ಒನ್‌ಪ್ಲಸ್‌ 6T ಲಾಂಚ್‌ ಆಹ್ವಾನಗಳು ಕ್ಷಣದಲ್ಲಿಯೇ ಸೋಲ್ಡ್‌ ಔಟ್‌..! ಸ್ಮಾರ್ಟ್‌ಫೋನ್‌ ಲೋಕದಲ್ಲಿ ಹೊಸ ಕ್ರಾಂತಿ..!

|

ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಉತ್ಪಾದನಾ ಕಂಪನಿಯಾಗಿರುವ ಒನ್‌ಪ್ಲಸ್‌ ತನ್ನ ಬಹು ನಿರೀಕ್ಷಿತ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 6T ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್‌ 30ರಂದು ಭಾರತದಲ್ಲಿ ಲಾಂಚ್‌ ಆಗಲಿದ್ದು, ಭಾರತೀಯ ಮಾರುಕಟ್ಟೆ ಮತ್ತು ಜಾಗತಿಕ ಸ್ಮಾರ್ಟ್‌ಫೋನ್‌ ಗ್ರಾಹಕರಿಗೆ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದ ಸ್ಮಾರ್ಟ್‌ಫೋನ್‌ನ್ನು ನೀಡಲು ಒನ್‌ಪ್ಲಸ್‌ ಉತ್ಸುಕವಾಗಿದೆ.

ಹೊಸ ಫ್ಲಾಗ್‌ಶಿಪ್‌ ಬಿಡುಗಡೆ ಸಮಯ ಹತ್ತಿರವಾಗುತ್ತಿರುವಂತೆಯೇ ಒನ್‌ಪ್ಲಸ್‌ 6T ಸುತ್ತಲೂ ಭಾರೀ ಹೈಪ್‌ ಸೃಷ್ಟಿಯಾಗಿದ್ದು, 2018ರ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ ಆಗಿ ಬದಲಾಗಿದೆ. ಒನ್‌ಪ್ಲಸ್‌ ಇಷ್ಟೊಂದು ವಿಶಿಷ್ಟವಾಗಿ ಪ್ರಚಾರ ಮಾಡಿರುವ ಮೊದಲ ಡಿವೈಸ್‌ ಒನ್‌ಪ್ಲಸ್‌ 6T ಆಗಿದ್ದು, ಜನರನ್ನು ಕುತೂಹಲದಿಂದ ಕಾಯುವಂತೆ ಮಾಡಿದ್ದು, ಲಾಂಚ್‌ ಇವೆಂಟ್‌ನ ಆಹ್ವಾನಗಳು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಸೋಲ್ಡ್‌ ಔಟ್‌ ಆಗಿವೆ.

ಆಹ್ವಾನಗಳು ಕ್ಷಣದಲ್ಲಿಯೇ ಮಾರಾಟ

ಆಹ್ವಾನಗಳು ಕ್ಷಣದಲ್ಲಿಯೇ ಮಾರಾಟ

ನಿಮ್ಮಲ್ಲಿ ಯಾರಾದರೂ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಡಿವೈಸ್‌ನ ಅನುಭವ ಪಡೆಯಲು ಆಸಕ್ತಿ ಹೊಂದಿದ್ದರೆ, ಅದಕ್ಕೂ ಸಹ ಒನ್‌ಪ್ಲಸ್‌ ಅವಕಾಶ ಮಾಡಿಕೊಟ್ಟಿದೆ. ಅದರಂತೆ, ಇಂದು ಬೆಳಿಗ್ಗೆ 10 ಗಂಟೆಯಿಂದ ಬಿಡುಗಡೆ ಕಾರ್ಯಕ್ರಮದ ಆಹ್ವಾನಗಳನ್ನು ರೂ.999ಕ್ಕೆ oneplus.in ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಆದರೆ, ಕೆಲವೇ ಕ್ಷಣಗಳಲ್ಲಿ ಆಹ್ವಾನಗಳೆಲ್ಲ ಮಾರಾಟವಾದವು. ಆದ್ದರಿಂದ ಬೇಸತ್ತ ಕೆಲವು ಬಳಕೆದಾರರು ಆಹ್ವಾನವನ್ನು ಲೈವ್‌ನಲ್ಲಿ ಕಾರ್ಟ್‌ಗೆ ಸೇರಿಸಲಾಗಲಿಲ್ಲ ಎಂದಿದ್ದಾರೆ.

