Home
ಮೊಬೈಲ್

ಇದೇ ಅ.27 ರಂದು OnePlus Ace 6 ಬಿಡುಗಡೆ: ಡಿಸೈನ್, ಪ್ರಮುಖ ಫೀಚರ್ಸ್ ನೋಡಿ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ OnePlus ತನ್ನ ಮುಂದಿನ ಪ್ರಮುಖ ಸ್ಮಾರ್ಟ್‌ಫೋನ್, OnePlus 15 ಅನ್ನು ಚೀನಾದಲ್ಲಿ ಇದೇ ಅಕ್ಟೋಬರ್ 27 ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಫೋನ್ Snapdragon 8 Elite Gen 5 ಪ್ರೊಸೆಸರ್ ಹೊಂದಿದ ಕಂಪನಿಯ ಮೊದಲ ಫೋನ್ ಆಗಲಿದೆ ಎಂಬ ಸುದ್ದಿಯನ್ನು ನೀವು ಈಗಾಗಲೇ ತಿಳಿದಿರಬಹುದು. ಈ ಪ್ರಮುಖ ಫ್ಲ್ಯಾಗ್‌ಶಿಪ್ ಫೋನ್ ಜೊತೆಗೆ, ಕಂಪನಿಯು OnePlus Ace 6 ಪೋನ್ ಅನ್ನು ಸಹ ಅನಾವರಣಗೊಳಿಸಲಿದೆ. ನಾವು ಗಮನಿಸುವುದಾದರೆ, ಇದೇ ಫೋನ್ ಭಾರತದಲ್ಲಿ OnePlus 15R ಆಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಹೌದು, ಚೀನಾದಲ್ಲಿ ಅ.27 ರಂದು ಬಿಡುಗಡೆಯಾಗಲಿರುವ OnePlus Ace 6 ಫೋನ್ ಜನವರಿ 2026 ರಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ OnePlus 15R ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ರಸ್ತುತ, ಚೀನಾದಲ್ಲಿ OnePlus Ace 6 ಮತ್ತು OnePlus 15 ಎರಡಕ್ಕೂ ಪ್ರಿ-ರಿಸರ್ವೇಶನ್‌ಗಳು ಪ್ರಾರಂಭವಾಗಿವೆ. ಕೇವಲ CNY 1 (ಸುಮಾರು ₹12) ಪಾವತಿಸುವ ಮೂಲಕ ಗ್ರಾಹಕರು ಫೋನ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಏಕೆಂದರೆ, ಈ ಹೊಸ Ace 6 ಮಾದರಿ ಫೋನಿನ ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಕಂಪನಿ ಈಗಾಗಲೇ ಬಹಿರಂಗಪಡಿಸಿದೆ.

OnePlus Ace 6: ಪ್ರಮುಖ ವೈಶಿಷ್ಟ್ಯಗಳು
OnePlus Ace 6 ಫೋನ್ 165Hz ರಿಫ್ರೆಶ್ ರೇಟ್ ಹೊಂದಿರುವ ಆಕರ್ಷಕ OLED ಡಿಸ್ಪ್ಲೇಯನ್ನು ಒಳಗೊಂಡಿದೆ. ಕಾರ್ಯಕ್ಷಮತೆಯ ವಿಷಯದಲ್ಲಿ, Ace 6 ಹಿಂದಿನ ವರ್ಷದ ಪ್ರಬಲ Snapdragon 8 Elite SoC ಪ್ರೊಸೆಸರ್ ಹೊಂದಿರಲಿದೆ. ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ, Ace 6 ಒಂದು ದೈತ್ಯಾಕಾರದ 7,800 mAh ಬ್ಯಾಟರಿಯನ್ನು ಹೊಂದಿದ್ದು, . ಈ ಬೃಹತ್ ಬ್ಯಾಟರಿಯು 120W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಇರುವ ನಿರೀಕ್ಷೆಯಿದೆ.

