ಭಾರತದಲ್ಲಿ ಒನ್‌ಪ್ಲಸ್‌ 6T ಅದ್ಧೂರಿ ಬಿಡುಗಡೆಗೆ ಕ್ಷಣಗಣನೆ ಶುರು..! ನೀವು ನೋಡಿ..!

|

ಭಾರತೀಯ ಸ್ಮಾರ್ಟ್‌ಫೋನ್‌ ಜಗತ್ತು ಎದುರು ನೋಡುತ್ತಿದ್ದ ದಿನ ಕಡೆಗೂ ಬಂದಿದ್ದು, ಮೊಬೈಲ್‌ ತಂತ್ರಜ್ಞಾನದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಒನ್‌ಪ್ಲಸ್‌ ಉತ್ಸುಕವಾಗಿದೆ. ಅನೇಕ ತಿಂಗಳುಗಳಿಂದ ಹಬ್ಬಿದ್ದ ಗಾಸಿಫ್‌, ಗೊಂದಲಗಳು ಮತ್ತು ಒನ್‌ಪ್ಲಸ್‌ ತಂಡದ ಅಧಿಕೃತ ಮಾಹಿತಿಗಳನ್ನು ಕಂಡಿರುವ ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಭಾರತೀಯ ಮಾರುಕಟ್ಟೆಗೆ ಇಂದು ಅದ್ಧೂರಿ ಎಂಟ್ರೀ ಕೊಡಲು ವೇದಿಕೆ ಸಿದ್ಧವಾಗಿದೆ. ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದ KDJW ಕ್ರೀಡಾಂಗಣದಲ್ಲಿ ಇಂದು ರಾತ್ರಿ 8.30ಕ್ಕೆ ಲಾಂಚ್‌ ಇವೆಂಟ್‌ ಆಯೋಜನೆಯಾಗಿದ್ದು, ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.

ಭಾರತದಲ್ಲಿ ಒನ್‌ಪ್ಲಸ್‌ 6T ಅದ್ಧೂರಿ ಬಿಡುಗಡೆಗೆ ಕ್ಷಣಗಣನೆ ಶುರು..! ನೀವು ನೋಡಿ.!

ಪ್ರಿಮೀಯಂ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಒನ್‌ಪ್ಲಸ್‌ 6T ಭಾರೀ ಕ್ರಾಂತಿ ಉಂಟು ಮಾಡುವ ಸಾಧ್ಯತೆ ಬಹಳಷ್ಟು ಕಾಣಿಸುತ್ತಿದೆ. ಅದಕ್ಕಾಗಿಯೇ ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನ ಅಧಿಕೃತ ಬಿಡುಗಡೆಗೂ ಮುಂಚೆಯೇ ಅದರ ಕುರಿತು ಎಲ್ಲವನ್ನೂ ತಿಳಿಸಲು ನಾವು ಬಯಸುತ್ತೇವೆ. ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಬಗ್ಗೆ ನಾವೂ ಇಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಹೊಸ ಡಿವೈಸ್‌ನ್ನು ಇಷ್ಟವಾಗುವಂತೆ ಮಾಡುತ್ತದೆ. ಆದ್ದರಿಂದ, ಹೊಸ ಒನ್‌ಪ್ಲಸ್‌ 6Tಯ ಎಲ್ಲಾ ಫೀಚರ್‌ಗಳೊಂದಿಗೆ ಒಂದು ಸುತ್ತು ಹಾಕಿಕೊಂಡು ಬನ್ನಿ.

ಬಿಡುಗಡೆಯನ್ನು ಎಲ್ಲಿಂದ ಬೇಕಾದರೂ ವೀಕ್ಷಿಸಿ

ನವದೆಹಲಿಯ KDJW ಕ್ರೀಡಾಂಗಣದಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆಯನ್ನು ವೀಕ್ಷಿಸುವುದು ಅದ್ಭುತ ಕ್ಷಣವಾಗಿರುತ್ತದೆ. ಆದರೆ, ಕಾರಣಾಂತರಗಳಿಂದ ನೀವು ಕಾರ್ಯಕ್ರಮವನ್ನು ಮಿಸ್‌ ಮಾಡಿಕೊಂಡರೆ, ನೀವು ಎಲ್ಲಿಂದ ಬೇಕಾದರೂ ಲೈವ್‌ ಸ್ಟ್ರೀಮ್‌ನಲ್ಲಿ 2018ರ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ ಬಿಡುಗಡೆ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ. ನೇರ ಪ್ರಸಾರ ಇಂದು ರಾತ್ರಿ 8 ಗಂಟೆಯಿಂದ ಪ್ರಾರಂಭವಾಗುತ್ತಿದ್ದು, ರಿಮೈಂಡರ್‌ ಆಯ್ಕೆಯನ್ನು ಕ್ಲಿಕ್‌ ಮಾಡುವ ಮೂಲಕ ನೇರ ಪ್ರಸಾರದ ನೋಟಿಫೀಕೆಷನ್‌ ಪಡೆಯಬಹುದು.

ನಿಮ್ಮ ಒನ್‌ಪ್ಲಸ್‌ 6Tಯನ್ನು ಇಂದೇ ಬುಕ್‌ ಮಾಡಿ

ನಿಮ್ಮ ಒನ್‌ಪ್ಲಸ್‌ 6Tಯನ್ನು ಇಂದೇ ಬುಕ್‌ ಮಾಡಿ

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಪ್ರೀ ಬುಕ್ಕಿಂಗ್‌ನಲ್ಲಿ ಮೊದಲ 36 ಗಂಟೆಗಳಲ್ಲಿ ₹400 ಕೋಟಿ ಮೌಲ್ಯದ ಬುಕ್ಕಿಂಗ್ ಆಗಿದೆ. ಗ್ರಾಹಕರು ಒನ್‌ಪ್ಲಸ್‌ 6T ಡಿವೈಸ್‌ನ್ನು ಅಮೆಜಾನ್‌ನಲ್ಲಿ ರೂ.1000 ಮೌಲ್ಯದ ಇ-ಗಿಫ್ಟ್ ಕಾರ್ಡ್‌ ಖರೀದಿಸುವ ಮೂಲಕ ಪ್ರೀ ಬುಕ್‌ ಮಾಡಬಹುದು. ಅದಲ್ಲದೇ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಪ್ರೀ-ಬುಕ್‌ ಮಾಡಿದ ಗ್ರಾಹಕರು ರೂ.1,490 ಮೌಲ್ಯದ ಟೈಪ್‌ ಸಿ ಬುಲೆಟ್‌ ಇಯರ್‌ಫೋನ್‌ಗಳನ್ನು ಪಡೆಯಲಿದ್ದಾರೆ. ಮತ್ತು ಹೆಚ್ಚುವರಿಯಾಗಿ ರೂ.500ನ್ನು ಸ್ಮಾರ್ಟ್‌ಫೋನ್‌ ಖರೀದಿ ಪ್ರಕ್ರಿಯೆ ಮುಗಿದ ತಕ್ಷಣ ಅಮೆಜಾನ್‌ ಪೇ ಬ್ಯಾಲೆನ್ಸ್‌ ಆಗಿ ಪಡೆಯುತ್ತಾರೆ.

ಆಕರ್ಷಕ ಲಾಂಚಿಂಗ್‌ ಆಫರ್‌

ಆಕರ್ಷಕ ಲಾಂಚಿಂಗ್‌ ಆಫರ್‌

ಕಂಪನಿಯ ಪ್ರತಿ ಹೊಸ ಉತ್ಪನ್ನಗಳ ಬಿಡುಗಡೆಗೂ ಒನ್‌ಪ್ಲಸ್‌ ಆಕರ್ಷಕ ಲಾಂಚ್‌ ಆಫರ್‌ಗಳನ್ನು ನೀಡುತ್ತಾ ಬಂದಿದೆ. ಆದರೆ, ಈ ಸಲ ಒನ್‌ಪ್ಲಸ್‌ ತಂಡ ಗ್ರಾಹಕ ಸ್ನೇಹಿ ಲಾಂಚಿಂಗ್‌ ಆಫರ್‌ಗಳನ್ನು ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ಗೆ ನೀಡುತ್ತಿದೆ. ಒನ್‌ಪ್ಲಸ್‌ ಜತೆ ಒಪ್ಪಂದ ಮಾಡಿಕೊಂಡಿರುವ ರಿಲಾಯನ್ಸ್‌ ಜಿಯೋ "OnePlus 6T Unlock the Speed Offer'ನ್ನು ಘೋಷಿಸಿದೆ. ಈ ಆಫರ್‌ನಡಿಯಲ್ಲಿ ಗ್ರಾಹಕರು ರೂ.5,400 ತ್ವರಿತ ರಿಯಾಯಿತಿಯನ್ನು ಪಡೆಯಲಿದ್ದಾರೆ. ಈ ಆಫರ್‌ ಪಡೆಯಲು ಒನ್‌ಪ್ಲಸ್‌ 6T ಗ್ರಾಹಕರು ಜಿಯೋಗೆ ರೂ.299ರ ಮೊದಲ ರೀಚಾರ್ಜ್‌ನ್ನು www.jio.com, ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್ಸ್‌, ಮೈಜಿಯೋ ಸ್ಟೋರ್ಸ್‌, ಜಿಯೋ ರಿಟೇಲರ್‌ ಮತ್ತು ಮೈ ಜಿಯೋ ಆಪ್‌ನಲ್ಲಿ ಮಾಡಿಕೊಳ್ಳಬೇಕಾಗಿದೆ.

ಅದಲ್ಲದೇ, ಒನ್‌ಪ್ಲಸ್‌ 6T ಗ್ರಾಹಕರು ಇದರೊಂದಿಗೆ ಪ್ರತಿದಿನ 3GB 4G ಡೇಟಾ, ಅನಿಯಮಿತ ಕರೆ, ಎಸ್‌ಎಂಎಸ್‌ ಮತ್ತು ಜಿಯೋ ಪ್ರಿಮೀಯಂ ಆಪ್‌ಗಳಿಗೆ ಪ್ರವೇಶ ಪಡೆಯಲಿದ್ದಾರೆ. ಈ ಆಫರ್‌ ಒಟ್ಟಾರೆಯಾಗಿ ಗ್ರಾಹಕರಿಗೆ 36 ರೀಚಾರ್ಜ್‌ಗಳಲ್ಲಿ 3TB 4G ಡೇಟಾವನ್ನು ನೀಡಲಿದೆ. ಇದನ್ನು ಬಿಟ್ಟು, ಒನ್‌ಪ್ಲಸ್‌ ಕಂಪನಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 6T ಭದ್ರತೆಗೆ ಕೋಟಕ್‌ ಸರ್ವೀಫೈ ಜತೆ ಒಪ್ಪಂದ ಮಾಡಿಕೊಂಡಿದ್ದು, 12 ತಿಂಗಳ ಡ್ಯಾಮೇಜ್‌ ಪ್ರೊಟೆಕ್ಷನ್‌ನ್ನು ಉಚಿತವಾಗು ನೀಡುತ್ತಿದೆ. ಇದರ ಜತೆ ಅಮೆಜಾನ್‌ನಲ್ಲಿ ಅಮೆಜಾನ್‌ ಕಿಂಡಲ್‌ ಡಿವೈಸ್‌ ಖರೀದಿಸುವ ಒನ್‌ಪ್ಲಸ್‌ 6T ಗ್ರಾಹಕರಿಗೆ ರೂ.500ವರೆಗೆ ರಿಯಾಯಿತಿ ದೊರೆಯಲಿದೆ.

ಇಲ್ಲಿಯವರೆಗೆ ಲೈವ್‌ ಸ್ಟ್ರೀಮ್‌, ಪ್ರೀ-ಬುಕ್ಕಿಂಗ್‌ ಮತ್ತು ಲಾಂಚ್‌ ಆಫರ್‌ಗಳ ಬಗ್ಗೆ ತಿಳಿದುಕೊಂಡಿರಿ. ಈಗ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಫೀಚರ್‌ಗಳನ್ನು ಮುಂದೆ ನೋಡಿ.

