'ಒನ್‌ಪ್ಲಸ್‌ 7' ವಿನ್ಯಾಸಕ್ಕೆ ಬೆರಗಾದ ಮೊಬೈಲ್ ಪ್ರಿಯರು!!

|

ಪ್ರೀಮಿಯಮ್ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನ ಮತ್ತಷ್ಟು ಮಾಹಿತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಚೀನಾದ ಪ್ರಸಿದ್ಧ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒನ್‌ಪ್ಲಸ್‌ನ ನೂತನ ಒನ್‌ಪ್ಲಸ್ 7 ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು, ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಫೋನಿನ ಬಹುತೇಕ ಫೀಚರ್ಸ್ ಮತ್ತು ಚಿತ್ರಗಳು ಮೊಬೈಲ್ ಪ್ರಿಯರ ಕಣ್ಮನ ಸೆಳೆಯುತ್ತಿವೆ.

'ಒನ್‌ಪ್ಲಸ್‌ 7' ವಿನ್ಯಾಸಕ್ಕೆ ಬೆರಗಾದ ಮೊಬೈಲ್ ಪ್ರಿಯರು!!

ಹೌದು, ಒನ್‌ಪ್ಲಸ್‌ನ ನೂತನ ಫ್ಲ್ಯಾಗ್‌ಶಿಪ್ ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ವಿನ್ಯಾಸದಲ್ಲಿ ಹಲವು ಬದಲಾವಣೆಗಳಾಗಿದ್ದು, ಒನ್‌ಪ್ಲಸ್‌ ಇದೇ ಮೊದಲ ಬಾರಿಗೆ ನೋಚ್ ರಹಿತ ಫುಲ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿರಲಿದೆ ಎಂದು ತಿಳಿದುಬಂದಿದೆ. ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯಲ್ಲಿ ಸ್ಕ್ರೀನ್ ಶೇ. 95 ಭಾಗವನ್ನು ಆವರಿಸಿದ್ದು, ಪಾಪ್‌ ಅಪ್ ಸೆಲ್ಫಿ ಕ್ಯಾಮರಾ ಹೊಂದಿರುವ ಸ್ಮಾರ್ಟ್‌ಫೋನಿನ ಚಿತ್ರವನ್ನು ಚೀನಾದ ಸಾಮಾಜಿಕ ತಾಣ ವೇಬೋದಲ್ಲಿ ಪೋಸ್ಟ್ ಮಾಡಲಾಗಿದೆ.

ಇದೇ ವರ್ಷದ ಮಧ್ಯಂತದಲ್ಲಿ ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ವಿಶ್ವದಾಧ್ಯಂತ ಬಿಡುಗಡೆಯಾಗಲಿದ್ದು, ಒನ್‌ಪ್ಲಸ್ ಕಂಪೆನಿ ಮೂಲಗಳೇ ಮೊಬೈಲ್ ಬಗೆಗೆ ಕೆಲ ಮಾಹಿತಿಗಳನ್ನು ಲೀಕ್ ಮಾಡುತ್ತಿದೆ. ಹಾಗಾದರೆ, ಪ್ರೀಮಿಯಮ್ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನ ಬಗ್ಗೆ ಲೀಕ್ ಆಗಿರುವ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ನೋಚ್ ರಹಿತ ಫುಲ್ ಸ್ಕ್ರೀನ್ ಡಿಸ್‌ಪ್ಲೇ

ನೋಚ್ ರಹಿತ ಫುಲ್ ಸ್ಕ್ರೀನ್ ಡಿಸ್‌ಪ್ಲೇ

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ವಿನ್ಯಾಸದಲ್ಲಿ ಹಲವು ಬದಲಾವಣೆಗಳಾಗಿದ್ದು, ಒನ್‌ಪ್ಲಸ್‌ ಇದೇ ಮೊದಲ ಬಾರಿಗೆ ನೋಚ್ ರಹಿತ ಫುಲ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ. ಇದು ಸ್ಮಾರ್ಟ್‌ಪೋನ್ ಡಿಸ್‌ಪ್ಲೇಗೆ ಅಂದ ತಂದುಕೊಡಲಿದ್ದು, ಪಾಪ್‌ ಅಪ್ ಸೆಲ್ಫಿ ಕ್ಯಾಮರಾ ಹೊಂದಿರುವ ಫೋನ್ ವಿನ್ಯಾಸ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಪಾಪ್ಅಪ್ ಸೆಲ್ಫಿ ಕ್ಯಾಮೆರಾ

