Subscribe to Gizbot

ಶೀಘ್ರವೇ ಮಾರುಕಟ್ಟೆಗೆ ಬರುತ್ತಿದೆ ''ಒನ್‌ಪ್ಲಸ್ 6''!!..ಮೊಬೈಲ್ ಪ್ರಪಂಚ ಆಳಲು ಇಷ್ಟು ಫೀಚರ್‌ಗಳು ಸಾಕೆ?

Written By:

ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನಪಡೆದಿರುವ ಒನ್‌ಪ್ಲಸ್ ಕಂಪೆನಿಯ ಮತ್ತೊಂದು ಸ್ಮಾರ್ಟ್‌ಫೋನ್ ಈ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ.! ಒನ್‌ಪ್ಲಸ್ 5ಟಿ ಯಶಸ್ಸಿನ ನಂತರ ''ಒನ್‌ಪ್ಲಸ್ 6'' ಸ್ಮಾರ್ಟ್‌ಫೋನ್ ಬಿಡುಗಡೆಯಾಗಲು ಕಂಪೆನಿ ಉತ್ಸುಕವಾಗಿದೆ ಎಂದು ಒನ್‌ಪ್ಲಸ್ ಕಂಪೆನಿ ಸಿಇಒ ಹೇಳೀದ್ದಾರೆ.!!

ವಿಶ್ವದ ಒನ್‌ಪ್ಲಸ್ ಬಳಕೆದಾರರಿಗೆ ಒನ್‌ಪ್ಲಸ್ ಗುಣಮಟ್ಟದ ಸೇವೆಗಳನ್ನು ನೀಡಲು ಯಾವಾಗಲು ಮುಂದಾಗಿರುತ್ತದೆ. ಹಾಗಾಗಿ, ಒನ್‌ಪ್ಲಸ್ 6 ಫೋನಿನಲ್ಲಿ ಕ್ವಾಲ್ಕಮ್‌ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅಳವಡಿಸದೆ ವಿಧಿಯಿಲ್ಲ ಎಂದು ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ಅಭಿಪ್ರಾಯಪಟ್ಟಿದ್ದಾರೆ.!!

ಶೀಘ್ರವೇ ಮಾರುಕಟ್ಟೆಗೆ ಬರುತ್ತಿದೆ ''ಒನ್‌ಪ್ಲಸ್ 6''!!.ಇಷ್ಟು ಫೀಚರ್‌ಗಳು ಸಾಕೆ?

ಈ ಬಗ್ಗೆ ಸಿನೆಟ್ ಇಂಟರ್‌ವ್ಯೂನಲ್ಲಿ ಮಾತನಾಡಿದ ಅವರು ಒನ್‌ಪ್ಲಸ್ ಫೋನಿನಲ್ಲಿ ತರುತ್ತಿರುವ ಫೀಚರ್‌ಗಳ ಬಗ್ಗೆ ಕೂಡ ಮಾಹಿತಿ ನೀಡಿದ್ದು, ಹಾಗಾದರೆ, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿರಲಿವೆ? ಗ್ರಾಹಕರು ಏನೆಲ್ಲಾ ಎದುರುನೋಡಬಹುದು ಎಂದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್!!

ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್!!

ಒನ್‌ಪ್ಲಸ್ ಕಂಪೆನಿ ಸಿಇಒ ಪೀಟ್ ಲೌ ಹೇಳಿರುವಂತೆ ಒನ್‌ಪ್ಲಸ್ 6 ಫೋನಿನಲ್ಲಿ ಕ್ವಾಲ್ಕಮ್‌ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅಳವಡಿಸದೆ ವಿಧಿಯಿಲ್ಲ.!! ಪ್ರಸ್ತುತ ಅತ್ಯುತ್ತಮ ಮೊಬೈಲ್ ಚಿಪ್‌ಸೆಟ್ ಎಂದು ಹೆಸರಾಗಿರುವ ಸ್ನ್ಯಾಪ್‌ಡ್ರಾಗನ್ 845 Soc ಚಿಪ್‌ಸೆಟ್ ಅನ್ನು ಗ್ರಾಹಕರು ಕೂಡ ಎದುರು ನೋಡುತ್ತಿದ್ದಾರೆ.!!

ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್!!

ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್!!

ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಈಗಾಗಲೇ ಫೇಸ್‌ಐಡಿ ಫೀಚರ್ ಅನ್ನು ಹೊಂದಿದ್ದರೂ ಸಹ ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಉತ್ತಮದರ್ಜಿಗೇರಿಸಲು ಒನ್‌ಪ್ಲಸ್ ಮುಂದಾಗಿದೆ. ಹಾಗಾಗಿ, ಒನ್‌ಪ್ಲಸ್ 6 ಫೋನಿನಲ್ಲಿ ಸ್ಕ್ರೀನ್‌ನಲ್ಲಿಯೇ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ತರುವ ಸೂಚನೆಯನ್ನು ಒನ್‌ಪ್ಲಸ್ ಕಂಪೆನಿ ನೀಡಿದೆ.!!

ವಾಟರ್‌ಪ್ರೂಫ್ ಚಾಲೆಂಜ್!!

ವಾಟರ್‌ಪ್ರೂಫ್ ಚಾಲೆಂಜ್!!

ಈ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಅತ್ಯದ್ಬುತ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಹೊಂದಿರಲಿದೆ.! ಪ್ರಸ್ತುತ ಇರುವ ವಾಟರ್‌ಪ್ರೂಫ್ ತಂತ್ರಜ್ಞಾನಕ್ಕಿಂತಲೂ ಅತ್ಯುತ್ತಮ ವಾಟರ್‌ಪ್ರೂಫ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಾಗಿ ಒನ್‌ಪ್ಲಸ್ ಕಂಪೆನಿ ಹೆಳಿದೆ.!!

ಬೆಜೆಲ್‌ಲೆಸ್ ಡಿಸ್‌ಪ್ಲೇ?

ಬೆಜೆಲ್‌ಲೆಸ್ ಡಿಸ್‌ಪ್ಲೇ?

ಫೀಂಗರ್‌ಪ್ರಿಂಟ್ ಆಯ್ಕೆಯನ್ನು ಸ್ಕ್ರೀನ್‌ನಲ್ಲಿಯೇ ನೀಡುವುದರಿಂದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ 18:9 ಅನುಪಾತದ ಬೆಜೆಲ್‌ಲೆಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಆದರೆ, ಎಡ್ಜ್ ಟು ಎಡ್ಜ್ ಪೂರ್ತಿ ಪರದೆ ಅಳವಡಿಸಲು ಒನ್‌ಪ್ಲಸ್ ಕಂಪೆನಿ ಉತ್ಸುಕವಾಗಿಲ್ಲ ಎಂದು ಒನ್‌ಪ್ಲಸ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.!!

ವೈರ್‌ಲೆಸ್ ಚಾರ್ಜಿಂಗ್!!

ವೈರ್‌ಲೆಸ್ ಚಾರ್ಜಿಂಗ್!!

ಒನ್‌ಪ್ಲಸ್ 5T ಇನ್ನಿತರ ಫೀಚರ್‌ಗಳ ಜೊತೆ ಹೊಸದಾಗಿ ಹಲವು ಫೀಚರ್‌ಗಳು ಸೇರಿ ಒನ್‌ಪ್ಲಸ್ 6 ಹೊರಬರುತ್ತಿದೆ.!! ಅಂತಹ ಫೀಚರ್‌ಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕೂಡ ಒಂದಾಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಸೇವೆ ನೀಡುವ ತವಕದಲ್ಲಿ ಒನ್‌ಪ್ಲಸ್ ಕಂಪೆನಿ ಇದೆ.!! ಹಾಗಾಗಿ, ಈ ಸ್ಮಾರ್ಟ್‌ಫೋನ್ ಮತ್ತೆ ಮಾರುಕಟ್ಟೆಯನ್ನು ಆವರಿಸಿಕೊಳ್ಳತ್ತದೆಯೇ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.!!

ಓದಿರಿ:ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
OnePlus is not launching the OnePlus 6 in March 2018 as it was rumoured. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot