OnePlus Ace 6T(15R): 50MP ಮುಖ್ಯ ಕ್ಯಾಮೆರಾ, 8,300mAh ಬ್ಯಾಟರಿ ಖಚಿತ!
OnePlus ತನ್ನ ಮುಂದಿನ ಸ್ಮಾರ್ಟ್‌ಫೋನ್ OnePlus Ace 6T ಅನ್ನು ಇದೇ ಡಿಸೆಂಬರ್ 3 ರಂದು ಚೀನಾದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಕಳೆದ ಕೆಲವು ದಿನಗಳಲ್ಲಿ ಈ ಮಾದರಿಯ ಪ್ರಮುಖ ವೈಶಿಷ್ಟ್ಯಗಳನ್ನು ಅಧಿಕೃತವಾಗಿ ಹಂಚಿಕೊಳ್ಳುತ್ತಿದೆ. ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಇದು OnePlus 15R ಎಂಬ ಹೆಸರಿನಲ್ಲಿ ಬರಲಿದೆ ಎಂಬ ವರದಿಗಳಿಂದಾಗಿ, ಚೀನಾದಲ್ಲಿ ಮೊದಲು ಬಿಡುಗಡೆಯಾಗುತ್ತಿರುವ ಈ ಫೋನ್ ಕುರಿತು ಹೆಚ್ಚು ಕುತೂಹಲವಿದೆ. ಇದೀಗ ಮುಂಬರುವ ಈ ಫೋನಿನ ಮತ್ತೊಂದು ಕುತೂಹಲದ ಪ್ರಮುಖ ಮಾಹಿತಿಯು ಬಹಿರಂಗವಾಗಿದೆ.!
ಹೌದು, Weibo ವೇದಿಕೆಯಲ್ಲಿ OnePlus ಪ್ರಕಟಿಸಿದ ಅಧಿಕೃತ ಮಾಹಿತಿಯ ಪ್ರಕಾರ, OnePlus Ace 6T ನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರುವುದು ಖಚಿತವಾಗಿದೆ. ಕಂಪೆನಿಯ ಪ್ರಕಟಿಸಿರುವ ಹೊಸ ಪ್ರಚಾರದ ಚಿತ್ರಗಳಲ್ಲಿ, ಈ ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ ಎಂಬುದು ಸಹ ದೃಢಪಟ್ಟಿದೆ. ಇದರಲ್ಲಿ 50MP ಮುಖ್ಯ ಸೆನ್ಸರ್ ಜೊತೆಗೆ 50MP ಅಲ್ಟ್ರಾ-ವೈಡ್ ಕ್ಯಾಮೆರಾ ನೀಡಲಾಗುವ ಸಾಧ್ಯತೆ ಇದೆ. ಇನ್ನು ಕಂಪೆನಿಯು, ಈ ಫೋನಿನಲ್ಲಿ Sony Ultra Vision ಸೆನ್ಸರ್ ಬಳಕೆಯಿಂದ ಫ್ಲ್ಯಾಗ್‌ಶಿಪ್ ಮಟ್ಟದ ಸ್ಪಷ್ಟ ಚಿತ್ರಗಳು ದೊರೆಯುತ್ತದೆ ಎಂದು ಹೇಳಿಕೊಂಡಿದೆ.
ಡಿಸೆಂಬರ್ 3 ರಂದು ಅಧಿಕೃತ ಲಾಂಚ್
ನಾವು ಈಗಾಗಲೇ ತಿಳಿದಿರುವಂತೆ, OnePlus Ace 6T ಅನ್ನು ಚೀನಾದಲ್ಲಿ ಡಿಸೆಂಬರ್ 3 ರಂದು ಸಂಜೆ 7 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಭಾರತೀಯ ಸಮಯದಂತೆ ಸಂಜೆ 4:30 ಕ್ಕೆ OnePlus Ace 6T ಫೋನ್ ಚೀನಾದಲ್ಲಿ ಬಿಡುಗಡೆಯಾಗಲಿದೆ. OnePlus ಈಗಾಗಲೇ ತನ್ನ ಮುಂಬರುವ ಈ OnePlus Ace 6T ಸ್ಮಾರ್ಟ್‌ಫೋನ್ ಕುರಿತು ಹಲವಾರು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಫೋನ್ 8,300mAh ಗ್ಲೇಷಿಯರ್ ಬ್ಯಾಟರಿ ಬಳಸಲಾಗುತ್ತದೆ ಎಂದು ಹೇಳಿದೆ. ಹಾಗಾಗಿ, ಇದು OnePlus ಶ್ರೇಣಿಯಲ್ಲಿ ಅತ್ಯಂತ ದೊಡ್ಡ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಫೋನ್ ಆಗಿ ಹೊರಹೊಮ್ಮಲಿದೆ.

