Subscribe to Gizbot

'ಒನ್‌ಪ್ಲಸ್ 6' ಬಗ್ಗೆ ಮತ್ತೊಂದು ಸಿಹಿಸುದ್ದಿ ನೀಡಿತು ಒನ್‌ಪ್ಲಸ್ ಕಂಪೆನಿ!!..ಏನದು ಗೊತ್ತಾ?

Written By:

ಭವಿಷ್ಯದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಆಗಲಿದೆ ಎಂಬ ನಿರೀಕ್ಷೆಯನ್ನು ಹುಟ್ಟಿಹಾಕಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಇನ್ನೇನು ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ. ಒನ್‌ಪ್ಲಸ್ 6 ಬಿಡುಗಡೆಗೆ ಇನ್ನೇನು ಕೆಲವೇ ದಿನ ಬಾಕಿ ಇವೆ ಎನ್ನುವಷ್ಟರಲ್ಲಿ ಮೊಬೈಲ್ ಕಂಪೆನಿ ಸಿಇಒ ಮತ್ತೊಂದು ಸಿಹಿಸುದ್ದಿಯನ್ನು ಹೊರಹಾಕಿದ್ದಾರೆ.

ಹೌದು, ಇಲ್ಲಿಯವರೆಗೂ ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನ ಫೀಚರ್ಸ್ ಯಾವುವು ಎಂದಷ್ಟೆ ತಿಳಿದಿದ್ದ ಮೊಬೈಲ್ ಗ್ರಾಹಕರಿಗೆ ಒನ್‌ಪ್ಲಸ್ ಮೊಬೈಲ್ ಕಂಪೆನಿ ಸಿಇಒ ಮತ್ತೊಂದು ಸಿಹಿಸುದ್ದಿಯನ್ನು ನಿಡಿದ್ದಾರೆ. ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿರಲಿದೆ ಎಂಬ ಮಾಹಿತಿಯನ್ನು ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ಅವರು ಇದೀಗ ಬಹಿರಂಗಪಡಿಸಿದ್ದಾರೆ.

'ಒನ್‌ಪ್ಲಸ್ 6' ಬಗ್ಗೆ ಮತ್ತೊಂದು ಸಿಹಿಸುದ್ದಿ ನೀಡಿತು ಒನ್‌ಪ್ಲಸ್ ಕಂಪೆನಿ!!

ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನಲ್ಲಿ ಆಪಲ್ 10 ವಿನ್ಯಾಸದ ಬೆಜೆಲ್ ಡಿಸ್‌ಪ್ಲೇ ಇತ್ತು ಎಂಬುದು ಎಲ್ಲರಿಗೂ ತಿಳಿದಿದ್ದರೂ ಸ್ಮಾರ್ಟ್‌ಫೋನ್ ವಿನ್ಯಾಸ ಹೇಗಿದೆ ಎಂಬುದು ಈ ವರೆಗೂ ಸ್ಪಷ್ಟವಾಗಿರಲಿಲ್ಲ. ಹಾಗಾದರೆ, ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ಅವರು ಬಹಿರಂಗಪಡಿಸಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನ ಡಿಸೈನ್ ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಾಜಿನ ಹಿಂಭಾಗವನ್ನು ಹೊಂದಿದೆ ಒನ್‌ಪ್ಲಸ್ 6!!

ಗಾಜಿನ ಹಿಂಭಾಗವನ್ನು ಹೊಂದಿದೆ ಒನ್‌ಪ್ಲಸ್ 6!!

ಒನ್‌ಪ್ಲಸ್ ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಬಂದಾಗಿನಿಂದಲೂ ಯಾವಾಗಲೂ ಸುಂದರ ವಿನ್ಯಾಸಕ್ಕೆ ಹೆಸರುವಾಸಿಯಾಗಿವೆ. ಹಾಗಾಗಿ, ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಪ್ರಿಯರು ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನ ವಿನ್ಯಾಸದ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಈ ನಿರೀಕ್ಷೆಯನ್ನು ಹೊತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಪ್ರೀಮಿಯಂ ವಿನ್ಯಾಸದಲ್ಲಿ ಗಾಜಿನ ಹಿಂಭಾಗವನ್ನು ಹೊಂದಿದೆ ಎಂದು ಪೀಟ್ ಲೌ ಅವರು ತಿಳಿಸಿದ್ದಾರೆ.

5 ಪದರದ ನ್ಯಾನೋಟೆಕ್ ಕೋಟಿಂಗ್!!

5 ಪದರದ ನ್ಯಾನೋಟೆಕ್ ಕೋಟಿಂಗ್!!

ಪ್ರೀಮಿಯಂ ವಿನ್ಯಾಸದಲ್ಲಿ ಗಾಜಿನ ಹಿಂಭಾಗವನ್ನು ಹೊಂದಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಮೂರು ಸಾಮಾನ್ಯ ನ್ಯಾನೋಟೆಕ್ ಪದರಗಳ ಬದಲಾಗಿ 5 ಪದರದ ನ್ಯಾನೋಟೆಕ್ ಕೋಟಿಂಗ್ ಹೊಂದಿದೆ ಎಂದು ತಿಳಿದುಬಂದಿದೆ. ಹೆಚ್ಚುವರಿ ಪದರಗಳು ಸಾಧನದ ಹಿಂಭಾಗವನ್ನು ಆವರಿಸಿರುವುದರಿಂದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಪ್ರೀಮಿಯಂ ನೋಟವನ್ನು ಮಾತ್ರವಲ್ಲದೇ, ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುವುದನ್ನು ಕಾಣಬಹುದಾಗಿದೆ.

