ಸ್ಯಾಮ್‌ಸಂಗ್-ಆಪಲ್‌ಗೆ ಸಮಾಧಿ: ಫಾಗ್‌ಶಿಪ್ ಕಿಲ್ಲರ್ ಹೆಸರು ಉಳಿಸಿಕೊಂಡ ಒನ್‌ಪ್ಲಸ್..!

|

ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಯೂ ಅಕ್ಷಯ ಪಾತ್ರೆಯಂತೆ ಆಗಿದ್ದು, ಅತ್ಯಂತ ವೇಗಗತಿಯಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡನೇ ಅತೀ ದೊಡ್ಡ ಮಾರುಕಟ್ಟೆ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಭಾರತ, ಅಮೆರಿಕಾವನ್ನು ಹಿಂದಿಕ್ಕಿ ಈ ಸ್ಥಾನವನ್ನು ಅಲಂಕರಿಸಿದೆ. ಚೀನಾವನ್ನು ಬಿಟ್ಟರೇ ಅತೀ ಹೆಚ್ಚಿನ ಪ್ರಮಾಣದ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಮಾರಾಟವಾಗುತ್ತಿದೆ ಎನ್ನುವುದು ಗಮನಿಸಬೇಕಾದ ಅಂಶ. ಈ ಹಿನ್ನಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ.

ಸ್ಯಾಮ್‌ಸಂಗ್-ಆಪಲ್‌ಗೆ ಸಮಾಧಿ: ಫಾಗ್‌ಶಿಪ್ ಕಿಲ್ಲರ್ ಹೆಸರು ಉಳಿಸಿಕೊಂಡ ಒನ್‌ಪ್ಲಸ್

ಇದೇ ಹಿನ್ನಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ, ಆನ್‌ಲೈನ್ ಮತ್ತು ಆಫ್‌ ಲೈನ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ವ್ಯವಹಾರವೂ ಉತ್ತಮ ಸ್ಥಿತಿಯಲ್ಲಿದೆ. ಇದೇ ಸಂದರ್ಭದಲ್ಲಿ ಖರೀದಿದಾರರು ಸಹ ದೊಡ್ಡ ಮಟ್ಟದಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಉತ್ತಮವಾದ ಫೋನ್‌ಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ.

ಇದಲ್ಲದೇ ಹೊಸ ಹೊಸ ಫೋನ್‌ಗಳು ಲಾಂಚ್ ಆಗುತ್ತಿರುವ ಹಿನ್ನಲೆಯಲ್ಲಿ ಮೂರು ತಿಂಗಳಿಗೊಂದು ಫೋನ್ ಬದಲಾಯಿಸುವ ಅಭ್ಯಾಸವನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಿಸೇಲ್ ವ್ಯಾಲ್ಯೂ ಇರುವಂತಹ ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್‌ನಂತಹ ನಂಬಿಕೆಗೆ ಅರ್ಹವಾದ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇದಕ್ಕಾಗಿಯೇ ಬೆಸ್ಟ್ ಕಂಪನಿ ಎನ್ನುವ ಖ್ಯಾತಿಯನ್ನು ಒನ್‌ಪ್ಲಸ್‌ ನೀಡಿದ್ದಾರೆ.

ಪ್ರೀಮಿಯಮ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ನಂಬರ್ ಒನ್:

ಪ್ರೀಮಿಯಮ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ನಂಬರ್ ಒನ್:

ಭಾರತೀಯ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಸದ್ಯ ಖ್ಯಾತಿಯ ಉತ್ತುಂಗದಲ್ಲಿದೆ. ದೈತ್ಯ ಸ್ಯಾಮ್ಸಂಗ್ ಅನ್ನು ನಂಬರ್ ಒನ್‌ ಸ್ಥಾನದಿಂದ ಕೆಳಗೆ ಇಳಿಸಿ, ಭಾರತೀಯ ಪ್ರೀಮಿಯಮ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿಯಲ್ಲಿ ಉತ್ತಮ ಜನಾಭಿಪ್ರಾಯವನ್ನು ಪಡೆಯುವ ಮೂಲಕ ಗ್ರಾಹಕರ ನಂಬಿಕೆಗೆ ಅರ್ಹವಾಗಿರುವ ಒನ್‌ಪ್ಲಸ್ ಚೀನಾ ಮೂಲದ ಕಂಪನಿಯಾಗಿದೆ. ಬಳಕೆದಾರರಿಗೆ ಬೆಸ್ಟ್ ಎನ್ನುವ ಸ್ಮಾರ್ಟ್‌ಫೋನ್‌ಗಳನ್ನು ಬಳಕೆಗೆ ನೀಡುತ್ತಿದೆ.

48% ಮಾರುಕಟ್ಟೆ ಪಾಲು:

48% ಮಾರುಕಟ್ಟೆ ಪಾಲು:

ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಮಂದಿ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಕೊಳ್ಳುವವರು ಒನ್‌ಪ್ಲಸ್ ಕಡೆಗೆ ಒಲವು ತೋರಿಸುತ್ತಿದ್ದು, 2017ರ ಕೊನೆಯ ಕ್ವಾಟರ್ ನಲ್ಲಿ ಒನ್‌ಪ್ಲಸ್ ಮಾರುಕಟ್ಟೆಯಲ್ಲಿ ಶೇ.48% ಪಾಲನ್ನು ಹೊಂದಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಬೆಳವಣಿಗೆಯ ದರವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಕಂಪನಿ ಎನ್ನಿಸಿಕೊಂಡಿದೆ. ಕೇವಲ ಮೂರು ವರ್ಷದಲ್ಲಿ ಭಾರೀ ಪ್ರಮಾಣದ ಬೆಳವಣಿಗೆಯನ್ನು ಸಾಧಿಸಿ ತೋರಿಸಿದೆ.

ಒನ್‌ಪ್ಲಸ್ 6 ಬೆಸ್ಟ್ ಸೆಲ್ಲಿಂಗ್ ಫೋನ್:

ಒನ್‌ಪ್ಲಸ್ 6 ಬೆಸ್ಟ್ ಸೆಲ್ಲಿಂಗ್ ಫೋನ್:

ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಸ್ಮಾರ್ಟ್‌ಫೋನ್ ಎನ್ನಿಸಿಕೊಂಡಿದೆ. ಇದು ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ಗೆ ಅಗ್ರ ಸ್ಥಾನವನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ಫಾಗ್‌ಶಿಪ್‌ ಕಿಲ್ಲರ್ ಪಟ್ಟ:

ಫಾಗ್‌ಶಿಪ್‌ ಕಿಲ್ಲರ್ ಪಟ್ಟ:

ಮಾರುಕಟ್ಟೆಯಲ್ಲಿ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಬೆಸ್ಟ್ ಎನ್ನಿಸಿಕೊಳ್ಳುವ ಬೆಲೆಯಲ್ಲಿ ಲಾಂಚ್ ಮಾಡುವ ಒನ್‌ಪ್ಲಸ್ ಸ್ಮಾರ್ಟ್ ಫೋನ್‌ಗಳು ಫಾಗ್ ಶಿಪ್ ಸ್ಮಾರ್ಟ್‌ಫೋನ್ ಕಿಲ್ಲರ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಒನ್‌ಪ್ಲಸ್ ಪ್ರತಿ ಸ್ಮಾರ್ಟ್‌ಫೋನ್ ಬಿಡುಗಡೆಗೊಂಡ ಸಂದರ್ಭದಲ್ಲಿ ಈ ಮಾತು ನಿಜವಾಗುತ್ತಿರುವುದನ್ನು ಗಮನಿಸಬಹುದಾಗಿದೆ.

ಬೆಸ್ಟ್‌ ಬೆಲೆಯ ಫೋನ್‌ಗಳು:

ಬೆಸ್ಟ್‌ ಬೆಲೆಯ ಫೋನ್‌ಗಳು:

ಇದುವರೆಗೆ ಒನ್‌ಪ್ಲಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಲ್ಲಾ ಫೋನ್‌ಗಳು ಬೆಸ್ಟ್ ಫೀಚರ್ ಗಳನ್ನು ಹೊಂದಿರುವ ಜೊತೆಗೆ ಬಳಕೆದಾರರಿಗೆ ಬಜೆಟ್ ಬೆಲೆಯಲ್ಲಿಯೇ ದೊರೆಯುತ್ತಿದೆ ಎನ್ನಲಾಗಿದೆ. ಇದರಿಂದಾಗಿಯೇ ಬಳಕೆದಾರರು ಹೆಚ್ಚಾಗಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುತ್ತಿದ್ದಾರೆ.

ಪ್ರೀಮಿಯಮ್ ಫೀಚರ್:

ಪ್ರೀಮಿಯಮ್ ಫೀಚರ್:

ಒನ್‌ಪ್ಲಸ್ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಟಾಪ್ ಪ್ರೀಮಿಯಮ್ ಫೀಚರ್ ಗಳನ್ನು ಹೊಂದಿರುತ್ತವೆ. ಬೆಸ್ಟ್ ಫೋಸೆಸರ್ ಜೊತೆಗೆ ಉತ್ತಮ ಕ್ಯಾಮೆರಾವನ್ನು ಹೊಂದಿರುತ್ತವೆ. ಇದರಿಂದರಿಂದಾಗಿ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ.

ಮುಂದಿನ ತಲೆಮಾರಿನ ಫೋನ್:

ಮುಂದಿನ ತಲೆಮಾರಿನ ಫೋನ್:

ಸದ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮುಂದಿನ ತಲೆಮಾರಿನ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಈ ವರ್ಷದಲ್ಲಿ ಬಿಡುಗಡೆಗೊಂಡ ಈ ಸ್ಮಾರ್ಟ್‌ಫೋನ್ ಹೆಚ್ಚಿನ ಬಳಕೆದಾರರನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಬೆಲೆಯ ವಿಷಯ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಬಳಕೆದಾರರ ಜೇಬಿಗೆ ಹೊರೆಯಾಗದ ರೀತಿಯಲ್ಲಿ ಮಾರಾಟವಾಗುವ ಮೂಲಕ ಹೆಚ್ಚಿನ ಮಂದಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಎಲ್ಲಾ ಯಶಸ್ವಿ:

ಎಲ್ಲಾ ಯಶಸ್ವಿ:

ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಯಶಸ್ಸು ಗಳಿಸಿಕೊಂಡಿದೆ. ಇದೇ ಮಾದರಿಯಲ್ಲಿ ಒನ್‌ಪ್ಲಸ್ ಲಾಂಚ್ ಮಾಡಿದ ಎಲ್ಲಾ ಫೋನ್‌ಗಳು ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂದು ಮಾರುಕಟ್ಟೆಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎನ್ನಬಹುದಾಗಿದೆ.

Best Mobiles in India

English summary
OnePlus: From a worthy competitor to an undisputed leader. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X