OnePlus ಹವಾ ಶುರು..! ಹೊಸ ಜಬರ್ದಸ್ತ್ ಫೋನ್ ಲಾಂಚ್: ಬೆಲೆ ಎಷ್ಟು?
ಸ್ಮಾರ್ಟ್‌ಫೋನ್‌ಗಳ ಕಿಂಗ್ ಗ್ರ್ಯಾಂಡ್ ಲಾಂಚ್. ಶತಾಯಗತಾಯ ಒನ್‌ಪ್ಲಸ್ (OnePlus) ಪ್ರಿಯರ ಹಾರ್ಟ್ ಫೇವರಿಟ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಒನ್‌ಪ್ಲಸ್ ಈ ಹೊಚ್ಚ ಹೊಸ ಮೊಬೈಲ್‌ನ ಸ್ಟೈಲಿಶ್ ಡಿಸೈನ್, ಬೊಂಬಾಟ್ ಕ್ಯಾಮೆರಾ, ದೊಡ್ಡ ಬ್ಯಾಟರಿ ಮತ್ತು ವಾವ್ ಎನಿಸುವ ಫೀಚರ್ಸ್‌ಗಳು ಮೊಬೈಲ್ ಪ್ರಿಯರ ಕಣ್ಣು ಕುಕ್ಕುತ್ತಿವೆ. ಇಷ್ಟೆಲ್ಲಾ ವಿಶೇಷ ಹೊಂದಿರುವ ಆ ಫೋನ್ ಯಾವುದು ಎಂಬ ಕುತೂಹಲ ಮೂಡುವುದು ಸಹಜ. ನಾವು ಹೇಳುತ್ತಿರುವುದು ಒನ್ ಪ್ಲಸ್ ಲಾಂಚ್ ಮಾಡಿರುವ OnePlus Ace 3 Pro ಮೊಬೈಲ್ ಬಗ್ಗೆ.
ಹೌದು, ಒನ್‌ಪ್ಲಸ್ ಇದೀಗ ತನ್ನ Ace ಸರಣಿಯ OnePlus Ace 3 Pro ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದು ನಿರೀಕ್ಷೆಯಂತೆ 6.78-ಇಂಚಿನ 8T LTPO AMOLED ಡಿಸ್‌ಪ್ಲೇ, 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. 6100mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಜೊತೆಗೆ 100W SuperVOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ಇನ್ನಿತರ ಫೀಚರ್ಸ್‌ಗಳನ್ನು ತಿಳಿಯೋಣ ಬನ್ನಿ.

ಪ್ರಮುಖ ಅಂಶಗಳು
- OnePlusನ OnePlus Ace 3 Pro ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಯಿತ
- ಈ ಹೊಸ ಫೋನ್ 50MP ಕ್ಯಾಮೆರಾ ಮತ್ತು 6100mAh ಸಾಮರ್ಥ್ಯಸ ದೊಡ್ಡ ಬ್ಯಾಟರಿ ಹೊಂದಿದೆ.
- OnePlus Ace 3 Pro ಆರಂಭಿಕ ಬೆಲೆ 36,730 ರೂ.
- ಜುಲೈ 3 ರಿಂದ ಚೀನಾದಲ್ಲಿ ಈ ಮೊಬೈಲ್ ಮಾರಾಟ ಆರಂಭಿಸಲಿದೆ.
ಒನ್‌ಪ್ಲಸ್ ಮೊಬೈಲ್‌ಗಳು ಭಾರತ ಮಾತ್ರವಲ್ಲದೆ ಚೀನಾ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿದೆ. ನಾವು ಕೊಡುವ ಬೆಲೆಗೆ ಭರಫೂರ ಫೀಚರ್ಸ್‌ಗಳನ್ನು ನೀಡುತ್ತದೆ. ಹೀಗಾಗಿಯೇ, ಗ್ರಾಹಕರು ಒನ್‌ಪ್ಲಸ್ ಮೊಬೈಲ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಖರೀದಿಸುತ್ತಾರೆ. ಇದೀಗ, ಒನ್‌ಪ್ಲಸ್‌ನ ನೂತನ OnePlus Ace 3 Pro ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಒನ್‌ಪ್ಲಸ್ ಪ್ರಿಯರ ಮೆಚ್ಚುಗೆ ಗಳಿಸುವುದರಲ್ಲಿ ಅನುಮಾನವೇ ಇಲ್ಲ.
OnePlus Ace 3 Pro ಬೆಲೆ ಎಷ್ಟು?
ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಈ ಹೊಸ OnePlus Ace 3 Pro ಫೋನಿನ ಬೆಲೆ ಎಷ್ಟು? ಖರೀದಿ ಲಭ್ಯತೆ ಬಗ್ಗೆ ಕುತೂಹಲ ಮೂಡುವುದು ಸಹಜ. OnePlus Ace 3 Pro ಟೈಟಾನಿಯಂ ಸಿಲ್ವರ್ ಜೊತೆಗೆ ಗ್ಲಾಸ್, ಗ್ರೀನ್ ಜೊತೆಗೆ ವೆಗಾನ್ ಲೆದರ್ ಮತ್ತು ಸೆರಾಮಿಕ್ ವೈಟ್ ಸೆರಾಮಿಕ್ ಫಿನಿಶ್‌ನಲ್ಲಿ ಬರುತ್ತದೆ. ಇದರ ಬೆಲೆ ಕೆಳಗಿನಂತಿದೆ.
- 12GB + 256GB ಸ್ಟೋರೇಜ್ ಬೆಲೆ: ಸುಮಾರು 36,730 ರೂ. (3199 ಯುವಾನ್/ USD 440)
- 16GB + 256GB ವೇರಿಯಂಟ್ ಬೆಲೆ: ಅಂದಾಜು 40,170 ರೂ. (3499 ಯುವಾನ್/ USD 481)
- 16GB + 512GB ಸ್ಟೋರೇಜ್ ಮಾದರಿ ಬೆಲೆ: ಸುಮಾರು 43,610 ರೂ. (3799 ಯುವಾನ್/ USD 522)
- 24GB + 1TB ರೂಪಾಂತರದ ಬೆಲೆ: ಅಂದಾಜು 50,500 ರೂ. (4399 ಯುವಾನ್/ USD 605)
- 16GB + 512GB ಸೆರಾಮಿಕ್ ಮಾದರಿ ಬೆಲೆ: ಸುಮಾರು 45,905 ರೂ. (3999 ಯುವಾನ್/ USD 550)
- 24GB + 1TB ಸೆರಾಮಿಕ್ ರೂಪಾಂತರದ ಬೆಲೆ: ಅಂದಾಜು 53,950 ರೂ. (4699 ಯುವಾನ್/ USD 646)
ಈ ಹೊಸ ಫೋನ್‌ನ ಪ್ರೊಫೆಸರ್ ಏನು?
ಈ ಫೋನ್ 24GB LPDDR5X RAM ಮತ್ತು 1TB UFS 4.0 ಸ್ಟೋರೇಜ್‌ನೊಂದಿಗೆ Snapdragon 8 Gen 3 SoCನಿಂದ ಚಾಲಿತವಾಗಿದೆ. ಕಂಪನಿಯು 2.32 ಮಿಲಿಯನ್ AnTuTu 10 ಸ್ಕೋರ್‌ಗಳನ್ನು ಕ್ಲೈಮ್ ಮಾಡಿದೆ. ಇದು 9126mm² VC ವೇಪರ್ ಚೇಂಬರ್, ಉದ್ಯಮದ ಮೊದಲ 2K ಸೂಪರ್‌ಕ್ರಿಟಿಕಲ್ ಥರ್ಮಲ್ ಗ್ರ್ಯಾಫೈಟ್, AI ಜಾಗತಿಕ ತಾಪಮಾನ ನಿಯಂತ್ರಣ ಮತ್ತು ಸಂಪೂರ್ಣ ಫೋನ್‌ಗೆ ನವೀಕರಿಸಿದ ಕೂಲಿಂಗ್ ರಚನೆಯೊಂದಿಗೆ ಎರಡನೇ ತಲೆಮಾರಿನ ಟಿಯಾಂಗಾಂಗ್ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಮಸ್ತ್ ಬ್ಯಾಟರಿ, 36 ನಿಮಿಷಗಳಲ್ಲಿ ಫುಲ್ ಚಾರ್ಜ್!
5000mAh ಸಾಮಾನ್ಯ ಗ್ರ್ಯಾಫೈಟ್ ಬ್ಯಾಟರಿಗಳಿಗೆ ಹೋಲಿಸಿದರೆ, OnePlus ಗ್ಲೇಸಿಯರ್ ಬ್ಯಾಟರಿಯು 1100mAhನ ಹೆಚ್ಚುವರಿ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಪರಿಮಾಣದಲ್ಲಿ 3% ಕಡಿತವನ್ನು ಹೊಂದಿದೆ. ಇದು 100W SuperVOOC ವೇಗದ ಚಾರ್ಜ್ ಅನ್ನು ಬೆಂಬಲಿಸುತ್ತದೆ. ಕೇವಲ 36 ನಿಮಿಷಗಳಲ್ಲಿ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಬ್ಯಾಟರಿ ಬಾಳಿಕೆಗೆ ಸಂಬಂಧಿಸಿದಂತೆ, OnePlusನ ಗ್ಲೇಸಿಯರ್ ಬ್ಯಾಟರಿಯು ನಾಲ್ಕು ವರ್ಷಗಳ ಬಳಕೆಯ ನಂತರ 80% ಕ್ಕಿಂತ ಹೆಚ್ಚು ಅಥವಾ ಸಮಾನವಾದ ಬ್ಯಾಟರಿ ಆರೋಗ್ಯ ಮಟ್ಟವನ್ನು ಹೊಂದಿದೆ.
OnePlus Ace 3 Pro ಸಂಪೂರ್ಣ ವಿಶೇಷತೆಗಳು
- ಡಿಸ್‌ಪ್ಲೇ: 6.78-ಇಂಚಿನ (2780×1264 ಪಿಕ್ಸೆಲ್‌ಗಳು) 8T LTPO AMOLED ಡಿಸ್‌ಪ್ಲೇ, 4500 nits ಗರಿಷ್ಠ ಬ್ರೈಟ್ ನೆಸ್, 100% DCI-P3 ಬಣ್ಣದ ಹರವು, 2160Hz ಹೈ-ಫ್ರೀಕ್ವೆನ್ಸಿ PWM ಮಬ್ಬಾಗಿಸುವಿಕೆ, 360Hz ಟಚ್ ಆಂಪ್ಲಿಂಗ್ ರೇಟ್, 260Hz ದರ, ಡಾಲ್ಬಿ ವಿಷನ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2
- ಪ್ರೊಫೆಸರ್: ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 3 4nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 750 GPU
- ಸ್ಟೋರೇಜ್: 12GB / 16GB / 24GB LPDDR5X RAM ಜೊತೆಗೆ 256GB/512GB/1TB UFS 4.0 ಸ್ಟೋರೇಜ್
- OS: ColorOS 14.1 ಜೊತೆಗೆ Android 14
- ಕ್ಯಾಮೆರಾ: 50MP ಮುಖ್ಯ ಕ್ಯಾಮೆರಾ (Sony IMX890 ಸಂವೇದಕವನ್ನು ಹೊಂದಿದೆ), ಜೊತೆಗೆ 8MP ಅಲ್ಟ್ರಾ-ವೈಡ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ. (1/1.56″ ಸೋನಿ IMX890 ಸಂವೇದಕ, f/1.8 ಅಪರ್ಚರ್, OIS, ಸೋನಿ IMX355 ಸಂವೇದಕದೊಂದಿಗೆ 8MP 120° ಅಲ್ಟ್ರಾ-ವೈಡ್ ಕ್ಯಾಮೆರಾ, f/2.2 ಅಪರ್ಚರ್, 2MP ಮ್ಯಾಕ್ರೋ ಕ್ಯಾಮೆರಾ ಜೊತೆಗೆ ಹೋವ್ OV02B ಸಂವೇದಕ, f/2 ಜೊತೆಗೆ 50MP ಹಿಂಬದಿಯ ಕ್ಯಾಮರಾ. ಫ್ಲಾಶ್)
- ಫ್ರಂಟ್ ಕ್ಯಾಮೆರಾ: Samsung S5K3P9 ಸಂವೇದಕದೊಂದಿಗೆ 16MP ಮುಂಭಾಗದ ಕ್ಯಾಮರಾ, f/2.4 ಅಪರ್ಚರ್
- ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸಂವೇದಕ, ಇನ್‌ಫ್ರಾರೆಡ್ ಸಂವೇದಕ
- ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
- ಅಳತೆ: 163.3 × 75.27 × 8.85mm (ಗಾಜು), 8.95mm (ಚರ್ಮ), 8.69mm (ಸೆರಾಮಿಕ್)
- ತೂಕ: 212g (ಗಾಜು), 207g (ಚರ್ಮ), 225g (ಸೆರಾಮಿಕ್)
- ಬ್ಯಾಟರಿ: 6100mAh (ವಿಶಿಷ್ಟ) ಬ್ಯಾಟರಿ
- ಚಾರ್ಜಿಂಗ್: 100W SuperVOOC ಫಾಸ್ಟ್ ಚಾರ್ಜಿಂಗ್
- ಆಡಿಯೊ: ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್
- ಪ್ರೊಟೆಕ್ಷನ್: ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP65)
- ಕನೆಕ್ಟಿವಿಟಿ ಆಯ್ಕೆಗಳು: 5G SA/ NSA, ಡ್ಯುಯಲ್ 4G VoLTE, Wi-Fi 7 802.11 be (2.4GHz + 5GHz), ಬ್ಲೂಟೂತ್ 5.4, ಬೀಡೌ: B1I+B1C+B2a; GPS: L1+L5; ಗ್ಲೋನಾಸ್: ಜಿ 1; ಗೆಲಿಲಿಯೋ: E1+E5a; QZSS: L1+L5, NFC, USB ಟೈಪ್-C


Click it and Unblock the Notifications








