Home
ಮೊಬೈಲ್

OnePlus 15R ಲಾಂಚ್ ಹತ್ತಿರ: ಚೀನಾದ ವೇಳಾಪಟ್ಟಿ ಅಧಿಕೃತ, ಫೀಚರ್ಸ್ ಪ್ರಕಟ!

ಭಾರತದಲ್ಲಿ ಬಹುನಿರೀಕ್ಷಿತ ಮಿಡ್‌ರೇಂಜ್ ಪ್ರೀಮಿಯಂ ಸ್ಮಾರ್ಟ್‌ಫೋನ್ OnePlus 15R ಅನ್ನು ಇದೇ ಡಿಸೆಂಬರ್ 17 ರಂದು ಬಿಡುಗಡೆ ಮಾಡುತ್ತಿರುವುದನ್ನು OnePlus ಖಚಿತಪಡಿಸಿದೆ. ಇಲ್ಲಿಯವರೆಗೂ ನಾವು ತಿಳಿಯಲಾಗಿರುವ ಗಮನಾರ್ಹ ವಿಷಯವೆಂದರೆ, ಈ ಫೋನ್ ಈಗ ಚೀನಾದಲ್ಲಿ OnePlus Ace 6T ಹೆಸರಿನಲ್ಲಿ ಮೊದಲು ಲಾಂಚ್ ಆಗಲಿದ್ದು, ಅದರ ನಂತರ ಭಾರತದಲ್ಲಿ OnePlus 15R ಆಗಿ ಬರುತ್ತಿದೆ. ಇದಕ್ಕೆ ಪೂರಕವಾಗಿ, OnePlus ತನ್ನ ಮುಂದಿನ ಪವರ್-ಪ್ಯಾಕ್‌ಡ್ ಸ್ಮಾರ್ಟ್‌ಫೋನ್ OnePlus Ace 6T ಅನ್ನು ಇದೇ ಡಿಸೆಂಬರ್ ಮೊದಲ ವಾರದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡುತ್ತಿದೆ.

ಹೌದು, OnePlus ತನ್ನ ಅಧಿಕೃತ ವೀಬೊ (Weibo) ಪ್ಲಾಟ್ಫಾರ್ಮ್‌ನಲ್ಲಿ ಹಂಚಿಕೊಂಡ ಪ್ರಕಟಣೆಯ ಪ್ರಕಾರ, OnePlus Ace 6T ಫೋನ್ ಡಿಸೆಂಬರ್ 3 ರಂದು ಸ್ಥಳೀಯ ಸಮಯ ಸಂಜೆ 7 ಗಂಟೆಗೆ (ಭಾರತೀಯ ಸಮಯ ಸಂಜೆ 4:30ಕ್ಕೆ) ಲಾಂಚ್ ಆಗಲಿದೆ. ಈ ಲಾಂಚ್ ದಿನಾಂಕದೊಂದಿಗೆ, OnePlus ಈ ಫೋನ್‌ನ ಕೆಲವು ಮುಖ್ಯ ಫೀಚರ್ಸ್‌ಗಳನ್ನು ಹೊರಬಿಟ್ಟಿದೆ. ಈ ಚೀನಾದ OnePlus Ace 6T ಫೋನನ್ನೇ ಭಾರತದಲ್ಲಿ OnePlus 15R ಹೆಸರಿನಲ್ಲಿ ಪರಿಚಯಿಸುವುದು ಬಹುತೇಕ ಖಚಿತವಾಗಿರುವುದರಿಂದ, ಅಲ್ಲಿನ ಬಿಡುಗಡೆ ಕುರಿತು ಭಾರತೀಯ ಬಳಕೆದಾರರು ಸಹ ದೊಡ್ಡ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಪ್ರಸ್ತುತ OnePlus Ace 6T ಫೋನ್ ಚೀನಾದಲ್ಲಿ ಕೇವಲ CNY 1 (ಸುಮಾರು ರೂ. 12.6) ನಲ್ಲಿ ಚೀನಾ ಆನ್‌ಲೈನ್ ಸ್ಟೋರ್ ಮೂಲಕ ಪ್ರೀ-ಆರ್ಡರ್‌ಗೆ ಲಭ್ಯವಿದೆ. ಈ OnePlus Ace 6T ಫೋನ್ ಆಯ್ದ ಗೇಮ್‌ಗಳಲ್ಲಿ 165 fps ನಲ್ಲಿ 3 ಗಂಟೆಗಳ ಗೇಮ್‌ಪ್ಲೇ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಬಳಕೆದಾರರಿಗೆ ಏಕಕಾಲದಲ್ಲಿ ಆಟಗಳನ್ನು ಆಡಲು ಮತ್ತು ವೀಡಿಯೊಗಳನ್ನು ವೀಕ್ಷಿಸಲು ಸಹ ಅನುಮತಿಸುತ್ತದೆ. ಸ್ಮೂತ್ ಸ್ಕ್ರೋಲಿಂಗ್, ವೇಗವಾದ ರೆಸ್ಪಾನ್ಸ್‌ನಿಂದ ಗೇಮಿಂಗ್ ಹಾಗೂ ಸ್ಟ್ರೀಮಿಂಗ್ ಮಾಡುವ ಬಳಕೆದಾರರಿಗೆ ಇದು ದೊಡ್ಡ ಪ್ಲಸ್ ಪಾಯಿಂಟ್ ಆಗುವ ಸೂಚನೆ ದೊರೆತಿದೆ.

