OnePlus Ace 6T (15R) ಫಸ್ಟ್ ಲುಕ್ ಔಟ್..8,000mAh ಬ್ಯಾಟರಿ ಕನ್ಫರ್ಮ್!
OnePlus 15 ನಂತರ, ಇದು ಸಹೋದರನಾಗಿ ಮಿಡ್‌ರೇಂಜ್ ಪ್ರೀಮಿಯಂ OnePlus Ace 6T ಫೋನ್ ಶೀಘ್ರದಲ್ಲೇ ಚೀನಾದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದೇ ಫೋನ್ ಭಾರತ ಸೇರಿದಂತೆ ಜಾಗತಿಕವಾಗಿ OnePlus 15R ಆಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂಬ ಸುದ್ದಿಗಳನ್ನು ನೀವು ಈಗಾಗಲೇ ತಿಳಿದಿರಬಹುದು. ಇದೀಗ ಕಂಪೆನಿಯು ಈ ಬಹುನಿರೀಕ್ಷಿತ OnePlus Ace 6T ವಿನ್ಯಾಸ ಮತ್ತು ನಿರೀಕ್ಷಿತ ಬಣ್ಣಗಳ ಮೊದಲ ನೋಟವನ್ನು ನಮಗೆ ಒದಗಿಸಿದೆ.
ಹೌದು, OnePlus ತನ್ನ ಮುಂಬರುವ OnePlus Ace 6T ಬಗ್ಗೆ ಮೊದಲ ಬಾರಿಗೆ ಅಧಿಕೃತ ಚಿತ್ರಗಳನ್ನು ಹಂಚಿಕೊಂಡಿದ್ದು, ಈಗ ಹೊರಬಿದ್ದಿರುವ ಟೀಸರ್‌ಗಳು ಫೋನ್‌ನ ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತಿವೆ. ಈಗಾಗಲೇ ಲೀಕ್ ಆದ ಚಿತ್ರಗಳಲ್ಲಿ ಕಾಣಿಸಿದಂತೆ, OnePlus 15 ರಂತೆಯೇ ಈ OnePlus Ace 6T ಫೋನ್ ಕೂಡ ಫ್ಲಾಟ್ ಫ್ರೇಮ್ ವಿನ್ಯಾಸ ಮತ್ತು ಚದರ ಕ್ಯಾಮೆರಾ ಅಲಂಕಾರದೊಂದಿಗೆ ಬರಲಿದೆ ಎಂದು ದೃಢಪಡಿಸಲಾಗಿದೆ.
OnePlus Ace 6T: ಫ್ಲಾಟ್ ಫ್ರೇಮ್ ವಿನ್ಯಾಸ ಮತ್ತು ಮೂರು ಬಣ್ಣಗಳ ಆಯ್ಕೆ!
OnePlus Weibo ನಲ್ಲಿ ಬಿಡುಗಡೆ ಮಾಡಿದ ಚಿತ್ರಗಳಲ್ಲಿ, OnePlus Ace 6T ಫೋನ್ ಅನ್ನು ಕಪ್ಪು, ಹಸಿರು ಮತ್ತು ನೇರಳೆ (violet) ಬಣ್ಣಗಳಲ್ಲಿ ನೋಡಬಹುದು. ಚಿತ್ರಗಳಲ್ಲಿ ಕಾಣಿಸಿರುವಂತೆ, ಈ ಫೋನ್‌ನಲ್ಲಿ ಸಮತಟ್ಟಾದ ಫ್ರೇಮ್ ಮತ್ತು ದೊಡ್ಡ ಫ್ಲಾಟ್ ಡಿಸ್‌ಪ್ಲೇ ಇದೆ. OnePlus ಹೇಳುವಂತೆ, ಇದರಲ್ಲಿ "ಅಲ್ಟ್ರಾ-ನ್ಯಾರೋ" ಬೆಸೆಲ್‌ಗಳು ಇರುತ್ತವೆ. ಇನ್ನು ಫೋನಿನ ಹಿಂಭಾಗದಲ್ಲಿ ಗ್ಲಾಸ್-ಫೈಬರ್ ಆಧಾರಿತ 'ಸಿಲ್ಕ್ ಗ್ಲಾಸ್' ಫಿನಿಷ್ ನೀಡಲಾಗಿರುವುದನ್ನು ಸಹ ನೋಡಬಹುದು.
