OnePlus: ಒನ್‌ಪ್ಲಸ್ ಪ್ರಿಯರಿಗೆ ಸರ್ಪ್ರೈಸ್.. ಎರಡಲ್ಲ, 3 ಹೊಸ ಫೋನ್‌ಗಳು ಲಾಂಚ್.. ಯಾವಾಗ? ವಿಶೇಷತೆಗಳೇನು?
ಒನ್‌ಪ್ಲಸ್ ಪ್ರಿಯರು ಖುಷಿ ಪಡಲು ಇಷ್ಟು ಸಾಕು! ಸದ್ಯದಲ್ಲೇ ಮೂರು ಹೊಚ್ಚ ಹೊಸ ಫೋನ್‌ಗಳು ಗ್ರಾಹಕರ ಕೈ ಸೇರಲಿವೆ. ಹೌದು, ಕಂಪನಿಯು ಮುಂದಿನ ವಾರ ತನ್ನ ಒನ್‌ಪ್ಲಸ್ ಏಸ್ 5 (OnePlus Ace 5) ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ OnePlus Ace 5 ಮತ್ತು OnePlus Ace 5 Pro ಮಾತ್ರ ಬರುವ ನಿರೀಕ್ಷೆ ಇತ್ತು. ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಎರಡೂ ಫೋನ್‌ಗಳ ಜೊತೆಗೆ, OnePlus Ace 5 Mini ಫೋನ್ ಸಹ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಮುಂಬರುವ ಒನ್‌ಪ್ಲಸ್ ಏಸ್ 5 ಮಿನಿ ಫೋನಿನ ಬಗ್ಗೆ ಟಿಪ್ಟ್ಸರ್ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಇದರಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿರಲಿದೆ. ಇದು ಸ್ನಾಪ್ಡ್ರಾಗನ್ ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. 512GB ಸ್ಟೋರೇಜ್, 6300mAh ಬ್ಯಾಟರಿ ಮತ್ತು 100W ಸ್ಪೀಡ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಮುಂಬರುವ ಒನ್‌ಪ್ಲಸ್ ಏಸ್ 5 ಮಿನಿ ಫೋನಿನ ಕ್ಯಾಮೆರಾ ಸೆಟಪ್ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಇದು Google Pixel ಫೋನಿನ ರೀತಿ ಕಾಣುತ್ತದೆ. ಫೋನಿನಲ್ಲಿ ಮುಖ್ಯವಾಗಿ ಸೋನಿ ಕ್ಯಾಮೆರಾ ಇರುತ್ತದೆ. ಈ ಮೊಬೈಲ್ ಸ್ಟೈಲಿಶ್ ಲುಕ್ ಗ್ರಾಹಕರಿಗೆ ಇಷ್ಟವಾಗದೆ ಇರದು. ಈ ಒನ್‌ಪ್ಲಸ್ ಏಸ್ 5 ಸರಣಿ (OnePlus Ace 5 series) ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ. ಚೀನಾದಲ್ಲಿ ಬಿಡುಗಡೆಯಾಗುವ ಒನ್‌ಪ್ಲಸ್ ಏಸ್ 5 ಭಾರತಕ್ಕೆ ಒನ್‌ಪ್ಲಸ್ 13R ಹೆಸರಿನಲ್ಲಿ ಬರಲಿದೆ. ಈ ಫೋನಿನ ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.
ಒನ್‌ಪ್ಲಸ್ ಏಸ್ 5 ಮಿನಿ ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒನ್‌ಪ್ಲಸ್ ಏಸ್ 5 ಮಿನಿ ಮೊಬೈಲ್ 6.78 ಇಂಚಿನ 1.5K ಡಿಸ್ಪ್ಲೇ ಹೊಂದಿರುತ್ತದೆ. ಇದು BOE X2 ತಂತ್ರಜ್ಞಾನದೊಂದಿಗೆ 8T LTPO ಫ್ಲಾಟ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಒನ್‌ಪ್ಲಸ್ ಏಸ್ 5 ಮಿನಿ ಫೋನನ್ನು ಕಾಲ್ಕಾಮ್ ಸ್ನಾಪ್ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ. OnePlus 13R ಸ್ಮಾರ್ಟ್‌ಫೋನ್ ಸಹ ಇದೇ ಪ್ರೊಸೆಸರ್ ಹೊಂದಿರಲಿದೆ. ಆದರೆ, OnePlus Ace 5 Pro ಫೋನಿನಲ್ಲಿ ಸ್ನಾಪ್ಡ್ರಾಗನ್ 8 ಎಲೈಟ್ ಪ್ರೊಸೆಸರ್ ಲಭ್ಯವಿರುತ್ತದೆ.
ಸ್ಟೋರೇಜ್ ಆಯ್ಕೆ
ಮುಂಬರುವ ಈ ಒನ್‌ಪ್ಲಸ್ ಏಸ್ 5 ಮಿನಿ ಸ್ಮಾರ್ಟ್‌ಫೋನ್ 16GB RAM + 512GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ಆಯ್ಕೆ ಒಳಗೊಂಡಿರಲಿದೆ.

ಕ್ಯಾಮೆರಾ ಸೆಟಪ್
ಒನ್‌ಪ್ಲಸ್ ಏಸ್ 5 ಮಿನಿ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒನ್‌ಪ್ಲಸ್ ಏಸ್ 5 ಮಿನಿ ಮೊಬೈಲ್ 6300mAh ದೊಡ್ಡ ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಏಸ್ 5 ಪ್ರೊ ಮೊಬೈಲ್ 6500mAh ಬ್ಯಾಟರಿ ಹೊಂದಿರುತ್ತದೆ.


Click it and Unblock the Notifications








