Home
ಮೊಬೈಲ್

'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನ ವೇಗ ಮತ್ತು ಸಾಮರ್ಥ್ಯದ ಬಗ್ಗೆ 'ಒನ್‌ಪ್ಲಸ್' ಕಂಪೆನಿ ಹೇಳಿದ್ದೀಗೆ!?

ಐಫೋನ್ ಎಕ್ಸ್ ಸ್ಮಾರ್ಟ್‌ಫೋನ್ ನೋಚ್ ವಿನ್ಯಾಸದಲ್ಲಿ ಸ್ಲೀಕ್ ಮೆಟಲ್‌ ಯುನಿಬಾಡಿ ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಒನ್‌ಪ್ಲಸ್ 6 ಬಗ್ಗೆ ಒನ್‌ಪ್ಲಸ್ ಕಂಪೆನಿ ಅಧಿಕೃತ ಮಾಹಿತಿ ಯನ್ನು ಬಿಡುಗಡೆ ಮಾಡಿದೆ.

By Bhaskar N J

ಐಫೋನ್ ಎಕ್ಸ್ ಸ್ಮಾರ್ಟ್‌ಫೋನ್ ನೋಚ್ ವಿನ್ಯಾಸದಲ್ಲಿ ಸ್ಲೀಕ್ ಮೆಟಲ್‌ ಯುನಿಬಾಡಿ ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಒನ್‌ಪ್ಲಸ್ 6 ಬಗ್ಗೆ ಒನ್‌ಪ್ಲಸ್ ಕಂಪೆನಿ ಅಧಿಕೃತ ಮಾಹಿತಿ ಯನ್ನು ಬಿಡುಗಡೆ ಮಾಡಿದೆ. ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಈಗಾಗಲೇ ಖಚಿತ ಮಾಹಿತಿ ಹೊರಬಿದ್ದಿರುವುದು ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಪ್ರಿಯರ ನಿದ್ದೆಗೆಡಿಸಿದೆ.

ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿಯೇ ಪ್ರಸ್ತುತವಿರುವ ಅತ್ಯುತ್ತಮ ಪ್ರೊಸೆಸರ್ ಎಂಬ ಹೆಗ್ಗಳಿಕೆ ಹೊಂದಿರುವ ಸ್ನ್ಯಾಪ್‌ಡ್ರಾಗನ್ 845 ಸಿಪಿಯು, 8GB RAM ಮತ್ತು 256GB ಆಂತರಿಕ ಶೇಖರಣಾ ಜೋತೆಯಾಗಿ ಹೊಸ ಆಕ್ಸಿಜನ್ ಒಎಸ್ ಮೂಲಕ ಹೊರಬರುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ವೇಗ, ಸ್ಥಿರ, ಪರಿಣಾಮಕಾರಿಯಾದ ಸ್ಮಾರ್ಟ್ಫೋನ್ ಇದಾಗಿರುವುದು ನಿಶ್ಚಯವಾಗಿದೆ.

'ಒನ್‌ಪ್ಲಸ್ 6' ವೇಗ ಮತ್ತು ಸಾಮರ್ಥ್ಯದ ಬಗ್ಗೆ 'ಒನ್‌ಪ್ಲಸ್' ಕಂಪೆನಿ ಹೇಳಿದ್ದೀಗೆ!

ಸ್ಮಾರ್ಟ್‌ಪೋನ್‌ಗಳು ನಮ್ಮ ಜೀವನಕ್ಕೆ ಹೊರೆಯಾಗಬಾರದು ಎಂದು ನಂಬುವ ಒನ್‌ಪ್ಲಸ್ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪೀಟ್ ಲೌ ಅವರು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬೆಲೆಯೂ ಕಡಿಮೆ ಇರುವ ಬಗ್ಗೆ ಮಾಹಿತಿ ನಿಡಿದ್ದಾರೆ. ಹಾಗಾದರೆ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ವಿಶೇಷತೆಗಳೇನು? ಎಂಬುದನ್ನು ಮುಂದೆ ಓದಿ ತಿಳಿಯಿರಿ.!

ಒನ್‌ಪ್ಲಸ್ 6 ವೇಗ ಮತ್ತು ದಕ್ಷತೆ!!

ಒನ್‌ಪ್ಲಸ್ 6 ವೇಗ ಮತ್ತು ದಕ್ಷತೆ!!

