ಡಿ.26ಕ್ಕೆ OnePlus Ace 5 ಸರಣಿ ಲಾಂಚ್; 512GB ಸ್ಟೋರೇಜ್.. 6415mAh ಬ್ಯಾಟರಿ.. ಬೆಲೆ ಎಷ್ಟು?
ಒನ್‌ಪ್ಲಸ್ ಕೊನೆಗೂ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಹೊಸ ಒನ್‌ಪ್ಲಸ್ ಏಸ್ 5 (OnePlus Ace 5) ಸರಣಿ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಹೌದು, ಕಂಪನಿಯು ಈ ಸರಣಿಯಲ್ಲಿ ಒನ್‌ಪ್ಲಸ್ ಏಸ್ 5 (OnePlus Ace 5) ಮತ್ತು ಒನ್‌ಪ್ಲಸ್ ಏಸ್ 5 ಪ್ರೊ (OnePlus Ace 5 Pro) ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈಗಾಗಲೇ, ಹೊಸ ಫೋನ್‌ಗಳ ಮುಂಗಡ ಬುಕಿಂಗ್ ಸಹ ಪ್ರಾರಂಭವಾಗಿದೆ. ಬನ್ನಿ, ಹೊಸ ಸರಣಿಯ ಬಿಡುಗಡೆ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಹೊಸ ಸರಣಿಯ ಪೈಕಿ, ಒನ್‌ಪ್ಲಸ್ ಏಸ್ 5 ಫೋನ್ ಭಾರತದಲ್ಲಿ ಒನ್‌ಪ್ಲಸ್ 13R (OnePlus 13R) ಹೆಸರಿನೊಂದಿಗೆ ಬಿಡುಗಡೆಯಾಗಲಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 6.78 ಇಂಚಿನ ದೊಡ್ಡ ಲಭ್ಯವಿರಲಿದೆ.ಜೊತೆಗೆ 16GB RAM + 512GB ಸ್ಟೋರೇಜ್, 6300mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಒನ್‌ಪ್ಲಸ್ ಏಸ್ 5 ಸರಣಿ ಬಿಡುಗಡೆ ದಿನಾಂಕ
ಒನ್‌ಪ್ಲಸ್ ತನ್ನ ಅಧಿಕೃತ ಸೈಟ್‌ನಲ್ಲಿ ಒನ್‌ಪ್ಲಸ್ ಏಸ್ 5 ಸರಣಿಯನ್ನು ಡಿಸೆಂಬರ್ 26 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಸಮಾರಂಭದಲ್ಲಿ ಈ ಫೋನ್‌ಗಳನ್ನು ಅನಾವರಣಗೊಳಿಸಲಾಗುತ್ತದೆ. ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ, ಒನ್‌ಪ್ಲಸ್ ಏಸ್ 5 ಫೋನನ್ನು ಒನ್‌ಪ್ಲಸ್ 13R ಆಗಿ ಪರಿಚಯಿಸಲಾಗುವುದು. ಇದು ಕೆಲವು ಸಣ್ಣ ವ್ಯತ್ಯಾಸಗಳನ್ನು ಹೊಂದಿರುತ್ತದೆ. ಇನ್ನು ಜನವರಿ 7 ರಂದು ಭಾರತದಲ್ಲಿ ಒನ್‌ಪ್ಲಸ್ 13 (OnePlus 13) ಸರಣಿ ಬಿಡುಗಡೆಯಾಗಲಿದೆ.
ಒನ್‌ಪ್ಲಸ್ ಏಸ್ 5 ಸರಣಿ ವಿನ್ಯಾಸ
ಒನ್‌ಪ್ಲಸ್ ಏಸ್ 5 ಸರಣಿಯ ಫೋನ್‌ಗಳು ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿವೆ. ಇದು ಎಡ ಭಾಗದಲ್ಲಿ ಇದೆ. ಬಲ ಭಾಗದಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಹೊಂದಿದೆ. ಒನ್‌ಪ್ಲಸ್ ಏಸ್ 5 ಫೋನನ್ನು ಬಿಳಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಒನ್‌ಪ್ಲಸ್ ಏಸ್ 5 ಪ್ರೊ ಮೊಬೈಲ್ ನೇರಳೆ, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಬರುತ್ತದೆ.
ಒನ್‌ಪ್ಲಸ್ ಏಸ್ 5 ಸರಣಿ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒನ್‌ಪ್ಲಸ್ ಏಸ್ 5 ಮತ್ತು ಒನ್‌ಪ್ಲಸ್ ಏಸ್ 5 ಫೋನ್‌ಗಳು 6.78 ಇಂಚಿನ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿರಲಿವೆ. ಇದು 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು ಫ್ಲಾಟ್ ಎಡ್ಜ್ ಹೊಂದಿದೆ. ಒನ್‌ಪ್ಲಸ್ ಏಸ್ 5 ಪ್ರೊ ಫೋನಿನಲ್ಲಿ ಕರ್ವ್ ಡಿಸ್ಪ್ಲೇ ಇದೆ.
ಪ್ರೊಸೆಸರ್ ಸಾಮರ್ಥ್ಯ
ಒನ್‌ಪ್ಲಸ್ ಏಸ್ 5 ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಒನ್‌ಪ್ಲಸ್ 13R ಸಹ ಇದೇ ಪ್ರೊಸೆಸರ್ ಹೊಂದಿರಲಿದೆ. ಒನ್‌ಪ್ಲಸ್ ಏಸ್ 5 ಪ್ರೊ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಈ ಸರಣಿಯ ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ ColorOS 15 ನೊಂದಿಗೆ ಕೆಲಸ ಮಾಡುತ್ತವೆ.
ಸ್ಟೊರೇಜ್ ಆಯ್ಕೆ
ಒನ್‌ಪ್ಲಸ್ ಏಸ್ 5 ಸರಣಿಯ ಸ್ಮಾರ್ಟ್‌ಫೋನ್‌ಗಳು 12GB RAM ಮತ್ತು 16GB RAM ನೊಂದಿಗೆ ಬಿಡುಗಡೆಯಾಗಲಿದೆ. ಇದು 256GB ಸ್ಟೋರೇಜ್ ಮತ್ತು 512GB ಸ್ಟೋರೇಜ್ ಆಯ್ಕೆ ಹೊಂದಿರಲಿದೆ. ನೀವು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಹೆಚ್ಚಿಸಬಹುದು.

ಕ್ಯಾಮೆರಾ ಸೆಟಪ್
ಒನ್‌ಪ್ಲಸ್ ಏಸ್ 5 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇರಲಿದೆ. ಈ ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಒನ್‌ಪ್ಲಸ್ 13R ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒನ್‌ಪ್ಲಸ್ ಏಸ್ 5 ಫೋನ್ 6415mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಒನ್‌ಪ್ಲಸ್ ಏಸ್ 5 ಪ್ರೊ ಮೊಬೈಲ್ 6100mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗುತ್ತದೆ.
ಇತರೆ ವೈಶಿಷ್ಟ್ಯಗಳು
ಒನ್‌ಪ್ಲಸ್ ಏಸ್ 5 ಸರಣಿಯು ಸಿಗ್ನೇಚರ್ ಅಲರ್ಟ್ ಸ್ಲೈಡರ್ ಮತ್ತು ಅಂಡರ್ ಡಿಸ್ಪ್ಲೇ ಶಾರ್ಟ್ ಫೋಕಸ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರಲಿದೆ.


Click it and Unblock the Notifications








