ಕ್ರೋಮಾ ಸ್ಟೋರ್‌ನಲ್ಲಿಯೂ OnePlus 6 ಮಾರಾಟ...! ಎಂದಿನಿಂದ..?

|

ಲಂಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇ 16 ರಂದು ಒನ್ ಪ್ಲಸ್ 6 ಬಿಡುಗಡೆಗೊಂಡಿದೆ. ಭಾರತದಲ್ಲಿ ಮೇ 17 ರಂದು ಲಾಂಚ್ ಆಗಿದೆ. ಈ ಸ್ಮಾರ್ಟ್ ಫೋನ್ ನ ಬೆಲೆ 34,999 ರುಪಾಯಿಯಿಂದ ಆರಂಭವಾಗುತ್ತೆ. ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಗೆ ಎಕ್ಸ್ ಕ್ಲೂಸಿವ್ ಆಗಿ ಇದನ್ನು ಮಾರಾಟ ಮಾಡಲು ಅವಕಾಶವಿದ್ದು, ಮೇ 21ಕ್ಕೆ ಮಾರಾಟ ನಡೆಯಲಿದೆ. ಅಷ್ಟೇ ಅಲ್ಲ ಈ ಸ್ಮಾರ್ಟ್ ಫೋನ್ ಒನ್ ಪ್ಲಸ್ ನ ಅಫೀಶಿಷಿಯನ್ ವೆಬ್ ಸೈಟ್ ನಲ್ಲೂ ಕೂಡ ಮಾರಾಟಕ್ಕೆ ಲಭ್ಯವಿದೆ. ಕ್ರೋಮಾ ಸ್ಟೋರ್ ಗಳಲ್ಲೂ ಕೂಡ ಇದರ ಮಾರಾಟ ನಡೆಯಲಿದೆ.

ಕ್ರೋಮಾ ಸ್ಟೋರ್‌ನಲ್ಲಿಯೂ OnePlus 6 ಮಾರಾಟ...! ಎಂದಿನಿಂದ..?

ಆಸಕ್ತ ಖರೀದಿದಾರರು ಮೊದಲು ಇದರ ಅನುಭವ ಪಡೆದು ನಂತರ ಖರೀದಿಸಲು ಅವಕಾಶವಿದ್ದು, 112 ಕ್ರೋಮಾ ಸ್ಟೋರ್ ಗಳಲ್ಲಿ ಮೇ 22ರಿಂದ ಮಾರಾಟ ನಡೆಯಲಿದೆ. ಈ ಕಂಪೆನಿಗಳು ಪ್ರತಿದಿನವೂ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ನೀಡಲಿದ್ದು, ಈ ನಿಟ್ಟಿನಲ್ಲಿ HDFC ಬ್ಯಾಂಕ್, ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟೆಡ್, ಮತ್ತು ಪೆಟಿಎಂ ಗಳ ಜೊತೆ ಪಾರ್ಟನರ್ಶಿಪ್ ಹೊಂದಿದೆ. ಎಸ್ ಬಿಐ ಕಾರ್ಡ್ ಬಳಸುವವರಿಗೂ ಕೂಡ 2000 ರುಪಾಯಿಯ ಕ್ಯಾಷ್ ಬ್ಯಾಕ್ ಸಿಗಲಿದೆ. ಆದರೆ ಈ ಎಲ್ಲಾ ಆಫರ್ ಗಳು ಮಾರಾಟ ಆರಂಭವಾದ ಕೇವಲ ಒಂದು ವಾರ ಮಾತ್ರ ಇರಲಿವೆಯಂತೆ.

ರೆಗ್ಯುಲರ್ ಮಾರಾಟ ಆರಂಭವಾಗುವ ಮುನ್ನ, ಭಾರತದಾದ್ಯಂತ 8 ಸಿಟಿಗಳಲ್ಲಿ ಪಾಪ್ ಅಪ್ ಸ್ಟೋರ್ ಗಳನ್ನು ಕಂಪೆನಿಯು ತೆರೆಯಲಿದ್ಯಂತೆ. ಪಾಪ್ ಅಪ್ ಸ್ಟೋರ್ ಗಳು ಮುಂಬೈ, ಪುಣೆ , ಚೆನೈ, ಹೈದ್ರಾಬಾದ್, ದೆಹಲಿ, ಕೋಲ್ಕತ್ತಾ, ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ಇರಲಿದೆ. ಈ ಸ್ಟೋರ್ ಗಳು ಮೇ 21 ರಂದು ಮಧ್ಯಾಹ್ನ 3.30 ರಿಂದ ರಾತ್ರಿ 8ವರೆಗೆ ಮತ್ತು ಮೇ 22 ರಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 7 ಗಂಟೆ ವರೆಗೆ ತೆರೆದಿರಲಿದೆ.