ವಿನ್ಯಾಸ ಮತ್ತು ಬಣ್ಣಗಳಲ್ಲಿ, OnePlus Ace 6 ಸ್ಮಾರ್ಟ್‌ಫೋನಿನ ವಿನ್ಯಾಸವು ಸಾಕಷ್ಟು ಗಮನ ಸೆಳೆಯುವಂತಿದೆ. ಕಂಪನಿಯು ಬಹಿರಂಗಪಡಿಸಿದ ಚಿತ್ರಗಳ ಪ್ರಕಾರ, ಫೋನಿನ ಹಿಂಭಾಗದಲ್ಲಿ ಲಂಬವಾಗಿ "ACE" ಬ್ರ್ಯಾಂಡಿಂಗ್ ಅನ್ನು ಪ್ರಮುಖವಾಗಿ ಕಾಣಬಹುದು. ಫೋನಿನ ಮೇಲ್ಭಾಗದ ಎಡ ಮೂಲೆಯಲ್ಲಿರುವ ಕ್ಯಾಮೆರಾ ಸೆಟಪ್ ವಿನ್ಯಾಸವು OnePlus 15 ಅನ್ನು ಹೋಲುತ್ತದೆ, ಆದರೆ ಇದು ಫ್ಲ್ಯಾಗ್‌ಶಿಪ್‌ನ ಟ್ರಿಪಲ್ ಕ್ಯಾಮೆರಾ ಬದಲಿಗೆ ಡ್ಯುಯಲ್ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಇದೇ ಅ.27 ರಂದು OnePlus Ace 6 ಬಿಡುಗಡೆ: ಡಿಸೈನ್, ಪ್ರಮುಖ ಫೀಚರ್ಸ್ ನೋಡಿ!

ಇನ್ನು ಈ OnePlus Ace 6 ಫೋನ್ ಸಿಲ್ವರ್, ವೈಟ್, ಮತ್ತು ಡಾರ್ಕ್ ಬ್ಲೂ/ಬ್ಲಾಕ್ ಮೂರು ಬಣ್ಣಗಳ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಸಿಲ್ವರ್ ಆವೃತ್ತಿಯು ಹೆಚ್ಚು ಮಿನುಗುವ ವಿನ್ಯಾಸವನ್ನು ಹೊಂದಿದ್ದರೆ, ಇತರ ಎರಡು ಬಣ್ಣಗಳು ಸರಳ ಮತ್ತು ಸೊಗಸಾದ ನೋಟವನ್ನು ನೀಡುತ್ತವೆ. ವರದಿಗಳ ಪ್ರಕಾರ, ಈ ಸಾಧನವು ಮೆಟಲ್ ಫ್ರೇಮ್ ಅನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಮೂರು ತೆರೆಯುವಿಕೆಗಳನ್ನು (ಮೈಕ್ರೊಫೋನ್‌ಗಳು ಮತ್ತು ಬಹುಶಃ IR ಬ್ಲಾಸ್ಟರ್ಗಾಗಿ) ಹೊಂದಿರಲಿದೆ.

OnePlus Ace 6 ಫೋನಿನ ಡಿಸ್‌ಪ್ಲೇ ರೆಸಲ್ಯೂಶನ್ ಬಹುಶಃ OnePlus 15 ರ "1.5K" ರೆಸಲ್ಯೂಶನ್‌ಗೆ ಸಮನಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಅತ್ಯುತ್ತಮ ದೃಶ್ಯ ಅನುಭವವನ್ನು ನೀಡುತ್ತದೆ. ದಿನನಿತ್ಯದ ಮತ್ತು ಹೆವಿ-ಡ್ಯೂಟಿ ಕಾರ್ಯಗಳೆರಡಕ್ಕೂ ಸಮರ್ಥ ಕಾರ್ಯಕ್ಷಮತೆ ಒದಗಿಸುವ ಶಕ್ತಿಶಾಲಿ ಪ್ರೊಸೆಸರ್, ದೀರ್ಘಾವಧಿಯ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಸಂಯೋಜಿಸಿರುವ OnePlus Ace 6, ಮಧ್ಯಮ ಪ್ರೀಮಿಯಂ ಶ್ರೇಣಿಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಒಂದು ಬಲವಾದ ಆಯ್ಕೆಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಇದರ ಜಾಗತಿಕ ಬಿಡುಗಡೆಗಾಗಿ ಭಾರತೀಯ ಗ್ರಾಹಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಹೊಸ OnePlus ಫೋನ್‌ ಕುರಿತು ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ಯಾವ ವೈಶಿಷ್ಟ್ಯವು ನಿಮಗೆ ಹೆಚ್ಚು ಇಷ್ಟವಾಯಿತು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Ahead of Launch, OnePlus Ace 6 Specifications Officially Confirmed—Global Version May Arrive as 15R. check here for more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+