ಭಾರತದಲ್ಲಿ 'ಒನ್‌ಪ್ಲಸ್ 7' ಬೆಲೆ ಎಷ್ಟಿರಬಹುದು ಗೊತ್ತಾ?..ವಿಶೇಷ ರಿಪೋರ್ಟ್!

|

ಗೂಗಲ್, ಆಪಲ್ ಮತ್ತು ಸ್ಯಾಮ್ಸಂಗ್ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುತ್ತಿರುವ ಒನ್‌ಪ್ಲಸ್ ಕಂಪೆನಿ ನೂತನ ಸ್ಮಾರ್ಟ್‌ಫೋನ್ ಇದೇ ಮೇ 14 ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಒನ್‌ಪ್ಲಸ್ 7 ಎಂದು ಕರೆಸಿಕೊಂಡಿರುವ ಈ ಸ್ಮಾರ್ಟ್‌ಪೋನಿನ ಬಗ್ಗೆ ಯಾವುದೇ ಅಫಷಿಯಲ್ ಮಾಹಿತಿಯನ್ನು ಕಂಪೆನಿ ಬಿಟ್ಟುಕೊಟ್ಟಿಲ್ಲ. ಆದರೆ, ಇಲ್ಲೊಂದು ರಿಪೋರ್ಟ್ ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನ ಬೆಲೆ 39,500 ರೂ.ಗಳಾಗಿರಬಹುದು ಎಂದು ತಿಳಿಸಿದೆ.

ಹೌದು, ಸ್ಮಾರ್ಟ್‌ಪೋನ್‌ಗಳ ಬಿಡುಗಡೆಗೂ ಮುನ್ನವೇ ಅವುಗಳ ಬೆಲೆಯನ್ನು ಲೆಕ್ಕಾಚಾರ ಮಾಡುವ 'ಟೆಕ್ ಎಆರ್‌ಸಿ' ಒನ್‌ಪ್ಲಸ್ 7 ಬೆಲೆ ಎಷ್ಟಿರಬಹುದು ಎಂದು ಅಂದಾಜು ಮಾಡಿ ಹೇಳಿದೆ. ಈಗಾಗಲೇ ಒನ್‌ಪ್ಲಸ್ 6, ಒನ್‌ಪ್ಲಸ್ 6ಟಿ ಸ್ಮಾರ್ಟ್‌ಫೋನ್ ಬೆಲೆಗಳನ್ನು ಬಹುತೇಕ ನಿಖರವಾಗಿ ಅಂದಾಜು ಮಾಡಿದ್ದ 'ಟೆಕ್ ಎಆರ್‌ಸಿ' ವರದಿಯೊಂದು, ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನ ಬೆಲೆ 39,500 ರೂ.ಗಳಾಗಿರಬಹುದು ಎಂದು ಹೇಳಿದೆ. ಇದಕ್ಕೆ ತನ್ನದೇ ಆದ ಲೆಕ್ಕಾಚಾರವನ್ನು ಮುಂದಿಟ್ಟಿದೆ.

ಭಾರತದಲ್ಲಿ 'ಒನ್‌ಪ್ಲಸ್ 7' ಬೆಲೆ ಎಷ್ಟಿರಬಹುದು ಗೊತ್ತಾ?..ವಿಶೇಷ ರಿಪೋರ್ಟ್!

ಟೆಕ್ ಎಆರ್‌ಸಿ' ಲೆಕ್ಕಾಚಾರದ ಪ್ರಕಾರ, ಪ್ರತಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವಾಗಲೂ ಆಯಾ ಮೊಬೈಲ್ ಕಂಪೆನಿ ಅದರ ಬೆಲೆಯನ್ನು ಪರ್ಸೆಂಟೇಜ್ ಆಧಾರಿತವಾಗಿ ಏರಿಕೆ ಮಾಡುತ್ತದೆ. ಹೊಸ ಪ್ರಾಡಕ್ಟ್ ಮೇಲೆ ಆಪಲ್ ಶೇ. 20 ರಷ್ಟು ಬೆಲೆ ಏರಿಕೆ ಮಾಡಿದರೆ, ಒನ್‌ಪ್ಲಸ್ ಶೇ. 12.6 ರಷ್ಟು ಏರಿಕೆ ಮಾಡುತ್ತಿದೆ. ಈ ರೀತಿಯಲ್ಲಿ ಅಂದಾಜು ಮಾಡಿದರೆ ಒನ್‌ಪ್ಲಸ್ 7 ಫೋನಿನ ಬೆಲೆ 37,000 ದಿಂದ 39,500 ರೂ.ಗಳು ಇರಬಹುದು ಎಂದು ಟೆಕ್ 'ಎಆರ್‌ಸಿ' ಹೇಳುತ್ತಿದೆ.

ಮೇ 14 ರಂದು ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್‌ನಲ್ಲಿ ಒನ್ ಪ್ಲಸ್‌ 7' ಬಿಡುಗಡೆಯಾಗಲಿದ್ದು, ಅಭೂತಪೂರ್ವವಾದ ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗದಿರುವವರು https://www.oneplus.in/ ತಾಣದಲ್ಲಿ ಲೈವ್‍ಸ್ಟ್ರೀಂನಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ. ಈಗಾಗಲೇ ಭಾರೀ ವೈರಲ್ ಆಗಿರುವ 'ಒನ್ ಪ್ಲಸ್‌ 7' ಬಿಡುಗಡೆ ಸಮಾರಂಭ ಕಳೆಗಟ್ಟುತ್ತಿರುವ ಈ ಸಮಯದಲ್ಲಿ 'ಒನ್ ಪ್ಲಸ್‌ 7' ಸ್ಮಾರ್ಟ್‌ಪೋನಿನ ಬಗೆಗೆ ಈ 10 ವಿಷಯಗಳು ನಿಮಗೆ ಖಂಡಿತಾ ಆಶ್ಚರ್ಯ ಉಂಟುಮಾಡುತ್ತವೆ.

ಬಿಡುಗಡೆ ಕಾರ್ಯಕ್ರಮಕ್ಕೆ ಎಂಟ್ರಿ ಹೇಗೆ?

ಬಿಡುಗಡೆ ಕಾರ್ಯಕ್ರಮಕ್ಕೆ ಎಂಟ್ರಿ ಹೇಗೆ?

ಏಪ್ರಿಲ್ 25, 2019 ಬೆಳಿಗ್ಗೆ 10 ಘಂಟೆಯಿಂದ ಬಿಡುಗಡೆ ಕಾರ್ಯಕ್ರಮಕ್ಕೆ ಎಂಟ್ರಿ ವೋಚರ್ ಅನ್ನು ಒನ್ ಪ್ಲಸ್.ಇನ್ ನಲ್ಲಿ ಲಭ್ಯವಾಗುತ್ತದೆ. ಯಾರಿಗೆಲ್ಲಾ ಇವೆಂಟ್ ನಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುವುದಿಲ್ಲವೋ ಅವರು ಲೈವ್ ಸ್ಟ್ರೀಮ್ ಲಿಂಕ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿರುತ್ತದೆ. ಅಮೇಜಾನಿನಲ್ಲಿ ಎಕ್ಸ್‌ಕ್ಲೂಸೀವ್ ಆನ್‌ಲೈನ್ ಸೇಲ್ ಆರಂಭವಾಗಲಿದೆ.

ಪ್ರಾಡೆಕ್ಟ್ ಹೆಸರು ಇನ್ನು ಪ್ರಕಟವಾಗಿಲ್ಲ!

ಪ್ರಾಡೆಕ್ಟ್ ಹೆಸರು ಇನ್ನು ಪ್ರಕಟವಾಗಿಲ್ಲ!