ಪಾಪ್ಅಪ್ ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಮೂಲಕ ಕಂಪನಿ ಮೊದಲ ಬಾರಿಗೆ 'ಪೊಪ್ ಅಪ್ ಸೆಲ್ಫಿ ಕ್ಯಾಮೆರಾ' ವನ್ನು ಪರಿಚಯಿಸುತ್ತಿದ್ದು, ಪೊಪ್ ಅಪ್ ಕ್ಯಾಮೆರಾದ ವಿಶೇಷವೆಂದರೇ, ಸೆಲ್ಫಿ ಕ್ಯಾಮೆರಾ ಡಿಸ್‌ಪ್ಲೇ ಮರೆಯಲ್ಲಿರುತ್ತದೆ ಮತ್ತು ಪೋಟೋ ಸೆರೆಹಿಡಿಯುವ ಸಮಯದಲ್ಲಿ ಮಾತ್ರ ಕ್ಯಾಮೆರಾ ಕಾಣಿಸಿಕೊಳ್ಳುತ್ತದೆ. ಪಾಪ್ಅಪ್ ಸೆಲ್ಫಿ ಕ್ಯಾಮೆರಾಗಳನ್ನು ಈಗಾಗಲೇ ವೀವೊ ಮತ್ತು ಹಾನರ್ ಕಂಪನಿಗಳು ಸಹ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಪರಿಚಯಿಸುವುದಾಗಿ ಹೇಳಿವೆ.

ಎಚ್‌ಡಿಆರ್ ಸ್ಟ್ರೀಮಿಂಗ್

ಎಚ್‌ಡಿಆರ್ ಸ್ಟ್ರೀಮಿಂಗ್

ಗ್ರಾಹಕರ ನಿರೀಕ್ಷೆಯಂತೆ ಒನ್‌ಪ್ಲಸ್ ಕಂಪನಿಯು ತನ್ನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಎಚ್‌ಡಿಆರ್ ಸ್ಟ್ರೀಮಿಂಗ್ ಪರಿಚಯಿಸಲಿದ್ದು, ಇದು ಸ್ಮಾರ್ಟ್‌ಫೋನ್‌ನಲ್ಲಿ ಹೈ ಕ್ವಾಲಿಟಿಯ ಅತ್ಯುತ್ತಮ ಸ್ಟ್ರೀಮಿಂಗ್ ಅನುಭವ ಪಡೆಯಬಹುದು. ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಎಚ್‌ಆರ್‌ಡಿ ಸ್ಟ್ರೀಮಿಂಗ್ ಬೆಂಬಲ ನೀಡಲಿವೆ ಎಂದು ಹೇಳಲಾಗುತ್ತಿದೆ.

ವಾರ್ಪ್ ಚಾರ್ಜ್ 30

ವಾರ್ಪ್ ಚಾರ್ಜ್ 30

ಸ್ಮಾರ್ಟ್‌ಫೋನ್‌ಗಳು ಬೇಗನ ಚಾರ್ಜ್ ಆಗಬೇಕು ಎಂದು ಬಹುತೇಕ ಪ್ರಮುಖ ಮೊಬೈಲ್ ಕಂಪನಿಗಳು ಕ್ವಿಕ್ ಚಾರ್ಜರ್ ಪರಿಚಯಿಸುತ್ತವೆ. ಆದರೆ ಒನ್‌ಪ್ಲಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅತೀ ವೇಗದ ಚಾರ್ಜರ್ ಅನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. 'ವಾರ್ಪ್ ಚಾರ್ಜ್ 30' ವೇಗದ ಚಾರ್ಜರ್ ಅನ್ನು ತನ್ನ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ನೀಡಲಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ ಕಂಪನಿಯು ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಬಳಸುತ್ತಿದ್ದು, ಇದೀಗ ಹೊಸ ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ಸೋನಿಯ ಉನ್ನತ IMX586 ಸೆನ್ಸಾರ್ ಅಳವಡಿಸಲಿದೆ ಎಂದು ತಿಳಿದುಬಂದಿದೆ. 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾದಲ್ಲಿ ಸೋನಿಯ ಸೆನ್ಸಾರ್ ಕೆಲಸಮಾಡಲಿದೆ. ಸೋನಿಯ IMX586 ಸೆನ್ಸಾರ್ ಅನ್ನು ಹಾನರ್ ವೀವ್ 20 ಸಹ ಬಳಸಿದೆ.

5G ಇರಲಿದೆಯಂತೆ!

5G ಇರಲಿದೆಯಂತೆ!

ಒನ್‌ಪ್ಲಸ್ ಕಂಪನಿ ಈ ಮೊದಲೆ ಹೇಳಿರುವಂತೆ ಈ ವರ್ಷ ಅಂದರೇ 2019 ರಲ್ಲಿ ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳು 5G ಸೌಲಭ್ಯ ಬೆಂಬಲಿಸಲಿವೆ. ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್ ಸಹ 5G ನೆಟವರ್ಕ್ ಸೌಲಭ್ಯ ಹೊಂದಿರಲಿದ್ದು, ಆ ಮೂಲಕ ಒನ್‌ಪ್ಲಸ್ 5G ನೆಟವರ್ಕ್ ಫೀಚರ್ ಪರಿಚಯಿಸಿದ ಕೀರ್ತಿ ಪಡೆಯಲಿದೆ.

Best Mobiles in India

English summary
Leaked photos and renders suggest the OnePlus 7 will have a ... up the company's tradition of flagship specs and features at a midrange price, but ... not known whether the OnePlus 7 will support 5G. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X