ಒನ್‌ಪ್ಲಸ್‌ ಮತ್ತೇ ನಂ.1..! ಆಪಲ್‌, ಸ್ಯಾಮ್‌ಸಂಗ್‌ ಧೂಳಿಪಟ..!

|

ಭಾರತದ ಪ್ರಮುಖ ಪ್ರಿಮೀಯಂ ಸ್ಮಾರ್ಟ್‌ಫೋನ್‌ ತಯಾರಕನಾಗಿರುವ ಒನ್‌ಪ್ಲಸ್‌ ತನ್ನ ಉತ್ಪನ್ನ ಅಭಿವೃದ್ಧಿ ಕಾರ್ಯತಂತ್ರದ ಜತೆಗೆ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಆಧುನಿಕ ಪ್ರಪಂಚದ ಟೆಕ್ ಪ್ರಿಯ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ತಾನೂ ಉತ್ಪಾದಿಸುವ ಪ್ರತಿ ಉತ್ಪನ್ನವನ್ನು ಎಚ್ಚರಿಕೆಯಿಂದ OnePlus ತಯಾರಿಸುತ್ತಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ನಾವೀನ್ಯತೆ ಮತ್ತು ಕಾರ್ಯಕ್ಷಮತೆಯ ಪರಿಪೂರ್ಣ ಮಿಶ್ರಣವನ್ನು ತರುವಲ್ಲಿ ಒನ್‌ಪ್ಲಸ್‌ ಯಶಸ್ವಿಯಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ ಪ್ರಿಯರನ್ನು ಸೆಳೆಯುವುದು ಬಹಳ ಅಪರೂಪ.

ಒನ್‌ಪ್ಲಸ್‌ ಮತ್ತೇ ನಂ.1..! ಆಪಲ್‌, ಸ್ಯಾಮ್‌ಸಂಗ್‌ ಧೂಳಿಪಟ..!

ನಿರಂತರವಾಗಿ ಬೆಳೆಯುತ್ತಿರುವ ಒನ್‌ಪ್ಲಸ್‌ ಕಂಪನಿ 2018ರ ಸತತ ಎರಡನೇ ತ್ರೈಮಾಸಿಕದಲ್ಲಿಯೂ ಭಾರತೀಯ ಪ್ರಿಮೀಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಪ್ರಮುಖ ಬ್ರಾಂಡ್ ಆಗಿ ಮುಂದುವರಿಯುತ್ತದೆ. Counterpointನ ಇತ್ತೀಚಿನ ವಿಶ್ಲೇಷಣೆ ಪ್ರಕಾರ ಪ್ರಿಮೀಯಂ ಸ್ಮಾರ್ಟ್‌ಫೋನ್‌ಗಳು ತೃತೀಯ ತ್ರೈಮಾಸಿಕದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮಾಡಿವೆಯಂತೆ. ಆಗಿದ್ರೆ, ಒನ್‌ಪ್ಲಸ್‌ನ ಸಾಧನೆಯ ಪಥ ಹೇಗಿತ್ತು ಅಂತಿರಾ..? ಪ್ರಿಮೀಯಂ ಸ್ಮಾರ್ಟ್‌ಫೋನ್‌ ಎಂದರೆ ಆಪಲ್‌, ಸ್ಯಾಮ್‌ಸಂಗ್‌ ಎನ್ನುತ್ತಿರುವವರು ಈಗ ಒನ್‌ಪ್ಲಸ್‌ ಹಿಂದೆ ಬಿದ್ದಿರುವುದು ಏಕೆ ಅಂತಿರಾ..? ಮುಂದೆ ನೋಡಿ..

ಒನ್‌ಪ್ಲಸ್‌ ನಂ.1

ಒನ್‌ಪ್ಲಸ್‌ ನಂ.1

ಇತ್ತೀಚಿನ ವರದಿಗಳ ಪ್ರಕಾರ ಒಟ್ಟಾರೆ ಪ್ರಿಮೀಯಂ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶೇ.83ರಷ್ಟು ಪಾಲುದಾರಿಕೆಯನ್ನು ಒನ್‌ಪ್ಲಸ್‌, ಸ್ಯಾಮ್‌ಸಂಗ್‌ ಮತ್ತು ಆಪಲ್‌ ಹೊಂದಿವೆ. ಇದರಲ್ಲಿ ಸತತ ಎರಡನೇ ತ್ರೈಮಾಸಿಕದಲ್ಲಿಯೂ ಒನ್‌ಪ್ಲಸ್‌ ನಂ. 1 ಪ್ರಿಮೀಯಂ ಸ್ಮಾರ್ಟ್‌ಫೋನ್‌ ತಯಾರಕನಾಗಿ ಮುಂದುವರೆದಿದ್ದು, ಶೇ.30ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಈ ಯಶಸ್ಸನ್ನು ಪಡೆದಿದ್ದಕ್ಕಾಗಿ ಗ್ರಾಹಕರಿಗೆ ಒನ್‌ಪ್ಲಸ್‌ ಧನ್ಯವಾದಗಳನ್ನು ಹೇಳಿದೆ.

ಕಂಪನಿಯ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿ ಕೇವಲ ಐದು ತಿಂಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿ ದಾಖಲೆಗಳನ್ನು ಧೂಳಿಪಟ ಮಾಡಿದೆ. ಅದಲ್ಲದೇ ಒನ್‌ಪ್ಲಸ್‌ನ ಆಕ್ರಮಣಕಾರಿ ಸಾಮಾಜಿಕ ಮಾಧ್ಯಮ ಚಟುವಟಿಕೆ ಮತ್ತು ಜನರು ಒನ್‌ಪ್ಲಸ್‌ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿಕೊಳ್ಳುತ್ತಿರುವುದು ಒನ್‌ಪ್ಲಸ್‌ ಬ್ರಾಂಡ್‌ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಆಕ್ರಮಣಕಾರಿ ಮಾರುಕಟ್ಟೆ ತಂತ್ರ

ಆಕ್ರಮಣಕಾರಿ ಮಾರುಕಟ್ಟೆ ತಂತ್ರ

ನವೀನ ಮಾರುಕಟ್ಟೆ ತಂತ್ರಗಳಿಗೆ ಒನ್‌ಪ್ಲಸ್‌ ಯಾವಾಗಲೂ ಪ್ರಸಿದ್ಧಿಯಾಗಿದ್ದು, ಆನ್‌ಲೈನ್ ​​ಮತ್ತು ಆಫ್‌ಲೈನ್‌ ಜಗತ್ತಿನಲ್ಲಿ ಹೊಸತನ್ನು ಸೃಷ್ಟಿಸಲು ಆತೊರೆಯುತ್ತಿರುತ್ತದೆ. ಕಂಪನಿಯ ಮುಂದಿನ ಡಿವೈಸ್‌ಗಳ ಕುರಿತು ಜನ ಮಾತನಾಡಿಕೊಳ್ಳುವಂತೆ ಒನ್‌ಪ್ಲಸ್‌ ಭಾರೀ ಮಟ್ಟದಲ್ಲಿ ಹೈಪ್‌ ಸೃಷ್ಟಿಸುತ್ತದೆ. ತನ್ನ ಮೊದಲ ಡಿವೈಸ್‌ನಿಂದಲೂ ಉತ್ಪನ್ನಗಳನ್ನು ಜನರ ಬಳಿ ಕೊಂಡೊಯ್ಯಲು ಅನನ್ಯ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ಒನ್‌ಪ್ಲಸ್‌ ಮಾಡುತ್ತಾ ಬಂದಿದೆ.

ಒನ್‌ಪ್ಲಸ್‌ ಯಾವಾಗಲೂ ಗ್ರಾಹಕ ಕೇಂದ್ರಿತ ಬ್ರಾಂಡ್‌ ಆಗಿದ್ದು, ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೇ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ವಿಶ್ವಾಸ ಹೊಂದಿದೆ. ಅದಲ್ಲದೇ ಕಂಪನಿಯು ತನ್ನ ಗ್ರಾಹಕನಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಡಿವೈಸ್‌ ಮಾರಾಟದ ನಂತರವು ಸೇವೆಯಲ್ಲೂ ಉತ್ತಮವಾಗಿದೆ. ಗ್ರಾಹಕರು ಯಾವಾಗಲೂ ಒನ್‌ಪ್ಲಸ್‌ ಮೇಲೆ ಕೇಂದ್ರಿಕೃತವಾಗಿದ್ದು, ಇದಕ್ಕೆ ಪ್ರಮುಖ ಕಾರಣ ಒನ್‌ಪ್ಲಸ್‌ ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಬೇರೆ ಕಂಪನಿಗಳಿಗಿಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದೆ.

ಆಫ್‌ಲೈನ್‌ ಮಾರುಕಟ್ಟೆಯ ವಿಸ್ತರಣೆ

ಆಫ್‌ಲೈನ್‌ ಮಾರುಕಟ್ಟೆಯ ವಿಸ್ತರಣೆ

ಭಾರತದ ಟೆಕ್‌ಪ್ರಿಯ ಸ್ಮಾರ್ಟ್‌ಫೋನ್‌ ಬಳಕೆದಾರರು ಹಾಗೂ ಒನ್‌ಪ್ಲಸ್‌ ಅಭಿಮಾನಿಗಳಿಗೆ ತನ್ನ ಉತ್ಪನ್ನಗಳು ಯಾವುದೇ ತೊಂದರೆಯಿಲ್ಲದೇ ಲಭ್ಯವಾಗಬೇಕು ಎಂದು ರಿಲಾಯನ್ಸ್‌ ಡಿಜಿಟಲ್‌ ಕಂಪನಿಯೊಂದಿಗೆ ಒನ್‌ಪ್ಲಸ್‌ ಒಪ್ಪಂದ ಮಾಡಿಕೊಂಡಿದೆ. ಹೊಸ ಒಪ್ಪಂದದಂತೆ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗಳಲ್ಲಿ ಒನ್‌ಪ್ಲಸ್‌ ಉತ್ಪನ್ನಗಳನ್ನು ಅನುಭವಿಸಲು ಗ್ರಾಹಕರಿಗೆ ಆಫ್‌ಲೈನ್‌ ಅವಕಾಶ ಸಿಕ್ಕಂತಾಗಿದೆ.

ಒನ್‌ಪ್ಲಸ್‌ 6T ಲಾಂಚ್‌ ಆಗಿ ಎರಡು ದಿನಗಳ ನಂತರ ಅಂದರೆ, ನವೆಂಬರ್ 2, 2018ರಂದು ದೇಶದ 9 ನಗರಗಳ 12 ವಿವಿಧ ಸ್ಥಳಗಳಲ್ಲಿ ಪಾಪ್ ಅಪ್‌ಗಳನ್ನು ಸ್ಥಾಪಿಸಲಾಗುವುದು ಎಂದು ಒನ್‌ಪ್ಲಸ್‌ ಘೋಷಿಸಿದೆ. ಇದರ ಮೂಲಕ್‌ ತನ್ನ ಪಾಪ್‌ ಅಪ್‌ ಸಂಪ್ರದಾಯವನ್ನು ಒನ್‌ಪ್ಲಸ್‌ 6T ಜತೆಗೂ ಮುಂದುವರೆಸಿಕೊಂಡು ಬರುತ್ತಿದೆ. ಈ ಪಾಪ್‌ಅಪ್‌ಗಳು ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನ್ನು ಅನುಭವಿಸಲು ಗ್ರಾಹಕರಿಗೆ ಆಯ್ಕೆಯನ್ನು ನೀಡುವುದಲ್ಲದೇ, ಖರೀದಿಗೂ ಮುನ್ನ ಇತರ ಬಳಕೆದಾರರೊಂದಿಗೆ ಮತ್ತು ಒನ್‌ಪ್ಲಸ್ ತಂಡದೊಂದಿಗೆ ಮಾತುಕತೆಯನ್ನು ನಡೆಸಿ ಡಿವೈಸ್‌ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

ಹೊಸ ಫ್ಲಾಗ್‌ಶಿಪ್‌ನ ದಾರಿಯಲ್ಲಿ

ಹೊಸ ಫ್ಲಾಗ್‌ಶಿಪ್‌ನ ದಾರಿಯಲ್ಲಿ

ಬಹುನಿರೀಕ್ಷಿತ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 6Tಯನ್ನು ಅನಾವರಣಗೊಳಿಸಲು ಒನ್‌ಪ್ಲಸ್‌ ಸಜ್ಜಾಗಿದೆ. ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ನ ಯಶಸ್ಸನ್ನು ಮುಂದುವರೆಸುವ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಇದೇ ಅಕ್ಟೋಬರ್ 29ಕ್ಕೆ ಬಿಡುಗಡೆಗೊಳಿಸಲಾಗುವುದು ಎಂದು ಒನ್‌ಪ್ಲಸ್‌ ಹೀಗಾಗಲೇ ತಿಳಿಸಿದೆ.

ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 845 ಪ್ರೊಸೆಸರ್ ಹೊಂದಿದ್ದು, ಉನ್ನತ ದರ್ಜೆಯ ಮಲ್ಟಿಮೀಡಿಯಾ ಅನುಭವಕ್ಕಾಗಿ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ. ವಾಟರ್‌ ಡ್ರಾಪ್‌ ನೋಚ್‌ನೊಂದಿಗೆ ಸಂಪೂರ್ಣ ಬೆಜಲ್‌ ಲೆಸ್‌ AMOLED ಡಿಸ್‌ಪ್ಲೇ ಒಳಗೊಂಡಿದ್ದು, ಭವಿಷ್ಯದ ಸ್ಕ್ರೀನ್‌ ಅನ್‌ಲಾಕ್‌ ಫೀಚರ್‌ ಹೊಂದಿದೆ. ಹಿಂದಿನ ಡಿವೈಸ್‌ಗೆ ಹೋಲಿಕೆ ಮಾಡಿದರೆ ಒನ್‌ಪ್ಲಸ್‌ 6T ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಅದಲ್ಲದೇ ಜನಪ್ರಿಯ ಡ್ಯಾಶ್‌ ಚಾರ್ಜ್‌ ಬೆಂಬಲಿತ ಆವೃತ್ತಿ ಇದಾಗಿರಲಿದೆ ಎಂದು ಕಂಪನಿ ಹೇಳಿದೆ.

ಅಮೆಜಾನ್‌ನಲ್ಲಿ ರೂ.1000 ಮೌಲ್ಯದ ಇ-ಗಿಫ್ಟ್‌ ಕಾರ್ಡ್‌ನ್ನು ಖರೀದಿಸುವ ಮೂಲಕ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ್ನು ಪೂರ್ವಭಾವಿಯಾಗಿ ಬುಕ್ ಮಾಡಬಹುದಾಗಿದೆ. ಪ್ರೀ ಬುಕ್‌ ಮಾಡಿದ ಗ್ರಾಹಕರು ಸ್ಮಾರ್ಟ್‌ಫೋನ್‌ ಖರೀದಿಯನ್ನು ಪೂರ್ಣಗೊಳಿಸಿದರೆ, ರೂ.1490 ಮೌಲ್ಯದ ಒನ್‌ಪ್ಲಸ್‌ನ ಟೈಪ್‌-ಸಿ ಬುಲೆಟ್‌ ಇಯರ್‌ಫೋನ್‌ಗಳನ್ನು ಪಡೆಯಲಿದ್ದಾರೆ. ಮತ್ತು ಹೆಚ್ಚುವಾರಿಯಾಗಿ ರೂ.500ನ್ನು ಅಮೆಜಾನ್‌ ಪೇ ಬ್ಯಾಲೆನ್ಸ್‌ ಆಗಿ ಗ್ರಾಹಕರು ಪಡೆಯಲಿದ್ದಾರೆ.

Best Mobiles in India

English summary
OnePlus continues to be consumers' first choice in the Indian market. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X