Subscribe to Gizbot

ಒನ್‌ಪ್ಲಸ್ ಕಂಪೆನಿಯಿಂದ 'ಒನ್‌ಪ್ಲಸ್ 6' ಡಿಸೈನ್ ಲೀಕ್!!..ಹೇಗಿದೆ ಗೊತ್ತಾ ಸ್ಮಾರ್ಟ್‌ಫೋನ್?

Written By:

ಈ ವರ್ಷದ ಮಧ್ಯಭಾಗದಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಬಿಡುಗಡೆ ಮಾಡುವುದಾಗಿ ಈಗಾಗಲೇ ಒನ್‌ಪ್ಲಸ್ ಕಂಪೆನಿ ಪ್ರಕಟಿಸಿರುವದರಿಂದ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆಯಲು ಕಂಪೆನಿ ಮುಂದಾಗಿದೆ. ಸ್ಮಾರ್ಟ್‌ಪೋನ್ ಪ್ರಿಯರಿಗೆ ಕಿಚ್ಚು ಹತ್ತಿಸುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಬಗ್ಗೆ ದಿನಕ್ಕೊಂದು ಮಾಹಿತಿಗಳನ್ನು ಒನ್‌ಪ್ಲಸ್ ಕಂಪೆನಿ ಲೀಕ್ ಮಾಡುತ್ತಿದೆ.!!

ಕೇವಲ ಎರಡು ದಿನಗಳ ಹಿಂದಷ್ಟೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಹಿಂಬಾಗದ ಚಿತ್ರವನ್ನು ಲೀಕ್ ಮಾಡಿದ್ದ ಕಂಪೆನಿ ಇದೀಗ, ಒನ್‌ಪ್ಲಸ್ 6 ಫೋನಿನ ಮುಂಬಾಗದ ಚಿತ್ರವನ್ನು ಲೀಕ್ ಮಾಡಿದೆ. ಆಪಲ್ ಕಂಪೆನಿಗೆ ಸೆಡ್ಡುಹೊಡೆಯಲು ಒನ್‌ಪ್ಲಸ್ ಕಂಪೆನಿ ಮುಂದಾಗಿದ್ದು, ಐಫೋನ್ 10 ವಿನ್ಯಾಸದ ಡಿಸ್‌ಪ್ಲೇಯನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಪೋನಿನಲ್ಲಿ ತರುತ್ತಿದೆ.!!

ಒನ್‌ಪ್ಲಸ್ ಕಂಪೆನಿಯಿಂದ 'ಒನ್‌ಪ್ಲಸ್ 6' ಡಿಸೈನ್ ಲೀಕ್!!

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅಳವಡಿಸದೆ ವಿಧಿಯಿಲ್ಲ ಎಂದು ಪೀಟ್ ಲೌ ಅವರು ಈಗಾಗಲೇ ಹೇಳಿದ್ದು, ಸ್ಮಾರ್ಟ್‌ಪೋನಿನ ಬಗ್ಗೆ ಹಲವು ಮಾಹಿತಿಗಳು ಲೀಕ್ ಆಗಿವೆ.ಹಾಗಾದರೆ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್‌ಪ್ಲಸ್ 6 ವಿನ್ಯಾಸ ಹೇಗಿದೆ?

ಒನ್‌ಪ್ಲಸ್ 6 ವಿನ್ಯಾಸ ಹೇಗಿದೆ?

ಇದೇ ಮೊದಲ ಬಾರಿಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಮೊದಲ ಪೋಟೊ ಲೀಕ್ ಆಗಿ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ.ಐಫೋನ್ 10 ವಿನ್ಯಾಸದ ಡಿಸ್‌ಪ್ಲೇ, ವುಡನ್ ಬ್ಯಾಕ್ ಪ್ಯಾನಲ್ ವಿನ್ಯಾವನ್ನು ಹೊಂದಿರುವ ಒನ್‌ಪ್ಲಸ್ 6 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ ಎಂಬುದು ಸ್ಪಷ್ಟವಾಗುತ್ತಿದೆ. 3.5mm ಆಡಿಯೋ ಜಾಕ್ ಕೂಡ ಸ್ಮಾರ್ಟ್‌ಫೋನಿನಲ್ಲಿ ಇರಲಿದೆ.!!

ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್!!

ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್!!

ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ಹೇಳಿರುವಂತೆ ಒನ್‌ಪ್ಲಸ್ 6 ಫೋನಿನಲ್ಲಿ ಕ್ವಾಲ್ಕಮ್‌ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅಳವಡಿಸದೆ ವಿಧಿಯಿಲ್ಲ.! ಪ್ರಸ್ತುತ ಅತ್ಯುತ್ತಮ ಮೊಬೈಲ್ ಚಿಪ್‌ಸೆಟ್ ಎಂದು ಹೆಸರಾಗಿರುವ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅನ್ನು ಗ್ರಾಹಕರು ಕೂಡ ಎದುರು ನೋಡುತ್ತಿದ್ದಾರೆ.!!

ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್!!

ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್!!

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಈಗಾಗಲೇ ಫೇಸ್‌ಐಡಿ ಫೀಚರ್ ಅನ್ನು ಹೊಂದಿದ್ದರೂ ಸಹ ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಉತ್ತಮದರ್ಜಿಗೇರಿಸಲು ಒನ್‌ಪ್ಲಸ್ ಮುಂದಾಗಿದೆ. ಹಾಗಾಗಿ, ಒನ್‌ಪ್ಲಸ್ 6 ಫೋನಿನಲ್ಲಿ ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ತರುವ ಸೂಚನೆಯನ್ನು ಒನ್‌ಪ್ಲಸ್ ಕಂಪೆನಿ ನೀಡಿದೆ.!!

ವಾಟರ್‌ಪ್ರೂಫ್ ಚಾಲೆಂಜ್!!

ವಾಟರ್‌ಪ್ರೂಫ್ ಚಾಲೆಂಜ್!!

ಈ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅತ್ಯದ್ಬುತ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊಂದಿರಲಿದೆ.! ಪ್ರಸ್ತುತ ಇರುವ ವಾಟರ್‌ಪ್ರೂಫ್ ತಂತ್ರಜ್ಞಾನಕ್ಕಿಂತಲೂ ಅತ್ಯುತ್ತಮ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಾಗಿ ಒನ್‌ಪ್ಲಸ್ ಕಂಪೆನಿ ಹೆಳಿದೆ.!!

ಬೆಜೆಲ್‌ಲೆಸ್ ಡಿಸ್‌ಪ್ಲೇ?

ಬೆಜೆಲ್‌ಲೆಸ್ ಡಿಸ್‌ಪ್ಲೇ?

ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಸ್ಕ್ರೀನ್‌ನಲ್ಲಿಯೇ ನೀಡುವುದರಿಂದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ 18:9 ಅನುಪಾತದ ಬೆಜೆಲ್‌ಲೆಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಆದರೆ, ಎಡ್ಜ್ ಟು ಎಡ್ಜ್ ಪೂರ್ತಿ ಪರದೆ ಅಳವಡಿಸಲು ಒನ್‌ಪ್ಲಸ್ ಕಂಪೆನಿ ಉತ್ಸುಕವಾಗಿಲ್ಲ ಎಂದು ಒನ್‌ಪ್ಲಸ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.!!

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!
ವೈರ್‌ಲೆಸ್ ಚಾರ್ಜಿಂಗ್!!

ವೈರ್‌ಲೆಸ್ ಚಾರ್ಜಿಂಗ್!!

ಒನ್‌ಪ್ಲಸ್ 5T ಇನ್ನಿತರ ಫೀಚರ್‌ಗಳ ಜೊತೆ ಹೊಸದಾಗಿ ಹಲವು ಫೀಚರ್‌ಗಳು ಸೇರಿ ಒನ್‌ಪ್ಲಸ್ 6 ಹೊರಬರುತ್ತಿದೆ.! ಅಂತಹ ಫೀಚರ್‌ಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕೂಡ ಒಂದಾಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಸೇವೆ ನೀಡುವ ತವಕದಲ್ಲಿ ಒನ್‌ಪ್ಲಸ್ ಕಂಪೆನಿ ಇದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We all know very well that the notch which is basically popularized by the tech giant Apple’s flagship smartphone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot