ಮಾರುಕಟ್ಟೆಯಲ್ಲಿ ಹೊಸ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ ಒನ್ ಪ್ಲಸ್ 6T…!
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಶುರು ಮಾಡಿರುವ ಒನ್ ಪ್ಲಸ್ 6 ಬಿಡುಗಡೆ ಮಾಡಿರುವ ಹೊಸ ಒನ್ ಪ್ಲಸ್ 6ಟಿ ಸ್ಮಾರ್ಟ್ ಫೋನ್, ಹೊಸ ಮಾದರಿಯ ನಿರೀಕ್ಷೆಯನ್ನು ಹುಟ್ಟಿ ಹಾಕಿದೆ. ಈಗಾಗಲೇ ಹಲವು ಮಂದಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಿದ್ದು, ಬಹು ವಿಧವಾಗಿ ಮೆಚ್ಚು ಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಒನ್ ಪ್ಲಸ್ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಬಣ್ಣದಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಈಗಾಗಲೇ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಮತ್ತೊಂದು ಮಾದರಿಯಲ್ಲಿ ಅಂದರೆ ಹೊಸ ಬಣ್ಣದಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದೆ. ಮಿರಲ್ ಬ್ಲಾಕ್ ಮತ್ತು ಮಿಡ್ ನೈಟ್ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದೆ. ಈ ಎರಡು ಬಣ್ಣಗಳು ಬಳಕೆದಾರರಿಗೆ ಇನ್ನಷ್ಟು ದೊಡ್ಡ ಮಾದರಿಯಲ್ಲಿ ಆಕರ್ಷಿತವಾಗಲಿದೆ. ಇದರಿಂದಾಗಿ ಒನ್ ಪ್ಲಸ್ ಇನ್ನಷ್ಟು ಬಳಕೆದಾರರನ್ನು ಸೆಳೆದುಕೊಳ್ಳಲಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೊಂದಿಗೆ ಕಾಣಿಸಿಕೊಂಡಿರುವ ಒನ್ ಪ್ಲಸ್ 6ಟಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೊಸ ಮಾದರಿಯ ಆಯ್ಕೆಗಳನ್ನು ನೀಡಿದೆ. ಮುಂಭಾಗದಲ್ಲಿ ಹೊಸ ಮಾದರಿಯಲ್ಲಿ ವಾಟರ್ ಡ್ರಾಪ್ ನೋಚ್ ಡಿಸ್ ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಎರಡು ಮಾದರಿಯಲ್ಲಿ ಒನ್ ಪ್ಲಸ್ 6ಟಿ ಸ್ಮಾರ್ಟ್ ಫೋನ್ ಕಾಣಿಸಿಕೊಂಡಿದೆ. ಬಳಕೆದಾರರಿಗೆ ದೊಡ್ಡ ಮಾದರಿಯಲ್ಲಿ 6GB ಮತ್ತು 8GB RAM ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಾಗುತ್ತಿರುವುದು ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಕಾರ್ಯಕ್ಕೆ ಸಹಾಯವನ್ನು ಮಾಡಲಿದೆ.
ಭಾರತೀಯ ಪ್ರೀಮಿಯಮ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿರುವ ಒನ್ ಪ್ಲಸ್, ಈ ಹಿಂದೆ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ಬಳಕೆದಾರರ ಮನ ಗೆದ್ದಿತ್ತು. ಇದಾದ ನಂತರದಲ್ಲಿ ಬಂದಿರುವ ಒನ್ ಪ್ಲಸ್ 6ಟಿ ಸ್ಮಾರ್ಟ್ ಫೋನ್ ಇನ್ನಷ್ಟು ಮಂದಿಯನ್ನು ಸೆಳೆಯುವುದರಲ್ಲಿ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.
ಮಾರುಕಟ್ಟೆಯಲ್ಲಿ ಶೀಘ್ರವೇ ಕಾಣಿಸಿಕೊಳ್ಳುವ ಮಿರಲ್ ಬ್ಲಾಕ್ ಮತ್ತು ಮಿಡ್ ನೈಟ್ ಬಣ್ಣದ ಒನ್ ಪ್ಲಸ್ 6ಟಿ ಸ್ಮಾರ್ಟ್ ಫೋನ್ ಎಷ್ಟರ ಮಟ್ಟಿಗೆ ಗ್ರಾಹಕರನ್ನು ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕು.


Click it and Unblock the Notifications








