OnePlus Ace 6 ಲಾಂಚ್: Snapdragon 8 Elite ಚಿಪ್‌ಸೆಟ್, 7,800mAh ಬ್ಯಾಟರಿ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ OnePlus ತನ್ನ ಹೊಸ OnePlus Ace 6 ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ನೆನ್ನೆ (ಅ.27 ರಂದು ಸೋಮವಾರ) ಅಧಿಕೃತವಾಗಿ ಅನಾವರಣಗೊಳಿಸಿದೆ. ಬಹುನಿರೀಕ್ಷಿತ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 15 ಜೊತೆಗೆ ಈ ಹೊಸ OnePlus Ace 6 ಮಿಡ್‌ರೇಂಜ್ ಸ್ಮಾರ್ಟ್‌ಫೋನ್ ಕೂಡ ಲಾಂಚ್ ಆಗಿದ್ದು, ಶಕ್ತಿಯುತ Snapdragon 8 Elite SoC ಪ್ರೊಸೆಸರ್, 165Hz AMOLED ಡಿಸ್‌ಪ್ಲೇ ಮತ್ತು 7,800mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಹೊತ್ತು ಬಂದಿದೆ. ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ OnePlus 15R ಹೆಸರಿನಡಿ ಬಿಡುಗಡೆ ಆಗುವ ಸಾಧ್ಯತೆ ಇರುವ ಈ ಹೊಸ ಸ್ಮಾರ್ಟ್‌ಪೋನ್ ಹೇಗಿದೆ?, ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
OnePlus Ace 6: ಪ್ರಮುಖ ವೈಶಿಷ್ಟ್ಯಗಳು
ಹೊಸ OnePlus Ace 6 ಫೋನ್ 6.83 ಇಂಚಿನ 1.5K AMOLED ಡಿಸ್‌ಪ್ಲೇ ಹೊಂದಿದ್ದು, 165Hz ರಿಫ್ರೆಶ್ ರೇಟ್ ಮತ್ತು 5,000 ನಿಟ್ಸ್ ಪೀಕ್ ಬ್ರೈಟ್ನೆಸ್ ಅನ್ನು ಒದಗಿಸುತ್ತದೆ. ಕಣ್ಣಿನ ರಕ್ಷಣೆಗಾಗಿ ಐ ಕಂಫರ್ಟ್ ಮೋಡ್ ಹಾಗೂ 3D ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಲಭ್ಯವಿದೆ. ವಿನ್ಯಾಸದ ದೃಷ್ಟಿಯಿಂದ, OnePlus Ace 6 ಮೆಟಲ್ ಫ್ರೇಮ್ ಹೊಂದಿದ್ದು, IP66, IP68, IP69 ಮತ್ತು IP69K ಪ್ರಮಾಣೀಕರಣಗಳೊಂದಿಗೆ ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುತ್ತದೆ. ಫೋನ್‌ನ ತೂಕ ಸುಮಾರು 213 ಗ್ರಾಂ ಆಗಿದೆ.
ಕಾರ್ಯಕ್ಷಮತೆ ವಿಬಾಗದಲ್ಲಿ, OnePlus Ace 6 ಫೋನ್‌ನಲ್ಲಿ ಶಕ್ತಿಶಾಲಿ Snapdragon 8 Elite ಚಿಪ್‌ಸೆಟ್ ಇದ್ದು, ಇದನ್ನು ಗರಿಷ್ಠ 16GB LPDDR5X RAM, ಮತ್ತು 512GB UFS 4.1 ಸ್ಟೋರೇಜ್ನೊಂದಿಗೆ ಸಂಯೋಜಿಸಲಾಗಿದೆ. ಜೊತೆಗೆ, ಅತ್ಯುತ್ತಮ ಗೇಮಿಂಗ್ ಒದಗಿಸುವ ಸಲುವಾಗೊ G2 ಗ್ರಾಫಿಕ್ಸ್ ಚಿಪ್ ಸಹ ಅಳವಡಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ, OnePlus Ace 6 ನಲ್ಲಿ 50MP ಪ್ರಾಥಮಿಕ ಕ್ಯಾಮೆರಾ (OIS ಸಹಿತ) ಮತ್ತು 8MP ಅಲ್ಟ್ರಾ-ವೈಡ್ ಸೆನ್ಸರ್ ನೀಡಲಾಗಿದೆ. ಸೆಲ್ಫಿ ಮತ್ತು ವೀಡಿಯೋ ಕಾಲ್‌ಗಾಗಿ 16MP ಫ್ರಂಟ್ ಕ್ಯಾಮೆರಾ ಇದೆ.

