ಜನವರಿ 16ರಿಂದ OnePlus Freedom Sale ಆರಂಭ: ಭಾರೀ ಡಿಸ್ಕೌಂಟ್ ಪ್ರಕಟ!
ಭಾರತದಲ್ಲಿ ಈ ವಾರದಿಂದ Freedom Sale ಆರಂಭಿಸುವುದಾಗಿ OnePlus ಅಧಿಕೃತವಾಗಿ ಘೋಷಿಸಿದೆ. ಈ ಸೇಲ್‌ನಲ್ಲಿ ಕಂಪನಿಯ ಹಲವು ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಹಾಗೂ ಆಡಿಯೋ ಉತ್ಪನ್ನಗಳಿಗೆ ತಾತ್ಕಾಲಿಕ ಬೆಲೆ ಇಳಿಕೆ, ಬ್ಯಾಂಕ್ ಡಿಸ್ಕೌಂಟ್ ಮತ್ತು ನೋ-ಕಾಸ್ಟ್ EMI ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಕಂಪೆನಿಯು ತಿಳಿಸಿದ್ದು, ಈ ಆಫರ್‌ಗಳ ಮೂಲಕ, ಹಲವಾರು OnePlus ಉತ್ಪನ್ನಗಳು ಬಿಡುಗಡೆ ಬೆಲೆಯಿಗಿಂತ ಪರಿಣಾಮಕಾರಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
OnePlus Freedom Sale: ದಿನಾಂಕ ಮತ್ತು ಲಭ್ಯತೆ
ಭಾರತದಲ್ಲಿ OnePlus Freedom Sale ಜನವರಿ 16ರಿಂದ ಆರಂಭವಾಗಲಿದೆ. ಈ ಸೇಲ್‌ನಡಿ ಇರುವ ಎಲ್ಲಾ ಆಫರ್‌ಗಳು OnePlus India ಅಧಿಕೃತ ವೆಬ್‌ಸೈಟ್, OnePlus Experience Storeಗಳು, Amazon, Flipkart ಮತ್ತು Reliance Digital, Croma, Vijay Sales, Bajaj Electronics ಮುಂತಾದ ಪ್ರಮುಖ ಆನ್‌ಲೈನ್ ಹಾಗೂ ಆಫ್‌ಲೈನ್ ರಿಟೇಲರ್‌ಗಳಲ್ಲಿ ಲಭ್ಯವಾಗುತ್ತವೆ.
ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಮೇಲೆ ಆಕರ್ಷಕ ಆಫರ್‌ಗಳು
OnePlus ಫ್ಲಾಗ್‌ಶಿಪ್ ವಿಭಾಗದಲ್ಲಿ, ಇತ್ತೀಚಿಗಷ್ಟೇ ರೂ.72,999ಕ್ಕೆ ಬಿಡುಗಡೆಯಾದ OnePlus 15 ಈ ಸೇಲ್‌ನಲ್ಲಿ ರೂ.4,000 ವರೆಗೆ ಬ್ಯಾಂಕ್ ಡಿಸ್ಕೌಂಟ್ ನಂತರ ರೂ.68,999 ಪರಿಣಾಮಕಾರಿ ಬೆಲೆಯಲ್ಲಿ ಲಭ್ಯವಾಗಲಿದೆ. OnePlus 15R ಅನ್ನು ಜನವರಿ 26ರವರೆಗೆ ರೂ.44,999ಕ್ಕೆ ಖರೀದಿಸಬಹುದು. ನಂತರ ಅದರ ಬೆಲೆ ರೂ.45,999 ಆಗಲಿದೆ.
ಇತ್ತ OnePlus 13 ಸರಣಿಯಲ್ಲಿ, OnePlus 13 ಮೇಲೆ ರೂ.8,000 ಬೆಲೆ ಕಡಿತ ಮತ್ತು ರೂ.4,000 ವರೆಗೆ ಬ್ಯಾಂಕ್ ಡಿಸ್ಕೌಂಟ್ ದೊರೆಯಲಿದೆ. ಇದರಿಂದ ಇದರ ಪರಿಣಾಮಕಾರಿ ಬೆಲೆ ರೂ.57,999 ಆಗುತ್ತದೆ. OnePlus 13R ಅನ್ನು ರೂ.37,999ಕ್ಕೆ ಪಡೆಯಬಹುದು. ಜೊತೆಗೆ OnePlus 13s ಕೂಡ ಬೆಲೆ ಇಳಿಕೆಯಿಂದ ರೂ.49,999ಕ್ಕೆ ಲಭ್ಯವಾಗಲಿದೆ. ಈ ಮೂರೂ ಫೋನ್‌ಗಳಿಗೆ ಆರು ತಿಂಗಳವರೆಗೆ ನೋ-ಕಾಸ್ಟ್ EMI ಸೌಲಭ್ಯ ನೀಡಲಾಗುತ್ತಿದೆ.

