Home
ಮೊಬೈಲ್

OnePlus: OnePlus Ace 3 Pro ಬೆಲೆ, ಫೀಚರ್ಸ್‌ ಲೀಕ್; ಬಿಡುಗಡೆ ಯಾವಾಗ?

ಒನ್‌ಪ್ಲಸ್ (OnePlus) ಮೊಬೈಲ್ ಪ್ರಿಯರಿಗೆ ಮತ್ತೊಂದು ಖುಷಿ ಸುದ್ದಿ. ಒನ್‌ಪ್ಲಸ್ ತನ್ನ ಹೊಸ ಸ್ಮಾರ್ಟ್‌ಫೋನ್ OnePlus Ace 3 Pro ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಹೊಸ ಮೊಬೈಲ್ ಸಖತ್‌ ಸ್ಟೈಲಿಶ್‌ ಆಗಿರಲಿದೆ. ಮೊಬೈಲ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ. ಕಂಪನಿಯು ಅತಿದೊಡ್ಡ ಬ್ಯಾಟರಿಯೊಂದಿಗೆ ಈ ಫೋನ್‌ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಈ ಮಧ್ಯೆಯೇ OnePlus Ace 3 Pro ಫೋನ್‌ಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಲೀಕ್‌ ಆಗಿವೆ. ಈ ಫೋನ್‌ನ ಬೆಲೆ ಮತ್ತು ಫೀಚರ್ಸ್‌ಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಬಹಿರಂಗವಾಗಿದೆ.

ಒನ್‌ಪ್ಲಸ್ ಮಾರುಕಟ್ಟೆಗೆ ಪರಿಚಯಿಸಿರುವ ಫೋನ್‌ಗಳೆಲ್ಲವೂ ಗ್ರಾಹಕರ ಹಾಟ್‌ ಫೇವರಿಟ್‌ ಆಗಿವೆ. ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿವೆ. ಇದೀಗ, ಮತ್ತೊಂದು ಹೊಸ ಒನ್‌ಪ್ಲಸ್ ಏಸ್ 3 ಪ್ರೊ ಮೊಬೈಲ್‌ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಈ ಸ್ಮಾರ್ಟ್‌ಫೋನ್ 6,100mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಹಾಗಿದ್ರೆ, ಸೋರಿಕೆಯಾಗಿರುವ ಮಾಹಿತಿ ಬಗ್ಗೆ ತಿಳಿಯೋಣ ಬನ್ನಿ.

OnePlus: OnePlus Ace 3 Pro ಬೆಲೆ, ಫೀಚರ್ಸ್‌ ಲೀಕ್; ಬಿಡುಗಡೆ ಯಾವಾಗ?

6,100mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್

ಚೈನೀಸ್ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಈ ಮುಂಬರುವ ಒನ್‌ಪ್ಲಸ್ ಏಸ್ 3 ಪ್ರೊ ಫೋನ್‌ನ ಫೀಚರ್ಸ್‌ಗಳನ್ನು ಪೋಸ್ಟ್‌ನಲ್ಲಿ ಅನಾವರಣಗೊಳಿಸಿದೆ. ಟಿಪ್‌ಸ್ಟರ್ ಪ್ರಕಾರ, ಮುಂಬರುವ ಈ ಸ್ಮಾರ್ಟ್‌ಫೋನ್ ಕಂಪನಿಯ ಗ್ಲೇಸಿಯರ್ ಬ್ಯಾಟರಿ ತಂತ್ರಜ್ಞಾನದೊಂದಿಗೆ 6,100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರುತ್ತದೆ.

30 ನಿಮಿಷಗಳಲ್ಲಿ 100% ಸಂಪೂರ್ಣ ಚಾರ್ಜ್

ಇದರೊಂದಿಗೆ, ಒನ್‌ಪ್ಲಸ್ ಏಸ್ 3 ಪ್ರೊ ಬ್ಯಾಟರಿ ಪ್ಯಾಕ್‌ನಲ್ಲಿ ಸಿಲಿಕಾನ್-ಕಾರ್ಬನ್ ನೆಗೆಟಿವ್ ಎಲೆಕ್ಟ್ರೋಡ್ ವಸ್ತುವನ್ನು ಸಹ ಅಳವಡಿಸಲಾಗುವುದು ಎಂದು ಟಿಪ್‌ಸ್ಟರ್ ಹೇಳಿದೆ. ಜೊತೆಗೆ, ಈ ಸ್ಮಾರ್ಟ್‌ಫೋನ್ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತದೆ. ಇದು ಕೇವಲ 30 ನಿಮಿಷಗಳಲ್ಲಿ ಮೊಬೈಲ್ ಅನ್ನು 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡುತ್ತದೆ.

