Home
ಮೊಬೈಲ್

ಭರ್ಜರಿ ಸಿಹಿಸುದ್ದಿ: ಬಜೆಟ್ ಬೆಲೆಯ OnePlus 13 Mini ಬರುವುದು ಖಚಿತ!

OnePlus 13 ಸರಣಿಯಲ್ಲಿ OnePlus 13 Mini ಅಥವಾ OnePlus 13T ಹೆಸರಿನಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಒಂದು ಪರಿಚಯವಾಗಲಿದೆ ಎಂಬ ಸುದ್ದಿ ಮೊಬೈಲ್ ಮಾರುಕಟ್ಟೆಯಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದೀಗ, OnePlus ಚೀನಾದ ಅಧ್ಯಕ್ಷ ಲೂಯಿಸ್ ಲೀ ಅವರು ಈ ಕುರಿತು ಹೊಸ ಮಾಹಿತಿ ನೀಡಿರುವುದರಿಂದ, ವಿಶ್ವದಾದ್ಯಂತ OnePlus ಫೋನ್ ಪ್ರಿಯರು ಸಂತೋಷಗೊಂಡಿದ್ದಾರೆ. ಏಕೆಂದರೆ, ಸಾಮಾಜಿಕ ಮಾಧ್ಯಮದಲ್ಲಿ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಫೋನ್‌ಗಾಗಿ ಸುಳಿವು ನೀಡಿದ್ದಾರೆ, ಇದರಿಂದ OnePlus 13 Mini ಅಥವಾ OnePlus 13T ಸ್ಮಾರ್ಟ್‌ಫೋನ್ ಆಗುವುದು ಬಹುತೇಕ ಖಚಿತವಾಗಿದೆ.

ಮಾರುಕಟ್ಟೆಗೆ ಬಜೆಟ್ ಬೆಲೆಯಲ್ಲಿ OnePlus 13 Mini ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿದ್ದವು. ಇದೀಗ OnePlus ಚೀನಾದ ಅಧ್ಯಕ್ಷ ಲೂಯಿಸ್ ಲೀ ಅವರು ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಫೋನ್ ಆಗಮನದ ಬಗ್ಗೆ ಸುಳಿವು ನೀಡಿದ್ದಾರೆ. ವೀಬೋದಲ್ಲಿ ತನ್ನ ಫಾಲೋವರ್ಸ್ ಜೊತೆಗೆ ಈ ಕುರಿತಂತೆ ಮಾಹಿತಿಯನ್ನು ಹಂಚಿಕೊಂಡಿದ್ದು, ಸಣ್ಣ-ಪರದೆಯ OnePlus ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್ ಮಾದರಿಯನ್ನು ಕಂಪೆನಿಯು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದ್ದಾರೆ. ಇದು ಈಗಾಗಲೇ ಆನ್‌ಲೈನಿನಲ್ಲಿ ಕಾಣಿಸಿಕೊಂಡಿರುವ OnePlus 13 Mini ಇರಲಿದ್ದು, ಇದೇ ಅಧಿಕೃತವಾಗುವ ಸಾಧ್ಯತೆಯಿದೆ.

OnePlus 13 Mini ಎಂದು ಹೇಳಲಾದ ಚಿತ್ರಗಳು ಕಪ್ಪು ಮತ್ತು ಬಿಳಿ ಛಾಯೆಗಳಲ್ಲಿ ಈಗಾಗಲೇ ಆನ್‌ಲೈನನಲ್ಲಿ ಕಾಣಿಸಿಕೊಂಡಿವೆ. ಈ ಸ್ಮಾರ್ಟ್‌ಫೋನಿನ ಹಿಂಬಾಗದಲ್ಲಿ ಎರಡು ಲಂಬವಾಗಿ ಜೋಡಿಸಲಾದ ಕ್ಯಾಮೆರಾಗಳೊಂದಿಗೆ ಚದರ ಆಕಾರದ ಡ್ಯುಯಲ್-ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಬರಲಿದೆ. ಜೊತೆಗೆ ಮೂರನೇ ಸೆನ್ಸರ್ ಮತ್ತು LED ಫ್ಲ್ಯಾಷ್ ಅನ್ನು ಬಲಭಾಗದಲ್ಲಿ ಜೋಡಿಸಲಾಗಿದೆ. ಫೋನ್‌ನ ಹಿಂಭಾಗದ ವಿನ್ಯಾಸವು Oppo Reno 13 ಫೋನಿಗೆ ಹೋಲುತ್ತದೆ. ಇನ್ನು ಈ ಹಿಂದಿನ ಸೋರಿಕೆಯ ಮಾಹಿತಿಗಯತೆ, OnePlus 13 Mini ಸ್ಮಾರ್ಟ್‌ಫೋನಿನ ಫೀಚರ್ಸ್ ಈ ಕೆಳಗಿನಂತಿರಬಹುದು. ಬನ್ನಿ ನೋಡೋಣ.