ಈ OnePlus Ace 6 ಫೋನಿನ ಪ್ರಮುಖ ಅಂಶಗಳಲ್ಲಿ ಬ್ಯಾಟರಿ ಸಾಮರ್ಥ್ಯವೂ ಕೂಡ ಒಂದು. ಈ ಸ್ಮಾರ್ಟ್‌ಫೋನ್ 7,800mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ ಮತ್ತು 120W Super Flash Charge ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇನ್ನು ಈ OnePlus Ace 6 ಫೋನ್ ಹೊಸ Plus Key ಬಟನ್ ಹೊಂದಿದ್ದು, ಇದರ ಸಹಾಯದಿಂದ ಕ್ಯಾಮೆರಾ ತೆರೆಯಲು, ಟ್ರಾನ್ಸ್ಲೇಟರ್ ಪ್ರಾರಂಭಿಸಲು, ಫ್ಲ್ಯಾಶ್‌ಲೈಟ್ ಆನ್ ಮಾಡಲು ಅಥವಾ AI Plus Mind Space ಸೇರಿದಂತೆ ಹಲವಾರು ಕಾರ್ಯಗಳಿಗೆ ಶೀಘ್ರ ಪ್ರವೇಶಕ್ಕೆ ಕಸ್ಟಮೈಸ್ ಮಾಡಬಹುದು.
OnePlus Ace 6: ಬೆಲೆ ಮತ್ತು ಲಭ್ಯತೆ
ಹೊಸ OnePlus Ace 6 ಫೋನ್ ಚೀನಾದಲ್ಲಿ ಪ್ರಾರಂಭಿಕ ಬೆಲೆ CNY 2,599 (ಸುಮಾರು ₹32,300) ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಬೆಲೆಯು 12GB RAM + 256GB ಸ್ಟೋರೇಜ್ ವೇರಿಯಂಟ್‌ಗೆ ಅನ್ವಯಿಸುತ್ತದೆ.ಇತರ ವೇರಿಯಂಟ್‌ಗಳ ಬೆಲೆಗಳನ್ನು ನೋಡುವುದಾದರೆ, ಈ ಫೋನ್,
16GB + 256GB: ಸುಮಾರು ₹36,000
12GB + 512GB: ಸುಮಾರು ₹38,800
16GB + 512GB: ಸುಮಾರು ₹42,200
16GB + 1TB: ಸುಮಾರು ₹48,400
ಬೆಲೆಗಳಲ್ಲಿ ಬಿಡುಗಡೆಯಾಗಿದೆ. ಗ್ರಾಹಕರು OnePlus Ace 6 ಫೋನ್ ಅನ್ನು Quicksilver, Flash White, ಮತ್ತು Black ಬಣ್ಣಗಳಲ್ಲಿ ಇದೇ ಅಕ್ಟೋಬರ್ 30ರಿಂದ Oppo e-Shop, JD Mall, ಮತ್ತು ಇತರ ಅಧಿಕೃತ ಆನ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಬಹುದು.
ನಾವು ಗಮನಿಸುವುದಾದರೆ, OnePlus Ace 6 ಫೋನ್ ಜೊತೆಗೆ ಬಿಡುಗಡೆಯಾದ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 15 ನಂತೆ ಈ ಫೋನ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿಲ್ಲ. ಆದರೆ, ಈ OnePlus Ace 6 ಫೋನ್ ತನ್ನ ವಿಭಾಗದಲ್ಲಿ ಪರ್ಫಾರ್ಮೆನ್ಸ್, ಬ್ಯಾಟರಿ ಮತ್ತು ವಿನ್ಯಾಸದ ದೃಷ್ಟಿಯಿಂದ ಹೊಸ ಮಾನದಂಡ ಸ್ಥಾಪಿಸುವ ಶಕ್ತಿಶಾಲಿ ಫೋನ್ ಆಗಿ ಕಾಣುತ್ತಿದೆ. ಇದರಲ್ಲಿ ಶಕ್ತಿಶಾಲಿ Snapdragon 8 Elite ಪ್ರೊಸೆಸರ್, 7,800mAh ಬ್ಯಾಟರಿ ಮತ್ತು 165Hz ಡಿಸ್‌ಪ್ಲೇಯು ಇದು ಮಧ್ಯಮ-ಪ್ರಿಮಿಯಂ ವಿಭಾಗದಲ್ಲಿ ಭಾರೀ ಸ್ಪರ್ಧೆಯನ್ನೆ ನೀಡಲು ಸಿದ್ಧವಾಗಿದೆ ಎನ್ನಬಹುದು. ಇನ್ನು ನಾವು ಮೊದಲೇ ಹೇಳಿದಂತೆ, ಈ ಪೋನ್ ಕೆಲವೇ ವಾರಗಳಲಲ್ಇ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ OnePlus 15R ಹೆಸರಿನಡಿ ಬಿಡುಗಡೆ ಆಗುವುದು ಬಹುತೇಕ ಖಚಿತವಾಗಿದೆ.


Click it and Unblock the Notifications