70 ಗಾಜುಗಳಲ್ಲಿ ಉತ್ತಮ ಆಯ್ಕೆ!!

70 ಗಾಜುಗಳಲ್ಲಿ ಉತ್ತಮ ಆಯ್ಕೆ!!

ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಹೊಂದಿರುವ s ಪ್ರಾಮಾಣಿಕ ವಿನ್ಯಾಸ ವಿಧಾನವನ್ನು ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ಅವರು ವಿವರಿಸಿದ್ದಾರೆ. ಮೊಬೈಲ್ ಕೈಗಾರಿಕಾ ವಿನ್ಯಾಸವನ್ನು ಪ್ರಾಮಾಣಿಕವಾಗಿ ಅರ್ಥೈಸಿಕೊಂಡು, ಅತ್ಯುತ್ತಮ ಹಾರ್ಡ್‌ವೇರ್ ಅನ್ನು ಸ್ಮಾರ್ಟ್‌ಪೋನಿನಲ್ಲಿ ತರಲಾಗಿದೆ. ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ತಂದಿರುವ ಗಾಜಿನ ಹಿಂಭಾಗವನ್ನು 70 ಗಾಜಿನ ಮೂಲಮಾದರಿ ಗಾಜುಗಳನ್ನು ಪರೀಕ್ಷಿಸಿ, ಅದರಲ್ಲಿ ಉತ್ತಮ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ನಿಜವಾದ ಬೆಜೆಲ್ ಲೆಸ್ ಸ್ಮಾರ್ಟ್‌ಫೋನ್!!

ನಿಜವಾದ ಬೆಜೆಲ್ ಲೆಸ್ ಸ್ಮಾರ್ಟ್‌ಫೋನ್!!

ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಸಂಪೂರ್ಣವಾದ ಬೆಜೆಲ್ ಲೆಸ್ ವಿನ್ಯಾಸವನ್ನು ಹೊಂದಿದೆ. ಕೆಲವು ಕಂಪೆನಿಗಳು ಬೆಜೆಲ್ ಲೆಸ್ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡರೂ, ಅವು ಪೂರ್ತಿ ಬೆಜೆಲ್ ಲೆಸ್ ಸ್ಮಾರ್ಟ್‌ಫೋನುಗಳಾಗಿರುವುದಿಲ್ಲ. ಆದರೆ, ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ತನ್ನ ಡಿಸ್‌ಪ್ಲೇಯ ಅಂಚುಗಳನ್ನು ಮೊಬೈಲ್ ಪ್ಯಾನಲ್ ಕಾಣದಷ್ಟು ದೊಡ್ಡದಾಗಿ ನೀಡಿದೆ ಎಂದು ಇತ್ತೀಚಿಗೆ ಬಿಡುಗಡೆಯಾಗಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನ ಚಿತ್ರಗಳಲ್ಲಿ ನೋಡಬಹುದಾಗಿದೆ.

ನೀರು ಮತ್ತು ಧೂಳು ನಿರೋಧಕ ಸ್ಮಾರ್ಟ್‌ಫೋನ್!!

ನೀರು ಮತ್ತು ಧೂಳು ನಿರೋಧಕ ಸ್ಮಾರ್ಟ್‌ಫೋನ್!!

ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಸಂಪೂರ್ಣವಾದ ಬೆಜೆಲ್ ಲೆಸ್ ವಿನ್ಯಾಸವನ್ನು ಹೊಂದಿದ್ದರೂ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳು ನಿರೋಧಕವಾಗಿದೆ. ಇತ್ತೀಚಿಗೆ ಒನ್‌ಪ್ಲಸ್ ಕಂಪೆನಿ ಬಿಡುಗಡೆ ಮಾಡಿದ ವಿಡಿಯೋ ಟೀಸರ್ ಒಂದರಲ್ಲಿ ಸ್ಮಾರ್ಟ್‌ಫೋನ್ ನೀರು ನಿರೋಧಕ ದೇಹವನ್ನು ಹೊಂದಿರುವುದಾಗಿ ಮಾಹಿತಿ ನೀಡಿದೆ. ಫೋನಿನಲ್ಲಿ ಮೂರು ಸಾಮಾನ್ಯ ನ್ಯಾನೋಟೆಕ್ ಪದರಗಳ ಬದಲಾಗಿ 5 ಪದರದ ನ್ಯಾನೋಟೆಕ್ ಕೋಟಿಂಗ್ ಇರುವುದು ನೀರು ನಿರೋಧಕ ಶಕ್ತಿಯನ್ನು ಮತ್ತಷ್ಟು ಉತ್ತಮಗೊಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
OnePlus 6 will set a new design standard with its gorgeous glass back. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot