Home
ಮೊಬೈಲ್

120W ಫಾಸ್ಟ್ ಚಾರ್ಜಿಂಗ್ ಇರುವ ಹೊಸ ಮಿಡ್‌ರೇಂಜ್ OnePlus ಫೋನ್ ಆಗಮಿಸಲಿದೆ!

ಜಾಗತಿಕ ಮತ್ತು ಚೀನಾದ ಮಾರುಕಟ್ಟೆಗಳಲ್ಲಿ ಬಹುನಿರೀಕ್ಷಿತ ಒನ್‌ಪ್ಲಸ್ 15 (OnePlus 15) ಸ್ಮಾರ್ಟ್‌ಫೋನ್ ಬಿಡುಗಡೆಗೆ ಕಂಪೆನಿಯು ಸಿದ್ಧತೆ ನಡೆಸುತ್ತಿರುವಾಗ, ಅದರ ಸಹೋದರ ಮಾದರಿ ಫೋನ್ ಒನ್‌ಪ್ಲಸ್ ಏಸ್ 6 (OnePlus Ace 6) ಕುರಿತ ವದಂತಿಗಳು ಮತ್ತು ಸೋರಿಕೆಗಳು ತೀವ್ರಗೊಂಡಿವೆ.! ಈ ವರ್ಷದ ಪ್ರಮುಖ ಮಧ್ಯಮ-ಶ್ರೇಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮುವ ನಿರೀಕ್ಷೆಯಿರುವ OnePlus Ace 6, ಇತ್ತೀಚೆಗೆ ಪ್ರಮುಖ ಪ್ರಮಾಣೀಕರಣದಲ್ಲಿ ಕಾಣಿಸಿಕೊಂಡಿದೆ. ಇದು ಭಾರತೀಯ ಮಾರುಕಟ್ಟೆಗೆ OnePlus 15R ಆಗಿ ಮರುಬ್ರಾಂಡೆಡ್ ಆಗಿ ಬರುವ ಸಾಧ್ಯತೆ ದಟ್ಟವಾಗಿದೆ.!

ಹೌದು, ಚೀನಾದ 3C ಪ್ರಮಾಣೀಕರಣ ಪ್ರಾಧಿಕಾರದಲ್ಲಿ PQL110 ಮಾದರಿ ಸಂಖ್ಯೆಯ ಹೊಸ ಒನ್‌ಪ್ಲಸ್ ಸಾಧನವನ್ನು ಗುರುತಿಸಲಾಗಿದೆ. ಈ ಮಾದರಿಯು ಮುಂಬರುವ ಒನ್‌ಪ್ಲಸ್ ಏಸ್ 6 ಎಂದು ಟೆಕ್ ವಲಯದಲ್ಲಿ ಬಲವಾಗಿ ನಂಬಲಾಗಿದೆ.ಈ ಪಟ್ಟಿಯು ಫೋನ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದನ್ನು ದೃಢಪಡಿಸಿದ್ದು, ಈ ಫೋನ್ 120W ವೇಗದ ಚಾರ್ಜರ್ ಬೆಂಬಲ ಹೊಂದಿರಲಿದೆ. ಇದು ಒನ್‌ಪ್ಲಸ್‌ನಿಂದ ಬಿಡುಗಡೆಯಾಗಲಿರುವ ಅತ್ಯಂತ ವೇಗದ ಚಾರ್ಜಿಂಗ್ ಸಾಮರ್ಥ್ಯದ ಫೋನ್‌ಗಳಲ್ಲಿ ಒಂದಾಗಲಿದೆ. ಹಾಗಾದರೆ, ಮುಂಬರಲಿರುವ ಒನ್‌ಪ್ಲಸ್ ಏಸ್ 6 ಫೋನಿನ ಇರೀಕ್ಷಿತ ಫೀಚರ್ಸ್ ಯಾವುವು ಮತ್ತು ಭಾರತಕ್ಕೆ ಯಾವಾಗ ಆಗಮಿಸಲಿದೆ ಎಂಬುದನ್ನು ನೋಡೋಣ ಬನ್ನಿ.

OnePlus Ace 6: ನಿರೀಕ್ಷಿತ ವೈಶಿಷ್ಟ್ಯಗಳು ಯಾವುವು?
OnePlus Ace 6 ಫೋನಿನ 3C ಪಟ್ಟಿ ಕೇವಲ ಒಂದು ಹಿಂಟ್ ಆಗಿದ್ದರೂ, ಆಂತರಿಕ ಸೋರಿಕೆಗಳು ಈ ಸಾಧನವು ಫ್ಲ್ಯಾಗ್‌ಶಿಪ್-ದರ್ಜೆಯ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಸೂಚಿಸುತ್ತವೆ.

ಡಿಸ್ಪ್ಲೇ: 1.5K ರೆಸಲ್ಯೂಶನ್, ಗಮನಾರ್ಹವಾದ 165Hz ರಿಫ್ರೆಶ್ ದರ ಮತ್ತು ಸುರಕ್ಷತೆಗಾಗಿ ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ BOE OLED ಡಿಸ್ಪ್ಲೇಯನ್ನು ನಿರೀಕ್ಷಿಸಲಾಗಿದೆ.

