ಒನ್‌ಪ್ಲಸ್‌ 6T ಲಾಂಚಿಂಗ್ ಡೇಟ್ ಮತ್ತು ಪ್ರಮುಖ ವಿಶೇಷತೆಗಳು ರಿಲೀಸ್!!

|

ಅಮೆಜಾನ್‌ನ ವರ್ಷದ ಬಹುನಿರೀಕ್ಷಿತ ಸೇಲ್‌ನ ಮೊದಲ 36 ಗಂಟೆಗಳಲ್ಲಿ ಬಿಡುಗಡೆಗೂ ಮುನ್ನವೇ ₹400 ಕೋಟಿ ಮೌಲ್ಯದ ಬುಕ್ಕಿಂಗ್ ಆಗಿರುವ ಒನ್‌ಪ್ಲಸ್‌ 6T ಸ್ಮಾರ್ಟ್‌ಪೋನ್ ಖರೀದಿದಾರರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಅಕ್ಟೋಬರ್‌ 30ಕ್ಕೆ ಲಾಂಚ್‌ ಆಗಲಿದೆ ಎನ್ನಲಾಗಿದ್ದ, ಬಹುನಿರೀಕ್ಷಿತ ಒನ್‌ಪ್ಲಸ್ 6T ಸ್ಮಾರ್ಟ್‌ಪೋನ್ ಅನ್ನು ಒಂದು ದಿನ ಮೊದಲೇ, ಅಕ್ಟೋಬರ್ 29 ರಂದು ಬಿಡುಗಡೆ ಮಾಡುವುದಾಗಿ ಒನ್‌ಪ್ಲಸ್ ಕಂಪೆನಿ ತಿಳಿಸಿದೆ.

ಕೇವಲ 5 ತಿಂಗಳ ಹಿಂದೆಯಷ್ಟೆ ಬಿಡುಗಡೆಯಾಗಿದ್ದ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಈ ವರ್ಷ ಭಾರತದಲ್ಲೇ ಅತಿ ಹೆಚ್ಚು ಸೇಲ್ ಆದ ಪ್ರೀಮಿಯಮ್ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಅಮೆಜಾನ್‌ನ ಮಾರಾಟದ ಅವಧಿಯಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬುಕ್ಕಿಂಗ್ ಈ ವರ್ಷ ಅಮೆಜಾನ್‌ನಲ್ಲಿ ಐದು ಪಟ್ಟು ಹೆಚ್ಚಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬಹಳಷ್ಟು ಹೈಪ್ ಸೃಷ್ಟಿಸಿಕೊಂಡಿರುವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನಿನ ಹಲವು ವಿಶೇಷತೆಗಳು ಸಹ ಬಹಿರಂಗವಾಗಿವೆ.

ಒನ್‌ಪ್ಲಸ್‌ 6T ಲಾಂಚಿಂಗ್ ಡೇಟ್ ಮತ್ತು ಪ್ರಮುಖ ವಿಶೇಷತೆಗಳು ರಿಲೀಸ್!!

ಇದೀಗ ಒನ್‌ಪ್ಲಸ್‌ ತನ್ನ ಮತ್ತೊಂದು ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 6T ಬಿಡುಗಡೆಗೊಳಿಸಲು ವೇದಿಕೆ ಸಿದ್ಧಗೊಳಿಸಿದ್ದು, ಭಾರತೀಯ ಮತ್ತು ಜಾಗತಿಕ ಮೊಬೈಲ್‌ ಗ್ರಾಹಕರಿಗೆ ಅತ್ಯಾಧುನಿಕ ಫೀಚರ್‌ಗಳನ್ನು ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್‌ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಖಂಡಿತವಾಗಿಯೂ ಅತ್ಯಂತ ರೋಮಾಂಚಕಾರಿ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ಬರಲಿರುವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನಿನ ಪ್ರಮುಖ ವಿಶೇಷತೆಗಳು ಇಲ್ಲಿವೆ.

ಸ್ಕ್ರೀನ್ ಅನ್‌ಲಾಕ್

ಸ್ಕ್ರೀನ್ ಅನ್‌ಲಾಕ್

ನಮಗೆಲ್ಲಾ ಗೊತ್ತಿರುವಂತೆ ಒನ್‌ಪ್ಲಸ್‌ ಭವಿಷ್ಯದ ಸ್ಕ್ರೀನ್‌ ಅನ್‌ಲಾಕ್‌ ಫೀಚರ್‌ನೊಂದಿಗೆ ಬರುತ್ತಿದೆ. ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಇರುವ ಕುರಿತು ಒನ್‌ಪ್ಲಸ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪೇಟೆ ಲಾ ಖಚಿತ ಪಡಿಸಿದ್ದು, ಇನ್‌ಡಿಸ್‌ಪ್ಲೇ ಅನ್‌ಲಾಕ್‌ ವೇಗದ ಅನುಭವ ನೀಡಲಿದೆ ಎನ್ನಲಾಗಿದೆ. ಬಹುನಿರೀಕ್ಷಿತ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನಲ್ಲಿನ ಸ್ಕ್ರೀನ್ ಅನ್‌ಲಾಕ್‌ ಫೀಚರ್ ಕುರಿತು ಒನ್‌ಪ್ಲಸ್‌ ಕಂಪನಿ ಸಣ್ಣ ವಿಡಿಯೋ ಬಿಡುಗಡೆ ಮಾಡಿ ಖಚಿತಪಡಿಸಿದೆ. ಒನ್‌ಪ್ಲಸ್‌ ಹಾರ್ಡ್‌ವೇರ್‌ ಮತ್ತು ಸ್ವಯಂ-ಕಲಿಕೆಯ ಕ್ರಮಾವಳಿಗಳನ್ನು ಸಂಯೋಜಿಸಿ ನಿಮ್ಮ ಬಯೋಮೆಟ್ರಿಕ್‌ ಮಾಹಿತಿಯನ್ನು ಪೂರ್ವಭಾವಿಯಾಗಿ ಲೋಡ್ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿಮಗೆ ಝಿಪ್ಪಿ ಅನ್‌ಲಾಕ್‌ ಅನುಭವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ. ಒನ್‌ಪ್ಲಸ್‌ನಲ್ಲಿರುವ ಇಂಜಿನಿಯರ್‌ಗಳು ನಿಮ್ಮ ಫಿಂಗರ್‌ಪ್ರಿಂಟ್‌ ಮಾಹಿತಿ ಸಂಗ್ರಹಿಸಲು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845ನಲ್ಲಿನ 'Trust Zone' ಬಳಸಿದ್ದಾರೆ. ಇದು ಗೌಪ್ಯತೆಗಾಗಿರುವ ಪ್ರತ್ಯೇಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.

ವೇಗದ ಡ್ಯಾಶ್‌ ಚಾರ್ಜಿಂಗ್

ವೇಗದ ಡ್ಯಾಶ್‌ ಚಾರ್ಜಿಂಗ್

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಕಂಪನಿಯ ಟ್ರಾಕ್‌ ರೆಕಾರ್ಡ್‌ನ್ನು ಗಮನಿಸಿದರೆ, ಒನ್‌ಪ್ಲಸ್‌ ಡಿವೈಸ್‌ಗಳು ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಮುಂದಿನ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ನಿರೀಕ್ಷಿಸುವುದಕ್ಕಾಗಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚು ಸಮಯ ಬಳಸಲು ಇದು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌

ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಇತ್ತೀಚಿನ ಆಂಡ್ರಾಯ್ಡ್‌ ಪೈ ಒಎಸ್‌ನೊಂದಿಗೆ ಬರುತ್ತಿದೆ. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ ಹೊರತುಪಡಿಸಿ ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌ ಒಎಸ್‌ನೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿದೆ. Google I/O ದಲ್ಲಿ ಪರಿಚಯಿಸಲ್ಪಟ್ಟ ಗೂಗಲ್‌ನ ಗೆಸ್ಚರ್‌ ನ್ಯಾವಿಗೇಷನ್‌ ಫೀಚರ್‌ನ್ನುಆಂಡ್ರಾಯ್ಡ್‌ ಪೈ ಬೆಂಬಲಿತ Oxyzen OS ಒನ್‌ಪ್ಲಸ್‌ನಲ್ಲಿ ತರುತ್ತದೆ. ಇದು ಹೊಸ ಬ್ಯಾಟರಿ ಫೀಚರ್ ಹೊಂದಿದ್ದು, ಆಪ್‌ ಬಳಕೆಯನ್ನು ವಿಶ್ಲೇಷಿಸಿ, ಬಳಕೆದಾರನ ಬಳಕೆಗೆ ತಕ್ಕಂತೆ ಬ್ಯಾಟರಿ ಸಾಮರ್ಥ್ಯವನ್ನು ವಿನಿಯೋಗಿಸುತ್ತದೆ. ಆಂಡ್ರಾಯ್ಡ್‌ ಪೈ ಆಧಾರಿತ OxygenOS 9.0 ಒಎಸ್‌ನ್ನು ಹಿಂದಿನ ಆವೃತ್ತಿ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ಗೂ ರೋಲ್‌ ಔಟ್‌ ಮಾಡುತ್ತಿದೆ. ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿರುವಂತೆ ಹೊಸ ಅಪ್‌ಡೇಟ್‌ನ್ನು ಸದ್ಯಕ್ಕೆ ಸೀಮಿತ ಸಂಖ್ಯೆಯ ಬಳಕೆದಾರರು ಸ್ವೀಕರಿಸುತ್ತಾರೆ. ಯಾವುದೇ ಬಗ್‌ಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ನಂತರದ ದಿನಗಳಲ್ಲಿ ಎಲ್ಲರಿಗೂ ಹೊಸ ಅಪ್‌ಡೇಟ್‌ ನೀಡುತ್ತೇವೆ ಎಂದು ಒನ್‌ಪ್ಲಸ್‌ ಹೇಳಿದೆ.

ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು

ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು

ಒನ್‌ಪ್ಲಸ್‌ 6T ಬಿಡುಗಡೆ ಮಾಡುವುದರ ಜತೆ ಕಂಪನಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಏನನ್ನಾದರೂ ನೀಡಬೇಕೆಂಬ ಉದ್ದೇಶ ಹೊಂದಿದೆ. ಅದರಂತೆ, ಲಾಂಚ್‌ ಆದಾಗಿನಿಂದ ಸ್ಮಾರ್ಟ್‌ಫೋನ್‌ ಆಸಕ್ತರ ಬಾಯಲ್ಲಿ ಹೆಚ್ಚು ಹರಿದಾಡುತ್ತಿರುವಹೊಸ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಟೈಪ್-ಸಿ ಜ್ಯಾಕ್‌ ಜತೆ ಬರುವ ಹೊಸ ಬುಲೆಟ್‌ ಇಯರ್‌ಫೋನ್‌ಗಳನ್ನು ನೀಡುತ್ತಿದೆ. ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಟೈಪ್‌-ಸಿ ಪೋರ್ಟ್‌ನ್ನು ಇಷ್ಟು ಉತ್ತಮವಾಗಿ ಬಳಸಿಕೊಳ್ಳಲು ಪ್ರಮುಖ ಕಾರಣವೆಂದರೆ ಬಳಕೆದಾರರು ಯಾವುದೇ ಅಡೆತಡೆಯಿಲ್ಲದ, ಎಫೆಕ್ಟ್‌ಗಳನ್ನು ಕಳೆದುಕೊಳ್ಳದೆ ಧ್ವನಿ ಮತ್ತು ಸಂಗೀತದ ಅನುಭವವನ್ನು ಪಡೆಯಬೇಕೆನ್ನುವುದಾಗಿದೆ. ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಆಡಿಯೋ ಅನುಭವ ಮತ್ತು ಒಟ್ಟಾರೆ ಬ್ಯಾಟರಿ ಬಾಳಿಕೆಯನ್ನು ಸುಧಾರಿಸಲು 3.5mm ಆಡಿಯೋ ಜಾಕ್‌ನ್ನು ಕೈಬಿಡಲು ನಿರ್ಧರಿಸಿದೆ. ಆಡಿಯೋ ಜಾಕ್‌ನ್ನು ಕೈ ಬಿಟ್ಟಿರುವುದರಿಂದ ಆ ಸ್ಥಳವನ್ನು ದೊಡ್ದ ಬ್ಯಾಟರಿಯು ಆಕ್ರಮಿಸಿಕೊಂಡಿದ್ದು, ಉತ್ತಮ ಬ್ಯಾಟರಿ ಬಾಳಿಕೆಯನ್ನು ಬಳಕೆದಾರನಿಗೆ ನೀಡುತ್ತದೆ.

ಅದ್ಭುತ AMOLED ಡಿಸ್‌ಪ್ಲೇ

ಅದ್ಭುತ AMOLED ಡಿಸ್‌ಪ್ಲೇ

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ತನ್ನ ಬೆಲೆ ವರ್ಗದ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಆಕರ್ಷಕವಾದ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ. ದೊಡ್ದ್ ಡಿಸ್‌ಪ್ಲೇ ಹೊಂದಿದ್ದು, ಬೆಜೆಲ್‌ ಲೆಸ್‌ AMOLED ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನೋಚ್‌ನೊಂದಿಗೆ ಅಳವಡಿಸಲಾಗಿದೆ. ಫ್ರಾಂಟ್‌ ಕ್ಯಾಮೆರಾವನ್ನು ಸಣ್ಣ ನೀರಿನ ಬಿಂದುವಿನಂತ ಜಾಗದಲ್ಲಿ ಅಳವಡಿಸಿದ್ದು, ಆಕರ್ಷಕವಾಗಿದೆ. ಎಡ್ಜ್‌-ಟು-ಎಡ್ಜ್‌ ಸ್ಕ್ರೀನ್ ವೀಕ್ಷಣೆ ಅನುಭವವನ್ನು ನೀಡುವ ಒನ್‌ಪ್ಲಸ್‌ 6T ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಹೇಳಿ ಮಾಡಿಸಿದಂತಿದೆ. ಗುಣಮಟ್ಟದ ಡಿಸ್‌ಪ್ಲೇಗೆ ಹೆಸರುವಾಸಿಯಾಗಿರುವ ಒನ್‌ಪ್ಲಸ್‌ ಕಂಪೆನಿಯಲ್ಲಿ ಇದಕ್ಕಿಂತಲೂ ಹೆಚ್ಚು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ.

Best Mobiles in India

English summary
OnePlus has decided to reschedule the October 30 event scheduled in New York for the global unveiling of the OnePlus 6T smartphone. Now, the OnePlus 6T has a launch date of October 29. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X