ಒನ್‌ಪ್ಲಸ್ ಏಸ್ 3 ಪ್ರೊ ನಿರೀಕ್ಷಿತ ಪ್ರೊಸೆಸರ್

ಟಿಪ್‌ಸ್ಟರ್ ಪ್ರಕಾರ, ಒನ್‌ಪ್ಲಸ್ ಏಸ್ 3 ಪ್ರೊ ಸ್ಮಾರ್ಟ್‌ಫೋನ್‌ Snapdragon 8 Gen 3 (ಚಿಪ್‌ಸೆಟ್) ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಬಾ ಒನ್‌ಪ್ಲಸ್ ಕಂಪನಿಯು ಅಂತಹ ತಂತ್ರಜ್ಞಾನವನ್ನು ಫೋನ್‌ನಲ್ಲಿ ಸೇರಿಸುತ್ತಿದೆ ಎಂದು ಟಿಪ್‌ಸ್ಟರ್ ತಿಳಿಸಿದೆ. ಇದು ಈ ಚಿಪ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಮತ್ತು ಇದು ಉನ್ನತ ಮಟ್ಟದ ಗೇಮಿಂಗ್ ದೃಶ್ಯ ಪರಿಣಾಮಗಳನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

ಒನ್‌ಪ್ಲಸ್ ಏಸ್ 3 ಪ್ರೊ ನಿರೀಕ್ಷಿತ ಬೆಲೆ ಎಷ್ಟು?

ಮತ್ತೊಂದು ಪೋಸ್ಟ್‌ನಲ್ಲಿ ಒನ್‌ಪ್ಲಸ್ ಏಸ್ 3 ಪ್ರೊ ಮೊಬೈಲ್‌ನ ನಿರೀಕ್ಷಿತ ಬೆಲೆ ಬಹಿರಂಗವಾಗಿದೆ. ಒನ್‌ಪ್ಲಸ್‌ನ ಈ ಮುಂಬರುವ ಸ್ಮಾರ್ಟ್‌ಫೋನ್ 24GB RAM ಸ್ಟೋರೇಜ್‌ ವೇರಿಯಂಟ್‌ನೊಂದಿಗೆ ನಾಕ್ ಮಾಡುತ್ತದೆ ಎಂದು ಟಿಪ್‌ಸ್ಟರ್ ಹೇಳಿದೆ. ಇದರ ಬೆಲೆ ಸುಮಾರು 46,000 ರೂ. ( ಅಂದಾಜು 4,000 ಯುವಾನ್) ಆಗಿರುತ್ತದೆ. ಇದೇ ಕಾನ್ಫಿಗರೇಶನ್ ಅನ್ನು ಚೀನಾದಲ್ಲಿ ಏಸ್ 2 ಪ್ರೊನೊಂದಿಗೆ ಪ್ರಾರಂಭಿಸಲಾಗಿದೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.

ಕ್ಯಾಮೆರಾ ಸೆಟಪ್‌ಗೆ ಸಾಟಿಯೇ ಇಲ್ಲ!

ಇದರ ಹೊರತಾಗಿ ಒನ್‌ಪ್ಲಸ್ ಏಸ್ 3 ಪ್ರೊ ಸ್ಮಾರ್ಟ್‌ಫೋನ್, Ace 3 Pro 1.5K ರೆಸಲ್ಯೂಶನ್‌ನೊಂದಿಗೆ ಬಾಗಿದ OLED ಡಿಸ್ಪ್ಲೇಯನ್ನು ಪಡೆದಿರುವ ನಿರೀಕ್ಷೆಯಿದೆ. ಈ ಫೋನ್ LPDDR5x RAM ಮತ್ತು 1TB UFS 4.0 ಸ್ಟೋರೇಜ್‌ನೊಂದಿಗೆ ಬರಬಹುದು. ಫೋಟೋಗ್ರಫಿಗಾಗಿ ಒಂದು ಸುತ್ತಿನ ಕ್ಯಾಮರಾ ಮಾಡ್ಯೂಲ್ ಅನ್ನು ಇದರಲ್ಲಿ ಕಾಣಬಹುದು.

ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್, ಸೆಕೆಂಡರಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿರುತ್ತದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾವನ್ನು ಹೊಂದಿರಬಹುದು ಎಂದು ತಿಳಿದುಬಂದಿದೆ.

ಒನ್‌ಪ್ಲಸ್ ಏಸ್ 3 ಪ್ರೊ ಬಿಡುಗಡೆ ಯಾವಾಗ?

ಒನ್‌ಪ್ಲಸ್ ಕಂಪನಿ ನಿರೀಕ್ಷಿತ OnePlus Ace 3 Pro ಬಿಡುಗಡೆ ಕುರಿತು ಖಚಿತಪಡಿಸಿಲ್ಲ. ಆದರೆ, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಹ್ಯಾಂಡ್‌ಸೆಟ್ ಅನ್ನು ಬಿಡುಗಡೆ ಮಾಡಬಹುದು ಎಂದು ವದಂತಿಗಳಿವೆ. ಹಾಗಾಗಿ, ಈ ಹ್ಯಾಂಡ್‌ಸೆಟ್‌ ಕುರಿತು ನೀಡಿರುವ ಮಾಹಿತಿಯನ್ನು ಕೇವಲ ಊಹಾಪೋಹಗಳೆಂದು ಪರಿಗಣಿಸಬೇಕಿದೆ.

Best Mobiles in India

English summary
OnePlus Ace 3 Pro is speculated to be the next generation of OnePlus Ace 2 Pro mobile which was launched last year. Also this mobile is expected to be announced later this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+