6 ಜಿಬಿ ರ್ಯಾಂ ಮತ್ತು 64 ಜಿಬಿ ಸ್ಟೋರೇಜ್ ಅವಕಾಶವಿರುವ ಸ್ಮಾರ್ಟ್ ಫೋನ್ ನ ಬೆಲೆ 34,999 ರೂ, ಅದೇ 8 ಜಿಬಿ ರ್ಯಾಂ ಮತ್ತು 128 ಜಿಬಿ ಸ್ಟೋರೇಜ್ ಅವಕಾಶವಿರುವ ಸ್ಮಾರ್ಟ್ ಫೋನ್ ಬೆಲೆ 39,999 ಆಗಿದೆ. ಅಷ್ಟೇ ಅಲ್ಲ ಮಾರ್ವಲ್ ಎವೆಂಜರ್ಸ್ ಲಿಮಿಟೆಡ್ ಎಡಿಷನಲ್ ಮಾಡೆಲ್ ನ ಬೆಲೆಯು 44,999 ರುಪಾಯಿ ಎಂಬುದಾಗಿ ಕಂಪೆನಿಯು ತಿಳಿಸಿದೆ. ಈ ಸ್ಪೆಷಲ್ ಎಡಿಷನ್ ನ ಮಾರಾಟವು ಜೂನ್ 5 ರಿಂದ ಆರಂಭವಾಗಲಿದೆ.

ಒನ್ ಪ್ಲಸ್ 6 ವೈಶಿಷ್ಟ್ಯಗಳು6.28 ಇಂಚ್ FHD+ ಫುಲ್ ಆಪ್ಟಿಕ್ AMOLED ಡಿಸ್ ಪ್ಲೇ ಹೊಂದಿದ್ದು,2280x1080 ಪಿಕ್ಸಲ್ ರೆಸೊಲ್ಯೂಷನ್ ಹೊಂದಿದೆ. ಸ್ಕ್ರೀನ್ ಅನುಪಾತವು 19:9 ಆಗಿದೆ. Snapdragon 845 SoC ,Adreno 630 GPU ಜೊತೆ ಪೇರ್ ಆಗಿದ್ದು, ಅದರ ಬಳಕೆಯನ್ನು ಈ ಡಿವೈಸ್ ಮಾಡಲಿದೆ. ಆಂಡ್ರಾಯ್ಡ್ ಓರಿಯೋ ಯಿಂದ ಬಿಡುಗಡೆಯಾಗಿರುವ ಫೋನ್ ಆಗಿರುವುದರಿಂದ ಆಂಡ್ರಾಯ್ಡ್ ಪಿ ಬೇಟಾ ಅಪ್ ಡೇಟ್ ಗೆ ಪೋನ್ ನಲ್ಲಿ ಅವಕಾಶವಿರಲಿದೆ.

ಡುಯಲ್ ಕ್ಯಾಮರಾ ಮೋಡ್ ಇದ್ದು,16ಎಂಪಿ+20ಎಂಪಿ ಸೆನ್ಸಾರ್ ನ ಜೊತೆಗೆ OIS, EIS ಇತ್ಯಾದಿಗಳಿದೆ. ಸೆಲ್ಫೀ ಕ್ಯಾಮರಾವು 16MP ಸೆನ್ಸಾರ್ ಹೊಂದಿದ್ದು,f/2.0 ದ್ಯುತಿರಂಧ್ರವನ್ನು ಹೊಂದಿದೆ. ಬ್ಯೂ ಟೂತ್ 5.0, 4G ವೋಲ್ಟ್, ಜಿಪಿಎಸ್, ಯುಎಸ್ ಬಿ ಟೈಪ್ ಸಿ ಪೋರ್ಟ್, 3.5 ಆಡಿಯೋ ಜಾಕ್ ಗಳನ್ನು ಇದು ಹೊಂದಿದೆ.3300ಎಂಎಹೆಚ್ ಬ್ಯಾಟರಿಯನ್ನು ಹೊಂದಿದ್ದು, ಮುಖವನ್ನು ಗುರುತಿಸಿ ಲಾಕ್ ಓಪನ್ ಮಾಡಲು ಸಾಧ್ಯವಿದೆ.

Best Mobiles in India

English summary
OnePlus 6 will go on sale via Croma stores in India from May 22. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X