ಮೊಬೈಲ್ ಲೋಕದಲ್ಲಿ ಸಂಚಲನ!..'ಒನ್‌ಪ್ಲಸ್ 7' ರಿಲೀಸ್ ಡೇಟ್ ಫಿಕ್ಸ್!!

|

ಮೂರು ದಿನಗಳ ದಿನಗಳ ಹಿಂದಷ್ಟೇ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನಿನ ಬೆಲೆ ಇಳಿಕೆಯಾದಾಗ ಎದ್ದಿದ್ದ ಊಹಾಪೋಹಗಳಿಗೆ ಇಂದು ತೆರೆಬಿದ್ದಿದೆ. ಭಾರತದ ಪ್ರಮುಖ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟಗಾರ ಮೊಬೈಲ್ ಕಂಪೆನಿಯಾದ 'ಒನ್‌ಪ್ಲಸ್' ತನ್ನ ಮುಂದಿನ ಸರಣಿ ಫೋನ್ ಬಿಡುಗಡೆಗೆ ತಯಾರಾಗಿದ್ದು, ಇದೀಗ 'ಒನ್‌ಪ್ಲಸ್ 7' ಬಿಡುಗಡೆಗೊಳಿಸುವ ದಿನಾಂಕ ಫಿಕ್ಸ್ ಆಗಿದೆ. ಮೇ 14 ನೇ ತಾರೀಖಿನಂದು, ಮುಂದಿನ ತಿಂಗಳು ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಜಾಗತಿಕವಾಗಿ ಬಿಡುಗಡೆಯಾಗುತ್ತಿದೆ.

ಹೌದು, ಟಿಪ್‌ಸ್ಟಾರ್ ಇಶನ್ ಅಗರ್‌ವಾಲ್ ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಮೇ 14, 2019 ರಂದು ಒನ್‌ಪ್ಲಸ್ 7 ಮಾರುಕಟ್ಟೆಗೆ ಕಾಲಿಡುತ್ತಿದೆ. ಈ ಹಿಂದಿನ ವರದಿಗಳಂತೆಯೇ 'ಒನ್‌ಪ್ಲಸ್ 7' ಫೋನಿನ ಬಗೆಗೆ ಲೀಕ್ ಆಗಿರುವ ಎಲ್ಲಾ ಮಾಹಿತಿಗಳು ನಿಜವಾಗಿದ್ದು, ವಿಶೇಷವೆಂದರೆ ಈ ಬಾರಿ ಒನ್‌ಪ್ಲಸ್ 7 , ಒನ್‌ಪ್ಲಸ್ 7 ಪ್ರೊ ಮತ್ತು ಒನ್‌ಪ್ಲಸ್ 7 ಪ್ರೊ 5G ಎಂಬ ಮೂರು ಫೋನ್‌ಗಳುಮಾರುಕಟ್ಟೆಗೆ ಎಂಟ್ರಿ ನೀಡುತ್ತವೆ. ಹೆಸರಿನಲ್ಲಿಯೇ ಇರುವಂತೆ 'ಒನ್‌ಪ್ಲಸ್ 7 ಪ್ರೊ 5G' ಫೋನ್ 5G ಸಪೋರ್ಟ್ ಹೊಂದಿರಲಿದೆ.

ಮೊಬೈಲ್ ಲೋಕದಲ್ಲಿ ಸಂಚಲನ!..'ಒನ್‌ಪ್ಲಸ್ 7' ರಿಲೀಸ್ ಡೇಟ್ ಫಿಕ್ಸ್!!

ಒನ್‌ಪ್ಲಸ್ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಮೂರು ಮಾದರಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಸಹ ಕುತೋಹಲವಾಗಿದೆ. ಈ ಬಗ್ಗೆ ಕಂಪೆನಿಯ ಅಧಿಕೃತ ಹೇಳಿಕೆಯಷ್ಟೇ ಬಾಕಿ ಇದೆ ಎಂದು ಹೇಳಲಾಗಿದೆ. ಹಾಗಾದರೆ, ಈಗಾಗಲೇ ಲೀಕ್ ಆಗಿರುವ ಮಾಹಿತಿಯಂತೆ ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಹೇಗಿರಲಿದೆ?, ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್ ಯಾವುವು? ಮತ್ತು ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನ ಬೆಲೆ ಎಷ್ಟಿರಬಹುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಡ್ರಾಪ್ ನಾಚ್ ಸ್ಕ್ರೀನ್

ಡ್ರಾಪ್ ನಾಚ್ ಸ್ಕ್ರೀನ್

ಕಂಪನಿ ಈಗಾಗಲೇ ತನ್ನ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನಲ್ಲಿ ನಾಚ್ ಡಿಸ್‌ಪ್ಲೇಯನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಹೊಸ ಒನ್‌ಪ್ಲಸ್ 7' ಸ್ಮಾರ್ಟ್‌ಫೋನಿನಲ್ಲಿ ವಾಟರ್ ಡ್ರಾಪ್ ನಾಚ್ ಹೊಂದಿರುವ ಸ್ಕ್ರೀನ್ ಪರಿಚಯಿಸಲಿದೆ. ಇದು ಸ್ಮಾರ್ಟ್‌ಪೋನ್ ಡಿಸ್‌ಪ್ಲೇಗೆ ಅಂದ ತಂದುಕೊಡಲಿದ್ದು, ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಹೇಳಲಾಗುತ್ತಿದೆ.

ಪಾಪ್ಅಪ್ ಸೆಲ್ಫಿ ಕ್ಯಾಮೆರಾ

ಪಾಪ್ಅಪ್ ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಮೂಲಕ ಕಂಪನಿ ಮೊದಲ ಬಾರಿಗೆ 'ಪೊಪ್ ಅಪ್ ಸೆಲ್ಫಿ ಕ್ಯಾಮೆರಾ' ವನ್ನು ಪರಿಚಯಿಸುತ್ತಿದ್ದು, ಪೊಪ್ ಅಪ್ ಕ್ಯಾಮೆರಾದ ವಿಶೇಷವೆಂದರೇ, ಸೆಲ್ಫಿ ಕ್ಯಾಮೆರಾ ಡಿಸ್‌ಪ್ಲೇ ಮರೆಯಲ್ಲಿರುತ್ತದೆ ಮತ್ತು ಪೋಟೋ ಸೆರೆಹಿಡಿಯುವ ಸಮಯದಲ್ಲಿ ಮಾತ್ರ ಕ್ಯಾಮೆರಾ ಕಾಣಿಸಿಕೊಳ್ಳುತ್ತದೆ. ಪಾಪ್ಅಪ್ ಸೆಲ್ಫಿ ಕ್ಯಾಮೆರಾಗಳನ್ನು ಈಗಾಗಲೇ ವೀವೊ ಮತ್ತು ಹಾನರ್ ಕಂಪನಿಗಳು ಸಹ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸುವುದಾಗಿ ಹೇಳಿವೆ.

ಎಚ್‌ಡಿಆರ್ ಸ್ಟ್ರೀಮಿಂಗ್

ಎಚ್‌ಡಿಆರ್ ಸ್ಟ್ರೀಮಿಂಗ್

ಗ್ರಾಹಕರ ನಿರೀಕ್ಷೆಯಂತೆ ಒನ್‌ಪ್ಲಸ್ ಕಂಪನಿಯು ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಎಚ್‌ಡಿಆರ್ ಸ್ಟ್ರೀಮಿಂಗ್ ಪರಿಚಯಿಸಲಿದ್ದು, ಇದು ಸ್ಮಾರ್ಟ್‌ಫೋನ್‌ನಲ್ಲಿ ಹೈ ಕ್ವಾಲಿಟಿಯ ಅತ್ಯುತ್ತಮ ಸ್ಟ್ರೀಮಿಂಗ್ ಅನುಭವ ಪಡೆಯಬಹುದು. ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಎಚ್‌ಆರ್‌ಡಿ ಸ್ಟ್ರೀಮಿಂಗ್ ಬೆಂಬಲ ನೀಡಲಿವೆ ಎಂದು ಹೇಳಲಾಗುತ್ತಿದೆ.

ವಾರ್ಪ್ ಚಾರ್ಜ್ 30

ವಾರ್ಪ್ ಚಾರ್ಜ್ 30

ಸ್ಮಾರ್ಟ್‌ಫೋನ್‌ಗಳು ಬೇಗನ ಚಾರ್ಜ್ ಆಗಬೇಕು ಎಂದು ಬಹುತೇಕ ಪ್ರಮುಖ ಮೊಬೈಲ್ ಕಂಪನಿಗಳು ಕ್ವಿಕ್ ಚಾರ್ಜರ್ ಪರಿಚಯಿಸುತ್ತವೆ. ಆದರೆ ಒನ್‌ಪ್ಲಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅತೀ ವೇಗದ ಚಾರ್ಜರ್ ಅನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. 'ವಾರ್ಪ್ ಚಾರ್ಜ್ 30' ವೇಗದ ಚಾರ್ಜರ್ ಅನ್ನು ತನ್ನ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ನೀಡಲಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ ಕಂಪನಿಯು ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಬಳಸುತ್ತಿದ್ದು, ಇದೀಗ ಹೊಸ ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ಸೋನಿಯ ಉನ್ನತ IMX586 ಸೆನ್ಸಾರ್ ಅಳವಡಿಸಲಿದೆ ಎಂದು ತಿಳಿದುಬಂದಿದೆ. 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಕೆಲಸಮಾಡಲಿದೆ. ಸೋನಿಯ IMX586 ಸೆನ್ಸಾರ್ ಅನ್ನು ಹಾನರ್ ವೀವ್ 20 ಸಹ ಬಳಸಿದೆ.

5G ಬರುವುದು ಪಕ್ಕಾ!

5G ಬರುವುದು ಪಕ್ಕಾ!

ಒನ್‌ಪ್ಲಸ್ ಕಂಪನಿ ಈ ಮೊದಲೆ ಹೇಳಿರುವಂತೆ ಈ ವರ್ಷ ಅಂದರೇ 2019 ರಲ್ಲಿ ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 7 5G ಸೌಲಭ್ಯ ಬೆಂಬಲಿಸಲಿದೆ. ಇದಕ್ಕಾಗಿಯೇ ಒನ್‌ಪ್ಲಸ್‌ 7 ಮಾದರಿಯ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದು, 'ಒನ್‌ಪ್ಲಸ್ 7 ಪ್ರೊ 5G' ಫೋನ್ 5G ಸಪೋರ್ಟ್ ಹೊಂದಿರಲಿದೆ. ಈ ಮೂಲಕ ಒನ್‌ಪ್ಲಸ್ 5G ನೆಟವರ್ಕ್ ಫೀಚರ್ ಪರಿಚಯಿಸಿದ ಮತ್ತೊಂದು ಕೀರ್ತಿಯನ್ನು ಪಡೆಯಲಿದೆ.

Best Mobiles in India

English summary
OnePlus 7, OnePlus 7 Pro to launch on May 14; could come with curved display: Report. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X