ತನ್ನ ಆರ್ & ಡಿ ವಿಭಾಗದಲ್ಲಿ ಸಮರ್ಪಿತ ತಂಡವನ್ನು ಮುನ್ನಡೆಸಿ ವೇಗವಾದ, ಸ್ಥಿರ ಹಾಗೂ ಪರಿಣಾಮಕಾರಿದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ತಯಾರಿಸಿರುವುದಾಗಿ ಒನ್‌ಪ್ಲಸ್ ಕಂಪೆನಿ ಹೇಳಿದೆ. ಒನ್‌ಪ್ಲಸ್ ಸಾಧನಗಳ ಏಕೈಕ ಉದ್ದೇಶ ಸಾಧನಗಳ ವೇಗ ಎಂದಿರುವ ಒನ್‌ಪ್ಲಸ್ ಅದಕ್ಕಾಗಿ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ತಂದಿದೆ.

 ಸಾಂಪ್ರದಾಯ ಮೀರಿದೆ ಸ್ಮಾರ್ಟ್‌ಫೋನ್!!

ಸಾಂಪ್ರದಾಯ ಮೀರಿದೆ ಸ್ಮಾರ್ಟ್‌ಫೋನ್!!

ಮುಂಬರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಭಾರವಿಲ್ಲದ ಬಳಕೆದಾರ ಅನುಭವವನ್ನು ತಲುಪಿಸಲು ಪ್ರಯತ್ನಿಸುತ್ತಿದೆ. ಯಾವುದೇ ಮಂದಗತಿ, ಅಡಚಣೆ, ಅಥವಾ ಗೊಂದಲಮಯ ಅಧಿಸೂಚನೆಗಳು ಇಲ್ಲದೆ ಕಾರ್ಯನಿರ್ವಹಿಸಲಿದೆ. ಇದು ಆಧುನಿಕ ಸ್ಮಾರ್ಟ್‌ಫೋನ್ ಸಾಂಪ್ರದಾಯಿಕ ರೂಢಿಗಳನ್ನು ಮೀರಲಿದೆ ಎಂದು ಒನ್‌ಪ್ಲಸ್ ಕಂಪೆನಿ ಹೇಳಿಕೊಂಡಿದೆ.

ಪ್ರತಿಶತ 1/1000ರಷ್ಟು ಗ್ಯಾರೆಂಟಿ!!

ಪ್ರತಿಶತ 1/1000ರಷ್ಟು ಗ್ಯಾರೆಂಟಿ!!

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ್ ಯಾವುದೇ ಗ್ರಾತ್ರದ ಹೆಚ್ಚು ಬೇಡಿಕೆಯುಳ್ಳ ಗೇಮ್‌ಗಳನ್ನು ಅನುಮತಿಸುತ್ತದೆ. 4K ವೀಡಿಯೊಗಳಳು, ನೂರಾರು ಆಪ್‌ಗಳನ್ನು ಒಮ್ಮೆಲೆ ಬಳಸಿದರೂ 1/1000ರ ಷ್ಟು ಪ್ರತಿಶತಕ್ಕಿಂತಲೂ ಕಡಿಮೆ ಸಂಭವದಲ್ಲಿ ಸ್ಮಾರ್ಟ್‌ಫೋನ್ ವೇಗ ಕಡಿಮೆಯಾಗುವುದು ಸಾಧ್ಯ ಎಂದು ಒನ್‌ಪ್ಲಸ್ ಕಂಪೆನಿ ತಿಳಿಸಿದೆ.

ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್!!

ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್!!

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಈಗಾಗಲೇ ಫೇಸ್‌ಐಡಿ ಫೀಚರ್ ಅನ್ನು ಹೊಂದಿದ್ದರೂ ಸಹ ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಉತ್ತಮದರ್ಜಿಗೇರಿಸಲು ಒನ್‌ಪ್ಲಸ್ ಮುಂದಾಗಿದೆ. ಹಾಗಾಗಿ, ಒನ್‌ಪ್ಲಸ್ 6 ಫೋನಿನಲ್ಲಿ ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ತರುವ ಸೂಚನೆಯನ್ನು ಒನ್‌ಪ್ಲಸ್ ಕಂಪೆನಿ ನೀಡಿದೆ.!!

ವಾಟರ್‌ಪ್ರೂಫ್ ಚಾಲೆಂಜ್!!

ವಾಟರ್‌ಪ್ರೂಫ್ ಚಾಲೆಂಜ್!!

ಈ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅತ್ಯದ್ಬುತ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊಂದಿರಲಿದೆ.! ಪ್ರಸ್ತುತ ಇರುವ ವಾಟರ್‌ಪ್ರೂಫ್ ತಂತ್ರಜ್ಞಾನಕ್ಕಿಂತಲೂ ಅತ್ಯುತ್ತಮ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಾಗಿ ಒನ್‌ಪ್ಲಸ್ ಕಂಪೆನಿ ಹೆಳಿದೆ.!!

Best Mobiles in India

English summary
OnePlus 6 will set new benchmarks for speed and efficiency in smartphone segment . to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+