ಭವಿಷ್ಯದ ಟಚ್‌

ಭವಿಷ್ಯದ ಟಚ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ನಾವೀನ್ಯತೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಹೊಸ ಸ್ಮಾರ್ಟ್‌ಫೋನ್‌ ಭವಿಷ್ಯದ ಸ್ಕ್ರೀನ್‌ ಅನ್‌ಲಾಕ್‌ ಫೀಚರ್‌ ಒಳಗೊಂಡಿದ್ದು, ವೇಗದ ಡಿಸ್‌ಪ್ಲೇ ಅನ್‌ಲಾಕ್‌ ಅನುಭವವನ್ನು ನೀಡುತ್ತದೆ. ಅದಲ್ಲದೇ ಕಂಪನಿಯು ವೇಗದ ಫೀಂಗರ್‌ಪ್ರಿಂಟ್‌ ಸ್ಕ್ಯಾನರ್‌ನ್ನು OLED ಡಿಸ್‌ಪ್ಲೇ ಕೆಳಗಡೆ ಸೂಕ್ಷ್ಮವಾಗಿ ಅಳವಡಿಸಿದ್ದು, ಫೋನ್‌ ಅನ್‌ಲಾಕ್‌ ಮಾಡಲು 0.34 ಸೆಕೆಂಡ್‌ ಸಮಯವನ್ನು ಮಾತ್ರ ತೆಗೆದುಕೊಳ್ಳುತ್ತದೆ. ಬಹಳಷ್ಟು ಕಠಿಣ ಪ್ರಯತ್ನಗಳಿಂದ ತಂತ್ರಜ್ಞಾನವನ್ನು ಸ್ಮಾರ್ಟ್‌ ಮತ್ತು ಗ್ರಾಹಕರಿಗೆ ಪ್ರಾಯೋಗಿಕವಾಗಿ ನೀಡಲಾಗಿದೆ.

ಒನ್‌ಪ್ಲಸ್‌ ಹಾರ್ಡ್‌ವೇರ್‌ ಮತ್ತು ಸ್ವಯಂ-ಕಲಿಕೆಯ ಕ್ರಮಾವಳಿಗಳನ್ನು ಸಂಯೋಜಿಸಿ ನಿಮ್ಮ ಬಯೋಮೆಟ್ರಿಕ್‌ ಮಾಹಿತಿಯನ್ನು ಪೂರ್ವಭಾವಿಯಾಗಿ ಲೋಡ್ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿಮಗೆ ಝಿಪ್ಪಿ ಅನ್‌ಲಾಕ್‌ ಅನುಭವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ. ಒನ್‌ಪ್ಲಸ್‌ನಲ್ಲಿರುವ ಇಂಜಿನಿಯರ್‌ಗಳು ನಿಮ್ಮ ಫಿಂಗರ್‌ಪ್ರಿಂಟ್‌ ಮಾಹಿತಿ ಸಂಗ್ರಹಿಸಲು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845ನಲ್ಲಿನ 'Trust Zone' ಬಳಸಿದ್ದಾರೆ. ಇದರಿಂದ ನೀವು ನಿಮ್ಮ ಬೆರಳನ್ನು ಡಿಸ್‌ಪ್ಲೇ ಮೇಲೆ ಇಟ್ಟ ತಕ್ಷಣ ಬಯೋಮೆಟ್ರಿಕ್‌ ಮಾಹಿತಿಯೊಂದಿಗೆ ಫೀಂಗರ್‌ಪ್ರಿಂಟ್‌ ಹೋಲಿಸಿ ಹ್ಯಾಂಡ್‌ಸೆಟ್‌ನ್ನು ಅನ್‌ಲಾಕ್‌ ಮಾಡುತ್ತದೆ. ಈ ಸಂಪೂರ್ಣ ಪ್ರಕ್ರಿಯೆ ತ್ವರಿತ ಮತ್ತು ಅತ್ಯಂತ ಭದ್ರತೆಯನ್ನು ಹೊಂದಿದೆ.