120W ಫಾಸ್ಟ್ ಚಾರ್ಜಿಂಗ್ ಇರುವ ಹೊಸ ಮಿಡ್‌ರೇಂಜ್ OnePlus ಫೋನ್ ಆಗಮಿಸಲಿದೆ!

ಪ್ರೊಸೆಸರ್: ಈ ಫೋನ್ ಶಕ್ತಿಶಾಲಿ ಸ್ನಾಪ್‌ಡ್ರಾಗನ್ 8 ಎಲೈಟ್ (Snapdragon 8 Elite) ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಬಹುದು ಎಂದು ವದಂತಿಗಳಿವೆ.

ಬ್ಯಾಟರಿ: ಫೋನ್‌ಗೆ ಶಕ್ತಿ ತುಂಬಲು 7,800mAh ನ ದೈತ್ಯ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದನ್ನು 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಸೇರಿಸಲಾಗಿದೆ. ಸ್ಲಿಮ್ ವಿನ್ಯಾಸದೊಂದಿಗೆ ಈ ದೊಡ್ಡ ಬ್ಯಾಟರಿ ನೀಡಿದರೆ, ಇದು ಮಾರುಕಟ್ಟೆಯಲ್ಲಿ ಗೇಮ್-ಚೇಂಜರ್ ಆಗಲಿದೆ.

ಇತರ ವೈಶಿಷ್ಟ್ಯಗಳು: ಲೋಹದ ಮಧ್ಯದ ಚೌಕಟ್ಟು ಮತ್ತು ನೀರು ಹಾಗೂ ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಸಹ ನಿರೀಕ್ಷಿಸಲಾಗಿದೆ. ಇಮೇಜಿಂಗ್‌ಗಾಗಿ, ಚೀನಾದ ಮಾದರಿಯು 50MP ಮುಖ್ಯ ಕ್ಯಾಮೆರಾವನ್ನು ಹೊಂದಿರಬಹುದು.

ಭಾರತಕ್ಕೆ ಒನ್‌ಪ್ಲಸ್ 15R ಆಗಿ ಆಗಮನ?
ಒನ್‌ಪ್ಲಸ್ ತನ್ನ ಚೀನಾದ 'ಏಸ್' ಸರಣಿಯನ್ನು ಭಾರತದಲ್ಲಿ 'ಆರ್' (R) ಸರಣಿಯಾಗಿ ಮರುಬ್ರಾಂಡ್ ಮಾಡುವುದು ಹೊಸ ವಿಷಯವಲ್ಲ. ನಾವು ಗಮನಿಸುವುದಾದರೆ, ಈ ಹಿಂದಿನ ಒನ್‌ಪ್ಲಸ್ ಏಸ್ 5 ಭಾರತದಲ್ಲಿ ಒನ್‌ಪ್ಲಸ್ 13R ಆಗಿ ಬಿಡುಗಡೆಯಾಗಿತ್ತು. ಇದೇ ಮಾದರಿಯಲ್ಲಿ, ಒನ್‌ಪ್ಲಸ್ ಏಸ್ 6 ಸಹ ಭಾರತೀಯ ಮಾರುಕಟ್ಟೆಗೆ ಒನ್‌ಪ್ಲಸ್ 15R ಆಗಿ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಇಷ್ಟೇ ಅಲ್ಲದೆ,

ಭಾರತೀಯ ಬಳಕೆದಾರರಿಗೆ ಒಂದು ಹೆಚ್ಚುವರಿ ಸಿಹಿ ಸುದ್ದಿ ಎಂದರೆ, 15R ಮಾದರಿಯು ಟೆಲಿಫೋಟೋ ಕ್ಯಾಮೆರಾದಂತಹ ಹೆಚ್ಚುವರಿ ಫೀಚರ್‌ಗಳನ್ನು ಸಹ ಒಳಗೊಂಡಿರುವ ಸಾಧ್ಯತೆಯಿದೆ. ಒನ್‌ಪ್ಲಸ್ 15 ಅನ್ನು ನವೆಂಬರ್ 13 ರಂದು ಜಾಗತಿಕವಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಆದರೆ 15R ರ ಬಿಡುಗಡೆಯ ಕುರಿತು ಕಂಪನಿಯಿಂದ ಅಧಿಕೃತ ಘೋಷಣೆಗಾಗಿ ಭಾರತೀಯ ಗ್ರಾಹಕರು ಕಾತರದಿಂದ ಕಾಯುತ್ತಿದ್ದಾರೆ.

Best Mobiles in India

English summary
OnePlus Ace 6 has been spotted on China's 3C certification, confirming 120W fast charging support. Rumors suggest the device will feature a powerful Snapdragon 8 Elite chipset, a massive 7,800mAh battery, a 165Hz BOE OLED display, and an IP68 rating. The device is widely anticipated to be re-branded as the OnePlus 15R for the Indian and global markets, possibly featuring a telephoto camera
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+