Home
ಮೊಬೈಲ್

OnePlus: ಧೂಳೆಬ್ಬಿಸಲು ಬರ್ತಿವೆ 2 ಹೊಸ ಫೋನ್; ಬೆಲೆ, ಫೀಚರ್ಸ್‌ ಲೀಕ್.. ಲಾಂಚ್ ಯಾವಾಗ?

ಒನ್‌ಪ್ಲಸ್ (OnePlus) ತನ್ನ 'Ace' ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಈ ಸರಣಿಯಲ್ಲಿ ಎರಡು ಹೊಸ ಮೊಬೈಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಅವುಗಳೇ, ಒನ್‌ಪ್ಲಸ್‌ ಏಸ್ 5 (OnePlus Ace 5) ಮತ್ತು ಒನ್‌ಪ್ಲಸ್‌ ಏಸ್ 5 ಪ್ರೊ (OnePlus Ace 5 Pro) ಸ್ಮಾರ್ಟ್‌ಫೋನ್. ಇದೀಗ, ಮುಂಬರುವ ಈ ಹೊಸ ಫೋನ್‌ಗಳ ಬೆಲೆ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಬನ್ನಿ, ಕಂಪನಿಯು ಯಾವೆಲ್ಲಾ ವಿಶೇಷತೆಗಳೊಂದಿಗೆ ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಲಿದೆ ಎನ್ನುವುದನ್ನು ತಿಳಿಯೋಣ.

ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಒನ್‌ಪ್ಲಸ್ ಏಸ್ 5 ಫೋನಿನ ಫೀಚರ್ಸ್‌ಗಳ ಬಗ್ಗೆ ಮಾಹಿತಿ ನೀಡಿದೆ. ಮುಂಬರುವ ಒನ್‌ಪ್ಲಸ್ ಏಸ್ 5 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿರಲಿದೆ. ಆದರೆ, ಒನ್‌ಪ್ಲಸ್ ಏಸ್ 5 ಪ್ರೊ ಮೊಬೈಲ್ ಹೊಸ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಏಸ್ 5 ಫೋನ್ 6.78 ಇಂಚಿನ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಕ್ಯಾಮೆರಾ, 100W ವೇಗದ ಚಾರ್ಜಿಂಗ್ ಮತ್ತು 6000mAh ಬ್ಯಾಟರಿಯನ್ನು ಹೊಂದಿರಲಿದೆ.

OnePlus: ಬರ್ತಿವೆ 2 ಹೊಸ ಫೋನ್; ಬೆಲೆ, ಫೀಚರ್ಸ್‌ ಲೀಕ್.. ಯಾವಾಗ ಲಾಂಚ್?

ಒನ್‌ಪ್ಲಸ್ ಏಸ್ 5 ಪ್ರೊ ಬೆಲೆ ಎಷ್ಟು?

ರಿಯಲ್‌ಮಿ ಕಂಪನಿಯು ಇತ್ತೀಚೆಗೆ Realme GT 7 Pro ಫೋನನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿರುವ ಫೋನ್ ಆಗಿದೆ. ಇದರ ಬೆಲೆ ಸುಮಾರು 43,000 ರೂ. (3,599 ಯುವಾನ್) ಆಗಿದೆ. ವರದಿಯ ಪ್ರಕಾರ, ಒನ್‌ಪ್ಲಸ್ ಏಸ್ 5 ಪ್ರೊ ಕೂಡ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುವ ಬಜೆಟ್‌ ಫೋನ್ ಆಗಿರಲಿದೆ. ಕಂಪನಿಯು ಇದನ್ನು 39,000 ರೂ. (3,300 ಯುವಾನ್) ಬೆಲೆಯಲ್ಲಿ ಬಿಡುಗಡೆ ಮಾಡಲಿದೆ.

ಒನ್‌ಪ್ಲಸ್ ಏಸ್ 5 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಒನ್‌ಪ್ಲಸ್ ಏಸ್ 5 ಫೋನಿನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಒನ್‌ಪ್ಲಸ್ ಏಸ್ 5 ಮೊಬೈಲ್ 6.78 ಇಂಚಿನ ಫ್ಲಾಟ್ 8T ಓಎಲ್ಇಡಿ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ. ಈ BOE X2 ಡಿಸ್ಪ್ಲೇಯು 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಒನ್‌ಪ್ಲಸ್ ಏಸ್ 5 ಮೊಬೈಲ್‌ನಲ್ಲಿ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಅನ್ನು ಅಳವಡಿಸಲಿದೆ. ಈ ಸ್ಮಾರ್ಟ್‌ಫೋನ್ 16GB LPDDR5x RAM ಮತ್ತು 512GB ವರೆಗಿನ UFS 4.0 ಇಂಟರ್ನಲ್ ಸ್ಟೋರೇಜ್‌ ಆಯ್ಕೆಯನ್ನು ಹೊಂದಿರುವ ನಿರೀಕ್ಷೆಯಿದೆ.

ಕ್ಯಾಮೆರಾ ಸೆಟಪ್

ಒನ್‌ಪ್ಲಸ್ ಏಸ್ 5 ಫೋನ್ ಉತ್ತಮ ಗುಣಮಟ್ಟದ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಒನ್‌ಪ್ಲಸ್ ಏಸ್ 5 ಅನ್ನು 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 100W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಟಿಪ್‌ಸ್ಟರ್ ಪ್ರಕಾರ, ಈ ಫೋನ್ 6,300mAh ಮತ್ತು 6,500mAh ಬ್ಯಾಟರಿ ಹೊಂದಿರಲಿದೆ.

ಒನ್‌ಪ್ಲಸ್ ಏಸ್ 5 ಪ್ರೊ ವೈಶಿಷ್ಟ್ಯಗಳು

ಒನ್‌ಪ್ಲಸ್ ಏಸ್ 5 ಪ್ರೊ ಮೊಬೈಲ್ ಒನ್‌ಪ್ಲಸ್ ಏಸ್ 5 ನಂತೆಯೇ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ. ಈ ಫೋನ್‌ 50 ಮೆಗಾಪಿಕ್ಸೆಲ್ ಸೋನಿ IMX906 ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN1 ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ. ಎರಡೂ ಮೊಬೈಲ್‌ಗಳು ಆಂಡ್ರಾಯ್ಡ್‌ 15 ಆಧಾರಿತ ColorOS 15 ಓಎಸ್‌ನಲ್ಲಿ ಕೆಲಸ ನಿರ್ವಹಿಸಲಿವೆ.

Best Mobiles in India

English summary
OnePlus Ace 5 specifications and OnePlus Ace 5 Pro price leaked before launch: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+