Nord ಸರಣಿ: ಮಿಡ್-ರೇಂಜ್ ಬಳಕೆದಾರರಿಗೆ ಲಾಭ
OnePlus ಮಿಡ್-ರೇಂಜ್ ವಿಭಾಗದಲ್ಲಿರುವ OnePlus Nord CE 5 ಫೋನ್ ಅನ್ನು ಗ್ರಾಹಕರು ಈಗ ರೂ.22,999ಕ್ಕೆ ಖರೀದಿಸಬಹುದು. OnePlus Nord 5 ಮೇಲೆ ಬೆಲೆ ಕಡಿತ ಮತ್ತು ಬ್ಯಾಂಕ್ ಆಫರ್‌ಗಳೊಂದಿಗೆ ರೂ.30,999ಕ್ಕೆ ಲಭ್ಯವಾಗುತ್ತದೆ. ಈ ಎರಡೂ ಫೋನ್‌ಗಳಿಗೆ ಉಚಿತ ಮ್ಯಾಗ್ನೆಟಿಕ್ ಕೇಸ್ ನೀಡಲಾಗುತ್ತಿದ್ದು, Nord 5 ಗೆ ನೋ-ಕಾಸ್ಟ್ EMI ಆಯ್ಕೆಯೂ ಇದೆ.
ಇಯರ್‌ಬಡ್ಸ್ ಮತ್ತು ಆಡಿಯೋ ಉತ್ಪನ್ನಗಳ ಬೆಲೆ ಇಳಿಕೆ
OnePlus ತನ್ನ ಆಡಿಯೋ ಉತ್ಪನ್ನಗಳ ಮೇಲೂ ಗಮನಾರ್ಹ ಡಿಸ್ಕೌಂಟ್ ನೀಡಿದೆ. OnePlus Buds 4 ರೂ.4,999ಕ್ಕೆ, Buds Pro 3 ರೂ.9,999ಕ್ಕೆ ಮತ್ತು Nord Buds 3 ರೂ.1,699ಕ್ಕೆ ಲಭ್ಯವಾಗಲಿವೆ. ಜೊತೆಗೆ Bullets Wireless ಸರಣಿಯ ಉತ್ಪನ್ನಗಳ ಬೆಲೆಯೂ ಗಮನಾರ್ಹವಾಗಿ ಇಳಿಸಲಾಗಿದೆ, ಇದರಿಂದ ಬಜೆಟ್ ಗ್ರಾಹಕರಿಗೂ ಇದು ಆಕರ್ಷಕ ಆಯ್ಕೆಯಾಗಲಿದೆ.
ಟ್ಯಾಬ್ಲೆಟ್‌ಗಳ ಮೇಲೆ ವಿಶೇಷ ಡೀಲ್ಸ್
ಟ್ಯಾಬ್ಲೆಟ್ ವಿಭಾಗದಲ್ಲಿ, OnePlus Pad Go 2 ರೂ.23,999ಕ್ಕೆ ಲಭ್ಯವಾಗುತ್ತದೆ. OnePlus Pad 3 ಮತ್ತು Pad 2 ಮೇಲೆ ಬ್ಯಾಂಕ್ ಡಿಸ್ಕೌಂಟ್ ನೀಡಲಾಗಿದ್ದು, OnePlus Pad Lite ಅನ್ನು ರೂ.11,999ಕ್ಕೆ ಖರೀದಿಸಬಹುದು. ಈ ಆಫರ್‌ಗಳು ಸ್ಟೂಡೆಂಟ್‌ಗಳು ಮತ್ತು ಮನೆ ಬಳಕೆದಾರರಿಗೆ ಉಪಯುಕ್ತವಾಗಿವೆ.ಒಟ್ಟಾರೆಯಾಗಿ, OnePlus Freedom Sale 2026 ಭಾರತದಲ್ಲಿನ ಗ್ರಾಹಕರಿಗೆ ಫ್ಲಾಗ್‌ಶಿಪ್‌ನಿಂದ ಬಜೆಟ್ ಉತ್ಪನ್ನಗಳವರೆಗೆ ಉತ್ತಮ ಮೌಲ್ಯ ನೀಡುವ ಸೇಲ್ ಆಗಿದೆ.


Click it and Unblock the Notifications