ಇನ್ನು ಇತ್ತೀಚೆಗಷ್ಟೇ OnePlus ಚೀನಾ ಅಧ್ಯಕ್ಷ ಲಿ ಜೀ ಲೂಯಿಸ್, OnePlus Ace 6T ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ವಿಶ್ವದ ಮೊದಲ ಫೋನ್ ಆಗಲಿದೆ ಎಂದು ಬಹಿರಂಗಪಡಿಸಿದ್ದಾರೆ. ಇದು ಓರಿಯನ್ CPU ಮತ್ತು ಅಡ್ರಿನೊ GPU ಅನ್ನು ಒಳಗೊಂಡಿದೆ. ಈ ಪೋನ್ AnTuTu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 3.56 ಮಿಲಿಯನ್‌ಗಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದೆ ಎಂದು ಒನ್‌ಪ್ಲಸ್ ಹೇಳಿಕೊಂಡಿದೆ. ಇನ್ನು ಪ್ರೊಸೆಸರ್ ಅನ್ನು "Wind Chaser Gaming Kerne" ನೊಂದಿಗೆ ಜೋಡಿಸಲಾಗುವುದು ಎಂದು ಕಂಪನಿಯು ಬಹಿರಂಗಪಡಿಸಿದೆ.

OnePlus 15R ಲಾಂಚ್ ಹತ್ತಿರ: ಚೀನಾದ ವೇಳಾಪಟ್ಟಿ ಅಧಿಕೃತ, ಫೀಚರ್ಸ್ ಪ್ರಕಟ!

ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ OnePlus Ace 6T IP66 + IP68 + IP69 + IP69K ರೇಟಿಂಗ್‌ಗಳೊಂದಿಗೆ ರವಾನೆಯಾಗುತ್ತದೆ. ಇದು ಭದ್ರತೆಗಾಗಿ 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿರುತ್ತದೆ. ಮುಂಬರುವ ಹ್ಯಾಂಡ್‌ಸೆಟ್ "ಸ್ಟ್ಯಾಂಡರ್ಡ್ ಬೈಪಾಸ್ ಪವರ್ ಸಪ್ಲೈ" ಮತ್ತು ಫ್ಲ್ಯಾಗ್‌ಶಿಪ್ ಒನ್‌ಪ್ಲಸ್ 15 ರಂತೆಯೇ ಅದೇ ಗೈರೊಸ್ಕೋಪ್ ಸಂವೇದಕವನ್ನು ಹೊಂದಿರುವುದು ದೃಢಪಡಿಸಲಾಗಿದೆ. ಈ ಹಿಂದೆ ಹೇಳಿದಂತೆ, ಈ ಪೋನ್ 8,300mAh ಗ್ಲೇಶಿಯರ್ ಬ್ಯಾಟರಿ ಹೊಂದಿರಬಹುದು ಮತ್ತು ಕಪ್ಪು, ಹಸಿರು ಮತ್ತು ನೇರಳೆ ಮೂರು ಬಣ್ಣಗಳಲ್ಲಿ ಬರುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ನೋಡುವುದಾದರೆ, ಶಕ್ತಿಶಾಲಿ ಬ್ಯಾಟರಿ, ಅತ್ಯಂತ ವೇಗದ ಪ್ರೊಸೆಸರ್, ಗೇಮರ್‌ಗಳಿಗೆ ವಿನ್ಯಾಸಗೊಳಿಸಿದ ವಿಶೇಷ ವೈಶಿಷ್ಟ್ಯಗಳು ಹಾಗೂ ಉನ್ನತ ಮಟ್ಟದ ರಕ್ಷಣಾ ಪ್ರಮಾಣಪತ್ರಗಳೊಂದಿಗೆ OnePlus Ace 6T ಪ್ರೀಮಿಯಂ ಗೇಮಿಂಗ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಗಮನ ಸೆಳೆಯುವ ಎಲ್ಲಾ ಗುಣಗಳನ್ನು ಹೊಂದಿದೆ. ಇದೇ ಫೋನ್ ಭಾರತದಲ್ಲಿ OnePlus 15R ಹೆಸರಿನಲ್ಲಿ ಬರಲಿರುವುದರಿಂದ, ಇದರ ವೈಶಿಷ್ಟ್ಯಗಳ ಬಗ್ಗೆ ಮೊದಲೇ ತಿಳಿಯುವ ಅವಕಾಶ ಲಭ್ಯವಾಗುತ್ತಿದೆ. ಡಿಸೆಂಬರ್ 3 ರಂದು ನಡೆಯುವ ಲಾಂಚ್ ಇವೆಂಟ್‌ನಲ್ಲಿ ತಾಜಾ ಅಪ್ಡೇಟ್‌ಗಳಿಗಾಗಿ ಕನ್ನಡ ಗಿಜ್‌ಬಾಟ್ ಅನ್ನು ಫಾಲೋ ಮಾಡುತ್ತಿರಿ.

Best Mobiles in India

English summary
OnePlus Ace 6T launching on December 3 with powerful gaming features, fast chipset and strong battery. The same phone will arrive in India as OnePlus 15R soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+