ಇದೇ ಅಕ್ಟೋಬರ್ 30, ರಾತ್ರಿ 8:30ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿರುವ KDJW ಕ್ರೀಡಾಂಗಣದಲ್ಲಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಬಿಡುಗಡೆಯನ್ನು ಆಯೋಜಿಸಲಾಗಿದೆ. ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗುವವರು ವಿಶ್ವದಲ್ಲಿಯೇ ಮೊದಲಿಗರಾಗಿ ಒನ್‌ಪ್ಲಸ್‌ 6Tಯ ವಿನ್ಯಾಸ ಮತ್ತು ಸಾಮರ್ಥ್ಯವನ್ನು Experience Zoneನಲ್ಲಿ ಅನುಭವಿಸುತ್ತಾರೆ. ಅದಲ್ಲದೇ ಬಿಡುಗಡೆ ಸಮಾರಂಭಕ್ಕೆ ಹಾಜರಾಗುವ ಎಲ್ಲಾ ಅಭಿಮಾನಿಗಳು ಒನ್‌ಪ್ಲಸ್‌ ಬುಲೆಟ್‌ ವೈರ್‌ಲೆಸ್‌, ಒನ್‌ಪ್ಲಸ್‌ ಪಿನ್‌ಸೆಟ್‌, ಒನ್‌ಪ್ಲಸ್‌ ಸ್ಕೇಚ್‌ಬುಕ್‌ ಮತ್ತು ಒನ್‌ಪ್ಲಸ್‌ ಮರ್ಚಂಡೈಸ್‌ 999 ರೂ. ಮೌಲ್ಯದ ವೋಚರ್‌ಗಳಂತಹ ಸೂಪರ್ ಆಡ್-ಆನ್‌ಗಳಂತಹ ಉಡುಗೊರೆಗಳನ್ನು ಪಡೆಯಲಿದ್ದಾರೆ.

ಆಂಡ್ರಾಯ್ಡ್‌ ಪೈ ಹೊಂದಿದ ಮೊದಲ ಸ್ಮಾರ್ಟ್‌ಫೋನ್‌

ಆಂಡ್ರಾಯ್ಡ್‌ ಪೈ ಹೊಂದಿದ ಮೊದಲ ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಇತ್ತೀಚಿನ ಆಂಡ್ರಾಯ್ಡ್‌ ಪೈ ಒಎಸ್‌ನೊಂದಿಗೆ ಬರುತ್ತಿದೆ. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ ಹೊರತುಪಡಿಸಿ ಆಂಡ್ರಾಯ್ಡ್‌ ಪೈ ಔಟ್‌ ಆಫ್‌ ಬಾಕ್ಸ್‌ ಒಎಸ್‌ನೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿದೆ. Google I/O ದಲ್ಲಿ ಪರಿಚಯಿಸಲ್ಪಟ್ಟ ಗೂಗಲ್‌ನ ಗೆಸ್ಚರ್‌ ನ್ಯಾವಿಗೇಷನ್‌ ಫೀಚರ್‌ನ್ನುಆಂಡ್ರಾಯ್ಡ್‌ ಪೈ ಬೆಂಬಲಿತ Oxyzen OS ಒನ್‌ಪ್ಲಸ್‌ನಲ್ಲಿ ತರುತ್ತದೆ. ಇದು ಹೊಸ ಬ್ಯಾಟರಿ ಫೀಚರ್ ಹೊಂದಿದ್ದು, ಆಪ್‌ ಬಳಕೆಯನ್ನು ವಿಶ್ಲೇಷಿಸಿ, ಬಳಕೆದಾರನ ಬಳಕೆಗೆ ತಕ್ಕಂತೆ ಬ್ಯಾಟರಿ ಸಾಮರ್ಥ್ಯವನ್ನು ವಿನಿಯೋಗಿಸುತ್ತದೆ.

ಶಕ್ತಿಯುತ Oxygen OS

ಶಕ್ತಿಯುತ Oxygen OS

Oxygen OSನ ಹೊಸ ಫೋರಮ್‌ ಪೋಸ್ಟ್‌ನಲ್ಲಿ ಹೇಳಿರುವಂತೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ಗೆ ಯಾವ ಅಪ್‌ಡೇಟ್‌ಗಳನ್ನು ನೀಡಬಹುದೆಂಬ ಉತ್ತಮ ಚಿಂತನೆಯಲ್ಲಿದ್ದೇವೆ ಎಂದಿದೆ. ಈ ಡಿವೈಸ್‌ ಸಂಪೂರ್ಣ ಹೊಸ UI ಹೊಂದಿದ್ದು, ಹೆಚ್ಚು ವಿಶಿಷ್ಟವಾದ ಮತ್ತು ಅರ್ಥಗರ್ಭಿತ Oxygen OS ಆವೃತ್ತಿಯನ್ನು ಹೊಂದಲಿದೆ. ಒನ್‌ಪ್ಲಸ್‌ 6T ಜತೆಗೆ ಕಂಪನಿ ಒನ್‌ಪ್ಲಸ್‌ ವಿನ್ಯಾಸ ಭಾಷೆಯನ್ನು UI ನಲ್ಲಿ ವ್ಯಕ್ತಪಡಿಸಲು ಬಯಸುತ್ತಿದೆ. ಹೊಸ Oxygen OS ಮುಂದುವರಿದ DND ಮತ್ತು ಹೊಸ ನ್ಯಾವಿಗೇಷನ್ ಗೆಸ್ಚರ್‌ಗಳನ್ನು ಒಳಗೊಂಡಿರುತ್ತದೆ ಎಂದು ಒನ್‌ಪ್ಲಸ್‌ ತಿಳಿಸಿದೆ. ಅದಲ್ಲದೇ, ನೀವು ಇನ್ನೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯವಾಗುವಂತೆ ಕ್ಯಾಮೆರಾ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಕಂಪನಿ ಶ್ರಮಿಸಿದೆ.

