Home
ಮೊಬೈಲ್

ಒನ್‌ಪ್ಲಸ್ 6Tನಲ್ಲಿ ತ್ರಿಪಲ್ ಕ್ಯಾಮೆರಾ, ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್: ಯಾಕೆ ಬೇಕು ಬೇರೆ ಫೋನ್‌..?

ಭಾರತೀಯ ಪ್ರೀಮಿಯಮ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ನಂಬರ್ ಒನ್ ಪಟ್ಟವನ್ನು ಅಲಂಕರಿಸುರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್, ಮತ್ತೊಂದು ಹೊಸದೊಂದು ಆಡ್ವಾನ್ಸ್ ಫೋನ್ ಅನ್ನು ಲಾಂಚ್ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಈಗಾಗಲೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನು ಆರಂಭಿಸಿರುವ ಒನ್‌ಪ್ಲಸ್, ಇದನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಮೊಸ್ಟ್‌ ಆಡ್ವಾನ್ಸ್ ಫಾಗ್‌ಶಿಪ್ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಲು ಮುಂದಾಗಿದೆ.

ಒನ್‌ಪ್ಲಸ್ 6Tನಲ್ಲಿ ತ್ರಿಪಲ್ ಕ್ಯಾಮೆರಾ, ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್..!

ಒನ್‌ಪ್ಲಸ್ 6T ಸದ್ಯ ಒನ್‌ಪ್ಲಸ್‌ ಲಾಂಚ್ ಮಾಡಲಿರುವ ಮುಂದಿನ ಫೋನ್‌ ಆಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಕುರಿತ ರೂಮರ್‌ಗಳು ಹೆಚ್ಚಾಗಿದೆ. ಇದೇ ವರ್ಷದ ಅಂತ್ಯದ ವೇಳೆಗೆ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕುವಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲದೇ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹಲವು ವಿಶೇಷತೆಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಬೇರೆಲ್ಲಾ ಟಾಪ್‌ ಎಂಡ್ ಫೋನ್‌ಗಳಿಗೆ ನೇರಾವಗಿ ಸೆಡ್ಡು ಹೊಡೆಯುವ ಸಾಧ್ಯತೆ ಹೆಚ್ಚಾಗಿದೆ.

ಒನ್‌ಪ್ಲಸ್ 6Tನಲ್ಲಿ ದೊಡ್ಡ ಬ್ಯಾಟರಿ:

ಒನ್‌ಪ್ಲಸ್ 6Tನಲ್ಲಿ ದೊಡ್ಡ ಬ್ಯಾಟರಿ:

ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ ಸಹ ಈ ನಿಟ್ಟಿನಲ್ಲಿ ಕಾಯೋನ್ಮುಖವಾಗಿದ್ದು, ಮುಂದಿನ ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಬ್ಯಾಕಪ್ ನೀಡುವಂತೆ ದೊಡ್ಡದಾದ ಬ್ಯಾಟರಿಯನ್ನು ಅಳವಡಿಸಲು ಮುಂದಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಪೂರ್ತಿ ದಿನ ಬಳಕೆ ಬರುವಂತೆ ಬ್ಯಾಕಪ್ ನೀಡಲಿದೆ. ಅಲ್ಲದೇ ವೇಗದ ಚಾರ್ಜಿಂಗ್ ಸಹ ಸಪೋರ್ಟ್ ಮಾಡಲಿದೆ.

ಹೊಸ ಮಾದರಿ ಇಯರ್ ಫೋನ್:

ಹೊಸ ಮಾದರಿ ಇಯರ್ ಫೋನ್:

ಇದಲ್ಲದೇ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್‌ನೊಂದಿಗೆ ಒನ್‌ಪ್ಲಸ್ ಹೊಸ ಮಾದರಿಯ ಬುಲೆಟ್ ಇಯರ್ ಫೋನ್‌ವೊಂದನ್ನು ಲಾಂಚ್ ಮಾಡುತ್ತಿದೆ. ಈ ಇಯಲ್ ಫೋನ್‌ C ಟೈಪ್ ಆಗಿರಲಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಸಂಗೀತದ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಈ ಇಯರ್ ಫೋನ್ ವಿನ್ಯಾಸವೂ ಹೊಸ ಮಾದರಿಯಿಂದ ಕೂಡಿರಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ. ಅಲ್ಲದೇ ಒನ್‌ಪ್ಲಸ್ 6Tನಲ್ಲಿ 3.5mm ಹೆಡ್‌ಫೋನ್ ಜಾಕ್ ಇರುವುದಿಲ್ಲ ಎಂದು ಕಂಪನಿಯೂ ಈ ಮೂಲಕ ತಿಳಿಸಿದೆ.

ಗೂಗಲ್‌ನೊಂದಿಗೆ:

ಗೂಗಲ್‌ನೊಂದಿಗೆ:

ಇದಲ್ಲದೇ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಸಲುವಾಗಿ ಒನ್‌ಪ್ಲಸ್, ಟೆಕ್‌ ದೈತ್ಯ ಗೂಗಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇದಲ್ಲದೇ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್‌ನಲ್ಲಿ ಬಳಕೆ ಮಾಡಿಕೊಳ್ಳುವ ಸಲುವಾಗಿ ಈ ಜೊಡಿ ಹೊಸ ಗೇಮ್‌ಗಳನ್ನು ನಿರ್ಮಾಣ ಮಾಡಿವೆ ಎನ್ನಲಾಗಿದೆ. ಇದನ್ನು ಸೆಪ್ಟೆಂಬರ್ 18 ರಂದು ಲಾಂಚ್ ಮಾಡುವುದಾಗಿಯೂ ತಿಳಿಸಿದೆ. ಅಲ್ಲದೇ ಇದಕ್ಕೆ crackables ಎಂದು ನಾಮಕರಣವನ್ನು ಮಾಡಿದ್ದು, ಸರ್ಪೈಸ್ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿದೆ.

ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಇದಲ್ಲದೇ ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್‌ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಅಲ್ಲದೆ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಆಡ್ವಾನ್ಸ್ ತಂತ್ರಜ್ಞಾನದ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ಬಳಕೆಗೆ ನೀಡಲಿದೆ. ಇದರಿಂದ ಸ್ಮಾರ್ಟ್‌ಫೋನ್ ಹೆಚ್ಚು ಸೆಕ್ಯೂರ್ ಆಗಲಿದೆ ಎನ್ನಲಾಗಿದೆ.

ಇನ್ನು ದೊಡ್ಡದಾದ ಡಿಸ್‌ಪ್ಲೇ;

ಇನ್ನು ದೊಡ್ಡದಾದ ಡಿಸ್‌ಪ್ಲೇ;

ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಈ ಹಿಂದಿನ ಫೋನ್‌ಗಿಂತಲೂ ಹೆಚ್ಚಿನ ಪ್ರಮಾಣದ ದೊಡ್ಡದಾದ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದಲ್ಲದೆ ಹೊಸ ಮಾದರಿಯ ವಿನ್ಯಾಸವನ್ನು ಒನ್‌ಪ್ಲಸ್ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಈ ಬಾರಿ ಬ್ರೆಜಿಲ್ ಲೈಸ್ ಆಮೊಲೈಡ್ ಡಿಸ್‌ಪ್ಲೇಯನ್ನು ನೀಡಲಿದ್ದು, ನೋಚ್ ವಿನ್ಯಾಸದಲ್ಲಿಯೂ ಭಾರೀ ಬದಲಾವಣೆಯನ್ನು ಕಾಣುವ ಸಾಧ್ಯತೆ ಹೆಚ್ಚಾಗಿದೆ. ಇದು ಗೇಮಿಂಗ್‌ ಪ್ರಿಯರಿಗೆ ಹೇಳಿ ಮಾಡಿಸಿದಂತೆ ಇರಲಿದ್ದು, ಇದರಲ್ಲಿ ವಿಡಿಯೋ ನೋಡುವ ಅನುಭವವು ಅತ್ಯುತ್ತಮವಾಗಿರಲಿದೆ.

ಫಾಸ್ಟ್‌ ಡ್ಯಾಷ್ ಚಾರ್ಜರ್:

ಫಾಸ್ಟ್‌ ಡ್ಯಾಷ್ ಚಾರ್ಜರ್:

ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಇನ್ನು ಅಭಿವೃದ್ಧಿ ಪಡಿಸಿರುವ ಡ್ಯಾಷ್ ಚಾರ್ಜರ್ ಅನ್ನು ಕಾಣಬಹುದಾಗಿದೆ. ಈ ಹಿಂದಿನ ಚಾರ್ಜರ್‌ಗಿಂತಲೂ ವೇಗವಾಗಿ ಫೋನ್ ಅನ್ನು ಚಾರ್ಜ್ ಮಾಡಲಿದೆ ಎನ್ನಲಾಗಿದ್ದು, ಈಗಾಗಲೆ ಮಾರುಕಟ್ಟೆಯಲ್ಲಿ ಬೆಸ್ಟ್‌ ಇನ್ನು ಖ್ಯಾತಿಯನ್ನು ಪಡೆದುಕೊಂಡಿದ್ದು, ಇದನ್ನು ಉಳಿಸಿಕೊಂಡು ಹೋಗಲಿದೆ.

ಮೂರು ಕ್ಯಾಮೆರಾ:

ಮೂರು ಕ್ಯಾಮೆರಾ:

ಮಾರುಕಟ್ಟೆಯೇ ತಳಮಳಗೊಳ್ಳುವಂತೆ ಮೂರು ಲೆನ್ಸ್‌ ಹೊಂದಿರುವ ಕ್ಯಾಮೆರಾವನ್ನು ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯ ಮಾಡಲು ಒನ್‌ಪ್ಲಸ್ ಮುಂದಾಗಿದೆ. ಮಾರುಕಟ್ಟೆಯಲ್ಲಿ ಇದು ಭಾರೀ ಪ್ರಮಾಣದ ಸಂಚಲನಕ್ಕೆ ಕಾರಣವಾಗಲಿದೆ. ಈಗಾಗಲೇ ಡ್ಯುಯಲ್ ಕ್ಯಾಮೆರಾ ಫೋನ್‌ಗಳನ್ನು ಬಂದಿದ್ದು, ಅದನ್ನು ಮೀರಿಸುವ ಮಾದರಿಯಲ್ಲಿ ಒನ್‌ಪ್ಲಸ್ 6T ನಿಲ್ಲಲಿದೆ.

Best Mobiles in India

English summary
OnePlus 6T: Most technologically advanced and future driven flagship smartphone, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+