹೊಂದಿದ್ದ, ಗ್ರಾಂಡ್ ಆಗಿ ಕಾಣಲಿದೆ. ಫಾಸ್ಟಾಗಿರುವುದಲ್ಲದೇ ಮಾಡ್ರನ್ ಆಗಿಯೂ ಇರಲಿದೆ. ಸ್ಟೈಲಿಶ್ ಲುಕ್ ಬಳಕೆದಾರರನ್ನು ಸೆಳೆಯಲಿದೆ ಎನ್ನಲಾಗಿದೆ. ಶೀಘ್ರವೇ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OnePlus 6 will bring futuristic design without compromising on basics. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot