OnePlus: ಒನ್‌ಪ್ಲಸ್ 12 ಗ್ಲಾಸಿಯಾ ವೈಟ್ ಸರಣಿಯ ನೂತನ ಸ್ಮಾರ್ಟ್‌ಫೋನ್ ಲಾಂಚ್: ವಾವ್ ಎನಿಸುವ ಫೀಚರ್ಸ್ !
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus smartphone) ಬೇರೆಲ್ಲಾ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚಾಗಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಅದರ ಫೀಚರ್ಸ್‌ಗಳು, ಶೈಲಿ ಎಲ್ಲವೂ ಕೂಡ ವಿಶೇಷವಾಗಿ ಕಂಡು ಬರುವುದರಿಂದ ಗ್ರಾಹಕರು ಕೂಡ ಒನ್‌ಪ್ಲಸ್ ನೂತನ ಮೊಬೈಲ್‌ಗಳು ಮಾರುಕಟ್ಟೆಗೆ ಬರುವುದನ್ನೇ ಕಾದು ಕುಳಿತು ಅವುಗಳನ್ನು ಖರೀದಿಸುವುದು ಸಾಮಾನ್ಯವಾಗಿದೆ. ಈ ನಡುವೆ ಸಂಸ್ಥೆ ನೂತನ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆಗೊಳಿಸಿದೆ. ಹಾಗಾದ್ರೆ ಒನ್‌ಪ್ಲಸ್ ನೂತನವಾಗಿ ಬಿಡುಗಡೆ ಮಾಡಿರುವ ಫೋನ್ ಯಾವುದು ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ, ಬೆಲೆ ಎಷ್ಟಿರಲಿದೆ ಎಂಬ ಸಂಪೂರ್ಣ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ
ಜೂನ್ 3ರಂದು ಒನ್ ಪ್ಲಸ್ (OnePlus) ಸಂಸ್ಥೆ ತನ್ನ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 12 ಅನ್ನು ಹೊಸ ಗ್ಲೇಶಿಯಲ್ ವೈಟ್ ಬಣ್ಣದಲ್ಲಿ ಪರಿಚಯಿಸಿದೆ. ಒನ್ ಪ್ಲಸ್ 12 ಗ್ಲಾಸಿಯಲ್ ವೈಟ್ (OnePlus 12 Glacial White) ಸ್ಮಾರ್ಟ್‌ಫೋನ್ ಇದರ ವಿನ್ಯಾಸವು ಹಿಮನದಿಗಳು ಮತ್ತು ಹಿಮದ ದೃಶ್ಯಗಳಿಂದ ಪ್ರೇರಿತವಾಗಿದೆ ಎಂದು ಚೀನಾದ ಸ್ಮಾರ್ಟ್‌ಫೋನ್ ತಯಾರಕರು ಹೇಳಿದ್ದಾರೆ.

ಹೆಚ್ಚುವರಿಯಾಗಿ, ಒನ್‌ಪ್ಲಸ್ ಎಂಬೆಡೆಡ್ ಎಚಿಂಗ್ ಪ್ರಕ್ರಿಯೆಯನ್ನು ಬಳಸಿಕೊಂಡು ಒನ್‌ಪ್ಲಸ್ 12 ಗ್ಲಾಸಿಯಲ್ ವೈಟ್ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಫೋನ್ ಫ್ರಾಸ್ಟೆಡ್ ಟೆಕ್ಸ್ಚರ್ ಜೊತೆಗೆ ಗ್ಲಾಸ್ ಬ್ಯಾಕ್ ಅನ್ನು ಹೊಂದಿದೆ ಎಂದು ಸಂಸ್ಥೆ ಹೇಳಿದೆ. ಹೊಸ ಬಣ್ಣದ ರೂಪಾಂತರವು ಫ್ಲೋವಿ ಎಮರಾಲ್ಡ್ ಮತ್ತು ಸಿಲ್ಕಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುವುದಾಗಿ ಹೇಳಿದೆ.
ಒನ್‌ಪ್ಲಸ್ 12 ಗ್ಲಾಸಿಯಲ್ ವೈಟ್ (OnePlus 12 Glacial White) ಬೆಲೆ, ಲಭ್ಯತೆ ಮತ್ತು ಕೊಡುಗೆಗಳು:
12GB RAM + 256GB ಸ್ಟೋರೇಜ್ ವೇರಿಯಂಟ್ 64,999 ರೂ. ಬೆಲೆ ಹೊಂದಿದೆ, OnePlus 12 Glacial White ಇದು ಜೂನ್ 6 ರಿಂದ ಒನ್‌ಪ್ಲಸ್ (OnePlus) ಇಂಡಿಯಾ ವೆಬ್‌ಸೈಟ್ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಇಂಡಿಯಾದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಆಫ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್ OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದೆ.
ಇದರ ಜೊತೆಗೆ ಸಂಸ್ಥೆ ಗ್ರಾಹಕರಿಗಾಗಿ ಕೆಲವು ಕೊಡುಗೆಗಳನ್ನು ನೀಡಿದ್ದು, ಗ್ರಾಹಕರು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸುವುದರ ಜೊತೆಗೆ 3,000 ರೂ. ಗಳ ತ್ವರಿತ ಬ್ಯಾಂಕ್ ರಿಯಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ ಈ ಸ್ಮಾರ್ಟ್‌ಫೊನ್ ಖರೀದಿಯ ಮೇಲೆ 2,000 ರೂ. ಗಳ ರಿಯಾಯಿತಿಯನ್ನು ನೀಡುತ್ತಿದೆ ಈ ಆಫರ್ ಬಿಡುಗಡೆ ದಿನದಿಂದ ಜೂನ್ 20 ರವರೆಗೆ ಲಭ್ಯವಿದೆ. ಕಂಪನಿಯು 12 ತಿಂಗಳ ನೋ ಕಾಸ್ಟ್ ಇಎಂಐ ಯೋಜನೆಗೆ ಹೆಚ್ಚುವರಿಯಾಗಿ ಟ್ರೇಡ್-ಇನ್ ಡೀಲ್‌ಗಳಲ್ಲಿ 12,000 ರೂ. ವರೆಗಿನ ಎಕ್ಸ್‌ಚೇಂಜ್ ಬೋನಸ್ ಅನ್ನು ಸಹ ನೀಡುತ್ತಿದೆ.
ಒನ್‌ಪ್ಲಸ್ 12 (OnePlus 12) ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.82 ಇಂಚಿನ QHD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಜೊತೆಗೆ 4500 nits ಗರಿಷ್ಠ ಬ್ರೈಟ್‌ನೆಸ್ ಸಾಮರ್ಥ್ಯ ಹೊಂದಿದೆ. ಸ್ಮಾರ್ಟ್‌ಫೋನ್ Qualcomm Snapdragon 8 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 16GB RAM ಮತ್ತು 512GB ಸ್ಟೋರೇಜ್ ಜೊತೆಗೆ ಜೋಡಿಸಲಾಗಿದೆ. ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ ಪಡೆದಿದೆ, OIS, 48-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸಾರ್ ಮತ್ತು OIS ಜೊತೆಗೆ 64 MP ಟೆಲಿಫೋಟೋ ಕ್ಯಾಮೆರಾದೊಂದಿಗೆ 50 MP ಪ್ರಾಥಮಿಕ ಸೆನ್ಸಾರ್ ಕ್ಯಾಮರಾ ಒಳಗೊಂಡಿದೆ. ಮುಂಭಾಗದಲ್ಲಿ 32MP ಕ್ಯಾಮೆರಾ ಸೆನ್ಸಾರ್ ಹೊಂದಿದೆ.
ಜೊತೆಗೆ ಈ ಸ್ಮಾರ್ಟ್‌ಫೋನ್ 5,400mAh ಬ್ಯಾಟರಿಯಿಂದ ಜೊತೆಗೆ 80W SUPERVOOC ವೇಗದ ವೈಯರ್ಡ್ ಮತ್ತು 50W AIRVOOC ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ


Click it and Unblock the Notifications