OnePlus Ace 6T: OnePlus 15 ತರಹದ ಕ್ಯಾಮೆರಾ ಡಿಸೈನ್
ಹಿಂಭಾಗದ ಚೌಕಾಕಾರದ ಕ್ಯಾಮೆರಾ ಮೋಷೂಲ್ OnePlus 15 ನಲ್ಲಿ ಕಂಡ ವಿನ್ಯಾಸದಂತೆಯೇ ಇದೆ. ಕಂಡಂತೆ, ಇದು ಎರಡು ಕ್ಯಾಮೆರಾ ಸೆನ್ಸಾರ್‌ಗಳು ಮತ್ತು ಒಂದು LED ಫ್ಲ್ಯಾಶ್ ಹೊಂದಿದೆ. ಸೆನ್ಸಾರ್‌ಗಳು ಲಂಬವಾಗಿ ಪಿಲ್-ಆಕಾರದಲ್ಲಿ ಅಳವಡಿಸಲಾಗಿದೆ. ಇಷ್ಟೇ ಅಲ್ಲದೆ, ಈ Ace 6T ಫೋನಿನಲ್ಲಿಯೂ OnePlus ತನ್ನ ಫ್ಲಾಗ್‌ಶಿಪ್ ಮಾದರಿಗಳಲ್ಲಿರುವಂತೆ ಕಸ್ಟಮೈಸ್ ಮಾಡಬಹುದಾದ Plus Key ಒದಗಿಸಿದೆ. ಇದರಿಂದ ಈ ಫೋನ್ ಕುರಿತ ಹೈಪ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

OnePlus Ace 6T: 8,000mAh ಬ್ಯಾಟರಿ
OnePlus Ace 6T ಫೋನಿನ ವಿನ್ಯಾಸ ಮತ್ತು ಬಣ್ಣಗಳ ಜೊತೆಗೆ, ಕಂಪನಿಯು ಈ ಮುಂಬರುವ ಹ್ಯಾಂಡ್‌ಸೆಟ್‌ನ ಪ್ರಮುಖ ವಿವರಣೆಯನ್ನು ಸಹ ಬಹಿರಂಗಪಡಿಸಿದೆ. ಬ್ರ್ಯಾಂಡ್ ಪ್ರಕಾರ, ಮುಂಬರುವ OnePlus Ace 6T ಫೋನ್ ಬೃಹತ್ 8,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವುದು ಖಚಿತವಾಗಿದೆ. ಇದು ಇಲ್ಲಿಯವರೆಗಿನ ಯಾವುದೇ OnePlus ಸ್ಮಾರ್ಟ್‌ಫೋನ್‌ಗಿಂತ ದೊಡ್ಡ ಸೆಲ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
OnePlus Ace 6T: Snapdragon 8 Gen 5 ಇರುವ ಚಿಪ್‌ಸೆಟ್ ಸಾಧ್ಯತೆ
OnePlus Ace 6T ಫೋನಿನ ಅಧಿಕೃತ ಸ್ಪೆಸಿಫಿಕೇಶನ್‌ಗಳ ಬಗ್ಗೆ OnePlus ಇನ್ನೂ ಸಂಪೂರ್ಣ ಮಾಹಿತಿ ನೀಡಿಲ್ಲ. ಆದರೆ ನಂಬಲರ್ಹ ಟಿಪ್‌ಸ್ಟರ್ @Gadgetsdata ಪ್ರಕಾರ, OnePlus Ace 6T ನಲ್ಲಿ Snapdragon 8 Gen 5 ಪ್ರೊಸೆಸರ್ ಇರಬಹುದು. ಇದು Snapdragon 8 Elite ಮಟ್ಟದ ಶಕ್ತಿಶಾಲಿ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಕೆಲವು ವರದಿಗಳು ಈ ಫೋನ್ 50MP ಮುಖ್ಯ ಕ್ಯಾಮೆರಾ, ಮತ್ತು 15MP ಅಲ್ಟ್ರಾ-ವೈಡ್ ಕ್ಯಾಮೆರಾ ನಿರೀಕ್ಷೆಯಿದೆ ಎಂದು ಹೇಳಿವೆ.
ಭಾರತದಲ್ಲಿ OnePlus 15R ಆಗಿ ಬಿಡುಗಡೆಯಾಗಲಿದೆ
OnePlus Ace 6T ಚೀನಾದ ಬಿಡುಗಡೆಯಾದ ನಂತರ, ಭಾರತ ಹಾಗೂ ಇತರ ಮಾರುಕಟ್ಟೆಗಳಲ್ಲಿ OnePlus 15R ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಇದರ ವಿನ್ಯಾಸ, ಬ್ಯಾಟರಿ ಸಾಮರ್ಥ್ಯ ಮತ್ತು ಫೀಚರ್ಸ್‌ಗಳನ್ನು ಗಮನಿಸಿದರೆ, ಇದು ಮಧ್ಯಮ-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ದೊಡ್ಡ ಸ್ಪರ್ಧೆಯಾಗಿ ಕಾಣಬಹುದು. ಏನಂತಿರಾ?


Click it and Unblock the Notifications