ಸಾಟಿಯಿಲ್ಲದ ಫ್ಲಾಗ್‌ಶಿಪ್‌ ಕಾರ್ಯನಿರ್ವಹಣೆ

ಸಾಟಿಯಿಲ್ಲದ ಫ್ಲಾಗ್‌ಶಿಪ್‌ ಕಾರ್ಯನಿರ್ವಹಣೆ

ಯಾವುದೇ ಅನುಮಾನ ಬೇಡ, ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಅತ್ಯುತ್ತಮ ವರ್ಗದ ಹಾರ್ಡ್‌ವೇರ್‌ ಕಾರ್ಯನಿರ್ವಹಣೆಯನ್ನು ನೀಡುತ್ತದೆ. ಹೊಸ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 845 CPU ಬೆಂಬಲ ಹೊಂದಿದ್ದು, 6GB ಮತ್ತು 8GB RAM ಆಯ್ಕೆಗಳನ್ನು ಹೊಂದಿದೆ. ಅದಲ್ಲದೇ 3,700 mAh ಬ್ಯಾಟರಿ, ಗ್ಲೀಚ್‌ ಫ್ರೀ ಮತ್ತು ಬುದ್ಧಿವಂತ OxygenOSನ್ನು ಒನ್‌ಪ್ಲಸ್‌ 6T ಹೊಂದಿದೆ. ನೀವು ಯಾವ ಗೇಮ್‌ ಆಡುತ್ತಿದ್ದೀರಾ.? ಹಿನ್ನೆಲೆಯಲ್ಲಿ ಎಷ್ಟು ಅಪ್ಲಿಕೇಷನ್‌ಗಳು ಸಕ್ರಿಯವಾಗಿವೆ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಒನ್‌ಪ್ಲಸ್‌ 6T ಲ್ಯಾಗ್‌ ಫ್ರೀ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಕಾರ್ಯನಿರ್ವಹಣೆ ಅನುಭವವನ್ನು ನೀಡುತ್ತದೆ.

ಆಂಡ್ರಾಯ್ಡ್‌ನ ಅನುಭವ ನೀಡುತ್ತೆ ಹೊಸ OxygenOS

ಆಂಡ್ರಾಯ್ಡ್‌ನ ಅನುಭವ ನೀಡುತ್ತೆ ಹೊಸ OxygenOS

ಒನ್‌ಪ್ಲಸ್‌ ತನ್ನ ಪ್ರತಿಯೊಂದು ಡಿವೈಸ್‌ನಲ್ಲಿಯೂ ಸಾಟಿಯಿಲ್ಲದ ಸಾಫ್ಟ್‌ವೇರ್‌ ಅನುಭವವನ್ನು ನೀಡುತ್ತದೆ. ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನೊಂದಿಗೆ ಕಂಪನಿಯು ಗ್ರಾಹಕರಿಗೆ ಇತ್ತೀಚಿನ ಮತ್ತು ಅತ್ಯುತ್ತಮ ದರ್ಜೆಯ ಮೊಬೈಲ್‌ ಸಾಫ್ಟ್‌ವೇರ್‌ ಅನುಭವವನ್ನು ನೀಡಲಿದೆ. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ ಹೊರತುಪಡಿಸಿ ಆಂಡ್ರಾಯ್ಡ್‌ ಪೈ ಔಟ್‌ ಆಫ್‌ ಬಾಕ್ಸ್‌ ಒಎಸ್‌ನೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಮೊದಲ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 6T ಆಗಿದೆ. ಗೂಗಲ್‌ನ ಗೆಸ್ಚರ್‌ ನ್ಯಾವಿಗೇಷನ್‌ ಫೀಚರ್‌, ಬ್ಯಾಟರಿ ಮೋಡ್‌, ಮೆಮೊರಿ ಮ್ಯಾನೆಜ್‌ಮೆಂಟ್‌, ಅತ್ಯಾಧುನಿಕ ಡು ನಾಟ್‌ ಡಿಸ್ಟರ್ಬ್‌ ಮೋಡ್‌ನಂತಹ ಅನೇಕ ಫೀಚರ್‌ಗಳನ್ನು ಹೊಂದಿದೆ.

ಹೊಸ ಬುಲೆಟ್‌ Type-C ಇಯರ್‌ಫೋನ್‌

ಹೊಸ ಬುಲೆಟ್‌ Type-C ಇಯರ್‌ಫೋನ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಮತ್ತೊಂದು ಕ್ರಾಂತಿಕಾರಕ ಅಂಶವೆಂದರೆ ಹೊಸ ಬುಲೆಟ್‌ Type-C ಇಯರ್‌ಫೋನ್‌. ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಟೈಪ್‌-ಸಿ ಪೋರ್ಟ್‌ನ್ನು ಇಷ್ಟು ಉತ್ತಮವಾಗಿ ಬಳಸಿಕೊಳ್ಳಲು ಪ್ರಮುಖ ಕಾರಣವೆಂದರೆ ಬಳಕೆದಾರರು ಯಾವುದೇ ಅಡೆತಡೆಯಿಲ್ಲದ, ಎಫೆಕ್ಟ್‌ಗಳನ್ನು ಕಳೆದುಕೊಳ್ಳದೆ ಧ್ವನಿ ಮತ್ತು ಸಂಗೀತದ ಅನುಭವವನ್ನು ಪಡೆಯಬೇಕೆನ್ನುವುದಾಗಿದೆ. ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಆಡಿಯೋ ಅನುಭವ ಮತ್ತು ಒಟ್ಟಾರೆ ಬ್ಯಾಟರಿ ಬಾಳಿಕೆಯನ್ನು ಸುಧಾರಿಸಲು 3.5mm ಆಡಿಯೋ ಜಾಕ್‌ನ್ನು ಕೈಬಿಡಲು ನಿರ್ಧರಿಸಿದೆ. ಆಡಿಯೋ ಜಾಕ್‌ನ್ನು ಕೈ ಬಿಟ್ಟಿರುವುದರಿಂದ ಆ ಸ್ಥಳವನ್ನು ದೊಡ್ದ ಬ್ಯಾಟರಿಯು ಆಕ್ರಮಿಸಿಕೊಂಡಿದ್ದು, ಉತ್ತಮ ಬ್ಯಾಟರಿ ಬಾಳಿಕೆಯನ್ನು ಬಳಕೆದಾರನಿಗೆ ನೀಡುತ್ತದೆ.