ಜತೆಗೆ, ಒನ್‌ಪ್ಲಸ್‌ನ ಇಂಜಿನಿಯರ್‌ಗಳು Oxygen OSನ ವಿದ್ಯುತ್‌ ಬಳಕೆಗೆ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845 ಪ್ರೊಸೆಸರ್‌ನ್ನು ಬಳಸಿ ಹಲವು ಅನುಕೂಲತೆಗಳನ್ನು ಸೃಷ್ಟಿಸಿದ್ದಾರೆ. ಅದಲ್ಲದೇ ಕಂಪನಿಯು ಬಳಕೆದಾರರಿಗೆ ಮೇಲ್ವಿಚಾರಣೆ ಮಾಡಲು ಸಹಾಯ ಮಾಡುವ ಉಪಕ್ರಮಗಳನ್ನು ಹೊಂದಿದೆ. ಅಗತ್ಯವಿದ್ದರೆ, ಬಳಕೆದಾರರ ಸ್ಮಾರ್ಟ್‌ಫೋನ್‌ ಬಳಕೆಯನ್ನು ಕಡಿಮೆಗೊಳಿಸಲು ಗೂಗಲ್‌ನ Digital Well-being ಫೀಚರ್‌ ಬಳಸಲಾಗುತ್ತದೆ ಎಂದು ಹೇಳಿದೆ.

ಒನ್‌ಪ್ಲಸ್‌ 6T ಜೊತೆಯಲ್ಲಿ ಭವಿಷ್ಯ

ಒನ್‌ಪ್ಲಸ್‌ 6T ಜೊತೆಯಲ್ಲಿ ಭವಿಷ್ಯ

ಬಹು ನಿರೀಕ್ಷಿತ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ ಭವಿಷ್ಯದ ಸ್ಕ್ರೀನ್‌ ಅನ್‌ಲಾಕ್‌ ಫೀಚರ್‌ನೊಂದಿಗೆ ಬರುತ್ತಿದೆ. ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಇರುವ ಕುರಿತು ಒನ್‌ಪ್ಲಸ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪೇಟೆ ಲಾ ಖಚಿತ ಪಡಿಸಿದ್ದು, ಇನ್‌ಡಿಸ್‌ಪ್ಲೇ ಅನ್‌ಲಾಕ್‌ ವೇಗದ ಅನುಭವ ನೀಡಲಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿನ ಸ್ಕ್ರೀನ್ ಅನ್‌ಲಾಕ್‌ ಫೀಚರ್ ಕುರಿತು ಒನ್‌ಪ್ಲಸ್‌ ಕಂಪನಿ ಸಣ್ಣ ವಿಡಿಯೋ ಬಿಡುಗಡೆ ಮಾಡಿ ಖಚಿತಪಡಿಸಿದೆ.

ಒನ್‌ಪ್ಲಸ್‌ ಹಾರ್ಡ್‌ವೇರ್‌ ಮತ್ತು ಸ್ವಯಂ-ಕಲಿಕೆಯ ಕ್ರಮಾವಳಿಗಳನ್ನು ಸಂಯೋಜಿಸಿ ನಿಮ್ಮ ಬಯೋಮೆಟ್ರಿಕ್‌ ಮಾಹಿತಿಯನ್ನು ಪೂರ್ವಭಾವಿಯಾಗಿ ಲೋಡ್ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿಮಗೆ ಝಿಪ್ಪಿ ಅನ್‌ಲಾಕ್‌ ಅನುಭವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ. ಒನ್‌ಪ್ಲಸ್‌ನಲ್ಲಿರುವ ಇಂಜಿನಿಯರ್‌ಗಳು ನಿಮ್ಮ ಫಿಂಗರ್‌ಪ್ರಿಂಟ್‌ ಮಾಹಿತಿ ಸಂಗ್ರಹಿಸಲು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845ನಲ್ಲಿನ 'Trust Zone' ಬಳಸಿದ್ದು, ಇದು ಗೌಪ್ಯತೆಯ ಪ್ರತ್ಯೇಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.

ಅದ್ಭುತ ಡ್ಯಾಶ್ ಚಾರ್ಜ್‌

ಅದ್ಭುತ ಡ್ಯಾಶ್ ಚಾರ್ಜ್‌

ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಕಂಪನಿಯ ಟ್ರಾಕ್‌ ರೆಕಾರ್ಡ್‌ನ್ನು ಗಮನಿಸಿದರೆ, ಒನ್‌ಪ್ಲಸ್‌ ಡಿವೈಸ್‌ಗಳು ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಮುಂದಿನ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ನಿರೀಕ್ಷಿಸುವುದಕ್ಕಾಗಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚು ಸಮಯ ಬಳಸಲು ಇದು ಭರವಸೆ ನೀಡುತ್ತದೆ.

ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

Most Read Articles
Best Mobiles in India

English summary
OnePlus 6T launch event vouchers sold out within seconds of going live. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more