ಚೀನಾ ಮೊಬೈಲ್ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಹಲವಾರು ವದಂತಿಯ ಸುದ್ದಿಗಳ ಪ್ರಕಾರ, ಹೊಸ OnePlus 13 Mini ಸ್ಮಾರ್ಟ್‌ಫೋನ್ ಅತ್ಯಂತ ಕೈಗೆಟುಕುವ Snapdragon 8 Gen 3 Elite ಚಿಪ್‌ನ್ನು ಹೊಂದಿರುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ 6.31-ಇಂಚಿನ LTPO OLED ಪ್ಯಾನೆಲ್ ಅನ್ನು ಹೊಂದಿರುತ್ತದೆ. ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2x ಆಪ್ಟಿಕಲ್ ಜೂಮ್‌ನ್ನು ಹೊಂದಿರುವ 50-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ನ್ನು ಒಳಗೊಂಡ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು.

ಭರ್ಜರಿ ಸಿಹಿಸುದ್ದಿ: ಬಜೆಟ್ ಬೆಲೆಯ OnePlus 13 Mini ಬರುವುದು ಖಚಿತ!

OnePlus 13 Mini ಫೋನ್ ಬೆಲೆ CNY 3,099 (ಸುಮಾರು 37,000 ರೂ.) ಗಿಂತ ಕಡಿಮೆ ಇರಬಹುದು ಎಂದು ವರದಿಗಳು ಸೂಚಿಸುತ್ತವೆ. ಕೆಲವು ಮೂಲಗಳ ಪ್ರಕಾರ, ಈ ಬಾರಿ OnePlus 13 Mini ಸ್ಮಾರ್ಟ್‌ಫೋನ್ ಸ್ಟ್ಯಾಂಡರ್ಡ್ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಬದಲಿಗೆ ಬಾರ್-ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಬಹುದು. ಇದರ ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ, 6,200 mAh ಬ್ಯಾಟರಿಯು ಕೂಡ ಇರಬಹುದು. ಇದರಿಂದ OnePlus 13 ಸರಣಿಯಲ್ಲಿ ಕಡಿಮೆ ಬೆಲೆಯ ಫೋನ್ ಆಗಿರಬಹುದು ಆದರೆ, OnePlus ಕಂಪನಿಯಿಂದ ಈ ಕುರಿತಾದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.

ಈ ಮಾಹಿತಿಗಳು ನಿಖರವಾದರೆ, OnePlus 13 Mini ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ ಅಥವಾ 2025ರ Q2 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯ OnePlus 13 Mini ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. OnePlus ಭಾರತದಲ್ಲಿ ಕೊನೆಯದಾಗಿ T-ಸರಣಿಯ OnePlus 10T ಅನ್ನು ಆಗಸ್ಟ್ 2022 ರಲ್ಲಿ ಬಿಡುಗಡೆ ಮಾಡಿತ್ತು, ಇದರ ಬೆಲೆ ರೂ. 49,999. ಆದ್ದರಿಂದ, ಈ ಹೊಸ OnePlus 13 Mini ಸ್ಮಾರ್ಟ್‌ಫೋನ್ ಭಾರತದಲ್ಲಿ ಲಭ್ಯವಾಗುತ್ತದೆಯೇ ಎಂಬುದನ್ನು ನೋಡಬೇಕಾಗಿದೆ.

OnePlus 13 Mini ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳು ಹೀಗಿರಲಿವೆ:
Snapdragon 8 Elite SoC
6.31-ಇಂಚಿನ 1.5K LTPO OLED ಡಿಸ್ಪ್ಲೇ
6,200mAh ಬ್ಯಾಟರಿ
2x ಆಪ್ಟಿಕಲ್ ಜೂಮ್‌ನ್ನು ಹೊಂದಿರುವ 50MP ಮುಖ್ಯ ಕ್ಯಾಮೆರಾ
ಆಂಡ್ರಾಯ್ಡ್ 15 ಆಧಾರಿತ OxygenOS 15.1

Best Mobiles in India

English summary
OnePlus China President Teases New Compact Flagship; Leaked Renders of OnePlus 13 Mini (OnePlus 13T) Surface Online
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+