ಇಷ್ಟೇ ಅಲ್ಲದೆ, OnePlus ಚೀನಾ ಅಧ್ಯಕ್ಷ ಲಿ ಜೀ ಲೂಯಿಸ್, OnePlus Ace 6T ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ವಿಶ್ವದ ಮೊದಲ ಫೋನ್ ಆಗಲಿದೆ ಎಂದು ಬಹಿರಂಗಪಡಿಸಿದ್ದಾರೆ. ಇದು ಓರಿಯನ್ CPU ಮತ್ತು ಅಡ್ರಿನೊ GPU ಅನ್ನು ಒಳಗೊಂಡಿದೆ. ಈ ಪೋನ್ AnTuTu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 3.56 ಮಿಲಿಯನ್‌ಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದೆ ಎಂದು ಒನ್‌ಪ್ಲಸ್ ಹೇಳಿಕೊಂಡಿದೆ. ಇನ್ನು ಪ್ರೊಸೆಸರ್ ಅನ್ನು "Wind Chaser Gaming Kerne" ನೊಂದಿಗೆ ಜೋಡಿಸಲಾಗುವುದು ಎಂದು ಕಂಪನಿಯು ಬಹಿರಂಗಪಡಿಸಿದೆ.
ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ OnePlus Ace 6T IP66 + IP68 + IP69 + IP69K ರೇಟಿಂಗ್‌ಗಳೊಂದಿಗೆ ರವಾನೆಯಾಗುತ್ತದೆ. ಇದು ಭದ್ರತೆಗಾಗಿ 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿರುತ್ತದೆ. ಮುಂಬರುವ ಹ್ಯಾಂಡ್‌ಸೆಟ್ "ಸ್ಟ್ಯಾಂಡರ್ಡ್ ಬೈಪಾಸ್ ಪವರ್ ಸಪ್ಲೈ" ಮತ್ತು ಫ್ಲ್ಯಾಗ್‌ಶಿಪ್ ಒನ್‌ಪ್ಲಸ್ 15 ರಂತೆಯೇ ಅದೇ ಗೈರೊಸ್ಕೋಪ್ ಸಂವೇದಕವನ್ನು ಹೊಂದಿರುವುದು ದೃಢಪಡಿಸಲಾಗಿದೆ. ಫೋನ್ ಅನ್ನು ಕಪ್ಪು, ಹಸಿರು ಮತ್ತು ವಯಲೆಟ್ ಬಣ್ಣಗಳಲ್ಲಿ ಮಾರುಕಟ್ಟೆಗೆ ತರಲಾಗುತ್ತಿದೆ. ಜೊತೆಗೆ AI ಸಾಮರ್ಥ್ಯಗಳನ್ನು ಬಹಳ ಮಟ್ಟಿಗೆ ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಇದೇ ಡಿಸೆಂಬರ್ 17 ರಂದು ಬಿಡುಗಡೆ ಮಾಡುತ್ತಿರುವುದನ್ನು OnePlus ಖಚಿತಪಡಿಸಿದೆ. ಮೊದಲೇ ಹೇಳಿದಂತೆ, ಚೀನಾದಲ್ಲಿ OnePlus Ace 6T ಹೆಸರಿನಲ್ಲಿ ಲಾಂಚ್ ಆಗುವ ನಂತರ ಭಾರತದಲ್ಲಿ ಇದು OnePlus 15R ಆಗಿ ಬರುತ್ತಿರುವುದು ಬಹುತೇಕ ಖಚಿತವಾಗಿದೆ. ಈ ಬಿಡುಗಡೆಯಿಂದಾಗಿ, OnePlus 15R ವೈಶಿಷ್ಟ್ಯಗಳ ಬಗ್ಗೆ ಮೊದಲೇ ತಿಳಿಯುವ ಅವಕಾಶವು ನಮಗೆ ಲಭ್ಯವಾಗುತ್ತಿದೆ. ಡಿಸೆಂಬರ್ 3 ರಂದು ನಡೆಯುವ ಲಾಂಚ್ ಇವೆಂಟ್‌ನಲ್ಲಿ ತಾಜಾ ಅಪ್ಡೇಟ್‌ಗಳಿಗಾಗಿ ಕನ್ನಡ ಗಿಜ್‌ಬಾಟ್ ಅನ್ನು ಫಾಲೋ ಮಾಡುತ್ತಿರಿ. ಮತ್ತು ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