ರಿಲಾಯನ್ಸ್‌ ಡಿಜಿಟಲ್‌ನೊಂದಿಗೆ ಒಪ್ಪಂದ

ರಿಲಾಯನ್ಸ್‌ ಡಿಜಿಟಲ್‌ನೊಂದಿಗೆ ಒಪ್ಪಂದ

ಒನ್‌ಪ್ಲಸ್‌ ತನ್ನ ಅಭಿಮಾನಿಗಳಿಗೆ ದೊಡ್ಡ ಅಚ್ಚರಿಯನ್ನು ನೀಡಿದ್ದು, ಭಾರತದ ನಂ.1 ಮತ್ತಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉದ್ಯಮವಾಗಿರುವ ರಿಲಾಯನ್ಸ್‌ ಡಿಜಿಟಲ್‌ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಇಬ್ಬರು ಮಾರುಕಟ್ಟೆಯ ನಾಯಕರು ಸೇರಿ ಭಾರತದಾದ್ಯಂತ ಒನ್‌ಪ್ಲಸ್‌ ಡಿವೈಸ್‌ಗಳನ್ನು ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ. . ಈ ಮೂಲಕ ಟೆಕ್‌ ಪ್ರಿಯ ಭಾರತದ ಗ್ರಾಹಕರು ಮತ್ತು ಒನ್‌ಪ್ಲಸ್‌ ಅಭಿಮಾನಿಗಳಿಗೆ ಒನ್‌ಪ್ಲಸ್‌ ಡಿವೈಸ್‌ಗಳನ್ನು ವ್ಯಾಪಕವಾಗಿ ತಲುಪುವಂತೆ ಯೋಜನೆ ರೂಪಿಸಿದ್ದಾರೆ.

ಆಸಕ್ತ ಖರೀದಿದಾರರು ಮತ್ತು ಒನ್‌ಪ್ಲಸ್‌ ಅಭಿಮಾನಿಗಳು ಈಗ ಆಫ್‌ಲೈನ್‌ ಆಯ್ಕೆಗಳನ್ನು ಹೊಂದಿದ್ದು, ವಿವಿಧ ಪ್ರದೇಶಗಳಲ್ಲಿ ತಲೆಯೆತ್ತಿರುವ ಸ್ಟೋರ್‌ಗಳಲ್ಲಿ ಒನ್‌ಪ್ಲಸ್‌ ಉತ್ಪನ್ನಗಳನ್ನು ಅನುಭವಿಸಬಹುದಾಗಿದೆ. ಇದಲ್ಲದೆ, ಒನ್‌ಪ್ಲಸ್‌ ತನ್ನ ಗ್ರಾಹಕರಿಗೆ ಆಫ್‌ಲೈನ್‌ ಮತ್ತು ಆನ್‌ಲೈನ್‌ ದರಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲವೆಂದು ಹೇಳಿದೆ. ಇದರ ಜತೆ ರಿಲಾಯನ್ಸ್‌ ಡಿಜಿಟಲ್‌ ಹಮ್ಮಿಕೊಳ್ಳುವ ಅಭಿಯಾನಗಳಿಂದಲೂ ಕೂಡ ಗ್ರಾಹಕರು ಸೌಲಭ್ಯಗಳನ್ನು ಪಡೆಯುತ್ತಾರೆ.

Most Read Articles
Best Mobiles in India

English summary
OnePlus 6T: Everything you need to know before the official Indian launch event. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more