ನಿಮಗೆ ಗೊತ್ತಾ?, ಒನ್ ಪ್ಲಸ್ ತನ್ನ ನೂತನ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆಯಾದರೂ, ಈ ವರೆಗೂ ತನ್ನ ಪ್ರಾಡೆಕ್ಟ್‌ಗಳ ಅಂತಿಮ ಹೆಸರೇನು ಎಂಬುದನ್ನು ಪ್ರಕಟಿಸಿಲ್ಲ. ಆದರೆ, ಈಗಾಗಲೇ ಲೀಕ್ ಆಗಿರುವ ಮಾಧ್ಯಮ ವರದಿಗಳು ಪ್ರಕಾರ ಅವುಗಳನ್ನು ಒನ್ ಪ್ಲಸ್ 7 ಮತ್ತು ಒನ್ ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್‌ಗಳು ಎಂದಷ್ಟೇ ಹೇಳಲಾಗುತ್ತಿದೆ.

'ಒನ್‌ಪ್ಲಸ್ 7' ಮೊದಲ ಚಿತ್ರ ಲೀಕ್!

'ಒನ್‌ಪ್ಲಸ್ 7' ಮೊದಲ ಚಿತ್ರ ಲೀಕ್!

ಬಿಡುಗಡೆಯ ಸಮಯ ಫಿಕ್ಸ್ ಆದಾಗಲೇ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರು 'ಒನ್‌ಪ್ಲಸ್ 7' ಫೋನಿನ ಮೊದಲ ಚಿತ್ರ ಈಗಾಗಲೇ ಲೀಕ್ ಆಗಿದೆ. ನೋಚ್ ಇಲ್ಲದ ವಿನ್ಯಾಸದಲ್ಲಿ ಸ್ಕ್ರೀನ್ ಮತ್ತು ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವಂತಹ ಫೋನಿನ ಚಿತ್ರ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ಫೋನ್ ಪೂರ್ತಿ ಡಿಸ್‌ಪ್ಲೇ ವಿನ್ಯಾಸದಲ್ಲಿ ಫೋನ್ ಕಂಗೊಳಿಸುತ್ತಿತ್ತು.

'ಒನ್‌ಪ್ಲಸ್ 7'ನಲ್ಲಿ ಗರಿಷ್ಟ ರಿಫ್ರೆಶ್ ರೇಟ್ ಡಿಸ್ಪ್ಲೇ

'ಒನ್‌ಪ್ಲಸ್ 7'ನಲ್ಲಿ ಗರಿಷ್ಟ ರಿಫ್ರೆಶ್ ರೇಟ್ ಡಿಸ್ಪ್ಲೇ

ವರದಿಗಳು ಮತ್ತು ವದಂತಿಗಳು ಹೇಳುತ್ತಿರುವ ಪ್ರಕಾರ ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ಗಳಲ್ಲಿ ನೋಚ್ ಇಲ್ಲದ ಗರಿಷ್ಟ ರಿಫ್ರೆಶ್ ರೇಟ್ ಡಿಸ್ಪ್ಲೇಯನ್ನು ಹೊಂದಿರುತ್ತವೆ. ಒನ್ ಪ್ಲಸ್ 7 ಪ್ರೋ ಕನ್ಸ್ಯೂಮರ್ ಸೆಂಟ್ರಿಕ್ ಡಿವೈಸ್ ಆಗಿರುತ್ತದೆ. ಇದು ಗೇಮಿಂಗ್‌ಗೆ ಹೆಚ್ಚು ಮಹತ್ವ ನೀಡುಲಿದ್ದು, ರೇಝರ್ ಫೋನ್ 2 ಮತ್ತು ಆಸೂಸ್ ROG ಫೋನ್ ಗಳಿಗೆ ಇದು ಸ್ಪರ್ಧೆ ನೀಡಲಿದೆಯಂತೆ.

ಮೊದಲ ಬಾರಿ ಪಾಪ್ ಅಪ್ ಸೆಲ್ಫಿ ಕ್ಯಾಮೆರಾ

ಮೊದಲ ಬಾರಿ ಪಾಪ್ ಅಪ್ ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್ ಇದೇ ಮೊದಲ ಬಾರಿಗೆ ಒನ್‌ಪ್ಲಸ್ 7 ಮೂಲಕ ಪಾಪ್ ಅಪ್ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸುತ್ತಿದೆ ಎಂದು ಹೇಳಲಾಗಿದೆ.ಈ ಸೆಲ್ಫಿ ಕ್ಯಾಮೆರಾ ಡಿಸ್‌ಪ್ಲೇ ಮರೆಯಲ್ಲಿರುತ್ತದೆ ಮತ್ತು ಪೋಟೋ ಸೆರೆಹಿಡಿಯುವ ಸಮಯದಲ್ಲಿ ಮಾತ್ರ ಕ್ಯಾಮೆರಾ ಕಾಣಿಸಿಕೊಳ್ಳುತ್ತದೆ. ಈಗಾಗಲೇ ವೀವೊ ಮತ್ತು ಹಾನರ್ ಕಂಪನಿಗಳು ಸಹ ತಮ್ಮ ಫೋನ್‌ಗಳಲ್ಲಿ ಪರಿಚಯಿಸಿವೆ.

ಸೆಲ್ಫೀ ಕ್ಯಾಮರಾ ಮೆಕಾನಿಸಂ

ಸೆಲ್ಫೀ ಕ್ಯಾಮರಾ ಮೆಕಾನಿಸಂ

ಒನ್‌ಪ್ಲಸ್ 7 ನಲ್ಲಿ ಮೊಟೋರೈಸ್ಡ್ ಸೆಲ್ಫೀ ಕ್ಯಾಮರಾ ಮೆಕಾನಿಸಂನ್ನು ಅಳವಡಿಸಲಾಗಿರುತ್ತದೆ ಎಂದು ಹೇಳಲಾಗಿದೆ. ಒನ್ ಪ್ಲಸ್ 7 ಪ್ರೋ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ಅನ್ನು ಹೊಂದಿದ್ದು ಕ್ವಾಲ್ಕಂನ ನೂತನ 5ಜಿ ಮಾಡೆಮ್ ಅನ್ನು ಹೊಂದಿದೆ. ಜೊತೆಗೆ ಕ್ವಾಲ್ಕಂ ಎಕ್ಸ್ 55 ಅನ್ನು ಹೊಂದಿರುತ್ತದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಹೊರಬೀಳಬೇಕಿದೆ.

ಎಚ್‌ಡಿಆರ್ ಸ್ಟ್ರೀಮಿಂಗ್ ಇರಲಿದೆಯಂತೆ!

ಎಚ್‌ಡಿಆರ್ ಸ್ಟ್ರೀಮಿಂಗ್ ಇರಲಿದೆಯಂತೆ!

ಗ್ರಾಹಕರ ನಿರೀಕ್ಷೆಯಂತೆ ಒನ್‌ಪ್ಲಸ್ ಕಂಪನಿಯು ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಎಚ್‌ಡಿಆರ್ ಸ್ಟ್ರೀಮಿಂಗ್ ಪರಿಚಯಿಸಲಿದ್ದು, ಇದು ಸ್ಮಾರ್ಟ್‌ಫೋನ್‌ನಲ್ಲಿ ಹೈ ಕ್ವಾಲಿಟಿಯ ಅತ್ಯುತ್ತಮ ಸ್ಟ್ರೀಮಿಂಗ್ ಅನುಭವ ಪಡೆಯಬಹುದು. ಇಂತಹ ತಂತ್ರಜ್ಞಾನ ಹೊತ್ತ ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ ಎಚ್‌ಆರ್‌ಡಿ ಸ್ಟ್ರೀಮಿಂಗ್ ಬೆಂಬಲ ನೀಡಲಿದೆ ಎಂದು ಹೇಳಲಾಗುತ್ತಿದೆ.

ವಾರ್ಪ್ ಚಾರ್ಜ್ 30 ಇರಲಿದೆಯಂತೆ

ವಾರ್ಪ್ ಚಾರ್ಜ್ 30 ಇರಲಿದೆಯಂತೆ

ಸ್ಮಾರ್ಟ್‌ಫೋನ್‌ಗಳು ಬೇಗನ ಚಾರ್ಜ್ ಆಗಬೇಕು ಎಂದು ಬಹುತೇಕ ಪ್ರಮುಖ ಮೊಬೈಲ್ ಕಂಪನಿಗಳು ಕ್ವಿಕ್ ಚಾರ್ಜರ್ ಪರಿಚಯಿಸುತ್ತವೆ. ಆದರೆ ಒನ್‌ಪ್ಲಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅತೀ ವೇಗದ ಚಾರ್ಜರ್ ಅನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. ಹಾಗಾಗಿ, ಒನ್‌ಪ್ಲಸ್ 7 ಫೋನಿನಲ್ಲಿ 'ವಾರ್ಪ್ ಚಾರ್ಜ್ 30' ತಂತ್ರಜ್ಞಾನ ಬರುತ್ತಿದೆ ಎಂದು ಹೇಳಲಾಗಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ ಕಂಪನಿಯು ತನ್ನ ಪ್ರಮುಖ ಫೋನ್‌ಗಳ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಬಳಸುತ್ತಿದ್ದು, ಇದೀಗ ಹೊಸ ಒನ್‌ಪ್ಲಸ್‌ 7 ಫೋನ್‌ನಲ್ಲಿಯೂ ಸಹ ಸೋನಿಯ ಉನ್ನತ IMX586 ಸೆನ್ಸಾರ್ ಅಳವಡಿಸಲಿದೆ ಎನ್ನಲಾಗಿದೆ.. 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಕೆಲಸಮಾಡಲಿದೆ. ಇದೇ ಸೆನ್ಸಾರ್ ಅನ್ನು ಹಾನರ್ ವೀವ್ 20 ಸಹ ಬಳಸಿದೆ.
ರಾದಲ್ಲಿ

ಒನ್‌ಪ್ಲಸ್ ಸಿಇಓ ಹೇಳಿದ್ದೇನು?

ಒನ್‌ಪ್ಲಸ್ ಸಿಇಓ ಹೇಳಿದ್ದೇನು?

ಒನ್ ಪ್ಲಸ್ 6 ಮತ್ತು 6ಟಿ ಫೋನಿನ ಯಶಸ್ಸಿನ ಫೋನ್ ಒನ್ ಪ್ಲಸ್ 7 ಆಗಿದೆ. ಒನ್ ಪ್ಲಸ್ 7 ಫೋನ್ ಆಪಲ್ ಮತ್ತು ಸ್ಯಾಮ್ ಸಂಗ್ ಫೋನಿನಂತೆಯೇ ಪ್ರೀಮಿಯಂ ಬೆಲೆಯನ್ನು ಹೊಂದಿರುವ ಸಾಧ್ಯತೆ ಇದೆ. ಈ ಹಿಂದೆ ಒನ್ ಪ್ಲಸ್ ನ ಸಿಇಓ ಪಿಟೆ ಲೋ ಒಂದು ಸಂದರ್ಶನದಲ್ಲಿ ಮುಂದಿನ ಸ್ಮಾರ್ಟ್‌ಫೋನಿನಲ್ಲಿ ಅತ್ಯದ್ಭುತವಾಗಿರುವ ಡಿಸ್ಪ್ಲೇ ಇರುತ್ತದೆ ಎಂಬುದಾಗಿ ತಿಳಿಸಿದ್ದರು.

Best Mobiles in India

English summary
Taking the previous launches into consideration, the analysts suggest that the base variant of OnePlus 7 could be priced between Rs. 37,000 and Rs. 39,500. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X